ಮಿಡ್ ವೀಕ್ ಎಲಿಮಿನೇಷನ್; ಸೋಮವಾರದ ಸಂಚಿಕೆಯಲ್ಲೂ ಶಾಕ್ ಕೊಟ್ಟ ಸುದೀಪ್
ಕಳೆದ ವಾರ ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಅವರು ಎಲಿಮಿನೇಟ್ ಆದರು. ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಆಟದಲ್ಲಿ ಸೆಮಿ ಫೈನಲ್ ನಡೆಯುತ್ತಿದೆ. ಸೋಮವಾರದ (ಜನವರಿ 13) ಸಂಚಿಕೆಯಲ್ಲಿ ಸುದೀಪ್ ಕಡೆಯಿಂದ ಬಿಗ್ ಬಾಸ್ ಸ್ಪರ್ಧಿಗಳಿಗೆ ಒಂದು ಮುಖ್ಯವಾದ ಸಂದೇಶ ನೀಡಲಾಗಿದೆ. ಅದನ್ನು ಕೇಳಿ ಎಲ್ಲರಿಗೂ ಶಾಕ್ ಆಗಿದೆ.
ಮಿಡ್ ವೀಕ್ ಎಲಿಮಿನೇಷನ್ ಎಂದರೆ ಎಲ್ಲ ಸ್ಪರ್ಧಿಗಳಿಗೂ ಢವ ಢವ ಶುರು ಆಗುತ್ತದೆ. ಯಾಕೆಂದರೆ, ವಾರದ ಮಧ್ಯದಲ್ಲೇ ಒಬ್ಬ ಸ್ಪರ್ಧಿಯ ಆಟ ಅಂತ್ಯವಾಗುತ್ತದೆ. ಅವರಿಗೆ ವಿದಾಯ ಹೇಳಲು ಸುದೀಪ್ ಇರುವುದಿಲ್ಲ. ಮಿಡ್ ವೀಕ್ನಲ್ಲಿ ಎಲಿಮಿನೇಟ್ ಆದವರು ಆಗಿಂದಾಗಲೇ ದೊಡ್ಮನೆಗೆ ವಿದಾಯ ಹೇಳಬೇಕಾಗುತ್ತದೆ. ಸೋಮವಾರದ (ಜ.13) ಸಂಚಿಕೆ ಆರಂಭ ಆಗುತ್ತಿದ್ದಂತೆಯೇ ಬಿಗ್ ಬಾಸ್ ಮನೆಯ ಒಳಗಿನ ಟಿವಿಯಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಎಲ್ಲರಿಗೂ ಮಿಡ್ ವೀಕ್ ಎಲಿಮಿನೇಷನ್ ಬಗ್ಗೆ ಅವರು ಎಚ್ಚರಿಕೆ ನೀಡಿದರು.
‘ಈ ವಾರ ಮಿಡ್ ವೀಕ್ ಎಲಿಮಿನೇಷನ್ ಇರುತ್ತದೆ. ಹನುಮಂತನ ಹೊರತುಪಡಿಸಿ ಎಲ್ಲರೂ ನಾಮಿನೇಟ್ ಆಗಿದ್ದೀರಿ. ಹೋಗುವವರಿಗೆ ಈಗಲೇ ಬ್ಯಾಡ್ ಲಕ್ ಹೇಳುತ್ತಿದ್ದೇನೆ. ಎಲ್ಲರೂ ಚೆನ್ನಾಗಿ ಆಟ ಆಡಿ. ಎಲ್ಲರಿಗೂ ಗುಡ್ ಲಕ್’ ಎಂದು ಕಿಚ್ಚ ಸುದೀಪ್ ಅವರು ಹೇಳಿದರು. ಕಳೆದ ವಾರವಷ್ಟೇ ಮಾರಿ ಹಬ್ಬದಂತಹ ಟಾಸ್ಕ್ ನೀಡಲಾಗಿತ್ತು. ಈ ವಾರದ ಟಾಸ್ಕ್ ಇನ್ನಷ್ಟು ಕಠಿಣವಾಗಿ ಇರಲಿದೆ.
ಇದನ್ನೂ ಓದಿ: ಬಿಗ್ ಬಾಸ್ ಬಿಟ್ಟರೂ ಸುದೀಪ್ ಬಿಡಲಿಲ್ಲ; ಭವ್ಯಾಗೆ ಸೂಕ್ತ ಶಿಕ್ಷೆ ಕೊಟ್ಟ ಕಿಚ್ಚ
ಈಗ ಬಿಗ್ ಬಾಸ್ನಲ್ಲಿ ಸೆಮಿ ಫೈನಲ್. ವಾರದ ನಡುವಿನಲ್ಲಿ ಒಬ್ಬರು ಹೊರಗೆ ಹೋಗುವುದು ಬಹುತೇಕ ಖಚಿತ. ಧನರಾಜ್, ರಜತ್, ಗೌತಮಿ ಜಾದವ್, ಮೋಕ್ಷಿತಾ ಪೈ, ಭವ್ಯಾ ಗೌಡ, ಉಗ್ರಂ ಮಂಜು, ತ್ರಿವಿಕ್ರಮ್ ಅವರು ತಮ್ಮ ಉಳಿವಿಗಾಗಿ ಹೋರಾಟ ಮಾಡಬೇಕು. ಈ ಎಲ್ಲರಿಗೂ ಟಾಸ್ಕ್ ನೀಡಲಾಗುತ್ತಿದೆ. ಮೊದಲು ಯಾರು ಆಟ ಆಡಬೇಕು ಎಂಬುದನ್ನು ನಿರ್ಧರಿಸುವ ಅವಕಾಶವನ್ನು ಮನೆಯ ಕ್ಯಾಪ್ಟನ್ ಆದಂತಹ ಹನುಮಂತ ಅವರಿಗೆ ನೀಡಲಾಯಿತು.
ಇದನ್ನೂ ಓದಿ: ಬಿಗ್ ಬಾಸ್ ಗೆಲ್ಲಲು ಮೋಕ್ಷಿತಾ ಪೈಗೆ ಸುದೀಪ್ ಕಿವಿಮಾತು
ಹನುಮಂತ ಅವರು ಮೊದಲ ಆಟಕ್ಕೆ ಭವ್ಯಾ ಅವರನ್ನು ಆಯ್ಕೆ ಮಾಡಿದರು. ಕಳೆದ ವಾರ ಟಾಸ್ಕ್ ಆಡುವಾಗ ಭವ್ಯಾ ಅವರು ಹನುಮಂತನಿಗೆ ಹೊಡೆದಿದ್ದರು. ಅದಕ್ಕಾಗಿ ಭವ್ಯಾ ಅವರನ್ನು ಜೈಲಿಗೆ ಕೂಡ ಕಳಿಸಲಾಗಿತ್ತು. ಭವ್ಯಾ ಹೊಡೆದಾಗ ಹನುಮಂತನಿಗೆ ಬೇಸರ ಆಗಿದ್ದು ನಿಜ. ಆದರೆ ಆ ನೋವನ್ನು ಮನಸ್ಸಿನಿಂದ ತೆಗೆದು ಹಾಕಿ, ಭವ್ಯಾ ಅವರನ್ನೇ ಟಾಸ್ಕ್ಗೆ ಮೊದಲ ಸ್ಪರ್ಧಿಯಾಗಿ ಆಯ್ಕೆ ಮಾಡಿದ ಹನುಮಂತ ಅವರ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.