ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ

ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 13, 2025 | 8:18 AM

ಸದ್ಯ ಬಿಗ್ ಬಾಸ್ ಮನೆಯುಲ್ಲಿ 7 ಸ್ಪರ್ಧಿಗಳು ಇದ್ದಾರೆ. ಈ ಪೈಕಿ ಇಬ್ಬರು ದೊಡ್ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ. ಒಟ್ಟಾರೆ ಐದು ಮಂದಿ ಫಿನಾಲೆಗೆ ಕಾಲಿಡಲಿದ್ದಾರೆ. ಆ ಪೈಕಿ ಗೆಲ್ಲೋದು ಯಾರು ಎನ್ನುವ ಪ್ರಶ್ನೆ ಮೂಡಿದೆ. ಹೀಗಿರುವಾಗಲೇ ಮಧ್ಯದ ವಾರದ ಎಲಿಮಿನೇಷನ್ ಬಗ್ಗೆ ಘೋಷಣೆ ಮಾಡಲಾಗಿದೆ.

ಈ ವಾರ ‘ಮಿಡ್ ವೀಕ್ ಎಲಿಮಿನೇಷನ್’ ಇದೆ ಎಂದು ಬಿಗ್ ಬಾಸ್ ಘೋಷಣೆ ಮಾಡಿದ್ದಾರೆ. ಭವ್ಯಾ ಹಾಗೂ ಮೋಕ್ಷಿತಾ ಸೇರಿ ರಜತ್​ಗೆ ಸ್ಕೆಚ್ ಇಟ್ಟಿದ್ದಾರೆ. ಈ ಪ್ರೋಮೋನ ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ. ಭವ್ಯಾಗೆ ಅನೇಕ ಬಾರಿ ರಜತ್ ಕಿವಿಮಾತು ಹೇಳಿದ್ದು ಇದೆ. ಆದರೆ, ಈಗ ಆಟದಲ್ಲಿ ಭವ್ಯಾ ಈ ರೀತಿ ಮೋಸ ಮಾಡಿದ್ದಕ್ಕೆ ರಜತ್ ಸಿಟ್ಟಾಗಿದ್ದಾರೆ. ಅವರಿಗೆ ಬೇಸರವೂ ಉಂಟಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.