ನಟನಾಗುವುದಕ್ಕೂ ಮೊದಲು ಗ್ಯಾರೆಜ್ನಲ್ಲಿ ಕೆಲಸ ಮಾಡಿದ್ದ ಅಜಿತ್
ಅಜಿತ್ ಕುಮಾರ್ ಅವರು ದುಬೈ 24 ಗಂಟೆಗಳ ರೇಸ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಅವರು ರೇಸಿಂಗ್‌ನಲ್ಲಿ ಮಾತ್ರವಲ್ಲ, ಪೈಲಟ್, ಅಡುಗೆ, ಹಾಗೂ ನಟನೆಯಲ್ಲೂ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ವಾಹನಗಳ ಮೇಲೆ ಆಸಕ್ತಿ ಹೊಂದಿದ್ದ ಅಜಿತ್, ರೇಸಿಂಗ್‌ನಲ್ಲಿ ಹಲವಾರು ಸಾಧನೆ ಮಾಡಿದ್ದಾರೆ.
ನಟ ಅಜಿತ್ ಅವರು ದುಬೈನಲ್ಲಿ ಹೊಸ ಸಾಧನೆ ಮಾಡಿದ್ದಾರೆ. ‘ದುಬೈ 24 ಅವರ್ಸ್ ರೇಸ್’ (24 ಹೆಚ್ ದುಬೈ 2025) ಅಜಿತ್ ಅವರ ಟೀಂ ಮೂರನೇ ಸ್ಥಾನ ಪಡೆದಿದೆ. ಅಜಿತ್ ಅವರು ತಮ್ಮದೇ ರೇಸಿಂಗ್ ಕಂಪನಿ ಹೊಂದಿದ್ದಾರೆ. ವಿವಿಧ ದೇಶಗಳಲ್ಲಿ ಅಜಿತ್ ಅವರು ಬೈಕ್ ಓಡಿಸುತ್ತಾರೆ. ಅಜಿತ್ ಅವರು ಹೀರೋ ಆಗುವುದಕ್ಕೂ ಮೊದಲೇ ಆಟೋಮೊಬೈಲ್ ಮೇಲೆ ಅಪರ ಪ್ರೀತಿಯನ್ನು ಅವರು ಹೊಂದಿದ್ದರು.
ಅಜಿತ್ ಅವರು ಓದನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಆ ಬಳಿಕ ಗ್ಯಾರೆಜ್ನಲ್ಲಿ ಕೆಲಸ ಮಾಡುತ್ತಿದ್ದರು. ಆ ಬಳಿಕ ಅವರ ಆಸಕ್ತಿ ಸಿನಿಮಾ ಕಡೆಗೆ ಹೊರಳಿ ಹೀರೋ ಆದರು. ಆದಾಗ್ಯೂ ಅವರು ತಮ್ಮ ಪ್ಯಾಷನ್ನ ಮರೆತಿಲ್ಲ. ಸಮಯ ಸಿಕ್ಕಾಗ ಅವರು ರೇಡ್ನಲ್ಲಿ ಭಾಗವಹಿಸುತ್ತಾರೆ.
ರೇಸಿಂಗ್ನಿಂದ ಅಜಿತ್ ಬ್ರೇಕ್ ಪಡೆದಿದ್ದರು. ಈಗ ಅವರು ಮತ್ತೆ ರೇಸ್ಗೆ ಮರಳಿದ್ದಾರೆ. ‘ದುಬೈ 24 ಅವರ್ಸ್ ರೇಸ್’ನಲ್ಲಿ ಮೂರನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. 1992ರಲ್ಲಿ ಅಜಿತ್ ಅವರು ರೇಸ್ ಮಾಡುವಾಗ ತೀವ್ರವಾಗಿ ಗಾಯಗೊಂಡಿದ್ದರು. ಆಗ ಅವರಿಗೆ ಹಲವು ರೀತಿಯ ಗಾಯ ಉಂಟಾಗಿತ್ತು. ಇತ್ತೀಚೆಗೆ ಅವರು ರೇಸ್ ಮಾಡುವಾಗ ಅಪಘಾತಕ್ಕೆ ಒಳಗಾಗಿದ್ದರು.
ಅಜಿತ್ ಕುಮಾರ್ ಫೈಟರ್ಜೆಟ್ಗಳನ್ನು ಓಡಿಸಬಲ್ಲರು! ಹೌದು, ಅಜಿತ್ ಅವರು ಪ್ರಮಾಣಪತ್ರ ಹೊಂದಿರೋ ಪೈಲಟ್. ಅವರ ಬಳಿ ಫೈಟರ್ ಜೆಟ್ ಲೈಸೆನ್ಸ್ ಇದೆ. ಚೆನ್ನೈ ಫ್ಲೈಯಿಂಗ್ ಕ್ಲಬ್ನಲ್ಲಿ ಅವರು ಪ್ರ್ಯಾಕ್ಟಿಸ್ ಮಾಡುತ್ತಾ ಇರುತ್ತಾರೆ. ಆಗಾಗ ಅವರು ಕಾಣಿಸಿಕೊಳ್ಳುತ್ತಾರೆ. ಇದು ಅಪರೂಪದ ಸಾಧನೆಯೇ ಸರಿ.
ಅಜಿತ್ ಅವರು ಉತ್ತಮ ಬಾಣಸಿಗ ಕೂಡ ಹೌದು. ಅವರು ಒಳ್ಳೆಯ ಅಡುಗೆ ಮಾಡುತ್ತಾರೆ. ಅವರು ಬಿರಿಯಾನಿಯನ್ನು ಉತ್ತಮವಾಗಿ ಮಾಡುತ್ತಾರೆ. ಅವರ ಬಿರಿಯಾನಿ ಸಖತ್ ಫೇಮಸ್. ಅವರು ಶೂಟಿಂಗ್ನಲ್ಲೂ ಲೈಸೆನ್ಸ್ ಹೊಂದಿದ್ದಾರೆ. ಅವರು ಶೂಟಿಂಗ್ಗಾಗಿ ನ್ಯಾಷನಲ್ ಲೆವೆಲ್ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಾರೆ. ತಮಿಳುನಾಡು ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಆರು ಪದಕ ಗೆದ್ದಿದ್ದಾರೆ. ಅಜಿತ್ ಅವರು ಫ್ಯಾಮಿಲಿ ಮ್ಯಾನ್ ಕೂಡ ಹೌದು. ಕುಟುಂಬಕ್ಕೂ ಆದ್ಯತೆ ನೀಡುತ್ತಾರೆ.
ಇದನ್ನೂ ಓದಿ: ದುಬೈನಲ್ಲಿ ರೇಸ್ ಗೆದ್ದು ಬಂದ ಅಜಿತ್ ಕುಮಾರ್; ಪತ್ನಿಗೆ ಮುತ್ತು
ಅಜಿತ್ ಅವರು ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಂಕ್ರಾಂತಿ ಸಂದರ್ಭದಲ್ಲಿ ಅವರ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಚಿತ್ರ ರಿಲೀಸ್ ಮುಂದಕ್ಕೆ ಹೋಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:48 am, Tue, 14 January 25