ITR: ಈವರೆಗೂ ಐಟಿ ರಿಟರ್ನ್ ಸಲ್ಲಿಸಿದವರ ಸಂಖ್ಯೆ 5.83 ಕೋಟಿ; ಡೆಡ್ಲೈನ್ಗೆ ಇನ್ನೊಂದೇ ದಿನ ಬಾಕಿ
Income Tax Return: ಜುಲೈ 30, ಮಧ್ಯಾಹ್ನ 1 ಗಂಟೆಯವರೆಗೂ 5.83 ಕೋಟಿ ಐನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆಯಾಗಿವೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ. ಜುಲೈ 31ಕ್ಕೆ ಐಟಿಆರ್ ಸಲ್ಲಿಸಲು ಕೊನೆಯ ದಿನವಾಗಿದೆ.
ನವದೆಹಲಿ, ಜುಲೈ 30: ಹಿಂದಿನ ಹಣಕಾಸು ವರ್ಷವಾದ 2022-23ರ ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ (ITR Filing) ಜುಲೈ 31 ಕೊನೆಯ ದಿನವಾಗಿದೆ. ಇನ್ನೊಂದು ಬಾಕಿ ಇರುವಂತೆ ಒಟ್ಟು 5.83 ಕೋಟಿ ಐಟಿಆರ್ಗಳು ಸಲ್ಲಿಕೆಯಾಗಿರುವ ಮಾಹಿತಿ ತಿಳಿದುಬಂದಿದೆ. ಐಟಿ ಇಲಾಖೆ ಈ ಸಂಬಂಧ ಇಂದು (ಜುಲೈ 30) ಟ್ವೀಟ್ ಮಾಡಿ ಮಾಹಿತಿ ತಿಳಿಸಿದೆ. ಇನ್ಕಮ್ ಟ್ಯಾಕ್ಸ್ ಪೋರ್ಟಲ್ನಲ್ಲಿರುವ ಲೈವ್ ಮಾಹಿತಿ ಪ್ರಕಾರ ಈವರೆಗೂ 5.73 ಕೋಟಿ ಮಂದಿ ಐಟಿಆರ್ ಸಲ್ಲಿಸಿರುವುದು ತಿಳಿದುಬಂದಿದೆ.
‘ಇವತ್ತು (ಜುಲೈ 30) ಮಧ್ಯಾಹ್ನ 1 ಗಂಟೆಯವರೆಗೂ 5.83 ಕೋಟಿ ಐಟಿಆರ್ಗಳು ಫೈಲ್ ಆಗಿವೆ. ಕಳೆದ ವರ್ಷ ಜುಲೈ 31ರವರೆಗೂ ಸಲ್ಲಿಕೆಯಾಗಿದ್ದ ಐಟಿಆರ್ಗಳ ಪ್ರಮಾಣಕ್ಕಿಂತ ಇದು ಹೆಚ್ಚು’ ಎಂದು ಐಟಿ ಇಲಾಖೆ ತನ್ನ ಟ್ವೀಟ್ನಲ್ಲಿ ತಿಳಿಸಿದೆ.
ಟ್ಯಾಕ್ಸ್ ರಿಟರ್ನ್ ಫೈಲಿಂಗ್ ಬಗ್ಗೆ ಅಂಕಿ ಅಂಶ ಬಹಿರಂಗಪಡಿಸಿದ ಐಟಿ ಇಲಾಖೆ, ನಿನ್ನೆ (ಜುಲೈ 29) 1.78 ಕೋಟಿ ಮಂದಿ ಇ-ಫೈಲಿಂಗ್ ಪೋರ್ಟಲ್ಗೆ ಲಾಗಿನ್ ಆಗಿರುವುದನ್ನು ಬಹಿರಂಗಪಡಿಸಿದೆ. ಹಾಗೆಯೇ, ಇಂದು ಮಧ್ಯಾಹ್ನ 1 ಗಂಟೆಯವರೆಗೆ 46 ಲಕ್ಷ ಮಂದಿಯಿಂದ ಲಾಗಿನ್ ಆಗಿದೆ ಎಂದೂ ಅದು ಹೇಳಿದೆ.
ಇದನ್ನೂ ಓದಿ: ITR: ಹೊಸ ಪೋರ್ಟಲ್ನಲ್ಲಿ ಐಟಿ ರಿಟರ್ನ್ ಫೈಲ್ ಮಾಡುವುದು ಬಹಳ ಸುಲಭ; ಯಾರೂ ಬೇಕಾದರೂ ಐಟಿಆರ್ ಸಲ್ಲಿಕೆ ಮಾಡುವಷ್ಟು ಸರಳ ಕ್ರಮಗಳು
‘ಇಂದು ಮಧ್ಯಾಹ್ನ 1 ಗಂಟೆವರೆಗೆ 10.39 ಲಕ್ಷ ಐಟಿಆರ್ಗಳು ಸಲ್ಲಿಕೆಯಾಗಿವೆ. ಕಳೆದ 1 ಗಂಟೆಯಲ್ಲಿ 3.04 ಲಕ್ಷ ಐಟಿಆರ್ಗಳು ಫೈಲಿಂಗ್ ಆಗಿವೆ’ ಎಂದು ಐಟಿ ಇಲಾಖೆ ಮಧ್ಯಾಹ್ನ 2 ಗಂಟೆಯ ಟ್ವೀಟ್ನಲ್ಲಿ ತಿಳಿಸಿದೆ.
ಇನ್ನು ಇನ್ಕಮ್ ಟ್ಯಾಕ್ಸ್ ಪೋರ್ಟಲ್ನಲ್ಲಿರುವ ಮಾಹಿತಿ ಪ್ರಕಾರ, ಇದೂವರೆಗೂ ನೊಂದಾಯಿಸಿಕೊಂಡಿರುವ ವೈಯಕ್ತಿಕ ತೆರಿಗೆಪಾವತಿದಾರರ ಸಂಖ್ಯೆ 11.51 ಕೋಟಿ ಎನ್ನಲಾಗಿದೆ. ಸಲ್ಲಿಕೆಯಾಗಿರುವ 5.73 ಕೋಟಿ ಐಟಿಆರ್ಗಳ ಪೈಕಿ ಸುಮಾರು 5 ಕೋಟಿಯಷ್ಟು ಐಟಿಆರ್ಗಳು ವೆರಿಫೈ ಆಗಿವೆ. ಇದರಲ್ಲಿ 3.18 ಕೋಟಿ ಐಟಿಆರ್ಗಳನ್ನು ಪ್ರೋಸಸ್ ಮಾಡಲಾಗಿದೆ.
ಸಂಬಳದಾರರು ಹಾಗೂ ಅಕೌಂಟ್ ಆಡಿಟಿಂಗ್ ಅಗತ್ಯ ಇಲ್ಲದವರು ಐಟಿಆರ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಇನ್ಕಮ್ ಟ್ಯಾಕ್ಸ್ ಪಾವತಿಸುವ ಬಹುತೇಕ ಮಂದಿಗೆ ಇದೇ ಡೆಡ್ಲೈನ್ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ