EPF Interest Rate: ಇಪಿಎಫ್ ಹಣಕ್ಕೆ ಶೇ. 8.15 ಬಡ್ಡಿ ಜಮೆ ಆಗುವುದು ಯಾವಾಗ? ಬಡ್ಡಿ ಲೆಕ್ಕಾಚಾರ ಹೇಗೆ?

How 8.15pc Interest Rate Applied To EPF: ಸರ್ಕಾರ ಇಪಿಎಫ್ ಹಣಕ್ಕೆ 2022-23ರ ಹಣಕಾಸು ವರ್ಷದ ಸಾಲಿನ ಇಪಿಎಫ್ ಹಣಕ್ಕೆ ಶೇ. 8.15ರಷ್ಟು ಬಡ್ಡಿ ಕೊಡಲಾಗುವುದು ಎಂದು ಇಪಿಎಫ್​ಒ ಹೇಳಿದೆ. ಇಲ್ಲಿ ಬಡ್ಡಿ ಇಡೀ ಮೊತ್ತಕ್ಕೆ ಸಿಂಪಲ್ ಇಂಟರೆಸ್ಟ್ ಅಲ್ಲ, ಕಾಂಪೌಂಡ್ ಇಂಟರೆಸ್ಟ್ ಲೆಕ್ಕದಲ್ಲಿ ಬಡ್ಡಿ ನೀಡಲಾಗುತ್ತದೆ.

EPF Interest Rate: ಇಪಿಎಫ್ ಹಣಕ್ಕೆ ಶೇ. 8.15 ಬಡ್ಡಿ ಜಮೆ ಆಗುವುದು ಯಾವಾಗ? ಬಡ್ಡಿ ಲೆಕ್ಕಾಚಾರ ಹೇಗೆ?
ಇಪಿಎಫ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 26, 2023 | 4:48 PM

ಬೆಂಗಳೂರು, ಜುಲೈ 26: ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ) 2022-23ರ ಹಣಕಾಸು ವರ್ಷಕ್ಕೆ ಇಪಿಎಫ್ ಮೇಲಿನ ಬಡ್ಡಿ ದರವನ್ನು ಶೇ. 8.15 ಎಂದು ನಿಗದಿ ಮಾಡಿದೆ. ಅಂದರೆ, 2022ರ ಏಪ್ರಿಲ್​ನಿಂದ 2023ರ ಮಾರ್ಚ್​ವರೆಗಿನ ಇಪಿಎಫ್ ನಿಧಿಗೆ ಶೇ. 8.15ರಷ್ಟು ಬಡ್ಡಿ ಸೇರ್ಪಡೆಯಾಗುತ್ತದೆ. ಮೊನ್ನೆ (ಜುಲೈ 24) ಇಪಿಎಫ್​ಒ ಈ ಸಂಬಂಧ ಸುತ್ತೋಲೆ ಹೊರಡಿಸಿದೆ. ಇಪಿಎಫ್ ಸದಸ್ಯರ ಖಾತೆಗಳಿಗೆ ಬಡ್ಡಿ ಹಣ ಜಮೆ ಮಾಡುವಂತೆ ಸಂಬಂಧಿತರಿಗೆ ಸೂಚನೆಗಳನ್ನು ಕೊಡಬೇಕೆಂದು ಇಪಿಎಫ್​ಒ ಸರ್ಕುಲಾರ್​ನಲ್ಲಿ ತಿಳಿಸಲಾಗಿದೆ.

ಕೇಂದ್ರ ಹಣಕಾಸು ಸಚಿವಾಲಯದಿಂದ ನೋಟಿಫೈ ಆದ ಬಳಿಕ ಇಪಿಎಫ್ ಠೇವಣಿಗಳಿಗೆ ಬಡ್ಡಿ ಹಣ ಜಮೆ ಆಗುತ್ತದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಗಮನಿಸಬೇಕಾದ ಸಂಗತಿ ಎಂದರೆ ಇಪಿಎಫ್​ನ ಅಕೌಂಟಿಂಗ್ ವರ್ಷ ಮಾರ್ಚ್​ನಿಂದ ಆರಂಭವಾಗಿ ಮರುವರ್ಷದ ಫೆಬ್ರುವರಿಯವರೆಗೂ ಇರುತ್ತದೆ.

ಇದನ್ನೂ ಓದಿ: EPF Claim: ಉದ್ಯೋಗಿ ಸತ್ತಾಗ ಅವರ ಇಪಿಎಫ್ ಹಣಕ್ಕೆ ನಾಮಿನಿ ಕ್ಲೈಮ್ ಮಾಡುವುದು ಹೇಗೆ?

ಇಪಿಎಫ್ ಬಡ್ಡಿ ದರ ಹೇಗೆ ಅನ್ವಯ ಆಗುತ್ತೆ?

ಶೇ. 8.15ರಷ್ಟು ಬಡ್ಡಿ ಎಂದರೆ ಅದು ಒಂದು ವರ್ಷಕ್ಕೆ ಕೊಡುವ ಬಡ್ಡಿ. ವರ್ಷಾಂತ್ಯದಲ್ಲಿ ಬಾಕಿ ಇರುವ ಹಣಕ್ಕೆ ಶೇ. 8.15ರ ದರದಲ್ಲಿ ಬಡ್ಡಿ ಇರುವುದಿಲ್ಲ. ಇಲ್ಲಿ ಇಪಿಎಫ್​ಗೆ ಕಾಂಪೌಂಡಿಂಗ್ ಇಂಟರೆಸ್ಟ್ ಲೆಕ್ಕಾಚಾರದಲ್ಲಿ ಕೊಡಲಾಗುತ್ತದೆ. ಇಪಿಎಫ್ ಖಾತೆಗೆ ಪ್ರತೀ ತಿಂಗಳು ನಿರ್ದಿಷ್ಟ ಹಣ ಜಮೆ ಆಗುತ್ತಿರುತ್ತದೆ. ಹೀಗಾಗಿ, ತಿಂಗಳ ಪ್ರಕಾರ ಬಡ್ಡಿ ದರ ಅನ್ವಯ ಆಗುತ್ತಾ ಹೋಗುತ್ತದೆ.

ಇಪಿಎಫ್ ನಿಯಮದ ಪ್ರಕಾರ ಪ್ರತೀ ತಿಂಗಳ ಅಂತ್ಯದಲ್ಲಿ ಇರುವ ಬಾಕಿ ಮೊತ್ತವನ್ನು ಬಡ್ಡಿದರದಿಂದ ಗುಣಿಸಬೇಕು. ನಂತರ ಆ ಮೊತ್ತವನ್ನು 1,200 ಅಂಕಿಯಿಂದ ಭಾಗಿಸಬೇಕು. ಇದು ಬಡ್ಡಿ ಹಣವಾಗುತ್ತದೆ. ಅದು ತಿಂಗಳ ಬಾಕಿ ಹಣಕ್ಕೆ ಈ ಬಡ್ಡಿಯೂ ಸೇರ್ಪಡೆಯಾಗುತ್ತದೆ.

ಇದನ್ನೂ ಓದಿ: EPF Interest Rate: 2022-23ರ ವರ್ಷಕ್ಕೆ ಇಪಿಎಫ್​ಗೆ ಬಡ್ಡಿ ದರ ಹೆಚ್ಚಿಸಿದ ಸರ್ಕಾರ; ಇಲ್ಲಿದೆ ವಿವರ

ಉದಾಹರಣೆಗೆ, ಆಕಾಶ್ ಎಂಬ ಉದ್ಯೋಗಿ ಮೇ ತಿಂಗಳಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿ ಹೊಸ ಪಿಎಫ್ ಖಾತೆ ಶುರುವಾಗುತ್ತದೆ. ಆತನಿಗೆ ಮೊದಲ ತಿಂಗಳು ಒಟ್ಟು ಪಿಎಫ್ ಹಣ 2000 ರೂ ಜಮೆ ಆಗುತ್ತದೆ ಎಂದಿಟ್ಟುಕೊಳ್ಳಿ. ಅಂದರೆ ಜೂನ್​ನಲ್ಲಿ ಅವರ ಪಿಎಫ್ ಖಾತೆಯಲ್ಲಿ 2,000 ರೂ ಇರುತ್ತದೆ. ಈ ಹಣಕ್ಕೆ ಬಡ್ಡಿ ಅನ್ವಯ ಆಗುವುದಿಲ್ಲ. ಜುಲೈನಲ್ಲಿ ಎರಡು ಸಾವಿರ ಇದ್ದದ್ದು ನಾಲ್ಕು ಸಾವಿರ ಆಗುತ್ತದೆ. ಆಗ ಹಿಂದಿನ ತಿಂಗಳ ಬ್ಯಾಲೆನ್ಸ್ ಆದ 2,000 ರೂ ಅನ್ನು ಪರಿಗಣಿಸಲಾಗುತ್ತದೆ. ಆ ಹಣವನ್ನು 8.15ರಿಂದ ಗುಣಿಸಿ, ನಂತರ 1,200ರಿಂದ ಭಾಗಿಸಬೇಕು. 14 ರೂ ಬಡ್ಡಿ ಆಗುತ್ತದೆ. ಅಲ್ಲಿಗೆ ಪಿಎಫ್ ಬ್ಯಾಲೆನ್ಸ್ ಹಣ 4,014 ರೂ ಆಗುತ್ತದೆ. ಹೀಗೆ ಪ್ರತೀ ತಿಂಗಳಿಗೂ ಬಡ್ಡಿ ಗುಣಿಸುತ್ತಾ ಸೇರಿಸುತ್ತಾ ಹೋಗಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್