AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆಗಳಿದ್ದರೆ ಎಲ್ಲಕ್ಕೂ ಸರ್ಕಾರದ ಕೊಡುಗೆ ಸಿಗುತ್ತಾ? ನೀವು ತಿಳಿಯಬೇಕಾದ ಸಂಗತಿಗಳು

EPF Updates: ಒಬ್ಬ ಉದ್ಯೋಗಿ ಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ಕೆಲಸ ಮಾಡಿದ್ದರೆ ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆಗಳು ಸೃಷ್ಟಿಯಾಗಿರುವ ಸಾಧ್ಯತೆ ಇದೆ. ಈ ಎಲ್ಲಾ ಖಾತೆಗಳಲ್ಲಿರುವ ಹಣಕ್ಕೂ ಸರ್ಕಾರ ಬಡ್ಡಿ ಕೊಡುವುದಿಲ್ಲ ಎಂಬುದು ಗೊತ್ತಿರಲಿ.

ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆಗಳಿದ್ದರೆ ಎಲ್ಲಕ್ಕೂ ಸರ್ಕಾರದ ಕೊಡುಗೆ ಸಿಗುತ್ತಾ? ನೀವು ತಿಳಿಯಬೇಕಾದ ಸಂಗತಿಗಳು
ಇಪಿಎಫ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 31, 2023 | 1:17 PM

Share

ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ ಯೋಜನೆ (EPFO) ಉದ್ಯೋಗಿಗಳ ಭವಿಷ್ಯಕ್ಕೆಂದು ರೂಪಿಸಿದೆ. ವೇತನ ಪಡೆಯುವ ನೌಕರರಿಗೆ ಕಂಪನಿ ವತಿಯಿಂದ ಇಪಿಎಫ್​ಒನಲ್ಲಿ ಖಾತೆ ತೆರೆಯಲಾಗುತ್ತದೆ. ಇದರಲ್ಲಿ ವೇತನದ ಶೇ. 12ರಷ್ಟು ಹಣವನ್ನು ಕಡಿತ ಮಾಡಿ ಈ ಖಾತೆಗೆ ವರ್ಗಾಯಿಸಲಾಗುತ್ತದೆ. ಕಂಪನಿಯೂ ಕೂಡ ಶೇ. 12ರಷ್ಟು ಹಣವನ್ನು ಪ್ರತ್ಯೇಕವಾಗಿ ಈ ಖಾತೆಗೆ ತುಂಬುತ್ತದೆ. ಇದು ಆ ಉದ್ಯೋಗಿ ಅಲ್ಲಿ ಕೆಲಸ ಮಾಡುವವರೆಗೂ ಪ್ರತೀ ತಿಂಗಳು ನಡೆಯುವ ಕ್ರಿಯೆ. ಈ ಖಾತೆಗೆ ಕೇಂದ್ರ ಸರ್ಕಾರ ಪ್ರತೀ ವರ್ಷ ಅಷ್ಟೂ ಮೊತ್ತಕ್ಕೆ ಬಡ್ಡಿ ಹಣ ಸೇರಿಸುತ್ತದೆ. ಒಂದು ವೇಳೆ ಉದ್ಯೋಗಿ ಬೇರೆ ಕೆಲಸಕ್ಕೆ ಸೇರಿದರೆ ಅಲ್ಲಿ ಇನ್ನೊಂದು ಪಿಎಫ್ ಖಾತೆ ಸೃಷ್ಟಿಯಾಗುತ್ತದೆ. ಹೀಗೆ ಒಬ್ಬ ಉದ್ಯೋಗಿ ತನ್ನ ವೃತ್ತಿಜೀವನದಲ್ಲಿ ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆಗಳನ್ನು ಹೊಂದಬಹುದು. ಯುಎಎನ್ ನಂಬರ್ ಅಡಿಯಲ್ಲಿ ಈ ಎಲ್ಲಾ ಖಾತೆಗಳು ಇರುತ್ತವೆ.

ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆಗಳನ್ನು ಹೊಂದಿರುವವರು ಒಂದು ವಿಷಯ ಗಮನದಲ್ಲಿರಿಸಿಕೊಳ್ಳಬೇಕು. ಸರ್ಕಾರ ವರ್ಷಕ್ಕೊಮ್ಮೆ ಸೇರಿಸುವ ಬಡ್ಡಿ ಎಲ್ಲಾ ಖಾತೆಗಳಿಗೂ ಅನ್ವಯ ಆಗುವುದಿಲ್ಲ. ಒಂದು ಪಿಎಫ್ ಖಾತೆಗೆ 3 ವರ್ಷ ಕಾಲ ಯಾವುದೇ ಕೊಡುಗೆ ಇರದೇ ಇದ್ದರೆ ಆಗ ಬಡ್ಡಿ ಬರುವುದು ನಿಂತು ಹೋಗುತ್ತದೆ. ಅಂದರೆ ನೀವು ಕೆಲಸ ಬಿಟ್ಟು 3 ವರ್ಷಗಳವರೆಗೂ ನಿಮ್ಮ ಖಾತೆಗೆ ಬಡ್ಡಿ ಜಮೆ ಆಗುತ್ತದೆ. ಅದಾದ ಬಳಿಕ ಬಡ್ಡಿ ನಿಂತುಹೋಗುತ್ತದೆ.

ಪಿಎಫ್ ಖಾತೆಗಳನ್ನು ವಿಲೀನಗೊಳಿಸಿ

ನೀವು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಕೆಲಸ ಬದಲಾಯಿಸಿದಾಗ ಹೊಸ ಪಿಎಫ್ ಖಾತೆ ಸೃಷ್ಟಿಯಾಗುತ್ತದೆ. ಆ ಸಮಯದಲ್ಲಿ ನೀವು ಹಿಂದಿನ ಕಂಪನಿಯ ಪಿಎಫ್ ಖಾತೆಯನ್ನು ಹೊಸ ಪಿಎಫ್ ಖಾತೆಯೊಂದಿಗೆ ವಿಲೀನಗೊಳಿಸಬೇಕು. ಆಗ ನಿಮಗೆ ಬಡ್ಡಿ ಹಣ ಕೈತಪ್ಪುವುದಿಲ್ಲ.

ಇದನ್ನೂ ಓದಿ: EPF Interest Rate: ಇಪಿಎಫ್ ಹಣಕ್ಕೆ ಶೇ. 8.15 ಬಡ್ಡಿ ಜಮೆ ಆಗುವುದು ಯಾವಾಗ? ಬಡ್ಡಿ ಲೆಕ್ಕಾಚಾರ ಹೇಗೆ?

ಹೆಚ್ಚು ಮಂದಿಗೆ ತಿಳಿಯದ ಕೆಲ ಇಪಿಎಫ್​ಒ ನಿಯಮಗಳು

  1. ಒಬ್ಬ ವ್ಯಕ್ತಿ ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದಾಕ್ಷಣ ಪಿಎಫ್​ಗೆ ಅರ್ಹನೆಂದಲ್ಲ. ಆ ವ್ಯಕ್ತಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದರೆ ಮಾತ್ರವೇ ಇಪಿಎಫ್ ಸದಸ್ಯತ್ವ ಸಿಗಲು ಸಾಧ್ಯ.
  2. ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದ ಇಪಿಎಫ್ ಸದಸ್ಯತ್ವ ಪಡೆಯುವ ಉದ್ಯೋಗಿ, ಅಲ್ಲಿ ಕೆಲಸ ಮಾಡುವಾಗಲೇ ಪಿಎಫ್ ಸ್ಕೀಮ್​ನಿಂದ ಹೊರಬರಲು ಸಾಧ್ಯವಾಗುವುದಿಲ್ಲ.
  3. ಇಪಿಎಫ್ ಸದಸ್ಯತ್ವದ ಅವಧಿಗೆ ಯಾವ ನಿರ್ಬಂಧವೂ ಇರುವುದಿಲ್ಲ. ಉದ್ಯೋಗಿಯು ಕೆಲಸ ಬಿಟ್ಟರೆ ಆತನ ಇಪಿಎಫ್ ಖಾತೆ ರದ್ದಾಗುವುದಿಲ್ಲ. ಅದು ಅಸ್ತಿತ್ವದಲ್ಲಿರುತ್ತದೆ.
  4. ಸತತ ಮೂರು ವರ್ಷ ಕಾಲ ಇಪಿಎಫ್ ಖಾತೆಗೆ ಯಾವುದೇ ಕೊಡುಗೆ ಬರದೇ ಇದ್ದಾಗ, ಸರ್ಕಾರದಿಂದ ಬಡ್ಡಿ ಜಮೆ ಆಗುವುದು ನಿಂತುಹೋಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ
ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ
ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಕಾರ್ಮಿಕರು ಸಾವು
ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಕಾರ್ಮಿಕರು ಸಾವು
ಸಿಎಂ ತಾರತಮ್ಯ ಮಾಡಲ್ಲ, ಅನುದಾನ ಸಮಾನವಾಗಿ ಸಿಗುತ್ತದೆ: ಕೊತ್ತೂರು ಮಂಜನಾಥ್
ಸಿಎಂ ತಾರತಮ್ಯ ಮಾಡಲ್ಲ, ಅನುದಾನ ಸಮಾನವಾಗಿ ಸಿಗುತ್ತದೆ: ಕೊತ್ತೂರು ಮಂಜನಾಥ್
ಬುಮ್ರಾ ಆಡುವುದರ ಬಗ್ಗೆ ಸಿರಾಜ್ ಹೇಳಿದ್ದೇನು? ವಿಡಿಯೋ
ಬುಮ್ರಾ ಆಡುವುದರ ಬಗ್ಗೆ ಸಿರಾಜ್ ಹೇಳಿದ್ದೇನು? ವಿಡಿಯೋ
ಮೈಸೂರು ಜನ ಮತ್ತು ಪೌರಕಾರ್ಮಿಕರಿಗೆ ಶ್ರೇಯಸ್ಸು ಸಲ್ಲಬೇಕು: ಪಾಲಿಕೆ ಆಯುಕ್ತ
ಮೈಸೂರು ಜನ ಮತ್ತು ಪೌರಕಾರ್ಮಿಕರಿಗೆ ಶ್ರೇಯಸ್ಸು ಸಲ್ಲಬೇಕು: ಪಾಲಿಕೆ ಆಯುಕ್ತ
ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್​ಡೇಟ್
ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್​ಡೇಟ್
ಚರ್ಚೆಗೆ ಕರೆದರೆ ವಿಜಯೇಂದ್ರ ಚುನಾವಣೆ ನಡೆಸಿ ಅನ್ನುತ್ತಾರೆ: ಸಿದ್ದರಾಮಯ್ಯ
ಚರ್ಚೆಗೆ ಕರೆದರೆ ವಿಜಯೇಂದ್ರ ಚುನಾವಣೆ ನಡೆಸಿ ಅನ್ನುತ್ತಾರೆ: ಸಿದ್ದರಾಮಯ್ಯ
ಇಬ್ಬರು ಮುಸ್ಲಿಂ ಯುವಕರು ಮಠವನ್ನು ಪ್ರವೇಶಿಸಿದ್ದರು: ಅರವಿಂದ್ ಬೆಲ್ಲದ್
ಇಬ್ಬರು ಮುಸ್ಲಿಂ ಯುವಕರು ಮಠವನ್ನು ಪ್ರವೇಶಿಸಿದ್ದರು: ಅರವಿಂದ್ ಬೆಲ್ಲದ್
ಯಾವ ಸ್ವಾಮೀಜಿಯಿಂದಲೂ ನಾನು ಸ್ವಂತಕ್ಕಾಗಿ ಲಾಭ ಮಾಡಿಕೊಂಡಿಲ್ಲ: ಯತ್ನಾಳ್
ಯಾವ ಸ್ವಾಮೀಜಿಯಿಂದಲೂ ನಾನು ಸ್ವಂತಕ್ಕಾಗಿ ಲಾಭ ಮಾಡಿಕೊಂಡಿಲ್ಲ: ಯತ್ನಾಳ್
ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು
ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು