AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Loan: ಬೆಲೆ ಏರಿಕೆಯ ಬಿಸಿಯಲ್ಲಿ ಜೀವನ ನಡೆಸಲು ಸಾಲದ ಮೊರೆಹೋದ ಜನರು; ಕುತೂಹಲಕಾರಿ ಅಂಕಿಅಂಶಗಳು ಇಲ್ಲಿವೆ

Retail Loans On Rise: ನಿತ್ಯದ ಖರ್ಚು ವೆಚ್ಚಗಳು ಹೆಚ್ಚಿದ್ದು ಅದರ ಪರಿಣಾಮವಾಗಿ ಮಕ್ಕಳ ವಿದ್ಯಾಭ್ಯಾಸ, ಮನೆ ಖರೀದಿ, ಕಾರು ಖರೀದಿ ಇತ್ಯಾದಿ ಅಗತ್ಯತೆಗಳ ಪೂರೈಕೆಗಾಗಿ ಜನಸಾಮಾನ್ಯರು ಸಾಲ ಮಾಡುವುದು ಅನಿವಾರ್ಯವಾಗಿದೆ. ಭಾರತದಲ್ಲಿ ರೀಟೇಲ್ ಸಾಲಗಳು ಹೆಚ್ಚಾಗಿರುವುದನ್ನು ಆರ್​ಬಿಐ ಅಂಕಿ ಅಂಶಗಳೇ ಹೇಳುತ್ತಿವೆ.

Loan: ಬೆಲೆ ಏರಿಕೆಯ ಬಿಸಿಯಲ್ಲಿ ಜೀವನ ನಡೆಸಲು ಸಾಲದ ಮೊರೆಹೋದ ಜನರು; ಕುತೂಹಲಕಾರಿ ಅಂಕಿಅಂಶಗಳು ಇಲ್ಲಿವೆ
ಲೋನ್​
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 01, 2023 | 6:00 PM

Share

ಹಣದುಬ್ಬರದ (Inflation) ಪರಿಸ್ಥಿತಿಯಲ್ಲಿ ಭಾರತದಲ್ಲಿ ಜನಸಾಮಾನ್ಯರು ಜೀವನ ವೆಚ್ಚ ನಿಭಾಯಿಸುವುದು ಬಹಳ ಕಷ್ಟರಕರವಾಗಿದೆ. ಟೊಮೆಟೊ ಇತ್ಯಾದಿ ದಿನನಿತ್ಯ ಅಗತ್ಯದ ತರಕಾರಿ ಮತ್ತಿತರ ವಸ್ತುಗಳ ಬೆಲೆ ಹೆಚ್ಚೇ ಇದೆ. ಪೆಟ್ರೋಲ್ ಬೆಲೆ ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಲೀಟರ್‌ಗೆ ರೂ 100 ರ ಆಸುಪಾಸಿನಲ್ಲಿ ಬೆಲೆಯಿಂದ ಕೆಳಗಿಳಿದೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಉಳಿತಾಯವೇ ಅತಂತ್ರವಾಗಿದೆ. ಆದರೂ ಆಶಯ ಬಿಡದ ಜನರು ತಮ್ಮ ಜೀವನ ಅಗತ್ಯತೆಗಳು ಹಾಗೂ ಮನದ ಅಭಿಲಾಷೆಗಳನ್ನು ಸಾಲದ (Loan) ಮೂಲಕವಾದರೂ ತೀರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ರಿಸರ್ವ್ ಬ್ಯಾಂಕಿನ ಅಂಕಿಅಂಶಗಳೇ ಸಾಕ್ಷಿ.

ದೇಶದಲ್ಲಿ ಬ್ಯಾಂಕುಗಳಿಂದ ಪಡೆದ ಸಾಲಗಳ ಸಂಖ್ಯೆ ಮತ್ತು ಪ್ರಮಾಣ ಎರಡೂ ಹೆಚ್ಚಾಗಿದೆ. ಜೂನ್ 2023 ರಲ್ಲಿ, ಮಾರುಕಟ್ಟೆಯಲ್ಲಿ ಬ್ಯಾಂಕುಗಳು ನೀಡಿದ ಸಾಲಗಳು ಶೇಕಡಾ 16.3 ರಷ್ಟು ಹೆಚ್ಚಾಗಿದೆ. ಇದರಲ್ಲಿ ಗರಿಷ್ಠ ಏರಿಕೆ ಚಿಲ್ಲರೆ ಸಾಲಗಳಲ್ಲಿ (Retail Loan) ಕಂಡುಬಂದಿದೆ. ಇದು ವಾಹನ, ಮನೆ, ಶಿಕ್ಷಣ ಮತ್ತು ವೈಯಕ್ತಿಕ ಸಾಲಗಳನ್ನು ಒಳಗೊಂಡಿರುತ್ತದೆ. ಅದೇ ಸಮಯದಲ್ಲಿ, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯ (ಎನ್‌ಬಿಎಫ್‌ಸಿ) ಸಾಲವೂ ಹೆಚ್ಚಾಗಿದೆ.

ಇದನ್ನೂ ನೋಡಿ: GST: ಜುಲೈ ತಿಂಗಳಲ್ಲಿ ಜಿಎಸ್​ಟಿ ಶೇ. 11ರಷ್ಟು ಹೆಚ್ಚು ಸಂಗ್ರಹ; ಕರ್ನಾಟಕದಲ್ಲಿ ಎಷ್ಟಿದೆ ಕಲೆಕ್ಷನ್?

ಶೇ. 21 ರಷ್ಟು ಹೆಚ್ಚಿದ ರೀಟೇಲ್ ಲೋನ್

ರೀಟೇಲ್ ಸಾಲದ ಪ್ರಮಾಣ ತುಂಬಾ ಹೆಚ್ಚಾಗಿರುವುದನ್ನು ಆರ್​ಬಿಐ ಅಂಕಿಅಂಶಗಳು ತೋರಿಸುತ್ತವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜೂನ್ 2023 ರಲ್ಲಿ, ಶೇ 20.9 ರಷ್ಟು ಪ್ರಮಾಣದಲ್ಲಿ ರೀಟೇಲ್ ಸಾಲ ಹೆಚ್ಚಾಗಿದೆ. ಕೈಗಾರಿಕಾ ಸಾಲ 8.1 ಪ್ರತಿಶತದಷ್ಟು ಹೆಚ್ಚಿದರೆ, ಕೃಷಿ ಸಾಲವು 19.7 ಪ್ರತಿಶತ ಮತ್ತು ಆಹಾರೇತರ ಸಾಲವು 16.4 ರಷ್ಟು ಹೆಚ್ಚಾಗಿದೆ. ಆದಾಗ್ಯೂ, ಸೇವಾ ವಲಯದಲ್ಲಿ ಅತ್ಯಧಿಕ ಸಾಲ ಹೆಚ್ಚಳವಾಗಿದೆ. ಈ ವಲಯದಲ್ಲಿ ಸಾಲವು ಶೇ. 26.7ರಷ್ಟು ಹೆಚ್ಚಾಗಿರುವ ಮಾಹಿತಿ ಲಭಿಸಿದೆ.

67 ಪ್ರತಿಶತದಷ್ಟು ಭಾರತೀಯರಿಂದ ವೈಯಕ್ತಿಕ ಸಾಲ

ರೀಟೇಲ್ ಲೋನ್​ಗಳ ಪೈಕಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪ್ರಮಾಣ ಹೆಚ್ಚಿದೆ. ಇತ್ತೀಚಿನ ಸರಳ್ ಕ್ರೆಡಿಟ್ ಸಮೀಕ್ಷೆಯಲ್ಲಿ, 67 ಪ್ರತಿಶತ ಭಾರತೀಯರು ತಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಒಮ್ಮೆಯಾದರೂ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುತ್ತಾರೆ ಎಂದು ಕಂಡುಬಂದಿದೆ. ಸ್ವಾರಸ್ಯಕರ ಸಂಗತಿಯೆಂದರೆ, ವೈಯಕ್ತಿಕ ಸಾಲ ಪಡೆದವರಲ್ಲಿ ಶೇಕಡಾ 9 ರಷ್ಟು ಜನರು ಅದನ್ನು ಪ್ರಯಾಣ ಅಥವಾ ರಜೆಗಾಗಿ ಮಾತ್ರ ತೆಗೆದುಕೊಂಡಿದ್ದಾರೆ.

ಇದನ್ನೂ ನೋಡಿ: Gold: ಚಿನ್ನದ ಬೆಲೆ ಏರಿಕೆಯಲ್ಲೂ ಆಭರಣಗಳ ಮಾರಾಟ ಹೆಚ್ಚಳ; ಇಲ್ಲಿದೆ ಗೋಲ್ಡ್ ಡಿಮ್ಯಾಂಡ್ ಟ್ರೆಂಡ್ಸ್ ಹೊಸ ವರದಿ

ಮನೆ, ಕಾರು, ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲ

ಇನ್ನು ರೀಟೇಲ್ ವಿಭಾಗದಲ್ಲಿ ವೈಯಕ್ತಿಕ ಸಾಲ ಅತಿ ಹೆಚ್ಚಿದ್ದರೆ ಕಾರು ಮತ್ತು ಗೃಹ ಸಾಲಗಳ ಪ್ರಮಾಣದಲ್ಲೂ ಹೆಚ್ಚಳವಾಗಿದೆ. ಮನೆ ಖರೀದಿಸಲು ಅಥವಾ ಮನೆಯನ್ನು ನವೀಕರಿಸಲು 36 ರಷ್ಟು ಜನರು ಗೃಹ ಸಾಲ ತೆಗೆದುಕೊಂಡಿದ್ದಾರೆ. ಇದಲ್ಲದೇ ಶಿಕ್ಷಣ ಸಾಲವನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತೆಗೆದುಕೊಳ್ಳಲಾಗಿದೆಯಂತೆ.

ಮತ್ತೊಂದೆಡೆ, ಕೈಗಾರಿಕಾ ಮಟ್ಟದಲ್ಲಿ ದೊಡ್ಡ ಸಂಸ್ಥೆಗಳಿಂದ ಸಾಲ ಹೆಚ್ಚಾಗಿದೆ. ಜೂನ್ ತಿಂಗಳಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳ ಸಾಲ ಲಭ್ಯತೆ ಕಡಿಮೆಯಾಗಿದೆ. ದೊಡ್ಡ ಕಂಪನಿಗಳಿಂದ ಪಡೆಯಲಾದ ಸಾಲದಿಂದ ದೇಶದಲ್ಲಿ ಬಂಡವಾಳ ವೆಚ್ಚ ಹೆಚ್ಚಲಿದ್ದು, ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ