ITR Filing: ಶೀಘ್ರ ರೀಫಂಡ್​ನಿಂದ ಸಲೀಸು ಪಾವತಿ ತನಕ ಆದಾಯ ತೆರಿಗೆ ಇ ಪೋರ್ಟಲ್​ನಲ್ಲಿ ಏನೆಲ್ಲ ಅನುಕೂಲ?

| Updated By: Srinivas Mata

Updated on: Jun 04, 2021 | 5:02 PM

ಆದಾಯ ತೆರಿಗೆ ಇಲಾಖೆಯಿಂದ ಹೊಸ ಇ- ಪೋರ್ಟಲ್ ಆರಂಭವಾಗಲಿದೆ. ಇದರಿಂದ ಏನೆಲ್ಲ ಅನುಕೂಲಗಳಿವೆ ಎಂಬ ಮಾಹಿತಿ ಇಲ್ಲಿದೆ.

ITR Filing:  ಶೀಘ್ರ ರೀಫಂಡ್​ನಿಂದ ಸಲೀಸು ಪಾವತಿ ತನಕ ಆದಾಯ ತೆರಿಗೆ ಇ ಪೋರ್ಟಲ್​ನಲ್ಲಿ ಏನೆಲ್ಲ ಅನುಕೂಲ?
ಸಾಂದರ್ಭಿಕ ಚಿತ್ರ
Follow us on

ಮೇ 31, 2021ರ ಮಧ್ಯರಾತ್ರಿಯಿಂದ ಆದಾಯ ತೆರಿಗೆ ಇಲಾಖೆಯ ಇ- ಫೈಲಿಂಗ್​ ವೆಬ್​ಸೈಟ್​ ಆದ incometaxindiaefiling.gov.in ಕಾರ್ಯ ನಿರ್ವಹಣೆಯನ್ನು ನಿಲ್ಲಿಸಿದೆ. ಇನ್ನು ಹೊಸ ಇ- ಫೈಲಿಂಗ್ ವೆಬ್​ಸೈಟ್ incometax.gov.in – ಇದು ಜೂನ್ 6, 2021ರಂದು ಆರಂಭವಾಗಲಿದೆ. ಈ ಮಧ್ಯದ ಅವಧಿಯಲ್ಲಿ ಹಳೆ ವೆಬ್​ಸೈಟ್​ ಹೊಸದಕ್ಕೆ ಬದಲಾವಣೆ ಆಗಲಿದೆ. ಈ ಸಮಯದಲ್ಲಿ ತೆರಿಗೆ ಪಾವತಿದಾರರಿಗೆ ಯಾವುದೇ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಕಂದಾಯ ಇಲಾಖೆಯಿಂದ ಸೂಚನೆ ನೀಡಲಾಗಿದ್ದು, ತೆರಿಗೆ ನಿಯಮಾವಳಿಗಳು ಹಾಗೂ ತೆರಿಗೆಗೆ ಸಂಬಂಧಿಸಿದ ಅಹವಾಲು ಆಲಿಕೆ ಇದ್ದಲ್ಲಿ ಜೂನ್ 10, 2021ರ ನಂತರ ನಡೆಸಲು ಕೇಳಲಾಗಿದೆ. ಹೊಸ ಇ-ಫೈಲಿಂಗ್ ಸೈಟ್ ತೆರಿಗೆ ಪಾವತಿದಾರರಿಗೆ ಆಧುನಿಕವಾದ, ಅಡೆತಡೆ ಇಲ್ಲದಂಥ ಅನುಭವವನ್ನು ದೊರಕಿಸುತ್ತದೆ. ಹಲವು ಬಗೆಯಲ್ಲಿ ತಾಂತ್ರಿಕ ವೈಶಿಷ್ಟ್ಯಗಳನ್ನು ಸಹ ಈ ಪೋರ್ಟಲ್ ಹೊಂದಿದೆ.

ಪರಿಣತರ ಪ್ರಕಾರ, ಆದಾಯ ತೆರಿಗೆ ಇಲಾಖೆಯು ಈ ವೆಬ್​ಸೈಟ್​ ಅನ್ನು ಐಟಿಆರ್​ ಫೈಲಿಂಗ್ ಮತ್ತು ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ, ಅಸೆಸ್​ಮೆಂಟ್​ಗಳಿವೆ, ಮನವಿಗೆ, ದಂಡದಿಂದ ವಿನಾಯಿತಿಗೆ ಬಳಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ, ಹೊಸ ಇ- ಫೈಲಿಂಗ್ ಪೋರ್ಟಲ್​ನಿಂದ ಈ ಕೆಳಕಂಡ ಅನುಕೂಲಗಳಿವೆ.

ಶೀಘ್ರ ರೀಫಂಡ್
ತಕ್ಷಣ ಪ್ರೊಸೆಸ್ ಆಗುವಂತೆ ಇನ್​ಕಮ್ ಟ್ಯಾಕ್ಸ್ ರಿಟರ್ನ್ಸ್ (ಐಟಿಆರ್) ಜತೆಗೆ ಹೊಸ ಇ- ಫೈಲಿಂಗ್ ಪೋರ್ಟಲ್ ಅನ್ನು ಇಂಟಿಗ್ರೇಟ್ ಮಾಡಲಾಗಿದೆ. ಇದರಿಂದಾಗಿ ತೆರಿಗೆಪಾವತಿದಾರರಿಗೆ ಶೀಘ್ರವಾಗಿ ರೀಫಂಡ್ ದೊರೆಯುತ್ತದೆ.

ಮೊಬೈಲ್ ಅಪ್ಲಿಕೇಷನ್
ಇ- ಪೋರ್ಟಲ್ ಆರಂಭವಾದ ಮೇಲೆ ಮೊಬೈಲ್ ಅಪ್ಲಿಕೇಷನ್ ಶುರುವಾಗಲಿದೆ. ಈ ಮೂಲಕ ಪೋರ್ಟಲ್​ನಲ್ಲಿ ಸಿಗುವಂಥ ಎಲ್ಲ ಕಾರ್ಯ ನಿರ್ವಹಣೆಯು ಮೊಬೈಲ್ ಆ್ಯಪ್​ನಲ್ಲೂ ದೊರೆಯುತ್ತದೆ. ಸದ್ಯಕ್ಕೆ ಯಾವುದೇ ಮೊಬೈಲ್ ಆ್ಯಪ್ ಇಲ್ಲ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಹೊಸ ಡ್ಯಾಶ್ ಬೋರ್ಡ್
ಹೊಸ ಇ- ಪೋರ್ಟಲ್ ಒಂದು ಹೊಸ ಸಿಂಗಲ್ ಡ್ಯಾಶ್​ ಬೋರ್ಡ್ ಒದಗಿಸುತ್ತದೆ. ಎಲ್ಲ ಇಂಟರಾಕ್ಷನ್, ಅಪ್​ಲೋಡ್​ಗಳು ಅಥವಾ ಬಾಕಿ ಕಾರ್ಯಗಳನ್ನು ತೆರಿಗೆ ಪಾವತಿದಾರರಿಗೆ ಅದು ತೋರಿಸುತ್ತದೆ.

ಇಂಟರಾಕ್ಟಿವ್ ಐಟಿಆರ್ ಸಿದ್ಧತೆ ಸಾಫ್ಟ್​ವೇರ್
ಐಟಿಆರ್ ಸಿದ್ಧತೆ ಸಾಫ್ಟ್​ವೇರ್ ಅನ್ನು ಆಫ್​ಲೈನ್ ಹಾಗೂ ಆನ್​ಲೈನ್ ಎರಡಕ್ಕೂ ಉಚಿತವಾಗಿ ತೆರಿಗೆದಾರರಿಗೆ ಒದಗಿಸಲಾಗುತ್ತದೆ. ತೆರಿಗೆದಾರ ಸ್ನೇಹಿ ಸಾಫ್ಟ್​ವೇರ್ ಆದ ಇದರಲ್ಲಿ ಇಂಟರ್​ ಆಕ್ಟಿವ್ ಪ್ರಶ್ನೆಗಳಿದ್ದು, ಇದರಿಂದ ಅನುಕೂಲ ಆಗಲಿದೆ. ತೆರಿಗೆ ಬಗ್ಗೆ ಯಾವುದೇ ಜ್ಞಾನ ಇಲ್ಲದಿದ್ದರೂ ಈ ಪೋರ್ಟಲ್ ಅನ್ನು ರಿಟರ್ನ್ಸ್ ಪ್ರೀ- ಫಿಲ್ಲಿಂಗ್​ಗೆ ಬಳಸಬಹುದು. ಆ ಮೂಲಕ ಐಟಿಆರ್​ನಲ್ಲಿ ಹೆಚ್ಚು ಭರ್ತಿ ಮಾಡಬೇಕು ಅಂತೇನೂ ಇರಲ್ಲ.

ತೆರಿಗೆದಾರರ ಪ್ರಶ್ನೆಗಳಿಗೆ ಉತ್ತರಿಸುವುದು ಸಲೀಸು
ಟ್ಯುಟೋರಿಯರಲ್​ಗಳು, ವಿಡಿಯೋಗಳು, ಕಾಲ್​ಸೆಂಟರ್, ಚಾಟ್​ಬಾಟ್ ಅಥವಾ ಲೈವ್ ಏಜೆಂಟ್​ಗಳು ಈ ಸೈಟ್​ನಲ್ಲಿ ಇದ್ದು, ತೆರಿಗೆ ಪಾವತಿದಾರರ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಯುತ್ತದೆ. ಹೊಸ ಕಾಲ್​ಸೆಂಟರ್ ಫ್ರೀಕ್ವೆಂಟ್ಲಿ ಆಸ್ಕಡ್ ಕ್ವೆಶ್ಚನ್ಸ್ (FAQs) ಮೂಲಕ ತೆರಿಗೆದಾರರಿಗೆ ನೆರವಾಗುತ್ತದೆ.

ಹೊಸ ಆನ್​ಲೈನ್ ತೆರಿಗೆ ಪಾವತಿ ಪದ್ಧತಿ
ಬಹಳ ಸುಲಭವಾಗಿ ಪಾವತಿಯನ್ನು ಖಾತರಿ ಮಾಡಬೇಕು ಅನ್ನೋ ಕಾರಣಕ್ಕೆ ಹೊಸ ಐಟಿಆರ್ ವೆಬ್​ಸೈಟ್ ತೆರಿಗೆ ಸಂದಾಯ ಮಾಡಲು ಆನ್​ಲೈನ್ ಪಾವತಿ ವ್ಯವಸ್ಥೆಯನ್ನು ಸಹ ಹೊಂದಿದೆ. ನೆಟ್​ ಬ್ಯಾಂಕಿಂಗ್, ಯುಪಿಐ, ಕ್ರೆಡಿಟ್ ಕಾರ್ಡ್, ಆರ್​ಟಿಜಿಎಸ್​ ಅಥವಾ ಎನ್​ಇಎಫ್​ಟಿ ಹೀಗೆ ತೆರಿಗೆದಾರರ ಯಾವುದೇ ಖಾತೆಯಿಂದ ಮತ್ತು ಯಾವುದೇ ಬ್ಯಾಂಕ್​ನಿಂದ ತೆರಿಗೆ ಪಾವತಿಸಬಹುದು. ಈಗಿನ ವ್ಯವಸ್ಥೆಯಲ್ಲಿ ಯುಪಿಐ, ಕ್ರೆಡಿಟ್ ಕಾರ್ಡ್ ಮಾತ್ರ ಇತ್ತು.

ಇದನ್ನೂ ಓದಿ: ಜೂನ್ 7ಕ್ಕೆ ಆದಾಯ ತೆರಿಗೆ ಇಲಾಖೆ ಇ- ಪೋರ್ಟಲ್ ಶುರು; ಜೂನ್ 1ರಿಂದ 6ರ ತನಕ ಈಗಿನ ಪೋರ್ಟಲ್ ಮಾಡಲ್ಲ ಕೆಲಸ

(ITR filing new e portal will be launched by Income Tax department. Here is the features of portal)

Published On - 2:59 pm, Fri, 4 June 21