ನವದೆಹಲಿ: ನವೆಂಬರ್ನಲ್ಲಿರುವ ದೀಪಾವಳಿ ಹಬ್ಬದ ಪ್ರಯುಕ್ತ ಐಆರ್ಸಿಟಿಸಿ (IRCTC) ಈಗಿನಿಂದಲೆ ರೈಲು ಟಿಕೆಟ್ ಬುಕಿಂಗ್ (Train Ticket Booking) ಸ್ವೀಕರಿಸಲು ಅರಂಭಿಸಿದೆ. ಜುಲೈ 12, ಬುಧವಾರದಿಂದಲೇ ಟ್ರೈನ್ ಟಿಕೆಟ್ ಬುಕಿಂಗ್ ಕಾರ್ಯ ನಡೆಯುತ್ತಿದೆ. ಐಆರ್ಸಿಟಿಸಿ ಪೋರ್ಟಲ್ನಲ್ಲಿ ಟಿಕೆಟ್ ಬುಕ್ ಮಾಡಬಹುದು. ರೈಲ್ವೆ ಕೌಂಟರ್ಗಳಲ್ಲೂ ಮಾಮೂಲಿಯಂತೆ ಟಿಕೆಟ್ ಬುಕಿಂಗ್ ನಡೆಯುತ್ತದೆ.
ಪ್ರತೀ ವರ್ಷವೂ ದೀಪಾವಳಿ ಹಬ್ಬಕ್ಕೆ 4 ತಿಂಗಳು ಮುಂಚೆಯೇ ಟಿಕೆಟ್ ಬುಕಿಂಗ್ ನಡೆಯುತ್ತದೆ. ಈ ಬಾರಿ ದೀಪಾವಳಿ ಹಬ್ಬ ನವೆಂಬರ್ 10ರಿಂದ 14ರವರೆಗೂ ಇದೆ. ಯಾವುದೇ ದಿನಕ್ಕೆ ಟಿಕೆಟ್ ಬುಕ್ ಮಾಡಲು 120 ದಿನ ಮುಂಚಿನಿಂದ ಬುಕಿಂಗ್ ಅವಕಾಶ ಇರುತ್ತದೆ. ನವೆಂಬರ್ 12ಕ್ಕೆ ನೀವು ಪ್ರಯಾಣಿಸಬೇಕಾದರೆ ಜುಲೈ 14ರಿಂದ ಟಿಕೆಟ್ ಬುಕಿಂಗ್ ಅವಕಾಶ ಇರುತ್ತದೆ.
ಇದನ್ನೂ ಓದಿ: Online Gaming: ಆನ್ಲೈನ್ ಗೇಮಿಂಗ್ಗೆ ಶೇ. 28ಜಿಎಸ್ಟಿ; 2023-24ರಲ್ಲಿ 20,000 ಕೋಟಿ ರೂ ತೆರಿಗೆ ಸಂಗ್ರಹ ನಿರೀಕ್ಷೆ
ನವೆಂಬರ್ ಎರಡನೇ ಮತ್ತು ಮೂರನೇ ವಾರ ಎಲ್ಲಾ ರೈಲುಗಳು ಭರ್ತಿಯಾಗಿ ಹೋಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಹಬ್ಬಕ್ಕೆ ಊರಿಗೆ ಹೋಗಬೇಕೆನ್ನುವವರು ಈಗಲೇ ತ್ವರಿತವಾಗಿ ಟಿಕೆಟ್ ಬುಕಿಂಗ್ ಮಾಡುವುದು ಉತ್ತಮ. ಭಾರತೀಯ ರೈಲ್ವೆಸ್ ಎಲ್ಲಾ ಹಬ್ಬಗಳಲ್ಲಿಯಂತೆ ದೀಪಾವಳಿಯಲ್ಲೂ ವಿಶೇಷ ರೈಲುಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಪ್ರಯಾಣಿಕರ ಸಂಖ್ಯೆ ಹೆಚ್ಚು ಇರುವ ಮಾರ್ಗಗಳಲ್ಲಿ ಸಹಜವಾಗಿ ಹೆಚ್ಚು ಟ್ರೈನುಗಳನ್ನು ಬಿಡಲಾಗುತ್ತದೆ. ಆದರೆ, ಈ ಬಾರಿ ಹೆಚ್ಚುವರಿ ವಿಶೇಷ ರೈಲುಗಳನ್ನು ಎಷ್ಟು ಸಂಖ್ಯೆಯಲ್ಲಿ ಓಡಿಸಲಾಗುವುದು ಎಂಬ ಮಾಹಿತಿಯನ್ನು ರೈಲ್ವೆ ಇಲಾಖೆ ಇನ್ನೂ ಬಹಿರಂಗಪಡಿಸಿಲ್ಲ.
ಪೇಟಿಎಂ ಸೇರಿದಂತೆ ಬೇರೆ ಬೇರೆ ಪ್ಲಾಟ್ಫಾರ್ಮ್ಗಳಲ್ಲಿ ರೈಲು ಟಿಕೆಟ್ ಬುಕ್ ಮಾಡಬಹುದು. ಆದರೆ ಎಲ್ಲವೂ ಐಅರ್ಸಿಟಿಸಿ ಪ್ಲಾಟ್ಫಾರ್ಮ್ಗೆ ಜೋಡಿತವಾಗಿರುತ್ತವೆ. ಐಆರ್ಸಿಟಿಸಿ ವೆಬ್ಸೈಟ್ನಿಂದಲೇ ನೇರವಾಗಿ ನೀವು ಟ್ರೈನ್ ಟಿಕೆಟ್ ಬುಕ್ ಮಾಡಬಹುದು.
ಇದನ್ನೂ ಓದಿ: Cheap Gold: ಯಾವ್ಯಾವ ದೇಶಗಳಲ್ಲಿ ಚಿನ್ನ ಕಡಿಮೆ ಬೆಲೆಗೆ ಸಿಗುತ್ತದೆ? ಭಾರತಕ್ಕಿಂತ ಬಹಳ ಅಗ್ಗ ಇಲ್ಲಿನ ಚಿನ್ನ
ಐಆರ್ಸಿಟಿಸಿ ವೆಬ್ಸೈಟ್ನ ಲಿಂಕ್ ಇಲ್ಲಿದೆ: www.irctc.co.in
ಇಲ್ಲಿ ಲಾಗಿನ್ ಆದ ಬಳಿಕ ಟಿಕೆಟ್ ಬುಕ್ ಮಾಡಬಹುದು. ಪ್ರಯಾಣಿಕರ ಹೆಸರು ಇತ್ಯಾದಿ ವಿವರ ತುಂಬಿಸಬೇಕು. ಹಣ ಪಾವತಿಸಿದ ಬಳಿಕ ಟಿಕೆಟ್ ಬುಕಿಂಗ್ ಸ್ವೀಕೃತಿ ಸಿಗುತ್ತದೆ.
ನೀವು ರೈಲು ಪ್ರಯಾಣ ಮಾಡುವಾಗ ಇಟಿಕೆಟ್ ಇಟ್ಟುಕೊಂಡಿರಬೇಕು. ಹಾಗೆಯೇ, ಆಧಾರ್ ಕಾರ್ಡ್ನ ಗುರುತಿನ ಚೀಟಿಯ ಪ್ರತಿ ನಿಮ್ಮ ಬಳಿ ಇರಲಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ