ಕೋವಿಡ್-19 ಬಿಕ್ಕಟ್ಟಿನ ಮಧ್ಯೆ ತತ್ತರಿಸಿದ್ದರೂ ಭಾರತೀಯ ಷೇರು ಮಾರುಕಟ್ಟೆಯು 2020 ಮತ್ತು 2021ರಲ್ಲಿ ತನ್ನ ಷೇರುದಾರರಿಗೆ ಅಮೋಘ ಆದಾಯವನ್ನು ನೀಡಿದೆ. ಸೆಕೆಂಡರಿ ಮಾರುಕಟ್ಟೆಯು ತನ್ನ ಕನಿಷ್ಠ ಮಟ್ಟದಿಂದ ಚೇತರಿಸಿಕೊಳ್ಳುತ್ತಿರುವಾಗ ಭಾಗವಹಿಸಿದ ಏರಿಕೆಗೆ ಸಾಕ್ಷಿ ಆಗಿರುವುದರಿಂದ ಇದು ಸಾಧ್ಯ ಆಗಬಹುದು. ಇದರ ಪರಿಣಾಮವಾಗಿ ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್, ಲಾರ್ಜ್ ಕ್ಯಾಪ್ ಮತ್ತು ಪೆನ್ನಿ ಸ್ಟಾಕ್‌ಗಳನ್ನು ಒಳಗೊಂಡಂತೆ ಭಾರತದಲ್ಲಿನ ಮಲ್ಟಿಬ್ಯಾಗರ್ ಸ್ಟಾಕ್‌ಗಳು (Multibagger Stock) ಉತ್ತಮ ಸಂಖ್ಯೆಯಲ್ಲಿ ಹೊರಹೊಮ್ಮಿವೆ. ಅಂಥವುಗಳಲ್ಲಿ ಸಿಂಧು ಟ್ರೇಡ್ ಲಿಂಕ್ಸ್ ಷೇರು ಸಹ ಒಂದು. ಕಳೆದ ಒಂದು ವರ್ಷದಲ್ಲಿ ಈ ಬಿಎಸ್‌ಇ-ಲಿಸ್ಟೆಡ್ ಸ್ಟಾಕ್ ಶೇಕಡಾ 1750ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಆದರೆ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಅದ್ಭುತ ಆದಾಯವನ್ನು ನೀಡಿರುವುದು ಇದು ಒಂದೇ ವರ್ಷವಲ್ಲ. ಇದು ಆಲ್ಫಾ ರಿಟರ್ನ್ ಅನ್ನು ನೀಡಿರುವ ಇತಿಹಾಸವನ್ನು ಹೊಂದಿದೆ. ಕಳೆದ 5 ವರ್ಷಗಳಲ್ಲಿ ಸಿಂಧು ಟ್ರೇಡ್ ಲಿಂಕ್ಸ್ ಷೇರಿನ ಬೆಲೆ ರೂ. 1.69 ರಿಂದ ರೂ. 132.10 ಮಟ್ಟಕ್ಕೆ ಏರಿದ್ದು, ಇದು ಸುಮಾರು ಶೇ 7700ರಷ್ಟು ರಿಟರ್ನ್ ನೀಡಿದೆ.
ಸಿಂಧು ಟ್ರೇಡ್ ಲಿಂಕ್ಸ್ ಷೇರು ಬೆಲೆ ಇತಿಹಾಸ
ಕಳೆದ ಒಂದು ತಿಂಗಳಲ್ಲಿ ಸಿಂಧು ಟ್ರೇಡ್ ಲಿಂಕ್ಸ್ ಷೇರಿನ ಬೆಲೆಯು ರೂ. 121.50ರಿಂದ ರೂ. 132.10ಕ್ಕೆ ಮೇಲೇರಿ, ಈ ಅವಧಿಯಲ್ಲಿ ಶೇ 10ರಷ್ಟು ಏರಿಕೆಯಾಗಿದೆ. ಕಳೆದ 6 ತಿಂಗಳಲ್ಲಿ ಇದು ರೂ. 14.87ರಿಂದ ರೂ. 132.10 ಮಟ್ಟಕ್ಕೆ ಹೆಚ್ಚಳವಾಗಿ, ಈ ಸಮಯದಲ್ಲಿ ಸುಮಾರು ಶೇ 800ರಷ್ಟು ಹೆಚ್ಚಳವಾಗಿದೆ. ಕಳೆದ ಒಂದು ವರ್ಷದಲ್ಲಿ ಈ ಪೆನ್ನಿ ಸ್ಟಾಕ್ ರೂ. 7.11ರಿಂದ ರೂ. 132.10 ಮಟ್ಟಕ್ಕೆ ತಲುಪಿ, ಈ ಅವಧಿಯಲ್ಲಿ ಸುಮಾರು 1750ರಷ್ಟು ಜಾಸ್ತಿ ಆಗಿದೆ. ಇನ್ನು ಈ ಮಲ್ಟಿಬ್ಯಾಗರ್ ಸ್ಟಾಕ್ ರೂ. 1.69 ರಿಂದ (17 ಫೆಬ್ರವರಿ 2017ರಂದು ಬಿಎಸ್ಇನಲ್ಲಿನ ಬೆಲೆ) ರೂ. 132.10ಕ್ಕೆ (4ನೇ ಮಾರ್ಚ್ 2022ರಂದು ಬಿಎಸ್ಇನಲ್ಲಿನ ಬೆಲೆ) ಈ 5 ವರ್ಷಗಳಲ್ಲಿ ಸುಮಾರು 78 ಪಟ್ಟು ಹೆಚ್ಚಳವಾಗಿದೆ.
ಹೂಡಿಕೆ ಮೇಲೆ ಪರಿಣಾಮ
ಸಿಂಧು ಟ್ರೇಡ್ ಲಿಂಕ್ಸ್ ಷೇರಿನ ಬೆಲೆ ಇತಿಹಾಸವನ್ನು ನೋಡುವುದಾದರೆ, ಹೂಡಿಕೆದಾರರು ಒಂದು ತಿಂಗಳ ಹಿಂದೆ ಈ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ಅದರ ರೂ. 1 ಲಕ್ಷ ಇಂದು ರೂ. 1.10 ಲಕ್ಷ ಆಗಿರುತ್ತಿತ್ತು. 6 ತಿಂಗಳ ಹಿಂದಿನ 1 ಲಕ್ಷ ಹೂಡಿಕೆಯು ರೂ. 9 ಲಕ್ಷವಾಗಿ ಬದಲಾಗುತ್ತಿತ್ತು. ಹೂಡಿಕೆದಾರರು ಒಂದು ವರ್ಷದ ಹಿಂದೆ ಈ ಸ್ಟಾಕ್‌ನಲ್ಲಿ 1 ಲಕ್ಷ ಹೂಡಿಕೆ ಮಾಡಿದ್ದರೆ ಅದರ ರೂ. 1 ಲಕ್ಷ ರೂ. 18.50 ಲಕ್ಷಕ್ಕೆ ಬದಲಾಗಿರುತ್ತಿತ್ತು. ಅದೇ ರೀತಿ, ಹೂಡಿಕೆದಾರರು ಸುಮಾರು 5 ವರ್ಷಗಳ ಹಿಂದೆ ಈ ಷೇರಿನಲ್ಲಿ ರೂ. 1 ಲಕ್ಷವನ್ನು ಹೂಡಿ, ಒಂದು ಷೇರನ್ನು ರೂ. 1.69 ರಂತೆ ಖರೀದಿಸಿದ್ದಲ್ಲಿ ಈ ಅವಧಿಯಲ್ಲಿ ರೂ. 1 ಲಕ್ಷ ಇಂದು ರೂ. 78 ಲಕ್ಷಕ್ಕೆ ಬದಲಾಗುತ್ತಿತ್ತು.
ಸಿಂಧು ಟ್ರೇಡ್ ಲಿಂಕ್ಸ್ ಷೇರುಗಳ ಪ್ರಸ್ತುತ ಮಾರುಕಟ್ಟೆ ಬಂಡವಾಳ ರೂ. 6,789 ಕೋಟಿ ಮತ್ತು ಪ್ರತಿ ಷೇರಿನ ಪುಸ್ತಕ ಮೌಲ್ಯ ರೂ. 13.23 ಆಗಿದೆ. ಮಲ್ಟಿಬ್ಯಾಗರ್ ಸ್ಟಾಕ್‌ನ ಪ್ರಸ್ತುತ ಪರಿಮಾಣವು 4,04,464 ಆಗಿದ್ದು, ಇದು ಅದರ 20 ದಿನಗಳ ವ್ಯಾಪಾರದ ಪ್ರಮಾಣ 1,85,007ಕ್ಕಿಂತ ಹೆಚ್ಚಾಗಿದೆ.
ಇದನ್ನೂ ಓದಿ: Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ