AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price Today: ಇಂದು ಸಹ ಏರಿಕೆ ಕಂಡು ಗರಿಷ್ಠ ಮಟ್ಟದಲ್ಲಿರುವ ಪೆಟ್ರೋಲ್​, ಡೀಸೆಲ್​ ದರ! ಯಾವ ಯಾವ ನಗರಗಳಲ್ಲಿ ಎಷ್ಟೆಷ್ಟು?

Petrol Diesel Rate Today: ಕಳೆದ ಮೇ ತಿಂಗಳಿನಲ್ಲಿ ಒಟ್ಟು 16 ಬಾರಿ ಇಂಧನ ದರವನ್ನು ಏರಿಕೆ ಮಾಡಲಾಗಿತ್ತು. ಹೊಸ ತಿಂಗಳು ಜೂನ್​ನಲ್ಲಿ ಇಲ್ಲಿಯವರೆಗೆ ಒಟ್ಟು ಎರಡು ಬಾರಿ ಏರಿಕೆಯಾಗಿದೆ. ಒಟ್ಟಾರೆಯಾಗೆ ಮೇ ತಿಂಗಳ ಪ್ರಾರಂಭದಿಂದ ಇಲ್ಲಿಯವರೆಗೆ ಪೆಟ್ರೋಲ್​ ಮತ್ತು ಡೀಸೆಲ್​ ದರ 18 ಬಾರಿ ಏರಿಕೆ ಕಂಡಿದೆ.

Petrol Price Today: ಇಂದು ಸಹ ಏರಿಕೆ ಕಂಡು ಗರಿಷ್ಠ ಮಟ್ಟದಲ್ಲಿರುವ ಪೆಟ್ರೋಲ್​, ಡೀಸೆಲ್​ ದರ! ಯಾವ ಯಾವ ನಗರಗಳಲ್ಲಿ ಎಷ್ಟೆಷ್ಟು?
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 04, 2021 | 9:13 AM

Share

ದೆಹಲಿ: ಇಂದೂ ಸಹ (ಜೂನ್ 4) ಪೆಟ್ರೋಲ್ ​ಮತ್ತು ಡೀಸೆಲ್ ಬೆಲೆ​ ಏರಿಕೆ ಕಂಡಿದೆ. ಜೂನ್​ ತಿಂಗಳ ಪ್ರಾರಂಭದಿಂದ ಇಲ್ಲಿಯವರೆಗೆ 2ನೇ ಬಾರಿ ತೈಲ ದರ ಹೆಚ್ಚಳವಾಗಿದ್ದು, ಇಂದು ಲೀಟರ್​ ಪೆಟ್ರೋಲ್​ ದರದಲ್ಲಿ 27 ಪೈಸೆ ಹಾಗೂ ಲೀಟರ್​ ಡೀಸೆಲ್​ ದರದಲ್ಲಿ 28 ಪೈಸೆ ಹೆಚ್ಚಳ ಮಾಡಲಾಗಿದೆ. ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ ದರ 94.49 ರೂಪಾಯಿಂದ 94.76 ರೂಪಾಯಿಗೆ ಏರಿಕೆ ಆಗಿದೆ. ಹಾಗೆಯೇ ಒಂದು ಲೀಟರ್​ ಡೀಸೆಲ್​ ದರವೂ ಕೂಡಾ 85.38 ರೂಪಾಯಿಯಿಂದ 85.66 ರೂಪಾಯಿಗೆ ಏರಿಕೆಯಾಗಿದೆ.

ಕಳೆದ ಮೇ ತಿಂಗಳಿನಲ್ಲಿ ಒಟ್ಟು 16 ಬಾರಿ ಇಂಧನ ದರವನ್ನು ಏರಿಕೆ ಮಾಡಲಾಗಿತ್ತು. ಜೂನ್​  ತಿಂಗಳ ಆರಂಭದಿಂದ ಇಲ್ಲಿಯವರೆಗೆ ಒಟ್ಟು ಎರಡು ಬಾರಿ ಏರಿಕೆಯಾಗಿದೆ. ಒಟ್ಟಾರೆಯಾಗೆ ಮೇ ತಿಂಗಳ ಪ್ರಾರಂಭದಿಂದ ಇಲ್ಲಿಯವರೆಗೆ ಪೆಟ್ರೋಲ್​ ಮತ್ತು ಡೀಸೆಲ್​ ದರ 18 ಬಾರಿ ಏರಿಕೆ ಕಂಡಿದೆ.ಈ ಮೂಲಕ ಲೀಟರ್​ ಪೆಟ್ರೋಲ್​ನಲ್ಲಿ 4.36 ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರದಲ್ಲಿ 4.93 ರೂಪಾಯಿಯಷ್ಟು ಹೆಚ್ಚಳವಾಗಿದೆ.

ವಾಣಿಜ್ಯ ನಗರಿ ಮುಂಬೈ ನಗರದಲ್ಲಿ ಈಗಾಗಲೇ ಲೀಟರ್​ ಪೆಟ್ರೋಲ್​ ದರ ಶತಕ ಬಾರಿಸಿದೆ. ಹಾಗಾಗಿಯೂ ಏರಿಕೆಯತ್ತ ಕಾಣುತ್ತಿರುವ ತೈಲ ದರದಿಂದಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಲೀಟರ್​ ಪೆಟ್ರೋಲ್​ ದರ 100.98 ರೂ. ಹಾಗೂ ಲೀಟರ್​ ಡೀಸೆಲ್​ ದರ 92.99 ರೂಪಾಯಿ ಆಗಿದೆ. ಕೊಲ್ಕತ್ತಾದಲ್ಲಿ ಲೀಟರ್​ ಪೆಟ್ರೋಲ್​ ದರ 94.76 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ ಲೀಟರ್​ ಡೀಸೆಲ್​ ದರ 88.51 ರೂಪಾಯಿ ನಿಗದಿಯಾಗಿದೆ. ಬೆಂಗಳೂರು ನಗರದಲ್ಲಿ ಲೀಟರ್​ ಪೆಟ್ರೋಲ್​ ದರ 97.92 ರೂಪಾಯಿಗೆ ಹೆಚ್ಚಳವಾಗಿದೆ.

ಇನ್ನು, ಚೆನ್ನೈನಲ್ಲಿಲೀಟರ್​ ಪೆಟ್ರೋಲ್​ಗೆ 96.23 ರೂ. ಹಾಗೂ ಲೀಟರ್​ ಡೀಸೆಲ್​ ದರ 90.38 ರೂಪಾಯಿ ಹೆಚ್ಚಳವಾಗಿದೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ಕೆಲವು ನಗರಗಳಲ್ಲಿ ಪೆಟ್ರೋಲ್​ ದರ ಈಗಾಗಲೇ ಶತಕ ಬಾರಿಸಿದ್ದು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಈ ಗುಂಪಿಗೆ ಮುಂಬೈ ನಗರವೂ ಕೂಡ ಕಳೆದ ಮೇ ತಿಂಗಳಿನಲ್ಲಿ ಸೇರ್ಪಡೆಯಾಗಿದೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುವ ಕೆಲಸವನ್ನು ಮಾಡುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಇದನ್ನೂ ಓದಿ: ವಿವಿಧ ನಗರದಲ್ಲಿ ಪೆಟ್ರೋಲ್​ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html

Follow Us
Web contact
Web contact

TV9 Kannada

Read More
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು