ಮುಖ ಮುಚ್ಚಿಕೊಂಡು ತಿರುಗಾಡಿದ ನಾನಿ, ಶ್ರೀನಿಧಿ ಶೆಟ್ಟಿ; ವಿಡಿಯೋ ಮಾಡಲು ಬಂದವರ ಮೇಲೆ ಗರಂ
ಟಾಲಿವುಡ್ನ ಖ್ಯಾತ ನಟ ನಾನಿ ಹಾಗೂ ಕನ್ನಡದ ನಟಿ ಶ್ರೀನಿಧಿ ಶೆಟ್ಟಿ ಅವರು ದೇವಸ್ಥಾನಕ್ಕೆ ತೆರಳಿದ್ದಾರೆ. ಈ ವೇಳೆ ತಮ್ಮ ಗುರುತು ಮರೆಮಾಚಲು ಅವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು. ಹಾಗಿದ್ದರೂ ಕೂಡ ಅಭಿಮಾನಿಗಳಿಗೆ ಗುರುತು ಸಿಕ್ಕಿದೆ. ಹಾಗಾಗಿ ವಿಡಿಯೋ ಮಾಡಲು ಮುಂದಾಗಿದ್ದಾರೆ. ಈ ವೇಳೆ ನಾನಿಗೆ ಕೋಪ ಬಂದಿದೆ.

ನಟ ನಾನಿ ಅವರು ‘ಹಿಟ್ 3’ (HIT 3) ಸಿನಿಮಾದಲ್ಲಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಕನ್ನಡದ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರು ಅಭಿನಯಿಸಿದ್ದಾರೆ. ಮೇ 1ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಇದರ ಪ್ರಚಾರದ ಸಲುವಾಗಿ ಅವರು ಅನೇಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಇನ್ನು, ಸಿನಿಮಾ ಬಿಡುಗಡೆಗೂ ಮುನ್ನ ದೇವರ ಆಶೀರ್ವಾದ ಪಡೆಯಲು ಅವರು ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅಭಿಮಾನಿಗಳು ಅವರ ವಿಡಿಯೋ ಚಿತ್ರಿಸಲು ಮುಂದಾಗಿದ್ದಾರೆ. ಇದರಿಂದ ನಾನಿ (Nani) ಅವರಿಗೆ ಕಿರಿಕಿರಿ ಆಗಿದೆ.
ಸೆಲೆಬ್ರಿಟಿಗಳು ಎಲ್ಲಿಯೇ ಹೋದರೂ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗಬಹುದು. ಆ ಕಾರಣದಿಂದಲೇ ನಾನಿ ಮತ್ತು ಶ್ರೀನಿಧಿ ಶೆಟ್ಟಿ ಅವರು ತಿರುಪತಿ ದೇವಾಲಯಕ್ಕೆ ತೆರಳಿದ್ದಾಗ ಎಚ್ಚರಿಕೆ ವಹಿಸಿದರು. ಯಾರಿಗೂ ತಮ್ಮ ಗುರುತು ಸಿಗಬಾರದು ಎಂಬ ಉದ್ದೇಶದಿಂದ ನಾನಿ ಅವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು. ಶ್ರಿನಿಧಿ ಶೆಟ್ಟಿ ಅವರು ಮಾಸ್ಕ್ ಧರಿಸಿದ್ದರು.
ಮುಖ ಕಾಣಿಸದೇ ಇದ್ದರೂ ಕೂಡ ನಾನಿ ಮತ್ತು ಶ್ರೀನಿಧಿ ಶೆಟ್ಟಿ ಅವರನ್ನು ಅಭಿಮಾನಿಗಳು ಗುರುತಿಸಿದ್ದಾರೆ. ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತಿ ಬರುತ್ತಿರುವ ಅವರ ವಿಡಿಯೋ ಚಿತ್ರಿಸಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಅದರಿಂದ ಕಿರಿಕಿರಿಗೊಂಡ ನಾನಿ ಅವರು ಅಭಿಮಾನಿಗಳಿಗೆ ಬುದ್ಧಿ ಹೇಳಿದ್ದಾರೆ. ಇದು ದೇವಸ್ಥಾನ ಎಂಬುದನ್ನು ಅವರು ತಿಳಿಸಿಹೇಳಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
As expected prathi movie release mundu Tirumala velli blessings tisukuntadu @NameisNani anna ♥️#Hit3 pic.twitter.com/sUR3Vs3EMJ
— Vivek ᴴᴵᵀ³ (@name_is_vivek_7) April 26, 2025
ತಮ್ಮ ವಿಡಿಯೋ ಚಿತ್ರಿಸಲು ಬಂದು ಅಭಿಮಾನಿಗೆ ನಾನಿ ಅವರು ಗದರಲು ಇನ್ನೊಂದು ಕಾರಣ ಇದೆ. ಈ ಘಟನೆ ನಡೆದಿದ್ದು ದೇವಸ್ಥಾನದ ಮೆಟ್ಟಿಲುಗಳಲ್ಲಿ. ವಿಡಿಯೋ ಚಿತ್ರಿಸುವ ಭರದಲ್ಲಿ ಒಂದುವೇಳೆ ಆಯತಪ್ಪಿ ಬಿದ್ದರೆ ಗಂಭೀರವಾಗಿ ಪೆಟ್ಟಾಗುವ ಸಾಧ್ಯತೆ ಇರುತ್ತದೆ. ಆ ರೀತಿ ಆಗದಿರಲಿ ಎಂಬ ಕಾಳಜಿಯಿಂದ ನಾನಿ ಅವರು ಗದರಿದ್ದಾರೆ.
ಇದನ್ನೂ ಓದಿ: ಶ್ರೀನಿಧಿ ಶೆಟ್ಟಿ 3 ವರ್ಷ ಸಿನಿಮಾ ಮಾಡದಿರಲು ಇದುವೇ ಕಾರಣ
ನಾನಿ ಅವರಿಗೆ ದೇಶಾದ್ಯಂತ ಜನಪ್ರಿಯತೆ ಇದೆ. ಬೇರೆ ಬೇರೆ ರೀತಿಯ ಸಿನಿಮಾಗಳನ್ನು ಮಾಡಿ ಅವರು ಸೈ ಎನಿಸಿಕೊಳ್ಳುತ್ತಿದ್ದಾರೆ. ‘ದಿ ಪ್ಯಾರಡೈಸ್’ ಸಿನಿಮಾದಲ್ಲಿ ಕೂಡ ನಾನಿ ಅವರು ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ಶ್ರೀಕಾಂತ್ ಒದೆಲಾ ಅವರು ನಿರ್ದೇಶನ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








