ಷೇರುಪೇಟೆಯಲ್ಲಿ ನಿಮ್ಮ ಲಾಭದ ಬಾಲ ಕತ್ತರಿಸುವ ಬಂಡವಾಳ ಲಾಭ ತೆರಿಗೆಗಳ ಬಗ್ಗೆ ತಿಳಿಯಿರಿ

Know About LTCG and STCG Taxes: ಷೇರು ಅಥವಾ ಮ್ಯೂಚುವಲ್ ಫಂಡ್ ವಹಿವಾಟಿನಲ್ಲಿ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಮತ್ತು ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆಗಳನ್ನು ವಿಧಿಸಲಾಗುತ್ತದೆ. 12 ತಿಂಗಳೊಳಗೆ ಮಾರಿ ಗಳಿಸಿದ ಲಾಭಕ್ಕೆ ಶಾರ್ಟ್ ಟರ್ಮ್ ಟ್ಯಾಕ್ಸ್ ಇದ್ದರೆ, ಅದಕ್ಕೂ ಮೇಲ್ಪಟ್ಟ ಅವಧಿ ಬಳಿಕ ಗಳಿಸಿದ ಲಾಭಕ್ಕೆ ಎಲ್​ಟಿಸಿಜಿ ತೆರಿಗೆ ಅನ್ವಯ ಆಗುತ್ತದೆ.

ಷೇರುಪೇಟೆಯಲ್ಲಿ ನಿಮ್ಮ ಲಾಭದ ಬಾಲ ಕತ್ತರಿಸುವ ಬಂಡವಾಳ ಲಾಭ ತೆರಿಗೆಗಳ ಬಗ್ಗೆ ತಿಳಿಯಿರಿ
ಷೇರುಮಾರುಕಟ್ಟೆ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Jul 31, 2023 | 6:26 PM

ನೀವು ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಮತ್ತು ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್​ಗಳ ಬಗ್ಗೆ ಕೇಳಿರಬಹುದು. ಷೇರು ಹೂಡಿಕೆದಾರರು ತಿಳಿದುಕೊಂಡಿರಬಹುದಾದ ತೆರಿಗೆಗಳು ಇವು. ದೀರ್ಘಾವಧಿಯ ಬಂಡವಾಳ ಲಾಭದ ತೆರಿಗೆ ಎಂದರೇನು ಮತ್ತು ಅದು ಷೇರು ಮತ್ತು ಮ್ಯೂಚುವಲ್ ಫಂಡ್​ಗಳಲ್ಲಿ ನಿಮ್ಮ ಲಾಭವನ್ನು ಹೇಗೆ ಕಡಿಮೆ ಮಾಡುತ್ತದೆ ಎಂಬುದನ್ನು ಈ ತಿಳಿಯಬಹುದು. 2018ರಲ್ಲಿ ಷೇರು ಮಾರುಕಟ್ಟೆ ಮತ್ತು ಇಕ್ವಿಟಿ ಮ್ಯೂಚುವಲ್ ಫಂಡ್ ಹೂಡಿಕೆದಾರರ ಮೇಲೆ ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆಯನ್ನು (LTCG- Long Term Capital Gain Tax) ವಿಧಿಸಲಾಯಿತು. ಅದಕ್ಕೂ ಹಿಂದೆ, ಕೇವಲ 15% ಅಲ್ಫಾವಧಿಯ ಬಂಡವಾಳ ಲಾಭದ ತೆರಿಗೆ (STCG- Short Term Capital Gain) ವಿಧಿಸಲಾಗುತ್ತಿತ್ತು.

LTCG ಮತ್ತು STCG ತೆರಿಗೆ ಯಾವಾಗ ವಿಧಿಸಲಾಗುತ್ತದೆ?

ನೀವು ಭೂಮಿ, ಮನೆ ಅಥವ ಷೇರುಗಳಂತಹ ಆಸ್ತಿಯನ್ನು ಮಾರಾಟ ಮಾಡಿದಾಗ, ಅದರ ಮೇಲಿನ ಲಾಭವನ್ನು ಬಂಡವಾಳ ಲಾಭ ಎಂದು ಕರೆಯಲಾಗುತ್ತದೆ.

ನೀವು 12 ತಿಂಗಳವರೆಗೆ ಹಿಡಿದಿಟ್ಟುಕೊಂಡ ನಂತರ ಈಕ್ವಿಟಿ ಷೇರು ಅಥವಾ ಇಕ್ವಿಟಿ ಮ್ಯೂಚುಯಲ್ ಫಂಡ್​ಗಳನ್ನು ಮಾರಾಟ ಮಾಡಿದರೆ, ಅದಕ್ಕೆ ವಿಧಿಸುವ ತೆರಿಗೆಯನ್ನು ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆ (LTCG) ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆಗಳಿದ್ದರೆ ಎಲ್ಲಕ್ಕೂ ಸರ್ಕಾರದ ಕೊಡುಗೆ ಸಿಗುತ್ತಾ? ನೀವು ತಿಳಿಯಬೇಕಾದ ಸಂಗತಿಗಳು

ಪಟ್ಟಿ ಮಾಡಲಾದ ಷೇರು ಅಥವ ಮ್ಯೂಚುಯಲ್ ಫಂಡ್ ಅನ್ನು 12 ತಿಂಗಳೊಳಗೆ ಮಾರಾಟ ಮಾಡಿದಾಗ, ಅದರ ಮೇಲಿನ ಲಾಭವನ್ನು ಅಲ್ಪಾವಧಿಯ ಬಂಡವಾಳ ಲಾಭ ತೆರಿಗೆ (STCG) ಎಂದು ಕರೆಯಲಾಗುತ್ತದೆ. ಇನ್ನು ಡೆಟ್ ಮ್ಯುಚುವಲ್ ಫಂಡ್ ಆದಲ್ಲಿ 36 ತಿಂಗಳ ನಂತರ ಮಾರಿದಾಗ ದೀರ್ಘಾವಧಿ ಲಾಭ ತೆರಿಗೆ ಅನ್ವಯ ಆಗುತ್ತದೆ.

ಎಲ್ಲಾ ಲಿಸ್ಟೆಡ್ ಷೇರುಗಳು, ಈಕ್ವಿಟಿ ಜೋಡಿತ ಮ್ಯೂಚುಯಲ್ ಫಂಡ್​ಗಳು ಅಥವ ಶೂನ್ಯ ಕೂಪನ್ ಬಾಂಡ್​ಗಳಿಗೆ ಅಲ್ಫಾವಧಿಯ ಬಂಡವಾಳ ಲಾಭದ ತೆರಿಗೆ ಅನ್ವಯ ಆಗುವ ಕಾಲದ ಮಿತಿ 12 ತಿಂಗಳು ಮಾತ್ರ. ಆದರೆ ಲಿಸ್ಟ್ ಆಗದ ಷೇರುಗಳಿಗೆ, ಭೂಮಿ ಅಥವ ಕಟ್ಟಡಗಳನ್ನು 24 ತಿಂಗಳ ಬಳಿಕ ಮಾರಿದರೆ ಮಾತ್ರ ದೀರ್ಘಾವಧಿ ಬಂಡವಾಳ ಲಾಭದ ತೆರಿಗೆ ಅನ್ವಯ ಆಗುತ್ತದೆ.

LTCG ತೆರಿಗೆಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ಮೂರು ವರ್ಷಗಳ ಹಿಂದೆ (2020) ನೀವು ಯೂನಿಟ್​ಗೆ 10 ರುಪಾಯಿ ಮೌಲ್ಯದಂತೆ 15ಸಾವಿರ ಯುನಿಟ್ ಮ್ಯೂಚುಯಲ್ ಫಂಡ್​ಗಳನ್ನು ಖರೀದಿಸಿದ್ದೀರಿ ಎಂದಿಟ್ಟುಕೊಳ್ಳಿ. ಈಗ 2023ರಲ್ಲಿ, ನಿಮ್ಮ ಮ್ಯೂಚುವಲ್ ಫಂಡ್​ನ ಯೂನಿಟ್​ನ ಮೌಲ್ಯ 10 ರೂನಿಂದ 30 ರುಪಾಯಿಗೆ ಏರಿದೆ ಎಂದು ಭಾವಿಸಿ. ಈಗ ಅವುಗಳನ್ನು ಮಾರಿದರೆ 4.5ಲಕ್ಷ ರೂಪಾಯಿ ಸಿಗುತ್ತದೆ. ಹಾಗಾಗಿ 1.5 ಲಕ್ಷ ರೂಪಾಯಿ ಹೂಡಿಕೆಗೆ 4.5 ಲಕ್ಷ ರೂಪಾಯಿ ಸಿಗುತ್ತದೆ. ಈ ವಹಿವಾಟಿನಿಂದ ನಿಮಗೆ 3ಲಕ್ಷ ರೂಪಾಯಿಗಳ ಬಂಡವಾಳ ಲಾಭ ಸಿಗುತ್ತದೆ. ಇಲ್ಲಿ 1ಲಕ್ಷ ರೂಪಾಯಿಗಿಂತ ಹೆಚ್ಚಿನ ಲಾಭದ ಮೇಲೆ ಕ್ಯಾಪಿಟಲ್ ಗೇನ್ಸ್ ತೆರಿಗೆಯನ್ನು ವಿಧಿಸಲಾಗುತ್ತದೆ. ಆದ್ದರಿಂದ ನಾವು 2ಲಕ್ಷ ರೂಪಾಯಿ ಮೇಲೆ ಎಲ್​ಟಿಸಿಜಿ ತೆರಿಗೆ ಬೀಳುತ್ತದೆ. ಎಲ್​ಟಿಸಿಜಿ ಶೇ. 10ರಷ್ಟಿದೆ. ಅಂದರೆ ನೀವು 20,000 ರೂನಷ್ಟು ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: Insurance: ಹುಷಾರ್; ಬ್ಯಾಂಕ್ ಮತ್ತು ಇನ್ಷೂರೆನ್ಸ್ ಏಜೆಂಟ್ ಹೇಳಿದ್ದೇ ಪರಮಸತ್ಯವಲ್ಲ; ವಿಮೆ ಪಾಲಿಸಿ ಪಡೆಯುವ ಮುನ್ನ ಈ ಎಚ್ಚರ ವಹಿಸಿ

ಆದಾಗ್ಯೂ ಬಂಡವಾಳ ಲಾಭ ತೆರಿಗೆಯನ್ನು ತಪ್ಪಿಸಲು ಮಾರ್ಗಗಳಿವೆ ಎಂದು ತಜ್ಞರು ಹೇಳುತ್ತಾರೆ. ನೀವು ಷೇರು ಅಥವ ಈಕ್ವಿಟಿ ಮ್ಯೂಚುಯಲ್ ಫಂಡ್ ಅನ್ನು ಮಾರಾಟ ಮಾಡಿ 1ಲಕ್ಷ ರೂಪಾಯಿಗಿಂತ ಹೆಚ್ಚಿನ ಲಾಭ ಪಡೆದಿದ್ದೀರಿ ಎಂದಿಟ್ಟುಕೊಳ್ಳಿ. ಆ ಹೆಚ್ಚುವರಿ ಲಾಭವನ್ನು ನೀವು ಮರುಹೂಡಿಕೆ ಮಾಡಬಹುದಾಗಿದೆ. ಉದಾಹರಣೆಗೆ, ಈ ಮೊತ್ತವನ್ನು ELSS ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಸೆಕ್ಷನ್ 80ಸಿಯ ಪ್ರಕಾರ ನೀವು ತೆರಿಗೆ ವಿನಾಯಿತಿಯನ್ನು ಪಡೆಯುತ್ತೀರಿ. ಆದರೆ ಇಲ್ಲಿಯೂ ನೀವು ಲಾಭ ಕಂಡಾಗ ಅದರ ಮೇಲೆ ಶೇ.10% LTCGಅನ್ನು ಪಾವತಿಸಬೇಕಾಗುತ್ತದೆ.

ಎಸ್​ಟಿಸಿಜಿ ತೆರಿಗೆ ದರ ಎಷ್ಟಿದೆ?

ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ (STCG) ತೆರಿಗೆ ಈಕ್ವಿಟಿಗಳಿಗೆ ಶೇ. 15ರಷ್ಟಿದೆ. ಅಂದರೆ ನೀವು 12 ತಿಂಗಳೊಳಗೆ ಷೇರು ಮಾರಿ ಗಳಿಸಿದ ಲಾಭಕ್ಕೆ ಈ ತೆರಿಗೆ ಅನ್ವಯ ಆಗುತ್ತದೆ.

(ಮಾಹಿತಿ ಕೃಪೆ: ಮನಿ9)

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:59 pm, Mon, 31 July 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ