SIP: ಕ್ವಾಂಟ್ ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್ನಲ್ಲಿ 10,000 ರೂ ಎಸ್ಐಪಿ; 25 ವರ್ಷದಲ್ಲಿ 3 ಕೋಟಿ ಸಂಪತ್ತು
Quant Small-cap fund: ಕ್ವಾಂಟ್ ಮ್ಯೂಚುವಲ್ ಫಂಡ್ ನಿರ್ವಹಿಸುವ ಸ್ಮಾಲ್ ಕ್ಯಾಪ್ ಫಂಡ್ ಕಳೆದ 25 ವರ್ಷಗಳಲ್ಲಿ ಶೇ. 27.25ರ ವಾರ್ಷಿಕ ದರದಲ್ಲಿ ಬೆಳೆದಿದೆ. ಆಗ ಇದರ ಎಸ್ಐಪಿ ಮೇಲೆ ತಿಂಗಳಿಗೆ 10,000 ರೂ ಹೂಡಿಕೆ ಮಾಡುತ್ತಾ ಬಂದಿದ್ದರೆ ಈಗ ಅವರ ಹಣ 2.94 ಕೋಟಿ ರೂ ಆಗುತ್ತಿತ್ತು.
ಸ್ಮಾಲ್ ಕ್ಯಾಪ್ ಷೇರುಗಳ ಮೇಲೆ ಹೂಡಿಕೆ ಮಾಡುವುದು ತುಸು ಹೆಚ್ಚೇ ರಿಸ್ಕಿ ಎಂದು ಹೇಳುವವರಿದ್ದಾರೆ. ಸ್ಮಾಲ್ ಕ್ಯಾಪ್ (Small-cap) ಎಂದರೆ ಹೆಚ್ಚು ಷೇರುಗಳಿಲ್ಲದ ಕಂಪನಿಗಳು. ಇಂಥ ಕಂಪನಿಯ ಷೇರಿನ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಕ್ಕೋದಿಲ್ಲ ಎನ್ನುವ ಮಾತು ಅರ್ಧಸತ್ಯ ಮಾತ್ರ. ಸ್ಮಾಲ್ ಕ್ಯಾಪ್ ಕಂಪನಿಗಳ ಷೇರುಬೆಲೆ ಕಿರು ಅವಧಿಯಲ್ಲಿ ಏರುಪೇರಾಗುವುದು ಸಹಜ. ಆದರೆ, ದೀರ್ಘಕಾಲದಲ್ಲಿ ಇವು ಉತ್ತಮ ಏರಿಕೆ ಕಾಣುತ್ತವೆ ಎಂಬುದು ಬಲ್ಲವರ ಮಾತು. ಸ್ಮಾಲ್ ಕ್ಯಾಪ್ ಕಂಪನಿಗಳ ಮೇಲಿನ ಮ್ಯೂಚುವಲ್ ಫಂಡ್ಗಳಲ್ಲಿ ಹಣತೊಡಗಿಸುವವರಿಗೆ ದೀರ್ಘಾವಧಿಯಲ್ಲಿ ಉತ್ತಮ ಲಾಭ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಮಿಡ್ ಕ್ಯಾಪ್ ಮತ್ತು ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್ಗಳಿಗಿಂತ ಸ್ಮಾಲ್ ಕ್ಯಾಪ್ ಫಂಡ್ಗಳು ಹೆಚ್ಚು ಆದಾಯ ತರಬಲ್ಲುವು. ಇಂಥ ಒಂದು ಮ್ಯೂಚುವಲ್ ಫಂಡ್ಗೆ ಉದಾಹರಣೆ ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್. ಇದನ್ನು ಕ್ವಾಂಟ್ ಮ್ಯೂಚುವಲ್ ಫಂಡ್ ಸಂಸ್ಥೆ ನಿರ್ವಹಿಸುತ್ತದೆ.
ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ ನಿಫ್ಟಿಯ ಸ್ಮಾಲ್ಕ್ಯಾಪ್ 250 ಟೋಟಲ್ ರಿಟರ್ನ್ ಇಂಡೆಕ್ಸ್ (Nifty Smallcap 250 Total Return Index) ಅನ್ನು ಅನುಸರಿಸುತ್ತದೆ. ಕಳೆದ 5 ವರ್ಷದಲ್ಲಿ ಇದು ಶೇ. 27.25ರ ವಾರ್ಷಿಕ ದರದಲ್ಲಿ ಹೂಡಿಕೆಯನ್ನು ಬೆಳೆಸಿದೆ. ಕಳೆದ 3 ವರ್ಷದಲ್ಲಿ ಶೇ. 52.58, ಒಂದು ವರ್ಷದಲ್ಲಿ ಶೇ. 39.64ರ ದರದಲ್ಲಿ ಸಂಪತ್ತುವೃದ್ಧಿಸಿದೆ.
25 ವರ್ಷದಲ್ಲಿ ಅಗಾಧವಾಗಿ ಬೆಳೆದಿರುವ ಕ್ವಾಂಟ್ ಸ್ಮಾಲ್ ಕ್ಯಾಫ್ ಫಂಡ್
ಕ್ವಾಂಟ್ ಮ್ಯೂಚುವಲ್ ಫಂಡ್ನ ಸ್ಮಾಲ್ ಕ್ಯಾಪ್ ಫಂಡ್ ಅನ್ನು 1996ರ ಸೆಪ್ಟಂಬರ್ 23ರಂದು ಆರಂಭಿಸಲಾಗಿದೆ. ಇದು ಶುರುವಾಗಿ 27 ವರ್ಷಗಳಾಗಿವೆ. ಕಳೆದ 25 ವರ್ಷದಲ್ಲಿ ಇದು ಶೇ. 14.72ರ ದರದಲ್ಲಿ ಲಾಭ ತಂದಿರುವುದು ತಿಳಿದುಬಂದಿದೆ.
ಇದಕ್ಕೆ ಒಂದು ನಿದರ್ಶನ ನೀಡುವುದಾದರೆ, ಒಂದು ವೇಳೆ ನೀವು 25 ವರ್ಷಗಳಿಂದ ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ನಲ್ಲಿ ತಿಂಗಳಿಗೆ 10,000 ರೂ ಎಸ್ಐಪಿನಂತೆ ಹೂಡಿಕೆ ಮಾಡುತ್ತಾ ಬಂದಿದ್ದರೆ ಇವತ್ತಿಗೆ ನಿಮ್ಮ ಸಂಪತ್ತು 2.95 ಕೋಟಿ ರುಪಾಯಿ ಆಗುತ್ತಿತ್ತು.
ತಿಂಗಳಿಗೆ 10,000 ರೂನಂತೆ 25 ವರ್ಷ ಕಾಲ ನೀವು ಕಟ್ಟುವ ಒಟ್ಟು ಹಣ 30 ಲಕ್ಷ ರೂ ಆಗುತ್ತದೆ. ಈ 25 ವರ್ಷದಲ್ಲಿ ನಿಮ್ಮ ಹೂಡಿಕೆ ಹೆಚ್ಚೂಕಡಿಮೆ 10 ಪಟ್ಟು ಹೆಚ್ಚಾದಂತಾಗಿದೆ.
ಇದನ್ನೂ ಓದಿ: Mutual Fund SIP: 10,000 ರೂ ಎಸ್ಐಪಿಯಿಂದ 24 ವರ್ಷದಲ್ಲಿ 4.87 ಕೋಟಿ ರೂ ಲಾಭ; ಇದು ಎಸ್ಬಿಐ ಕಾಂಟ್ರಾ ಫಂಡ್ ಧಮಾಕ
ಆರ್ಡಿಗೆ ಹಾಕಿದರೆ ಎಷ್ಟು ರಿಟರ್ನ್ ಬರುತ್ತಿತ್ತು?
ಇಷ್ಟೇ ಹಣವನ್ನು ನೀವು ಆರ್ಡಿಗೆ ಹಾಕಿ ಬೆಳೆಸುತ್ತಾ ಬಂದಿದ್ದರೆ, ಅಂದರೆ ತಿಂಗಳಿಗೆ 10,000 ರೂನಂತೆ 25 ವರ್ಷಗಳಿಂದ ರೆಕರಿಂಗ್ ಡೆಪಾಸಿಟ್ ತೆರೆದಿದ್ದರೆ ನಿಮ್ಮ ಹಣ ಇಷ್ಟರಲ್ಲಿ ಸುಮಾರು 60 ಲಕ್ಷ ರೂ ಸಂಪತ್ತು ಕ್ರೋಢೀಕರಣ ಆಗುತ್ತಿತ್ತು.
ಆದರೆ, ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ ತರುವ ರಿಟರ್ನ್ ಮುಂದೆ ಆರ್ಡಿಯದ್ದು ಏನೂ ಅಲ್ಲ ಅನಿಸುತ್ತದೆ. ಆದರೆ, ಬಹಳ ಸುರಕ್ಷಿತ ಉಳಿತಾಯ ಯೋಜನೆ ಬೇಕೆನ್ನುವವರಿಗೆ ರೆಕರಿಂಗ್ ಡೆಪಾಸಿಟ್ ಉತ್ತಮ ಆಯ್ಕೆ ಎನಿಸಬಹುದು. ಯಾವುದೇ ಮ್ಯೂಚುವಲ್ ಫಂಡ್ ಕೂಡ ಮಾರುಕಟ್ಟೆ ಅಪಾಯಕ್ಕೆ ಒಳಪಡುತ್ತದೆ. ಅನೇಕ ಮ್ಯೂಚುವಲ್ ಫಂಡ್ಗಳು ನಷ್ಟ ತಂದಿರುವುದುಂಟು. ಹೀಗಾಗಿ, ಹೆಚ್ಚು ಸಾಹಸಿಗಳಾದವರು ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುತ್ತಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ