Sign In

By signing in or creating an account, you agree with Associated Broadcasting Company's Terms & Conditions and Privacy Policy.

Knowledge: ಕೆಲ ಲಿಸ್ಟೆಡ್ ಕಂಪನಿಗಳು ಯಾಕೆ ಸ್ಟಾಕ್ ಸ್ಪ್ಲಿಟ್ ಮಾಡುತ್ತವೆ? ಬೋನಸ್ ಷೇರುಗಳ ಹಂಚಿಕೆಯಿಂದ ಏನಾಗುತ್ತೆ?

Know What Is Stock Split, Bonus Shares: ಷೇರುಮಾರುಕಟ್ಟೆಯನ್ನು ನೀವು ಗಮನಿಸುತ್ತಿದ್ದರೆ ಇತ್ತೀಚೆಗೆ ಹಲವು ಕಂಪನಿಗಳು ಸ್ಟಾಕ್ ಸ್ಪ್ಲಿಟ್ ಮಾಡುವುದನ್ನು, ಬೋನಸ್ ಷೇರುಗಳನ್ನು ಹಂಚುವುದನ್ನು ಕಂಡಿರಬಹುದು. ಸ್ಟಾಕ್ ಸ್ಪ್ಲಿಟ್​ನಿಂದ ಆಗುವ ಅನುಕೂಲ, ಅನನುಕೂಲಗಳೇನು ಎಂಬ ವಿವರ ಇಲ್ಲಿದೆ...

Knowledge: ಕೆಲ ಲಿಸ್ಟೆಡ್ ಕಂಪನಿಗಳು ಯಾಕೆ ಸ್ಟಾಕ್ ಸ್ಪ್ಲಿಟ್ ಮಾಡುತ್ತವೆ? ಬೋನಸ್ ಷೇರುಗಳ ಹಂಚಿಕೆಯಿಂದ ಏನಾಗುತ್ತೆ?
ಷೇರುಮಾರುಕಟ್ಟೆ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Aug 09, 2023 | 4:48 PM

ಬಹಳಷ್ಟು ಕಂಪನಿಗಳು ತಮ್ಮ ಷೇರನ್ನು ವಿಭಜಿಸುವುದನ್ನು (Stock Split) ಮತ್ತು ಬೋನಸ್ ಷೇರುಗಳನ್ನು ಹಂಚುವುದನ್ನು (Bonus Shares) ನೀವು ಗಮನಿಸಿರಬಹುದು. ಮಲ್ಟಿಬ್ಯಾಗರ್ ಆಗಿ ಪರಿಣಮಿಸಿದ ಕ್ಯಾಪ್ಟನ್ ಪೈಪ್ಸ್ ಸಂಸ್ಥೆ (Captain Pipes) ಇತ್ತೀಚೆಗೆ 1:10 ಪ್ರಮಾಣದಲ್ಲಿ ಷೇರು ಸ್ಪ್ಲಿಟ್ ಮಾಡಿತ್ತು. ಹಾಗೆಯೇ 2:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ಹಂಚಿತ್ತು. ಕ್ಯಾಪ್ಟನ್ ಪೈಪ್ಸ್ ಮಾತ್ರವಲ್ಲ, ಈ ಹಿಂದೆ ಹಲವಾರು ಕಂಪನಿಗಳು ಈ ಕ್ರಮಗಳನ್ನು ಕೈಗೊಂಡಿದ್ದಿವೆ. ಇನ್ಫೋಸಿಸ್, ಬಜಾಜ್ ಫಿನ್ ಸರ್ವ್, ಟಾಟಾ ಸ್ಟೀಲ್, ರಾಮಾ ಸ್ಟೀಲ್ ಮೊದಲಾದ ಹಲವು ಕಂಪನಿಗಳ ಷೇರುಗಳ ಇದೇ ರೀತಿ ವಿಭಜನೆಯಾಗಿರುವುದುಂಟು. ಕೆಲ ಕಂಪನಿಗಳು ಹಲವು ಬಾರಿ ಸ್ಟಾಕ್ ಸ್ಪ್ಲಿಟ್ ಮಾಡುತ್ತವೆ.

ಸ್ಟಾಕ್ ಸ್ಪ್ಲಿಟ್, ಬೋನಸ್ ಷೇರು ಎಂದರೇನು?

ಷೇರಿನ ಮೌಲ್ಯ ಸಾಕಷ್ಟು ಏರಿಕೆಯಾಗಿದೆ ಎಂದು ಕಂಪನಿಗೆ ಮನನವಾದರೆ, ಅದು ಷೇರುಗಳನ್ನು ವಿಭಜಿಸುತ್ತದೆ. ಷೇರುಗಳ ಬೆಲೆ ತುಂಬಾ ಹೆಚ್ಚಿದ್ದಾಗ ಟ್ರೇಡಿಂಗ್ ಗಾತ್ರ ಇಳಿಕೆಯಾಗುತ್ತದೆ. ಏಕೆಂದರೆ, ಬಹಳಷ್ಟು ಹೂಡಿಕೆದಾರರು ಸಣ್ಣ ಮೊತ್ತದ ಟ್ರೇಡಿಂಗ್ ನಡೆಸಲು ಮುಂದಾಗುತ್ತಾರೆ. ಆದ್ದರಿಂದ ಟ್ರೇಡಿಂಗ್ ಹೆಚ್ಚುವಂತೆ ಮಾಡಲು ಕಂಪನಿ ತನ್ನ ಸ್ಟಾಕ್​ಗಳನ್ನು ವಿಭಜಿಸುತ್ತದೆ.

ಷೇರುವಿಭಜನೆಯಿಂದ ಕಂಪನಿಯ ಒಟ್ಟಾರೆ ಷೇರುಸಂಪತ್ತು ಅಥವಾ ಸ್ಟಾಕ್ ಅಸೆಟ್ಸ್ ಮೌಲ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಷೇರುಗಳ ಸಂಖ್ಯೆ ಏರಿಕೆಯಾದರೂ ಸಹ ಅದಕ್ಕನುಗುಣವಾಗಿ ಅವುಗಳ ಬೆಲೆ ಇಳಿಕೆಯಾಗುವುದರಿಂದ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ. ಇದರ ಪ್ರಯೋಜನವೆಂದರೆ, ಕಂಪನಿಯ ಷೇರುಗಳ ಲಿಕ್ವಿಡಿಟಿ ಅಥವಾ ಷೇರುಹರಿವು ಹೆಚ್ಚುತ್ತದೆ. ಷೇರು ಖರೀದಿಸಬೇಕೆನ್ನುವವರಿಗೂ ಸುಲಭವಾಗುತ್ತದೆ.

ಇದನ್ನೂ ಓದಿ: Insurance: ಹುಷಾರ್; ಬ್ಯಾಂಕ್ ಮತ್ತು ಇನ್ಷೂರೆನ್ಸ್ ಏಜೆಂಟ್ ಹೇಳಿದ್ದೇ ಪರಮಸತ್ಯವಲ್ಲ; ವಿಮೆ ಪಾಲಿಸಿ ಪಡೆಯುವ ಮುನ್ನ ಈ ಎಚ್ಚರ ವಹಿಸಿ

ಈ ರೀತಿಯಲ್ಲಿ ಕಂಪನಿಯ ಹೂಡಿಕೆದಾರರು ವಿಶೇಷ ಲಾಭ ಅಥವಾ ನಷ್ಟ ಅನುಭವಿಸುವುದಿಲ್ಲ. ಹೆಚ್ಚಿನ ದ್ರವ್ಯತೆ ಕಾರಣ ಷೇರಿಗೆ ಬೇಡಿಕೆ ಏರಿಕೆಯಾಗಲಿದೆ. ತನ್ಮೂಲಕ ಅದರ ಬೆಲೆ ಹೆಚ್ಚಳಗೊಳ್ಳುತ್ತದೆ.

ಬೋನಸ್ ಷೇರು ಎಂದರೇನು?

ನಿಗದಿತ ಅನುಪಾತದ ಹೆಚ್ಚುವರಿ ಷೇರುಗಳನ್ನು ಪಡೆದಾಗ ಅದನ್ನು ಬೋನಸ್ ಷೇರುಗಳು ಎಂದು ಕರೆಯುತ್ತಾರೆ.

ಕಂಪನಿಯು ಬೋನಸ್ ಷೇರುಗಳನ್ನು ತನ್ನ ಷೇರುದಾರರಿಗೆ ನೀಡಿದಾಗಲೂ ಅದರ ಮೌಲ್ಯ ಅಥವಾ ಮಾಲೀಕತ್ವದ ಸ್ವರೂಪದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಷೇರು ಪ್ರಮಾಣ ಮಾತ್ರ ಬದಲಾಗುತ್ತದೆ.

ಉದಾಹರಣೆಗೆ, ಒಂದು ಕಂಪನಿ ಬೋನಸ್ ಷೇರುಗಳನ್ನು 2:1ರ ಅನುಪಾತದಲ್ಲಿ ನೀಡಿದರೆ ಆಗ ಷೇರುದಾರರು ತಮ್ಮಲ್ಲಿರುವ ಒಂದು ಷೇರಿಗೆ 2 ಷೇರುಗಳನ್ನು ಪಡೆಯುತ್ತಾರೆ.

ಓರ್ವ ವ್ಯಕ್ತಿ 1 ಷೇರು ಹೊಂದಿದ್ದರೆ ಬೋನಸ್ ನೀಡಿದ ಬಳಿಕ ಆತನ ಬಳಿ ಇರುವ ಷೇರುಗಳ ಸಂಖ್ಯೆ ಒಟ್ಟು 3 ಆಗುತ್ತವೆ. ಆದರ ಫೇಸ್ ವ್ಯಾಲ್ಯೂ, ಅಂದರೆ ಮುಖಬೆಲೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಕೇವಲ ಷೇರುಗಳ ಸಂಖ್ಯೆ ಮಾತ್ರ ಏರಿಕೆಯಾಗುತ್ತದೆ.

ಇದನ್ನೂ ಓದಿ: ಷೇರುಪೇಟೆಯಲ್ಲಿ ನಿಮ್ಮ ಲಾಭದ ಬಾಲ ಕತ್ತರಿಸುವ ಬಂಡವಾಳ ಲಾಭ ತೆರಿಗೆಗಳ ಬಗ್ಗೆ ತಿಳಿಯಿರಿ

ಬೋನಸ್ ಷೇರು ನೀಡುವ, ಸ್ಟಾಕ್ ಸ್ಪ್ಲಿಟ್ ಮಾಡುವ ಕಂಪನಿಗಳಲ್ಲಿ ಹೂಡಿಕೆ ಮಾಡಬೇಕೆ?

ಬೋನಸ್ ಷೇರುಗಳ ವಿಭಜನೆಯಿಂದ ನಿಮಗೆ ಷೇರುಗಳು ಅಗ್ಗ ಎನಿಸುತ್ತವೆ. ಆದರೆ ವಾಸ್ತವವಾಗಿ ಕಂಪನಿಯ ಮಾರುಕಟ್ಟೆ ಕ್ಯಾಪ್ ಮೇಲೆ ಅದು ಯಾವುದೇ ಪರಿಣಾಮ ಬೀರುವುದಿಲ್ಲ. ಆದಾಗ್ಯೂ, ಸಣ್ಣ ಹೂಡಿಕೆದಾರರ ಸಂವೇದನೆಯನ್ನು ಸುಧಾರಿಸುವ ಜೊತೆಗೆ ಬೇಡಿಕೆ ಸಹ ಹೆಚ್ಚುತ್ತದೆ. ಈ ಕಾರಣದಿಂದ ಕಂಪನಿಯ ಷೇರುಬೆಲೆ ಷೇರು ವಿಭಜನೆ ಅಥವಾ ಬೋನಸ್ ನೀಡಿಕೆಯಿಂದಾಗಿ ಹೆಚ್ಚುತ್ತದೆ.

ಅಲ್ಪಕಾಲದ ದೃಷ್ಟಿಯಿಂದ ನೀವು ಅಂತಹ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಆದರೆ, ಮಧ್ಯಮ ಮತ್ತು ದೀರ್ಘಕಾಲೀನ ಉದ್ದೇಶಗಳಿಗೆ ಇದು ಸೂಕ್ತ ಅಲ್ಲ. ಕಂಪನಿಯ ಮೂಲಭೂತ ಅಡಿಪಾಯ ಗಟ್ಟಿಯಾಗಿದ್ದಲ್ಲಿ ಮಾತ್ರ ನೀವು ಹೂಡಿಕೆ ಮಾಡಬಹುದು.

(ಕೃಪೆ: ಮನಿ9)

ಇನ್ನಷ್ಟು ಮನಿ9 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:00 pm, Wed, 2 August 23

KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ
ಪಂದ್ಯವಾಡು ಫೈನ್ ಕಟ್ಟು: ಬ್ಯಾಕ್ ಟು ಬ್ಯಾಕ್ ದಂಡ ಕಟ್ಟಿದ ದಿಗ್ವೇಶ್ ರಾಠಿ
ಪಂದ್ಯವಾಡು ಫೈನ್ ಕಟ್ಟು: ಬ್ಯಾಕ್ ಟು ಬ್ಯಾಕ್ ದಂಡ ಕಟ್ಟಿದ ದಿಗ್ವೇಶ್ ರಾಠಿ
ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ
ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ
ಗ್ಲೋಬಲ್ ಕನ್ನಡಿಗನಿಗೆ ಯೂಟ್ಯೂಬ್​ನಿಂದ ಬರ್ತಿರೋದೆಷ್ಟು?
ಗ್ಲೋಬಲ್ ಕನ್ನಡಿಗನಿಗೆ ಯೂಟ್ಯೂಬ್​ನಿಂದ ಬರ್ತಿರೋದೆಷ್ಟು?
ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್
ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್
ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ
ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ
ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು
ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?