AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರ ಪ್ರದೇಶ; ಅಕ್ರಮ ಆರೋಪದ ಬಗ್ಗೆ ಮಾರ್ಗದರ್ಶಿ ಚಿಟ್ ಫಂಡ್ ಗ್ರೂಪ್ ಸ್ಪಷ್ಟನೆ, ಬೆಂಬಲಕ್ಕಾಗಿ ಚಂದಾದಾರರಿಗೆ ಕೃತಜ್ಞತೆ

ಆಂಧ್ರಪ್ರದೇಶದ ಚಿಟ್ ಫಂಡ್​​​ಗಳ ರಿಜಿಸ್ಟ್ರಾರ್ ಸಂಸ್ಥೆ ಪ್ರಕಾರ, ಮಾರ್ಗದರ್ಶಿ ಚಿಟ್ ಫಂಡ್ ಸಂಸ್ಥೆಯು ಹಲವು ಹಣಕಾಸು ಅಕ್ರಮಗಳನ್ನು ಎಸಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಆಂಧ್ರ ಪ್ರದೇಶ; ಅಕ್ರಮ ಆರೋಪದ ಬಗ್ಗೆ ಮಾರ್ಗದರ್ಶಿ ಚಿಟ್ ಫಂಡ್ ಗ್ರೂಪ್ ಸ್ಪಷ್ಟನೆ, ಬೆಂಬಲಕ್ಕಾಗಿ ಚಂದಾದಾರರಿಗೆ ಕೃತಜ್ಞತೆ
ಮಾರ್ಗದರ್ಶಿ ಚಿಟ್ ಫಂಡ್ ಗ್ರೂಪ್
TV9 Web
| Edited By: |

Updated on:Aug 02, 2023 | 11:04 AM

Share

ಹೈದರಾಬಾದ್: ರಾಮೋಜಿ ರಾವ್ ಮಾಲಕತ್ವದ ಮಾರ್ಗದರ್ಶಿ ಚಿಟ್ ಫಂಡ್ ಗ್ರೂಪ್ (Margadarsi Chit Fund Group) ಅನ್ನು ಆಂಧ್ರ ಪ್ರದೇಶದಲ್ಲಿ ಮುಚ್ಚಲು ಮುಂದಾಗಿರುವ ಸುದ್ದಿ ಕೇಳಿಬಂದಿದೆ. ಜುಲೈ 30ರಂದು ನಡೆದ ಬೆಳವಣಿಗೆಯಲ್ಲಿ, ಆಂಧ್ರ ಪ್ರದೇಶದ ಪ್ರಾಧಿಕಾರವು (Andhra Pradesh Registrar of Chits) ಚಿಟ್ ಫಂಡ್ ಸಂಸ್ಥೆಯ ಸದಸ್ಯರಿಗೆ ನೋಟಿಸ್ ಸಲ್ಲಿಸಿದೆ. ಮಾರ್ಗದರ್ಶಿ ಚಿಟ್ ಫಂಡ್ ಸಂಸ್ಥೆಯಿಂದ ಹಲವು ಹಣಕಾಸು ಅಕ್ರಮಗಳು ಎಸಗಲ್ಪಟ್ಟಿವೆ ಎಂದು ಈ ನೋಟಿಸ್​​​ನಲ್ಲಿ ಗ್ರಾಹಕರನ್ನು ಎಚ್ಚರಿಸಲಾಗಿದೆ. ಹಲವು ದಿನಪತ್ರಿಕೆಗಳಲ್ಲಿ ಜಾಹೀರಾತು ಮೂಲಕ ಮಾರ್ಗದರ್ಶಿ ಚಿಟ್ ಫಂಡ್ ಗ್ರಾಹಕರನ್ನು ಎಚ್ಚರಿಸಲಾಗಿದೆ. ಹಾಗೆಯೇ, ಚಿಟ್ ಫಂಡ್ ವಿರುದ್ಧ ದೂರು ಇದ್ದರೆ ಸಲ್ಲಿಸುವಂತೆಯೂ ಸೂಚನೆ ನೀಡಲಾಗಿದೆ.

‘ಚಿಟ್ ಗ್ರೂಪ್​​​ನ ಸದಸ್ಯರಿಗೆ ಯಾವುದಾದರೂ ಆಕ್ಷೇಪಣೆಗಳಿದ್ದರೆ ಅಥವಾ ಸಮಸ್ಯೆಗಳಿದ್ದರೆ, ಈ ನೋಟಿಸ್ ಪ್ರಕಟವಾಗಿ 15 ದಿನದೊಳಗೆ ಡೆಪ್ಯುಟಿ ರಿಜಿಸ್ಟ್ರಾರ್ ಅವರ ಬಳಿ ಲಿಖಿತವಾಗಿ ಬರೆದು ಕಳುಹಿಸಬೇಕು’ ಎಂದು ಸಾರ್ವಜನಿಕ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಆಂಧ್ರಪ್ರದೇಶ: ಈ ಗ್ರಾಮದಲ್ಲಿ ದೇವರನ್ನು ಅಲ್ಲ; ಮಹಾತ್ಮಾ ಗಾಂಧಿಯನ್ನು ಪೂಜಿಸಲಾಗುತ್ತದೆ, ಕಾರಣ ಏನು ಗೊತ್ತಾ?

ಆಂಧ್ರಪ್ರದೇಶದ ಚಿಟ್ ಫಂಡ್​​​ಗಳ ರಿಜಿಸ್ಟ್ರಾರ್ ಸಂಸ್ಥೆ ಪ್ರಕಾರ, ಮಾರ್ಗದರ್ಶಿ ಚಿಟ್ ಫಂಡ್ ಸಂಸ್ಥೆಯು ಹಲವು ಹಣಕಾಸು ಅಕ್ರಮಗಳನ್ನು ಎಸಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಚಿಟ್ ಫಂಡ್​ನ ವಿವಿಧ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಲಾಗಿದೆ. ಹಣದ ಅಕ್ರಮ ವರ್ಗಾವಣೆ ಸೇರಿದಂತೆ ಹಲವು ಅಕ್ರಮಗಳು ನಡೆದಿರುವುದು ತಿಳಿದುಬಂದಿದೆ ಎನ್ನಲಾಗಿದೆ.

‘ಅಸಿಸ್ಟೆಂಟ್ ರಿಜಿಸ್ಟ್ರಾರ್ ಅವರಿಂದ ನಡೆದ ತನಿಖೆಯ ವರದಿಗಳನ್ನು ಪರಿಗಣಿಸಿದ ಬಳಿಕ ಮಾರ್ಗದರ್ಶಿ ಚಿಟ್ ಗ್ರೂಪ್​​​ಗಳನ್ನು ಮುಚ್ಚುವ ಪ್ರಾಯೋಗಿಕ ನಿರ್ಧಾರಕ್ಕೆ ಬಂದಿದ್ದೇವೆ. ಚಿಟ್ ಗ್ರೂಪ್​​ನ ಸದಸ್ಯರಿಗೆ ಆಕ್ಷೇಪಣೆಗಳಿದ್ದಲ್ಲಿ ಈ ನೋಟಿಸ್ ಜಾರಿಯಾದ 15 ದಿನದೊಳಗೆ ಡೆಪ್ಯುಟಿ ರಿಜಿಸ್ಟ್ರಾರ್​​​ಗೆ ಲಿಖಿತ ಮನವಿ ಸಲ್ಲಿಸಬೇಕು’ ಎಂದು ರಿಜಿಸ್ಟ್ರಾರ್ ತಿಳಿಸಿದೆ.

ಈ ಮಧ್ಯೆ, ಪ್ರಕರಣವು ಇನ್ನೂ ಗೌರವಾನ್ವಿತ ಹೈಕೋರ್ಟ್​​ನಲ್ಲಿ ವಿಚಾರಣೆಗೆ ಬಾಕಿ ಇದೆ ಎಂದು ಮಾರ್ಗದರ್ಶಿ ಚಿಟ್ ಫಂಡ್ ಗ್ರೂಪ್ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಆರು ದಶಕಗಳಿಂದ ಮತ್ತು ವಿಶೇಷವಾಗಿ ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ಮೇಲೆ ಅಪಾರ ನಂಬಿಕೆ ಇಟ್ಟಿರುವ ಎಲ್ಲಾ ಚಂದಾದಾರರಿಗೆ ಮಾರ್ಗದರ್ಶಿ ಚಿಟ್‌ ಫಂಡ್‌ ಕಂಪನಿಯು ಅತ್ಯಂತ ಕೃತಜ್ಞವಾಗಿರುತ್ತದೆ. ನಮ್ಮ ಬೆಂಬಲಕ್ಕೆ ನಿಂತ ಸರ್ವರಿಗೂ ಧನ್ಯವಾದಗಳು. ನಿಮ್ಮ ಈ ಅಮೂಲ್ಯ ಬೆಂಬಲವು ನಮಗೆ ಈ ಸಂದರ್ಭದಲ್ಲಿ ಶಕ್ತಿಯನ್ನು ನೀಡುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: IBC: ಬ್ಯಾಟರಿ ತಯಾರಿಕಾ ಘಟಕ ಸ್ಥಾಪನೆಗೆ ಕರ್ನಾಟಕ ಸರ್ಕಾರದೊಂದಿಗೆ ಐಬಿಸಿ ಒಪ್ಪಂದ

6 ದಶಕಗಳಿಂದ ಮಾರ್ಗದರ್ಶಿ

“ಮಾಧ್ಯಮಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು ಮಾಡಿರುವ ರಾಮೋಜಿರಾವ್ ಅವರು 1962ರಲ್ಲಿ ಮಾರ್ಗದರ್ಶಿ ಚಿಟ್ ಫಂಡ್ ಸಂಸ್ಥೆ ಸ್ಥಾಪಿಸಿದ್ದರು. ಆಂಧ್ರ ಮತ್ತು ತೆಲಂಗಾಣವಲ್ಲದೇ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಒಟ್ಟು 108 ಶಾಖೆಗಳನ್ನು ಹೊಂದಿರುವ ಮಾರ್ಗದರ್ಶಿ ಚಿಟ್ ಫಂಡ್ ಕಳೆದ 6 ದಶಕಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಸದಸ್ಯರಿಗೆ ಸೇವೆ ಒದಗಿಸಿದೆ. 1 ಲಕ್ಷಕೋಟಿ ರುಪಾಯಿಗೂ ಅಧಿಕ ಮೊತ್ತದ ಬಹುಮಾನ ಹಂಚಿದೆ” ಎಂದು ಮಾರ್ಗದರ್ಶಿ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸರ್ಕಾರದಿಂದ ಸೇಡಿನ ಕ್ರಮ ಎಂದು ಚಿಟ್​ಫಂಡ್ ಸಂಸ್ಥೆ ಆಕ್ರೋಶ

ಮಾರ್ಗದರ್ಶಿ ಚಿಟ್​ಫಂಡ್ ಸಂಸ್ಥೆ ವಿರುದ್ಧ ಆಂಧ್ರಪ್ರದೇಶ ಸರ್ಕಾರ ವಿನಾಕಾರಣ ವಿಷ ಕಾರುತ್ತಿದೆ ಎಂದು ಸಂಸ್ಥೆ ಕಿಡಿಕಾರಿದೆ. ‘ಮುದ್ರಣ ಮಾಧ್ಯಮದಲ್ಲಿ ಮಾರ್ಗದರ್ಶಿ ಚಿಟ್ ಫಂಡ್ ಸದಸ್ಯರಿಗೆ ನೋಟೀಸ್ ರೂಪದಲ್ಲಿ ಜಾಹೀರಾತು ನೀಡಿ, ಸಂಸ್ಥೆ ವಿರುದ್ಧ ಅದೇ ಕಪೋಲಕಲ್ಪಿತ ಮತ್ತು ಸುಳ್ಳು ಆರೋಪಗಳನ್ನು ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ವಿರುದ್ಧ ಮಾರ್ಗದರ್ಶಿ ಚಿಟ್ ಫಂಡ್ ಸಂಸ್ಥೆ ತೆಲಂಗಾಣ ಮತ್ತು ಆಂಧ್ರಪ್ರದೇಶ ಉಚ್ಚ ನ್ಯಾಯಾಲಯಗಳ ಮೆಟ್ಟಿಲೇರಿತ್ತು. ಸಂಸ್ಥೆಯ ದೈನಂದಿನ ವ್ಯವಹಾರಕ್ಕೆ ತಡೆಯಾಗುವಂತಹ ಯಾವುದೇ ಕ್ರಮ ಕೈಗೊಳ್ಳದಂತೆ ರಾಜ್ಯಸರ್ಕಾರಕ್ಕೆ ನ್ಯಾಯಾಲಯಗಳು ನಿರ್ದೇಶನ ನೀಡಿರುವ ಮಾಹಿತಿಯನ್ನು ಸಂಸ್ಥೆಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಹಂಚಿಕೊಂಡಿದೆ.

ವಾಣಿಜ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:23 pm, Tue, 1 August 23

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ