ತಿಂಗಳಿಗೆ 1 ಲಕ್ಷ ರೂ ಆದಾಯ ಬರುವಂತಾಗಲು ಎಷ್ಟು ವರ್ಷ ಎಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ಐಡಿಯಾ

Income Generation Tools: ಪ್ರತೀ ವರ್ಷದ ಬೆಲೆ ಏರಿಕೆ, ಹಣ ಮೌಲ್ಯ ಕುಸಿತ ಇವೆಲ್ಲವನ್ನೂ ಪರಿಗಣಿಸಿ ನಿಮ್ಮ ನಿವೃತ್ತಿ ಕಾಲಕ್ಕೆ ಎಷ್ಟು ಹಣ ಬೇಕಾಗಬಹುದು, ಎಷ್ಟು ಪಿಂಚಣಿ ಬೇಕು ಇತ್ಯಾದಿ ನಿರ್ಧರಿಸಿ, ಅದನ್ನು ಗಳಿಸುವ ನಿಟ್ಟಿನಲ್ಲಿ ಈಗಿಂದಲೇ ಹೂಡಿಕೆ ಆರಂಭಿಸುವುದು ಉತ್ತಮ. ಈ ಬಗ್ಗೆ ಸಲಹೆಗಳು ಇಲ್ಲಿವೆ...

ತಿಂಗಳಿಗೆ 1 ಲಕ್ಷ ರೂ ಆದಾಯ ಬರುವಂತಾಗಲು ಎಷ್ಟು ವರ್ಷ ಎಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ಐಡಿಯಾ
ನಿವೃತ್ತಿ ಯೋಜನೆ
Follow us
|

Updated on: Aug 01, 2023 | 4:22 PM

ನಾವೆಲ್ಲರೂ ಹಣ ಸಂಪಾದನೆ ಮಾಡುವುದು ಇವತ್ತಿನ ಖರ್ಚುವೆಚ್ಚಗಳನ್ನು ಸರಿದೂಗಿಸಲು ಮಾತ್ರವಲ್ಲ, ಭವಿಷ್ಯದ ಜೀವನ ಭದ್ರತೆಗಾಗಿಯೂ (Life Security) ದುಡಿಯುತ್ತೇವೆ. ಈ ಹಿನ್ನೆಲೆಯಲ್ಲಿ ನಮ್ಮ ದುಡಿಮೆಯ ಹಣದಲ್ಲಿ ಉಳಿತಾಯ ಮಾಡುವುದು ಬಹಳ ಮುಖ್ಯ. ದುಡಿದು ನಿವೃತ್ತರಾದ ಬಳಿಕ ಮುಂದೇನು ಎಂಬ ಪ್ರಶ್ನೆಗೆ ಈ ಉಳಿತಾಯ ಹಣವೇ ಉತ್ತರವಾಗಿರುತ್ತದೆ. ಸರ್ಕಾರಿ ಕೆಲಸವಾದರೆ ನಿರ್ದಿಷ್ಟ ಪಿಂಚಣಿ ಸಿಗುತ್ತದೆ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರು ಏನು ಮಾಡಬೇಕು? ಇಲ್ಲಿ ಕೆಲಸಕ್ಕೆ ಬರುವುದು ನಿಮ್ಮ ರಿಟೈರ್ಮೆಂಟ್ ಪ್ಲಾನ್. ನೀವು ಕೆಲಸಕ್ಕೆ ಸೇರಿದ ಹೊಸದರಲ್ಲೇ ನಿವೃತ್ತಿಗೆಂದು ಒಂದಿಷ್ಟು ಹಣವನ್ನು ಮೀಸಲಿಡುತ್ತಾ ಹೋದರೆ ನಿವೃತ್ತಿ ಕಾಲಕ್ಕೆ ಪಿಂಚಣಿ ರೀತಿಯಲ್ಲಿ ಹಣ ನಿಮಗೆ ಸಿಗತೊಡಗುತ್ತದೆ.

ಆದರೆ, ಎಷ್ಟು ಪಿಂಚಣಿ ಬೇಕಾಗಬಹುದು? ಇದನ್ನು ನಿರ್ಧರಿಸುವುದು ಮುಖ್ಯ. ಯಾಕೆಂದರೆ ಇವತ್ತಿನ 50,000 ರೂ ಹಣವು 30 ವರ್ಷದ ಬಳಿಕ ಅಷ್ಟೇ ಮೌಲ್ಯ ಹೊಂದಿರುವುದಿಲ್ಲ. ಹಣದುಬ್ಬರ ಇತ್ಯಾದಿ ಕಾರಣದಿಂದ ಕರೆನ್ಸಿ ಮೌಲ್ಯ ಮತ್ತು ಹಣದ ಮೌಲ್ಯ ಕಡಿಮೆ ಆಗುತ್ತಾ ಹೋಗುತ್ತದೆ. 50,000 ರೂ ಹಣಕ್ಕೆ 30 ವರ್ಷದಲ್ಲಿ ನೈಜಮೌಲ್ಯ 20,000 ರೂಗಿಂತಲೂ ಕಡಿಮೆ ಆಗಿಹೋಗಬಹುದು. ಹೀಗಾಗಿ, ನೀವು ಭವಿಷ್ಯಕ್ಕಾಗಿ ಹಣ ಎತ್ತಿಹಿಡುವುದಾದರೆ ಹೆಚ್ಚಿನ ಮೊತ್ತದ ಗುರಿ ಇಟ್ಟಿರಬೇಕು. ಈ ನಿಟ್ಟಿನಲ್ಲಿ 30 ವರ್ಷಗಳ ಬಳಿಕ ತಿಂಗಳಿಗೆ 1 ಲಕ್ಷ ರೂ ಆದಾಯವು ಒಂದು ಮಟ್ಟಕ್ಕೆ ಉತ್ತಮ ಎನಿಸಬಹುದು. ಅದಕ್ಕಾಗಿ ನೀವು ಕನಿಷ್ಠ 3 ಕೋಟಿ ರೂ ಸಂಗ್ರಹಿಸುವ ಗುರಿ ಹೊಂದಿರಬೇಕು.

ಇದನ್ನೂ ಓದಿ: SIP: ಕ್ವಾಂಟ್ ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್​ನಲ್ಲಿ 10,000 ರೂ ಎಸ್​ಐಪಿ; 25 ವರ್ಷದಲ್ಲಿ 3 ಕೋಟಿ ಸಂಪತ್ತು

1 ಲಕ್ಷ ರೂ ಮಾಸಿಕ ಆದಾಯ ಸೃಷ್ಟಿಸಲು ನ್ಯಾಷನಲ್ ಪೆನ್ಷನ್ ಸ್ಕೀಮ್ ಪ್ರಯತ್ನಿಸಿ

ಕೇಂದ್ರ ಸರ್ಕಾರ ನಡೆಸುವ ನ್ಯಾಷನಲ್ ಪೆನ್ಷನ್ ಸ್ಕೀಮ್ ದೀರ್ಘಾವಧಿ ಹೂಡಿಕೆಗೆ ಒಳ್ಳೆಯ ಆಯ್ಕೆ. ಈ ಯೋಜನೆಯಲ್ಲಿ ನಿಮಗೆ ವಿವಿಧ ಹೂಡಿಕೆ ಆಯ್ಕೆಗಳು ಲಭ್ಯ ಇರುತ್ತವೆ. ಹಣಕಾಸು ತಜ್ಞರ ಪ್ರಕಾರ ಎನ್​ಪಿಎಸ್​ನಲ್ಲಿ ನೀವು ಹೂಡಿಕೆ ಮಾಡುವ ಹಣದಲ್ಲಿ ಶೇ. 60ರಷ್ಟನ್ನು ಈಕ್ವಿಟಿಗಳಲ್ಲಿಯೂ, ಶೇ. 40ರಷ್ಟನ್ನು ಡೆಟ್ ಸ್ಕೀಮ್​ಗಳಲ್ಲೂ ತೊಡಗಿಸಿಕೊಳ್ಳುವುದು ಉತ್ತಮವಂತೆ. ಇದರಿಂದ ವರ್ಷಕ್ಕೆ ಶೇ. 10ರ ದರದಲ್ಲಿ ಹೂಡಿಕೆ ಬೆಳೆಯಬಹುದೆಂದು ನಿರೀಕ್ಷಿಸಬಹುದು.

ಈ ಸ್ಕೀಮ್​ನಲ್ಲಿ ನೀವು 30 ವರ್ಷದ ಬಳಿಕ ತಿಂಗಳಿಗೆ 1 ಲಕ್ಷ ರೂ ಆದಾಯ ಹರಿದುಬರಬೇಕಾದರೆ ಎಷ್ಟು ಹೂಡಿಕೆ ಮಾಡಬೇಕು? ಲೆಕ್ಕಾಚಾರದ ಪ್ರಕಾರ ಈಗ ನೀವು ತಿಂಗಳಿಗೆ 15,000 ರೂ ಹಣವನ್ನು ಎನ್​ಪಿಎಸ್​ನಲ್ಲಿ ವಿನಿಯೋಗಿಸುತ್ತಾ ಹೋದರೆ 30 ವರ್ಷದ ಬಳಿಕ 1 ಲಕ್ಷ ರೂ ಪಿಂಚಣಿ ನಿಮಗೆ ಸಿಗತೊಡಗುತ್ತದೆ. ನಿಮ್ಮ ಹಣಕ್ಕೆ ಶೇ. 10ರ ವಾರ್ಷಿಕ ದರದಲ್ಲಿ ಬಡ್ಡಿ ಸಿಕ್ಕರೆ ಇದು ಸಾಧ್ಯವಾಗುತ್ತದೆ.

ಇದನ್ನೂ ಓದಿ: Financial Life Tips: ಖರ್ಚು, ಉಳಿತಾಯ, ಸಾಲಕ್ಕೆ ಹಣಕಾಸು ಸೂತ್ರ ತಿಳಿದಿರಿ; ಜೀವನಪೂರ್ತಿ ನಿಶ್ಚಿಂತೆಯಿಂದಿರಿ

ನೀವು ತಿಂಗಳಿಗೆ 15,000 ರೂನಂತೆ 30 ವರ್ಷ ಕೂಡಿಡುತ್ತಾ ಹೋದರೆ 54 ಲಕ್ಷ ರೂ ಆಗುತ್ತದೆ. ಎನ್​ಪಿಎಸ್​ನಲ್ಲಿ ಇದನ್ನೇ ಹೂಡಿಕೆ ಮಾಡಿ, ಅದು ಶೇ. 10ರ ದರದಲ್ಲಿ ಬೆಳೆದರೆ ನಿಮ್ಮ ಹಣ 3.42 ಕೋಟಿ ರೂ ಆಗುತ್ತದೆ. ಆಗ ನಿಮಗೆ ವರ್ಷಕ್ಕೆ 1 ಲಕ್ಷ ರೂ ಪಿಂಚಣಿ ಸಾಧ್ಯವಾಗುತ್ತದೆ.

ಎನ್​ಪಿಎಸ್ ಮಾತ್ರವಲ್ಲ, ನೀವು ಯಾವುದಾದರೂ ಮ್ಯೂಚುವಲ್ ಫಂಡ್ ಎಸ್​ಐಪಿಯಲ್ಲೂ ಹೂಡಿಕೆ ಮಾಡಿ ದೀರ್ಘಾವಧಿಗೆ ಉತ್ತಮ ಲಾಭ ಮಾಡಿಕೊಳ್ಳಬಹುದು. ಶೇ. 12ರ ದರದಲ್ಲಿ ಲಾಭ ಕೊಡುವ ಎಸ್​ಐಪಿ ಸಿಕ್ಕಲ್ಲಿ ನೀವು ತಿಂಗಳಿಗೆ ಹೂಡಿಕೆ ಮಾಡಬಹುದಾದ ಹಣ 6,000 ರೂಗಿಂತಲೂ ಕಡಿಮೆ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ