AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಟ್ಟದ್ದು ಮಾಡಿದ್ದರೂ ಭವ್ಯಾಗೆ ದೊಡ್ಡ ಅವಕಾಶ ನೀಡಿದ ಹನುಮಂತ; ಫಿನಾಲೆ ಹೋಗೋದು ಮತ್ತಷ್ಟು ಸುಲಭ

ಬಿಗ್ ಬಾಸ್ ಕನ್ನಡದಲ್ಲಿ ಮಧ್ಯವಾರದ ಎಲಿಮಿನೇಷನ್ ಘೋಷಣೆಯಾಗಿದೆ. ಹನುಮಂತ, ತಮ್ಮ ಆಪ್ತ ಧನರಾಜರನ್ನು ಬದಿಗಿಟ್ಟು ಭವ್ಯಾರನ್ನು ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಭವ್ಯಾರ ದುರ್ಬಲತೆಯನ್ನು ಗುರುತಿಸಿ ಅವರಿಗೆ ಒಂದು ಅವಕಾಶ ನೀಡುವ ಮೂಲಕ ಹನುಮಂತ ತಮ್ಮ ಆಟದ ತಂತ್ರವನ್ನು ತೋರಿಸಿದ್ದಾರೆ. ಮಧ್ಯವಾರದ ಎಲಿಮಿನೇಷನ್​ನಿಂದ ತಪ್ಪಿಸಿಕೊಳ್ಳಲು ಸ್ಪರ್ಧಿಗಳು ವಿವಿಧ ಟಾಸ್ಕ್​​ನಲ್ಲಿ ಭಾಗವಹಿಸಬೇಕಾಗುತ್ತದೆ.

ಕೆಟ್ಟದ್ದು ಮಾಡಿದ್ದರೂ ಭವ್ಯಾಗೆ ದೊಡ್ಡ ಅವಕಾಶ ನೀಡಿದ ಹನುಮಂತ; ಫಿನಾಲೆ ಹೋಗೋದು ಮತ್ತಷ್ಟು ಸುಲಭ
ಹನುಮಂತ-ಭವ್ಯಾ
ರಾಜೇಶ್ ದುಗ್ಗುಮನೆ
|

Updated on:Jan 14, 2025 | 7:08 AM

Share

‘ಬಿಗ್ ಬಾಸ್​’ ಆಟದಲ್ಲಿ ಯಾರಾದರೂ ಕೆಟ್ಟದು ಮಾಡಿದರೆ ಅವರಿಗೆ ಗುಂಡಿ ತೋಡಿ ಮುಚ್ಚಿ ಹಾಕಲು ಪ್ರಯತ್ನಿಸುವವರೇ ಜಾಸ್ತಿ. ಇಲ್ಲಿ ಎಲ್ಲರೂ ಸ್ವಾರ್ಥದ ಆಟ ಆಡುತ್ತಾರೆ. ಆದರೆ, ಹನುಮಂತ ಮಾತ್ರ ಇದಕ್ಕೆ ಭಿನ್ನ. ತಮಗೆ ಕೆಟ್ಟದ್ದು ಬಯಸಿದ್ದ ಭವ್ಯಾಗೂ ಒಳ್ಳೆಯದನ್ನೇ ಮಾಡಿದ್ದಾರೆ. ಇದನ್ನು ನೋಡಿ ಮನೆ ಮಂದಿಗೆ ಅಚ್ಚರಿ ಆಗಿದೆ. ಭವ್ಯಾ ಅವರು ಭಾವುಕರಾದರು. ಆಟದಲ್ಲಿ ಸಾಬೀತು ಮಾಡಿಕೊಳ್ಳಲು ಭವ್ಯಾಗೆ ಹನುಮಂತ ದೊಡ್ಡ ಅವಕಾಶ ನೀಡಿದ್ದಾರೆ.

ಬಿಗ್ ಬಾಸ್​ನಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ. ಇದನ್ನು ಸುದೀಪ್ ಘೋಷಣೆ ಮಾಡಿದ್ದಾರೆ. ಈ ಮಿಡ್ ವೀಕ್​ ಎಲಿಮಿನೇಷನ್​ನಿಂದ ತಪ್ಪಿಸಿಕೊಳ್ಳಲು ಬಿಗ್ ಬಾಸ್ ಒಂದು ಅವಕಾಶ ನೀಡಿದರು. ವಿವಿಧ ರೀತಿಯ ಟಾಸ್ಕ್​ಗಳನ್ನು ನೀಡುತ್ತಾ ಹೋಗಲಾಗುತ್ತದೆ. ಇದರಲ್ಲಿ ಅಂತಿಮವಾಗಿ ಯಾರು ಗೆಲ್ಲುತ್ತಾರೋ ಅವರು ಮಧ್ಯ ವಾರದ ಎಲಿಮಿನೇಷನ್​ನಿಂದ ಬಚಾವ್ ಆಗುತ್ತಾರೆ. ಈ ಮೂಲಕ ಫಿನಾಲೆ ತಲುಪಲು ಮತ್ತೊಂದು ಹಂತ ಮೇಲಕ್ಕೆ ಹೋಗುತ್ತಾರೆ.

ಈ ಆಟದ ವಿಧಾನವೂ ಭಿನ್ನವಾಗಿತ್ತು. ಮೊದಲ ಆಟಕ್ಕೆ ಕ್ಯಾಪ್ಟನ್ ಹನುಮಂತ ಅವರು ಉಳಿದ 7 ಸ್ಪರ್ಧಿಗಳ ಪೈಕಿ ಒಬ್ಬರನ್ನು ಆಯ್ಕೆ ಮಾಡಬೇಕು. ಹಾಗೆ ಆಯ್ಕೆ ಆದವರು ಪ್ರತಿಸ್ಪರ್ಧಿಯಾಗಿ ಮೂವರನ್ನು ಆಯ್ಕೆ ಮಾಡಬಹುದು. ಈ ನಾಲ್ವರಲ್ಲಿ ಗೆದ್ದವರು ಮುಂದಿನ ಆಟಕ್ಕೆ ಎದುರಾಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆಟ ಹೀಗೆಯೇ ಸಾಗುತ್ತದೆ.

ಹನುಮಂತ ಅವರು ಮೊದಲು ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದು ತುಂಬಾನೇ ಮುಖ್ಯವಾಗುತ್ತದೆ. ಎಲ್ಲರೂ ಬಂದು ಹನುಮಂತನ ಬಳಿ ತಾವು ಯಾವ ರೀತಿ ಆಡಿದ್ದೇವೆ ಎಂಬುದರ ವರದಿ ಒಪ್ಪಿಸಿದರು. ಹನುಮಂತ ಅವರ ಆಪ್ತ ಎನಿಸಿಕೊಂಡಿರೋ ಧನರಾಜ್ ಕೂಡ ಬಂದು ತಮ್ಮನ್ನು ಆಯ್ಕೆ ಮಾಡುವಂತೆ ಕೋರಿದರು. ಆದರೆ, ಹನುಮಂತ ಅವರು ಗೆಳೆತನವನ್ನು ಪರಿಗಣಿಸಲೇ ಇಲ್ಲ.

ಇದನ್ನೂ ಓದಿ: ಹೀಗೆ ಆಟ ಮುಂದುವರಿದರೆ ಹನುಮಂತನೇ ವಿನ್ನರ್? ಸೂಚನೆ ಕೊಟ್ಟ ಸುದೀಪ್

ಹನುಮಂತ ಅವರು ಭವ್ಯಾನ ಆಯ್ಕೆ ಮಾಡಿದರು. ‘ಪುರುಷ ಸದಸ್ಯರಿಗೆ ಠಕ್ಕರ್ ಕೊಡುವ ರೀತಿ ಆಡುತ್ತಾರೆ. ಅಲ್ಲದೆ, ಅವರಿಗೆ ತಪ್ಪಿನ ಅರಿವಾಗಿದೆ. ಹೀಗಾಗಿ, ನಾನು ಭವ್ಯಾನ ಆಯ್ಕೆ ಮಾಡುತ್ತೇನೆ’ ಎಂದರು ಹನುಮಂತ. ಅವರ ಆಯ್ಕೆ ನೋಡಿ ಭವ್ಯಾಗೆ ಆಶ್ಚರ್ಯ ಆಯಿತು. ಅವರು ಹೋಗಿ ಹನುಮಂತಗೆ ಧನ್ಯವಾದ ಹೇಳಿದರು. ಈ ಮೂಲಕ ಭವ್ಯಾ ಫಿನಾಲೆ ಹಂತಕ್ಕೆ ಹೋಗಲು ಮತ್ತೊಂದು ಮೆಟ್ಟಿಲು ಏರಲು ಹನುಮಂತ ಸಹಾಯ ಮಾಡಿದಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:07 am, Tue, 14 January 25