Post Office Schemes: ಸುರಕ್ಷಿತ ಹೂಡಿಕೆಗಳಿಗೆ ಬೇಕು ಪೋಸ್ಟ್ ಆಫೀಸ್ ಸ್ಕೀಮ್ಗಳು; ಇಲ್ಲಿದೆ ಹಲವು ಆಯ್ಕೆ
Savings and Investments Options: ಸುಕನ್ಯ ಸಮೃದ್ಧಿ ಯೋಜನೆಯಿಂದ ಹಿಡಿದು ಕಿಸಾನ್ ವಿಕಾಸ್ ಪತ್ರದವರೆಗೆ ಪೋಸ್ಟ್ ಆಫೀಸ್ನಲ್ಲಿ ಹಲವು ಹೂಡಿಕೆ ಮತ್ತು ಉಳಿತಾಯ ಸ್ಕೀಮ್ಗಳಿವೆ. ಅವುಗಳಲ್ಲಿ ಆಯ್ದ ಕೆಲ ಯೋಜನೆಗಳ ವಿವರ ಇಲ್ಲಿದೆ...
ಭಾರತದಲ್ಲಿ ಅಂಚೆ ಕಚೇರಿಗಳು (Post Office) ಈಗ ಕೇವಲ ಅಂಚೆಗಳನ್ನು ವಿಲೇವಾರಿ ಮಾಡುವುದಕ್ಕೆ ಸೀಮಿತವಾಗಿ ಉಳಿದಿಲ್ಲ. ಜನಸಾಮಾನ್ಯರಿಗೆ ಬಹಳಷ್ಟು ಉಳಿತಾಯ ಸ್ಕೀಮ್ಗಳ ಆಯ್ಕೆ ಒದಗಿಸುತ್ತದೆ. ಸರ್ಕಾರಿ ಸ್ವಾಮ್ಯದ ಇಂಡಿಯಾ ಪೋಸ್ಟ್ ಸಂಸ್ಥೆ (India Post) ನಿರ್ವಹಿಸುವ ಈ ಸೇವಿಂಗ್ ಮತ್ತು ಹೂಡಿಕೆ ಯೋಜನೆಗಳು ಸುರಕ್ಷಿತ ಆಯ್ಕೆ ಜೊತೆಗೆ ಉತ್ತಮ ರಿಟರ್ನ್ ಕೂಡ ಕೊಡಬಲ್ಲುವು. ಅನೇಕ ನಿಶ್ಚಿತ ಠೇವಣಿಗಳಿಗಿಂತ ಹೆಚ್ಚಿನ ಬಡ್ಡಿ ಕೊಡುತ್ತವೆ ಕೆಲ ಪೋಸ್ಟ್ ಆಫೀಸ್ ಸ್ಕೀಮ್ಗಳು. ಶೇ. 7.5ರಿಂದ ಶೇ. 8ಕ್ಕಿಂತ ಹೆಚ್ಚಿನ ವಾರ್ಷಿಕ ಬಡ್ಡಿ ದರದಲ್ಲಿ ನಿಮ್ಮ ಹಣವನ್ನು ಇವು ಬೆಳೆಸಬಲ್ಲುವು.
ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಯೋಜನೆ
ಅಂಚೆ ಕಚೇರಿಯಲ್ಲಿ ಲಭ್ಯ ಇರುವ ಜನಪ್ರಿಯ ಹೂಡಿಕೆ ಯೋಜನೆಗಳಲ್ಲಿ ಕಿಸಾನ್ ವಿಕಾಸ್ ಪತ್ರ ಒಂದು. ಈ ಸ್ಕೀಮ್ನಲ್ಲಿ ವರ್ಷಕ್ಕೆ 7.50 ರ ದರದಲ್ಲಿ ಹಣ ಬೆಳೆಯುತ್ತದೆ. ಇದು 10 ವರ್ಷ 3 ತಿಂಗಳಿಗೆ ಹೂಡಿಕೆಯ ಮೊತ್ತವನ್ನು ದ್ವಿಗುಣಗೊಳಿಸುಬಲ್ಲುದು. 18 ವರ್ಷಕ್ಕಿಂತ ಹೆಚ್ಚಿನ ಯಾವುದೇ ವಯಸ್ಸಿನವರೂ ಈ ಸ್ಕೀಮ್ ಪಡೆಯಬಹುದು. ಕನಿಷ್ಠ ಹೂಡಿಕೆ 10,000 ರೂ ಆಗಿರುತ್ತದೆ.
ಸುಕನ್ಯ ಸಮೃದ್ಧಿ ಯೋಜನೆ
10 ವರ್ಷದೊಳಗಿನ ಹೆಣ್ಮಗುವಿನ ಹೆಸರಿನಲ್ಲಿ ಪಡೆಯಬಹುದಾದ ಸ್ಕೀಮ್ ಸುಕನ್ಮ ಸಮೃದ್ಧಿ ಯೋಜನೆ. ಇದರಲ್ಲಿ ನಮ್ಮ ಹೂಡಿಕೆಗೆ ವರ್ಷಕ್ಕೆ ಶೇ. 8ರಷ್ಟು ಬಡ್ಡಿ ಕೊಡಲಾಗುತ್ತದೆ.
ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ (ಎಸ್ಸಿಎಸ್ಎಸ್)
ಹಿರಿಯ ನಾಗರಿಕರಿಗೆಂದು ರೂಪಿಸಲಾದ ಈ ಸ್ಕೀಮ್ನಲ್ಲಿ 60 ವರ್ಷ ಮೇಲ್ಪಟ್ಟ ವಯಸ್ಸಿನವರು ಹೂಡಿಕೆ ಮಾಡಬಹುದು. ಶೇ. 8.2ರಷ್ಟು ಬಡ್ಡಿ ಒದಗಿಸುತ್ತದೆ ಈ ಸ್ಕೀಮ್.
ನ್ಯಾಷನಲ್ ಸೇವಿಂಗ್ಸ್ ಸ್ಕೀಮ್
ನ್ಯಾಷನಲ್ ಸೇವಿಂಗ್ಸ್ ಸ್ಕೀಮ್ನಲ್ಲಿ ಹೂಡಿಕೆ 100 ರೂನಿಂದ ಆರಂಭವಾಗಿ 1.5 ಲಕ್ಷ ರೂವರೆಗೂ ಮಾಡಬಹುದು. ಶೇ. 7.7ರಷ್ಟು ಬಡ್ಡಿ ಸಿಗುತ್ತದೆ.
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್
ಅಂಚೆ ಕಚೇರಿಯ ಜನಪ್ರಿಯ ಹೂಡಿಕೆ ಸ್ಕೀಮ್ಗಳಲ್ಲಿ ಅದರ ಟೈಮ್ ಡೆಪಾಸಿಟ್ ಯೋಜನೆ ಒಂದು. ಬ್ಯಾಂಕುಗಳಲ್ಲಿರುವ ಫಿಕ್ಸೆಡ್ ಡೆಪಾಸಿಟ್ನಂತೆ ಅಂಚೆ ಕಚೇರಿಯಲ್ಲಿ ಟೈಮ್ ಡೆಪಾಸಿಟ್ ಇದೆ. ಈ ಅವಧಿ ಠೇವಣಿಯಲ್ಲಿ 1ರಿಂದ 5 ವರ್ಷದವರೆಗೆ ಆಯ್ಕೆಗಳಿವೆ. 5 ವರ್ಷದ ಟೈಮ್ ಡೆಪಾಸಿಟ್ಗೆ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ.
ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ ಅಕೌಂಟ್
ಬ್ಯಾಂಕುಗಳಲ್ಲಿರುವ ಆರ್ಡಿ ಸ್ಕೀಮ್ಗಳಂತೆ ಅಂಚೆ ಕಚೇರಿಯಲ್ಲೂ ರಿಕರಿಂಗ್ ಡೆಪಾಸಿಟ್ ಅವಕಾಶ ಇದೆ. ಐದು ವರ್ಷದ ಆರ್ಡಿಗೆ ವರ್ಷಕ್ಕೆ ಶೇ. 6.20ರಷ್ಟು ಬಡ್ಡಿ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ