ಜಿಯೋ ಮತ್ತು ಗೂಗಲ್ನಿಂದ ಸೆಪ್ಟೆಂಬರ್ 10ನೇ ತಾರೀಕಿನಿಂದ ಹೇಳಿರುವ ಪ್ರಕಾರ, ಜಿಯೋಫೋನ್ ನೆಕ್ಸ್ಟ್ ಅನ್ನು ದೀಪಾವಳಿ ಹಬ್ಬದ ಸಂದರ್ಭಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಕೈಗೆಟುಕುವ ಬೆಲೆಯ ಸ್ಮಾರ್ಟ್ಫೋನ್ ಆರಂಭದಲ್ಲಿ ಗಣೇಶ ಚತುರ್ಥಿಗೆ ಬಿಡುಗಡೆ ಆಗಬೇಕಿತ್ತು. ಜಿಯೋ ಮತ್ತು ಗೂಗಲ್ ಹೇಳಿರುವಂತೆ, ಕಂಪೆನಿಯು ಸ್ಮಾರ್ಟ್ಫೋನ್ ಬಿಡುಗಡೆ ವಿಚಾರವಾಗಿ “ಸಾಕಷ್ಟು ಪ್ರಗತಿ” ಆಗಿದೆ. “ಎರಡೂ ಕಂಪೆನಿಗಳು ಜಿಯೋಫೋನ್ ನೆಕ್ಸ್ಟ್ ಅನ್ನು ಇನ್ನಷ್ಟು ಸುಧಾರಣೆ ತರುವುದಕ್ಕೆ ಸೀಮಿತ ಸಂಖ್ಯೆಯ ಬಳಕೆದಾರರೊಂದಿಗೆ ಪರೀಕ್ಷೆ ಆರಂಭಿಸಿವೆ ಮತ್ತು ದೀಪಾವಳಿ ಹಬ್ಬದ ಹೊತ್ತಿಗೆ ವ್ಯಾಪಕವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲು ಕೆಲಸ ಮಾಡಲಾಗುತ್ತಿದೆ. ಈಗಿನ ಹೆಚ್ಚುವರಿ ಸಮಯವು ಸದ್ಯಕ್ಕೆ ಈ ವಲಯದಲ್ಲಿ ಕಾಣಿಸಿಕೊಂಡಿರುವ ಜಾಗತಿಕ ಸೆಮಿಕಂಡಕ್ಟರ್ ಕೊರತೆಯಿಂದ ಹೊರಬರುವುದಕ್ಕೆ ಸಹಾಯ ಮಾಡುತ್ತದೆ,” ಎಂದು ಜಿಯೋ ಮತ್ತು ಗೂಗಲ್ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಜಿಯೋಫೋನ್ ನೆಕ್ಸ್ಟ್ ಆಂಡ್ರಾಯಿಡ್ ಆಪರೇಟಿಂಗ್ ಸಿಸ್ಟಮ್ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಅದರಲ್ಲಿ ಗೂಗಲ್ ಅಸಿಸ್ಟೆಂಟ್, ಆಟೋಮೆಟಿಕ್ ಜೋರಾದ-ಓದು, ಆನ್ಸ್ಕ್ರೀನ್ ಟೆಕ್ಸ್ಟ್ಗೆ ಭಾಷಾನುವಾದ, ಸ್ಮಾರ್ಟ್ ಕ್ಯಾಮೆರಾ ಜತೆಗೆ ಇಂಡಿಯಾ ಸೆಂಟ್ರಿಕ್ ಫಿಲ್ಟರ್ಸ್ಗಳನ್ನು ಒಳಗೊಂಡಿದೆ.
ಬಳಕೆದಾರರು ಈಚೆಗಿನ ಕ್ರಿಕೆಟ್ ಸ್ಕೋರ್ಗಳು ಮತ್ತು ಹವಾಮಾನ ಅಪ್ಡೇಟ್ಸ್ ಪರಿಶೀಲಿಸಬಹುದು. ಗೂಗಲ್ ಅಸಿಸ್ಟೆಂಟ್ಗೆ ಜಿಯೋ ಸಾವನ್ನಲ್ಲಿ ಸಂಗೀತ ಪ್ಲೇ ಮಾಡುವಂತೆ ಅಥವಾ ಮೈ ಜಿಯೋದಲ್ಲಿ ಬ್ಯಾಲೆನ್ಸ್ ಪರಿಶೀಲಿಸುವಂತೆ ಕೇಳಬಹುದು. ಅಂದಹಾಗೆ 4G ಸ್ಮಾರ್ಟ್ಫೋನ್ ದರ ಇನ್ನೂ ಬಹಿರಂಗ ಮಾಡಿಲ್ಲ.
ಇದನ್ನೂ ಓದಿ: ರೂ. 4,000 ದೊಳಗೆ ಸ್ಮಾರ್ಟ್ ಪೋನ್ ಬೇಕೇ? ಸ್ವಲ್ಪ ದಿನ ಕಾಯಿರಿ, ಮುಕೇಶ್ ಅಂಬಾನಿ ಅದನ್ನು ನೀಡಲಿದ್ದಾರೆ!
(JioPhone Next Affordable Smart Phone Release Postponed To Deepavali Here Is The Details)