ಭಾರತದ ಮೊದಲ ಬುಲೆಟ್ ಟ್ರೈನ್​ಗೆ ಜಪಾನ್​ನ ಶೀನ್ಕಾನ್​ಸೆನ್ ತಂತ್ರಜ್ಞಾನ; ಈ ಅಪ್ಪಟ ಸುರಕ್ಷಿತ ರೈಲು ವ್ಯವಸ್ಥೆ ಬಗ್ಗೆ ತಿಳಿಯಬೇಕಾದ ಸಂಗತಿ

Japan's Shinkansen technology getting introduced in India: ಜಪಾನ್​ನ ಶೀನ್​ಕಾನ್ಸೆನ್ ವಿಶ್ವದ ಮೊದಲ ಅಪ್ಪಟ ಹೈಸ್ಪೀಡ್ ರೈಲು ಸಿಸ್ಟಂ ಆಗಿದೆ. ವಿಶೇಷ ಟೆಕ್ನಾಲಜಿ ಹೊಂದಿರುವ ಈ ಬುಲೆಟ್ ಟ್ರೈನು ಅಪ್ಪಟ ವೇಗ ಮತ್ತು ಸುರಕ್ಷತೆಗೆ ಹೆಸರುವಾಸಿಯಾಗಿದೆ. ಭಾರತದಲ್ಲಿ ಅಹ್ಮದಾಬಾದ್ ಮುಂಬೈ ಮಾರ್ಗದಲ್ಲಿ ಶೀನ್​ಕಾನ್ಸೆನ್ ಬುಲೆಟ್ ರೈಲು ಸಿಸ್ಟಂ ನಿರ್ಮಿಸಲಾಗುತ್ತಿದೆ.

ಭಾರತದ ಮೊದಲ ಬುಲೆಟ್ ಟ್ರೈನ್​ಗೆ ಜಪಾನ್​ನ ಶೀನ್ಕಾನ್​ಸೆನ್ ತಂತ್ರಜ್ಞಾನ; ಈ ಅಪ್ಪಟ ಸುರಕ್ಷಿತ ರೈಲು ವ್ಯವಸ್ಥೆ ಬಗ್ಗೆ ತಿಳಿಯಬೇಕಾದ ಸಂಗತಿ
ಜಪಾನ್ ಬುಲೆಟ್ ಟ್ರೈನು

Updated on: Aug 29, 2025 | 7:41 PM

ನವದೆಹಲಿ, ಆಗಸ್ಟ್ 29: ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್​ಗೆ ಎರಡು ದಿನದ ಭೇಟಿ ನೀಡಿರುವ ಹೊತ್ತಿನಲ್ಲಿ ಎಲ್ಲರ ಕಣ್ಣು ಜಪಾನ್ ತಂತ್ರಜ್ಞಾನದಿಂದ ಭಾರತಕ್ಕೆ ಆಗಬಹುದಾದ ಪ್ರಯೋಜನಗಳ ಬಗ್ಗೆ ನೆಟ್ಟಿದೆ. ಜಪಾನ್ ತಂತ್ರಜ್ಞಾನ ಪರಿಣಿತಿಗೆ ಹೆಸರುವಾಸಿಯಾಗಿದೆ. ಅದರ ಉತ್ಪನ್ನಗಳು ಗುಣಮಟ್ಟದಲ್ಲಿ ರಾಜಿಯಾಗುವುದೇ ಇಲ್ಲದಂಥವು. ಭಾರತದ ಬುಲೆಟ್ ರೈಲು ಯೋಜನೆಗಳಿಗೆ ಜಪಾನ್ ತಂತ್ರಜ್ಞಾನ ಅಳವಡಿಕೆ ಮಾಡಲಾಗುತ್ತಿದೆ. ಮುಂಬೈ ಮತ್ತು ಅಹ್ಮಾದಾಬಾದ್ ನಡುವೆ ಬುಲೆಟ್ ರೈಲು ಮಾರ್ಗ (high speed rail) ನಿರ್ಮಿಸಲಾಗುತ್ತಿದ್ದು, ಇದು ಜಪಾನ್​ನ ಶೀನ್​ಕಾನ್ಸೆನ್ ಟೆಕ್ನಾಲಜಿಯ (Shinkansen train system) ಸಹಾಯ ಪಡೆಯಲಾಗುತ್ತಿದೆ.

ಏನಿದು ಶೀನ್​ಕಾನ್ಸೆನ್ ತಂತ್ರಜ್ಞಾನ?

ಶೀನ್​ಕಾನ್ಸೆನ್ ಎಂಬುದು ಜಪಾನ್​ನ ಬುಲೆಟ್ ಟ್ರೈನು. ಅಲ್ಲಿಯ ವಿಶೇಷವಾದ ಹೈಸ್ಪೀಡ್ ರೈಲು ಸಿಸ್ಟಂ. 1964ರಲ್ಲಿ ಇದು ಮೊದಲುಗೊಂಡಿದ್ದು. ಇದು ವಿಶ್ವದ ಮೊದಲ ಹೈಸ್ಪೀಡ್ ರೈಲ್ವೆ ಎನಿಸಿದೆ.

ಇದನ್ನೂ ಓದಿ: ಭಾರತ ಜಪಾನ್ ನಡುವೆ ಹಿಂದೆಂದಿಗಿಂತಲೂ ಗಾಢ ವ್ಯಾಪಾರ ಸಂಬಂಧ; 2 ವರ್ಷದಲ್ಲಿ ಏರ್ಪಟ್ಟ ಬರೋಬ್ಬರಿ 170 ಒಪ್ಪಂದಗಳು

ಇದಕ್ಕೆ ಸ್ಟ್ಯಾಂಡರ್ಡ್ ಗೇಜ್​ನಲ್ಲಿ ರೈಲು ಹಳಿಗಳನ್ನು ನಿರ್ಮಿಸಬೇಕು. ಈ ಹಳಿಗಳ ಮೇಲೆ ಶಿಂಕನ್ಸನ್ ಟ್ರೈನು ಸುಮಾರು 300 ಕಿಮೀ ವೇಗದಲ್ಲಿ ಹಾದು ಹೋಗುತ್ತದೆ. ಆರು ದಶಕಗಳಲ್ಲಿ ಒಮ್ಮೆಯೂ ಯಾವ ಪ್ರಯಾಣಿಕರಿಗೂ ಅವಘಡವಾಗಿಲ್ಲ. ಈ ಟ್ರೈನುಗಳು ಶಬ್ದ ಹೊರಡಿಸುವುದು ಬಹಳ ಕಡಿಮೆ. ಹಗುರವಾದ ಅಲೂಮಿನಿಯಮ್ ಲೋಹ ಬಳಸಿ ನಿರ್ಮಿತವಾಗಿದೆ. ಬೋಗಿಯೊಳಗೆ ಸ್ಥಳ ವಿಶಾಲವಾಗಿದೆ.

ಮುಂಬೈ ಅಹ್ಮದಾಬಾದ್ ಬುಲೆಟ್ ಟ್ರೈನ್ ಯೋಜನೆ

ಮುಂಬೈ ಮತ್ತು ಅಹ್ಮಾದಾಬಾದ್ ನಡುವೆ ಹೈಸ್ಪೀಡ್ ರೈಲು ಸಿಸ್ಟಂ ನಿರ್ಮಿಸಲಾಗುತ್ತಿದೆ. ಇದರ ಉದ್ದ 508 ಕಿಮೀ. ಸ್ಟ್ಯಾಂಡರ್ಡ್ ಗೇಜ್​ನಲ್ಲಿ ಹಳಿಗಳನ್ನು ನಿರ್ಮಿಸಲಾಗುತ್ತಿದೆ. ಶೀನ್​ಕಾನ್ಸೆನ್ ಟೆಕ್ನಾಲಜಿಯಲ್ಲಿ ನಿರ್ಮಾಣವಾಗುತ್ತಿರುವ ಈ ರೈಲು ಸಿಸ್ಟಂ 2030ರೊಳಗೆ ಮುಗಿಯುವ ಸಾಧ್ಯತೆ ಇದೆ.

ಈ ಮಾರ್ಗಕ್ಕೆ ಹಾಕಲಾಗುವ ಟ್ರೈನು ಹೊಚ್ಚ ಹೊಸ ಶೀನ್​ಕಾನ್ಸೆನ್ ಇ5 ಸೀರೀಸ್​ನದ್ದಾಗಿರುತ್ತದೆ. ಜಪಾನ್ ಮತ್ತು ಭಾರತದಲ್ಲಿ ಏಕಕಾಲದಲ್ಲಿ ಇ5 ಮಾಡಲ್ ಬಿಡುಗಡೆ ಆಗುವ ನಿರೀಕ್ಷೆ ಇದೆ. ಈ ಟ್ರೈನು 320 ಕಿಮೀ ವೇಗದಲ್ಲಿ ಹೋಗಬಲ್ಲು.

ಇದನ್ನೂ ಓದಿ: ಜಪಾನೀ ಉದ್ದಿಮೆಗಳಿಗೆ ಗ್ಲೋಬಲ್ ಸೌತ್ ತಲುಪಲು ಭಾರತ ಸ್ಪ್ರಿಂಗ್​ಬೋರ್ಡ್ ಇದ್ದಂತೆ: ನರೇಂದ್ರ ಮೋದಿ

ಮುಂಬೈ ಮತ್ತು ಅಹ್ಮದಾಬಾದ್ ನಡುವಿನ 500 ಕಿಮೀ ಅಂತರವನ್ನು ಈ ಟ್ರೈನು ಕೇವಲ 2-3 ಗಂಟೆಯಲ್ಲಿ ತಲುಪಬಲ್ಲುದು. ಈ ಮಾರ್ಗದಲ್ಲಿ 21 ಕಿಮೀ ಅಂಡರ್-ಸೀ ಟನಲ್ ಕೂಡ ಸಿಗುತ್ತದೆ. ಅಂದರೆ, ಸಮುದ್ರದೊಳಗೆ ಸುರಂಗ ಮೂಲಕ ಈ ಟ್ರೈನು ಹಾದು ಹೋಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ