ಬೆಂಗಳೂರು, ನವೆಂಬರ್ 27: ಭಾರತವನ್ನು ಇತ್ತೀಚಿನವರೆಗೂ ಈ ವಿಶ್ವದ ಸ್ಲೀಪಿಂಗ್ ಜೈಂಟ್ ಎಂದು ಕರೆಯಬಹುದಾಗಿತ್ತು. ಕಳೆದ ಕೆಲ ದಶಕಗಳಿಂದ ಝಾಡಿಸಿ (India economic revival) ಮೇಲೇಳುತ್ತಿದೆ. ಅದರ ವೇಗ ಕಳೆದ ಒಂದು ದಶಕದಲ್ಲಿ ಇನ್ನೂ ಹೆಚ್ಚಿದೆ. ಇವತ್ತು ಭಾರತಕ್ಕೆ ಹೂಡಿಕೆಗಳ (investments) ಮಹಾಪೂರವೇ ಹರಿದುಬರುತ್ತಿದೆ. ವಿಶ್ವದ ಕಾರ್ಖಾನೆಯಾಗುವತ್ತ ಒಂದೊಂದೇ ಹಂತ ಭಾರತ ಮೇಲೇರುತ್ತಿದೆ. ಒಂದು ಕಾಲದಲ್ಲಿ ವಿಶ್ವದ ಅತಿ ಸಿರಿತನದ ನಾಗರಿಕತೆ (Indian civilisation) ಹೊಂದಿದ್ದ ಭಾರತೀಯರು ಇದೀಗ ಆ ನಿಟ್ಟಿನಲ್ಲಿ ಹಾದಿ ಸವೆಸುತ್ತಿದ್ದಾರೆ. ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಗಳ ಆಡಳಿತ ಚುಕ್ಕಾಣಿಯನ್ನು ಭಾರತೀಯರೇ ಹಿಡಿದಿದ್ದಾರೆ. ಇಂತಿಪ್ಪ ಭಾರತದ ವೇಗದ ಓಟದ ಬಗ್ಗೆ ಬಾಲಾಜಿ ಶ್ರೀನಿವಾಸನ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ವಿಶದಪಡಿಸಿದ್ದಾರೆ.
ಬಾಲಾಜಿ ಶ್ರೀನಿವಾಸನ್ ಅವರು ಅಮೆರಿಕದಲ್ಲಿರುವ ಭಾರತ ಮೂಲದ ಹೂಡಿಕೆದಾರ ಮತ್ತು ಉದ್ಯಮಿ. ಕಾಯಿನ್ಬೇಸ್ ಸಂಸ್ಥೆಯ ಮಾಜಿ ಸಿಟಿಒ ಕೂಡ ಹೌದು. ಸ್ಟಾರ್ಟಪ್ಗಳನ್ನು ಉತ್ತೇಜಿಸುವ ಏಂಜೆಲ್ ಇನ್ವೆಸ್ಟರ್ ಕೂಡ ಹೌದು. ಬಾಲಾಜಿ ಅವರು ಭಾರತದಲ್ಲಿ ಸಾಕಷ್ಟು ಹೂಡಿಕೆಗಳನ್ನು ಮಾಡುತ್ತಿದ್ದಾರೆ. ತಮ್ಮ ನೆಟ್ವರ್ಕ್ ಸ್ಟೇಟ್ ಸಂಸ್ಥೆ ಮೂಲಕ ಬಹಳಷ್ಟು ಸ್ಟಾರ್ಟಪ್ಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಭಾರತದಲ್ಲಿ ಯಾಕೆ ಎಲ್ಲರೂ ಹೂಡಿಕೆ ಮಾಡಲು ಮುಂದಾಗುತ್ತಿದ್ದಾರೆ ಎಂದು ಅವರು ಎಕ್ಸ್ ಪೋಸ್ಟ್ನಲ್ಲಿ ಕೆಲ ಮಹತ್ವದ ಕಾರಣಗಳನ್ನು ನೀಡಿದ್ದಾರೆ. ಅವರ ಮಾಹಿತಿಯ ಒಂದಷ್ಟು ಸಂಕ್ಷಿಪ್ತ ರೂಪ ಮತ್ತು ಭಾವಾರ್ಥ ವಿವರಣೆ ಇಲ್ಲಿದೆ:
ಭಾರತ ಜಗತ್ತಿನ ಪುರಾತನ ನಾಗಕರಿತೆಗಳಲ್ಲಿ ಒಂದು ಎಂಬುದು ಹೌದಾದರೂ ಭಾರತವನ್ನು ಒಂದು ಟೆಕ್ ಸ್ಟಾರ್ಟಪ್ಗೆ ಹೋಲಿಕೆ ಮಾಡಬಹುದು. 1978ರಲ್ಲಿ ಚೀನಾದಲ್ಲಾದಂತೆ 1991ರಲ್ಲಿ ಉದಾರೀಕರಣದ ಬಳಿಕ ಭಾರತ ನಾಗರೀಕತೆಯ ಮರುಜನ್ಮ ಪಡೆಯಿತು. ಸಾಕಷ್ಟು ಸೀಮೋಲಂಘನೆ ಮಾಡಿದೆ. ಲ್ಯಾಂಡ್ಲೈನ್ನಿಂದ ಮೊಬೈಲ್ಗೆ ಮತ್ತು ಕ್ಯಾಷ್ನಿಂದ ಯುಪಿಐಗೆ ಹಾರಲು ಯಾಕೆ ಸಾಧ್ಯವಾಯಿತು? ಯಾಕೆಂದರೆ, ಶತಮಾನಗಳ ವಸಾಹತುಶಾಹಿ ಮತ್ತು ಆಕ್ರಮಣಗಳ ಬಳಿಕ ಭಾರತ ಪುನರ್ಜನ್ಮ ಪಡೆದಿದೆ.
ಇದನ್ನೂ ಓದಿ: ಇಸ್ರೋ ಬಿಟ್ಟು ಹೊಸ ಕಂಪನಿ ಕಟ್ಟಿದ ಐಐಟಿ ಪದವೀಧರರು; ಇಲಾನ್ ಮಸ್ಕ್ ಹಾದಿಯಲ್ಲಿ ಇಬ್ಬರು ಭಾರತೀಯರು
ಭಾರತ ತನ್ನನ್ನು ತಾನು ವಿಶ್ವದ ಅಗ್ರಗಣ್ಯ ದೇಶ ಎಂದುಕೊಂಡಿರುವ ಭ್ರಮೆಯಲ್ಲಿಲ್ಲ. ಆದರೆ, ಹೊರದೇಶಗಳಿಗೆ ವಲಸೆ ಹೋದ ಭಾರತೀಯ ಸಮುದಾಯದವರು ತಮ್ಮ ತಾಕತ್ತು ತೋರಿಸಿದ್ದಾರೆ. ಭಾರತೀಯರು ವಿಶ್ವ ಶ್ರೇಷ್ಠರಾಗಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅಂತೆಯೇ, ಭಾರತ ದೇಶ ಕೂಡ ವರ್ಲ್ಡ್ ಕ್ಲಾಸ್ ಆಗಬಹುದು ಎಂಬುದರ ಸುಳಿವು ಸಿಕ್ಕಿದೆ.
ಭಾರತಕ್ಕಿರುವ ಒಂದು ದೊಡ್ಡ ಬಲ ಎಂದರೆ ಅದರ ಅನಿವಾಸಿ ಸಮುದಾಯ. ಭಾರತೀಯರು ಈಗ ಜಗತ್ತಿನ ಯಾವ ಕಡೆ ಬೇಕಾದರೂ ಹೋಗಲು ಸಿದ್ಧರಿದ್ದಾರೆ. ಪಾಶ್ಚಿಮಾತ್ಯರು ತಮ್ಮ ಸಮಾಜವನ್ನೇ ಶ್ರೇಷ್ಠವೆಂದು ಈಗಲೂ ಭಾವಿಸಿರುವುದರಿಂದ ಬೇರೆ ಕಡೆ ವಲಸೆ ಹೋಗುತ್ತಿಲ್ಲ. ಚೀನೀಯರಿಗೆ ಎಲ್ಲೆಡೆ ವಲಸೆ ಅವಕಾಶ ಇಲ್ಲ. ಹೀಗಾಗಿ, ಭಾರತೀಯರಿಗೆ ವಲಸೆಗೆ ಉತ್ತಮ ಅವಕಾಶ ಇದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿಭಾ ಕೊರತೆಯನ್ನು ಭಾರತೀಯರು ತುಂಬಬಲ್ಲುರು. ಭಾರತೀಯರು ಆರ್ಥಿಕವಾಗಿ ಬಲಗೊಂಡಂತೆ ಅವರ ವಲಸೆ ಶಕ್ತಿ ಹೆಚ್ಚುತ್ತದೆ. ಭಾರತೀಯ ವಲಸೆ ಈಗ ಆರಂಭವಾಗಿದೆ ಎಂದು ಬಾಲಾಜಿ ಶ್ರೀನಿವಾಸನ್ ಬರೆದಿದ್ದಾರೆ.
ಇದನ್ನೂ ಓದಿ: Health Infrastructure: ಭಾರತದಲ್ಲಿ ವೈದ್ಯರ ಸಂಖ್ಯೆ ಓಕೆ, ಆದ್ರೆ ಆಸ್ಪತ್ರೆ ಬೆಡ್ಗಳದ್ದೇ ಕೊರತೆ; ಇನ್ನೂ ಎಷ್ಟು ಬೆಡ್ ಬೇಕು?
ಭಾರತೀಯರು ಹೊಸ ಆರ್ಥಿಕ ವಲಯಕ್ಕೆ ಹೋದಲ್ಲೆಲ್ಲಾ ಹುಲುಸಾಗಿ ಬೆಳೆದಿದ್ದಾರೆ. ಅಂತೆಯೇ, ದುಬೈ, ಡೆಲಾವೇರ್, ಸಿಂಗಾಪುರ ಮುಂತಾದೆಡೆ ಭಾರತೀಯರು ಯಶಸ್ವಿಯಾಗಿದ್ದಾರೆ. 1991ರಲ್ಲಿ ಭಾರತಕ್ಕೆ ಹೊಸ ಆರ್ಥಿಕ ಪರಿಸರ ಬಂದ ಬಳಿಕ ಇಲ್ಲಿಯೂ ಭಾರತೀಯರು ಮಿಂಚತೊಡಗಿದ್ದಾರೆ. ಭಾರತದ ಇಂಟರ್ನೆಟ್ ಕನೆಕ್ಟಿವಿಟಿ, ಡಿಜಿಟಲ್ ಪೇಮೆಂಟ್ಸ್, ಮೂಲಭೂತ ಸೌಕರ್ಯ ಕಳೆದ 10 ವರ್ಷದಲ್ಲಿ ಗಮನಾರ್ಹವಾಗಿ ಬದಲಾಗಿದೆ ಎಂದು ಅವರು ತಮ್ಮ ಸುದೀರ್ಘ ಎಕ್ಸ್ ಪೋಸ್ಟ್ನಲ್ಲಿ ಬರೆದಿದ್ದಾರೆ.
INVESTING IN INDIA IS IMPROVING INDIA
If you see a startup growing, does that mean it doesn’t have any flaws? That it’s the best in the world? That you’re going to use it for everything right away?
No, of course not. But you might start using it, and putting money into it, and… https://t.co/ht7dzMNL5K pic.twitter.com/2ySxmTK22E
— Balaji (@balajis) November 26, 2023
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:58 am, Mon, 27 November 23