ಅಸ್ವಸ್ಥತೆಯಿಂದ ಬಳಲುತ್ತಿರುವ ಹಿರಿಯನಟ ಸರಿಗಮವಿಜಿ, ಆಸ್ಪತ್ರೆಯೊಂದಕ್ಕೆ ದಾಖಲು

ಅಸ್ವಸ್ಥತೆಯಿಂದ ಬಳಲುತ್ತಿರುವ ಹಿರಿಯನಟ ಸರಿಗಮವಿಜಿ, ಆಸ್ಪತ್ರೆಯೊಂದಕ್ಕೆ ದಾಖಲು

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 13, 2025 | 10:54 AM

ಬಹುಮುಖ ಪ್ರತಿಭೆಯ ಕಲಾವಿದರಾಗಿರುವ ಸರಿಗಮವಿಜಿ ನಟನಾಗಿ ಕೆಲಸ ಮಾಡುವುದರ ಜೊತೆಗೆ ಕೆಲವು ಚಿತ್ರಗಳಿಗೆ ಸಹ ನಿರ್ದೇಶಕನಾಗಿಯೂ ದುಡಿದಿದ್ದಾರೆ. ಗೀತಪ್ರಿಯ ನಿರ್ದೇಶನದಲ್ಲಿ ತೆರೆಕಂಡ ‘ಬೆಳವಲದ ಮಡಿಲಲ್ಲಿ’ ವಿಜಿ ಮೊಟ್ಟಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡ ಚಿತ್ರ. ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳ ನಿರ್ದೇಶನವನ್ನೂ ಇವರು ಮಾಡಿದ್ದಾರೆ. ಅವರು ಶೀಘ್ರ ಗುಣಮುಖರಾಗಿ ಮತ್ತೇ ಕೆಲಸದಲ್ಲಿ ತೊಡಗಲಿ.

ಬೆಂಗಳೂರು: ಚಿತ್ರನಟ ಮತ್ತು ಕಿರುತೆರೆಯಲ್ಲಿ ನಟ ಹಾಗೂ ನಿರ್ದೇಶಕನಾಗಿ ದುಡಿದಿರುವ ಮತ್ತು ಸರಿಗಮವಿಜಿ (ವಿಜಯ್) ಅನಾರೋಗ್ಯದಿಂದ ಬಳಲುತ್ತಿದ್ದು ನಗರದ ಖ್ಯಾತ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮ ವರದಿಗಾರ ನೀಡುವ ಮಾಹಿತಿ ಪ್ರಕಾರ 5 ದಿನಗಳ ಹಿಂದೆಯೇ ಅವರು ಯಶವಂತಪುರದಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಮಾರು ನಾಲ್ಕೂವರೆ ದಶಕಗಳ ಹಿಂದೆಯೇ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸರಿಗಮವಿಜಿ ಇದುವರೆಗೆ 269 ಚಿತ್ರಗಳಲ್ಲಿ ನಟಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪುಷ್ಪಾ 2 ಸಿನಿಮಾದ ಪೀಲಿಂಗ್ಸ್ ಸಾಂಗ್ ಗೆ ಅಜ್ಜಿಯ ಚಿಂದಿ ಡಾನ್ಸ್