ಬೆಂಗಳೂರು, ಆಗಸ್ಟ್ 02: ಅಮೆರಿಕ ಮೂಲದ ಇಂಟರ್ನ್ಯಾಷನಲ್ ಬ್ಯಾಟರಿ ಕಂಪನಿ (IBC- International Battery Company) ಕರ್ನಾಟಕದಲ್ಲಿ ಬ್ಯಾಟರಿ ತಯಾರಿಕಾ ಘಟಕ ಸ್ಥಾಪಿಸಲು ಮುಂದಾಗಿದೆ. ಐಬಿಸಿ ಮತ್ತು ರಾಜ್ಯ ಸರ್ಕಾರದ ಮಧ್ಯೆ ಒಪ್ಪಂದ ಆಗಿದೆ. 8,000 ಕೋಟಿ ರೂ ಮೌಲ್ಯದ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ವಾಣಿಜ್ಯ ಮತ್ತು ಉದ್ಯಮಗಳ ಸಚಿವ ಎಂಬಿ ಪಾಟೀಲ್ ಆಗಸ್ಟ್ 1ರಂದು ಮಾಹಿತಿ ನೀಡಿದ್ದಾರೆ.
ವಿಶ್ವದ ಅತಿದೊಡ್ಡ ಬ್ಯಾಟರಿ ಕಂಪನಿಗಳಲ್ಲೊಂದಾದ ಐಬಿಸಿ ಬೆಂಗಳೂರಿನಲ್ಲಿ 100 ಎಕರೆ ಪ್ರದೇಶದಲ್ಲಿ ಘಟಕ ಸ್ಥಾಪಿಸಲು ಯೋಜಿಸಿದೆ. ವರದಿಗಳ ಪ್ರಕಾರ ಲಿಥಿಯಮ್ ಅಯಾನ್ ಸೆಲ್ಗಳನ್ನು ಇಲ್ಲಿ ತಯಾರಿಸಲಿದೆ. 2025ರಷ್ಟರಲ್ಲಿ ಉತ್ಪಾದನೆ ಆರಂಭವಾಗುತ್ತದೆ.
ಇದನ್ನೂ ಓದಿ: GST: ಜುಲೈ ತಿಂಗಳಲ್ಲಿ ಜಿಎಸ್ಟಿ ಶೇ. 11ರಷ್ಟು ಹೆಚ್ಚು ಸಂಗ್ರಹ; ಕರ್ನಾಟಕದಲ್ಲಿ ಎಷ್ಟಿದೆ ಕಲೆಕ್ಷನ್?
ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತ ಗುಂಜನ್ ಕೃಷ್ಣ ನೀಡಿರುವ ಮಾಹಿತಿ ಪ್ರಕಾರ, ಐಬಿಸಿ ಸಂಸ್ಥೆ ಪ್ರಿಸ್ಮಾಟಿಕ್ ಲಿಥಿಯಮ್ ಅಯಾನ್ ಬ್ಯಾಟರಿಗಳನ್ನು ತಯಾರಿಸುತ್ತದೆ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಉತ್ಪಾದನೆ ನಡೆಯಲಿದೆ. ಬಳಿಕ 2028ರಷ್ಟರಲ್ಲಿ 2 ಗಿಗಾವ್ಯಾಟ್ನಷ್ಟು ಬ್ಯಾಟರಿ ಉತ್ಪಾದನೆಗೆ ಸಾಮರ್ಥ್ಯ ಹೆಚ್ಚಿಸುವ ಗುರಿ ಇದೆ.
Proud moment for Karnataka as IBC and the Government of Karnataka join hands with an MOU signing for a groundbreaking investment of Rs. 8,000 Cr to establish a cutting-edge Advanced Battery Manufacturing Facility.
Spanning across a sprawling 100 acres in the state, this venture… pic.twitter.com/xncKXta61i
— M B Patil (@MBPatil) August 1, 2023
ಲಿಥಿಯಮ್ ಅಯಾನ್ ಸೆಲ್ಗಳಿಂದ ಮಾಡಿರುವ ಪ್ರಿಸ್ಮಾಟಿಕ್ ಬ್ಯಾಟರಿಗಳು ಎಲೆಕ್ಟ್ರಿಕ್ ಕಾರುಗಳಿಗೆ ಬಳಕೆ ಆಗುತ್ತವೆ. ಇವು ಒತ್ತೊತ್ತಾಗಿ ಜೋಡಿತವಾಗಿರುವುದರಿಂದ ಹೆಚ್ಚು ಸ್ಥಳ ಆಕ್ರಮಿಸಿಕೊಳ್ಳುವುದಿಲ್ಲ. ಹೀಗಾಗಿ, ಬಹುತೇಕ ಎಲೆಕ್ಟ್ರಿಕ್ ಕಾರುತಯಾರಕರು ಪ್ರಿಸ್ಮಾಟಿಕ್ ಬ್ಯಾಟರಿಗಳನ್ನು ಬಳಸುತ್ತಾರೆ.
ಇದನ್ನೂ ಓದಿ: ಮುಂದಿನ 7 ವರ್ಷದಲ್ಲಿ ಭಾರತದ ತಲಾದಾಯ ಶೇ. 70ರಷ್ಟು ಏರಿಕೆ ಸಾಧ್ಯತೆ; ಕರ್ನಾಟಕದ ಪಾತ್ರ ಎಷ್ಟು?
ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಮುಖ್ಯಕಚೇರಿ ಹೊಂದಿರುವ ಇಂಟರ್ನ್ಯಾಷನಲ್ ಬ್ಯಾಟರಿ ಕಂಪನಿಯ ಈ ಪ್ರಿಸ್ಮಾಟಿಕ್ ಬ್ಯಾಟರಿಗಳು ವಾಹನ ಕ್ಷೇತ್ರದಲ್ಲಷ್ಟೇ ಅಲ್ಲ ವಿವಿಧ ಔದ್ಯಮಿಕ ಮತ್ತು ಮಿಲಿಟರಿ ವಲಯದಲ್ಲೂ ಬಳಕೆಯಾಗುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:29 am, Wed, 2 August 23