ದುಬೈನಲ್ಲಿ ರೇಸ್ ಗೆದ್ದು ಬಂದ ಅಜಿತ್ ಕುಮಾರ್; ಪತ್ನಿಗೆ ಮುತ್ತು  

ಕಾಲಿವುಡ್ ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅವರು ದುಬೈ 24 ಗಂಟೆಗಳ ರೇಸ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ನಟನೆಯ ಜೊತೆಗೆ ರೇಸಿಂಗ್‌ನಲ್ಲೂ ಅವರ ಅಪಾರ ಆಸಕ್ತಿ ಹಾಗೂ ಪ್ರತಿಭೆ ಇದನ್ನು ಸಾಬೀತುಪಡಿಸುತ್ತದೆ. ಅವರ ಈ ಸಾಧನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ದುಬೈನಲ್ಲಿ ರೇಸ್ ಗೆದ್ದು ಬಂದ ಅಜಿತ್ ಕುಮಾರ್; ಪತ್ನಿಗೆ ಮುತ್ತು  
ಅಜಿತ್ ಕುಮಾರ್
Follow us
ಸುಷ್ಮಾ ಚಕ್ರೆ
| Updated By: ರಾಜೇಶ್ ದುಗ್ಗುಮನೆ

Updated on: Jan 13, 2025 | 10:15 AM

ಕಾಲಿವುಡ್ ನಟ ಅಜಿತ್ ಕುಮಾರ್ ಅವರು ಹಲವು ಸಾಧನೆಗಳನ್ನು ಮಾಡುತ್ತಾರೆ. ಅವರು ನಟನೆಯ ಜೊತೆಗೆ ವಿವಿಧ ರೇಸ್​ನಲ್ಲಿ ಕೂಡ ಭಾಗವಹಿಸುತ್ತಾರೆ. ಅವರು ವಿಮಾನ ಕೂಡ ಓಡಿಸಬಲ್ಲರು. ಅವರಿಗೆ ಕಾರ್ ರೇಸ್ ಬಗ್ಗೆ ಸಾಕಷ್ಟು ಆಸಕ್ತಿ ಇದೆ. ಈಗ ಅವರು ‘ದುಬೈ 24 ಅವರ್ಸ್ ರೇಸ್​’ (24 ಹೆಚ್​ ದುಬೈ 2025) ಸ್ಪರ್ಧೆಯಲ್ಲಿ ಅಜಿತ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ವಿಡಿಯೋ ಹಾಗೂ ಫೋಟೋ ವೈರಲ್ ಆಗಿದೆ.

ಅಜಿತ್ ಕುಮಾರ್ ಅವರಿಗೆ ರೇಸ್ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇದೆ. ಅವರು ವಿವಿಧ ರೇಸ್​ನಲ್ಲಿ ಈ ಮೊದಲು ಭಾಗವಹಿಸಿದ್ದರು. ಈಗ ಅವರು ‘ದುಬೈ 24 ಅವರ್ಸ್ ರೇಸ್​’ ಸ್ಪರ್ಧೆ ವಿನ್ ಆಗಿ ಸಾಧನೆ ಮಾಡಿದ್ದಾರೆ. ಅವರು ಈ ರೇಸ್ ಗೆದ್ದು ಸಾಧನೆ ಮಾಡಿದ್ದಾರೆ. ರೇಸ್ ಗೆದ್ದ ಬಳಿಕ ಅವರು ಪತ್ನಿಗೆ ಮುತ್ತಿಟ್ಟಿದ್ದಾರೆ.

ನಟನೆಗೆ ಕಾಲಿಟ್ಟು ಜನಪ್ರಿಯತೆ ಪಡೆದ ಬಳಿಕ ಹಾಯಾಗಿ ಸಮಯ ಕಳೆಯಬಹುದು. ಆದರೆ, ಅಜಿತ್ ಅವರು ಆ ರೀತಿ ಅಲ್ಲ. ಶೂಟಿಂಗ್, ರೇಸಿಂಗ್ ಎಂದು ಹಲವು ರಂಗದಲ್ಲಿ ತೊಡಗಿಕೊಂಡಿದ್ದಾರೆ. ಅವರು ನಿಜವಾದ ಕ್ರೀಡಾಸ್ಫೂರ್ತಿಯನ್ನು ಮರೆಯುತ್ತಿದ್ದಾರೆ.

ಇತ್ತೀಚೆಗೆ ಅಜಿತ್ ಅವರು ‘ದುಬೈ 24 ಅವರ್ಸ್ ರೇಸ್​’ (24 ಹೆಚ್​ ದುಬೈ 2025) ಸ್ಪರ್ಧೆಯಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. 6 ಗಂಟೆ ದೀರ್ಘ ಅವಧಿಯ ಪರೀಕ್ಷೆಯಲ್ಲಿ ಅಜಿತ್ ಪಾಲ್ಗೊಂಡಿದ್ದರು. ಇದರ ಅವಧಿ ಪೂರ್ಣಗೊಳ್ಳುತ್ತಿದೆ ಎನ್ನುವಾಗ ಅಜಿತ್ ಅವರ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದಿತ್ತು. ಆದರೆ, ಅಜಿತ್​ಗೆ ಗಾಯ ಆಗಿಲ್ಲ. ಈ ಬೆನ್ನಲ್ಲೇ ಅಜಿತ್ ಅವರು ಪುಟಿದೆದ್ದಿದ್ದಾರೆ. ರೇಸ್​ನಲ್ಲಿ ಅವರು ಗೆದ್ದಿರೋದಕ್ಕೆ ಅನೇಕರು ಅಭಿನಂದನೆ ತಿಳಿಸಿದ್ದಾರೆ. ವಿಶೇಷ ಎಂದರೆ ಅಜಿತ್ ಅವರು ದುಬೈನಲ್ಲಿ ತಮ್ಮದೇ ರೇಸಿಂಗ್ ತಂಡವನ್ನು ಹೊಂದಿದ್ದಾರೆ.

ಇದನ್ನೂ ಓದಿ: 180 ಕಿಮೀ ವೇಗದಲ್ಲಿ ಅಜಿತ್ ಕಾರು ಅಪಘಾತ; ವಿಡಿಯೋ ವೈರಲ್: ನಟನ ಪರಿಸ್ಥಿತಿ ಹೇಗಿದೆ?

ಅಜಿತ್ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಅವರು ನಟನೆಯಲ್ಲಿ ಗಮನ ಸೆಳೆದಿದ್ದಾರೆ. ರೇಸ್ ದೃಶ್ಯಗಳನ್ನು ಮಾಡುವಾಗ ಅವರು ಡ್ಯೂಪ್ ಬಳಸುವುದಿಲ್ಲ. ಈ ಮೊದಲು ‘ತುನಿವು’ ಸಿನಿಮಾ ಶೂಟ್ ಮಾಡುವಾಗ ರಿಯಲ್ ಸ್ಟಂಟ್​ಗಳನ್ನು ಮಾಡಿ ಗಮನ ಸೆಳೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ
ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ
ಬಸ್​ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ ಬಸ್ ಕಂಡಕ್ಟರ್​
ಬಸ್​ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ ಬಸ್ ಕಂಡಕ್ಟರ್​
ಬಿಗ್ ಶೋ ಬಿಗ್ಗೆಸ್ಟ್ ಸಿಕ್ಸ್: ರಾಕೆಟ್ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್
ಬಿಗ್ ಶೋ ಬಿಗ್ಗೆಸ್ಟ್ ಸಿಕ್ಸ್: ರಾಕೆಟ್ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್
Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ
Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ
ಇಂದು ಬನದ ಹುಣ್ಣಿಮೆ, ಈ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಇಂದು ಬನದ ಹುಣ್ಣಿಮೆ, ಈ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಜಗದೀಶ್ ಬೆಳ್ಯಪ್ಪ, ಎಂ ಶ್ರೀಕಾಂತ್​ಗೆ ಬೆಂಗಳೂರು ಪ್ರೆಸ್​ಕ್ಲಬ್​ ಪ್ರಶಸ್ತಿ
ಜಗದೀಶ್ ಬೆಳ್ಯಪ್ಪ, ಎಂ ಶ್ರೀಕಾಂತ್​ಗೆ ಬೆಂಗಳೂರು ಪ್ರೆಸ್​ಕ್ಲಬ್​ ಪ್ರಶಸ್ತಿ
ಹಸುಗಳ ಮಾಲೀಕರಿಗೆ ವೈಯಕ್ತಿಕ ಪರಿಹಾರ ಕೊಡುತ್ತೇನೆ ಎಂದ ಸಚಿವ ಜಮೀರ್
ಹಸುಗಳ ಮಾಲೀಕರಿಗೆ ವೈಯಕ್ತಿಕ ಪರಿಹಾರ ಕೊಡುತ್ತೇನೆ ಎಂದ ಸಚಿವ ಜಮೀರ್
ಹಸುಗಳ ಕೆಚ್ಚಲು ಕೊಯ್ದು ವಿಕೃತಿ, ಕೇಸ್ ಬುಕ್: ಸಿಎಂ ಹೇಳಿದ್ದೇನು?
ಹಸುಗಳ ಕೆಚ್ಚಲು ಕೊಯ್ದು ವಿಕೃತಿ, ಕೇಸ್ ಬುಕ್: ಸಿಎಂ ಹೇಳಿದ್ದೇನು?
ಮುಖವಾಡ ಕಳಚಿದ ಮೇಲೆ ಭವ್ಯಾ ಗೌಡ ಬಗ್ಗೆ ತ್ರಿವಿಕ್ರಮ್​ಗೆ ಜ್ಞಾನೋದಯ
ಮುಖವಾಡ ಕಳಚಿದ ಮೇಲೆ ಭವ್ಯಾ ಗೌಡ ಬಗ್ಗೆ ತ್ರಿವಿಕ್ರಮ್​ಗೆ ಜ್ಞಾನೋದಯ
ಕಂಬಳ ಓಟವನ್ನು ಬೆರುಗಣ್ಣಿನಿಂದ ನೋಡಿದ ನಟಿ ಶಾನ್ವಿ
ಕಂಬಳ ಓಟವನ್ನು ಬೆರುಗಣ್ಣಿನಿಂದ ನೋಡಿದ ನಟಿ ಶಾನ್ವಿ