Spirit of Victory: ಭಾರತದ ಕಾರ್ಗಿಲ್ ದಿಗ್ವಿಜಯದ ಸ್ಮರಣಾರ್ಥ ಹೊಸ ವಿಸ್ಕಿ ತಂದ ರಾಡಿಕೋ; ಸೇನೆಗೆ ಸಿಗಲಿದೆ ಲಾಭದ ಒಂದು ಪಾಲು

|

Updated on: Feb 07, 2024 | 1:01 PM

Radico Khaitan's Spirit of Victory 1999 Pure Malt Whiskey: ಭಾರತದಲ್ಲಿ ದೇಶೀಯವಾಗಿ ಬೆಳೆದ ಮದ್ಯದ ಕಂಪನಿ ರಾಡಿಕೋ ಖೇತಾನ್ ಭಾರತದ ವೀರ ಯೋಧರಿಗೆ ಮತ್ತೊಂದು ಬ್ರ್ಯಾಂಡ್ ಅನ್ನು ಸಮರ್ಪಿಸಿದೆ. 1999ರ ಕಾರ್ಗಿಲ್ ಯುದ್ಧದ ಸವಿನೆನಪಿಗಾಗಿ ಪ್ಯೂರ್ ಮಾಲ್ಟ್ ವಿಸ್ಕಿಯನ್ನು ರಾಡಿಕೋ ಖೇತಾನ್ ಬಿಡುಗಡೆ ಮಾಡಿದೆ. ಹಿಂದೆ 1965ರ ಯುದ್ಧದ ಗೆಲುವಿನ ನೆನಪಿಗೆ ರಮ್ ಬ್ರ್ಯಾಂಡ್ ಅನ್ನು ತರಲಾಗಿತ್ತು. 1971ರ ಯುದ್ಧದ ಅನಿಮೇಟೆಡ್ ಸೀರೀಸ್ ಅನ್ನೂ ರಾಡಿಕೋ ತಂದಿತ್ತು.

Spirit of Victory: ಭಾರತದ ಕಾರ್ಗಿಲ್ ದಿಗ್ವಿಜಯದ ಸ್ಮರಣಾರ್ಥ ಹೊಸ ವಿಸ್ಕಿ ತಂದ ರಾಡಿಕೋ; ಸೇನೆಗೆ ಸಿಗಲಿದೆ ಲಾಭದ ಒಂದು ಪಾಲು
ಪ್ಯೂರ್ ಮಾಲ್ಟ್ ವಿಸ್ಕಿ
Follow us on

ನವದೆಹಲಿ, ಫೆಬ್ರುವರಿ 7: ಭಾರತದ ಪ್ರಮುಖ ಸ್ಪಿರಿಟ್ ಕಂಪನಿ ಎನಿಸಿದ ರಾಡಿಕೋ ಖೇತಾನ್ (Radico Khaitan) ಇದೀಗ 1999ರ ಕಾರ್ಗಿಲ್ ಯುದ್ಧವೀರರಿಗೆ ಗೌರವವಾಗಿ ಹೊಸ ವಿಸ್ಕಿ ಬಿಡುಗಡೆ ಮಾಡಿದೆ. ಸ್ಪಿರಿಟ್ ಆಫ್ ವಿಕ್ಟರಿ ಬ್ರ್ಯಾಂಡ್ ಅಡಿಯಲ್ಲಿ ಭಾರತೀಯ ಸೇನೆಗೆ ಗೌರವವಾಗಿ ಹಲವು ಉತ್ಪನ್ನಗಳನ್ನು ತಂದಿರುವ ರಾಡಿಕೋ ಖೇತಾನ್ (Radico Khaitan), ಇದೀಗ 1999 ಪ್ಯೂರ್ ಮಾಲ್ಟ್ ವಿಸ್ಕಿ (Spirit of Victory 1999 Pure Malt Whiskey) ತಂದಿದೆ. 1999ರಲ್ಲಿ ಕಾರ್ಗಿಲ್​ನಲ್ಲಿ (Kargil war) ಪಾಕಿಸ್ತಾನ ಸೇನೆ ವಿರುದ್ದ ಭಾರತೀಯ ಸೈನಿಕರು ತೋರಿದ ಪರಾಕ್ರಮಕ್ಕೆ ಗೌರವವಾಗಿ, ಹಾಗೂ ಆ ಯುದ್ಧದಲ್ಲಿ ವೀರ ಮರಣವನ್ನು ಅಪ್ಪಿದ ಯೋಧರ ಸಂಸ್ಮರಣೆಯಲ್ಲಿ ಸ್ಪಿರಿಟ್ ಆಫ್ ವಿಕ್ಟರಿ 1999 ಪ್ಯೂರ್ ಮಾಲ್ಟ್ ವಿಸ್ಕಿಯನ್ನು ರಾಡಿಕೋ ಸಮರ್ಪಿಸಿದೆ.

ಹಿಂದಿನ ಕೆಲ ಯುದ್ಧಗಳಲ್ಲಿ ಭಾರತೀಯ ಸೇನೆ ಸಾಧಿಸಿದ ವಿಜಯಕ್ಕೂ ರಾಡಿಕೋ ಖೇತಾನ್ ಮದ್ಯ ಸಮರ್ಪಣೆ ಮಾಡಿತ್ತು. 1965 ದಿ ಸ್ಪಿರಿಟ್ ಆಫ್ ವಿಕ್ಟರಿ ಪ್ರೀಮಿಯಮ್ ಎಕ್ಸ್​ಎಕ್ಸ್​ಎಕ್ಸ್ ರಮ್, ಹಾಗು 1965 ಸ್ಪಿರಿಟ ಆಫ್ ವಿಕ್ಟರಿ ಲೆಮನ್ ಡ್ಯಾಷ್ ರಮ್ ಅನ್ನು ಅದು ಹಿಂದೆ ಬಿಡುಗಡೆ ಮಾಡಿತ್ತು.

1971ರಲ್ಲಿ ಬಾಂಗ್ಲಾದೇಶ ವಿಮೋಚನಾ ಯುದ್ದದಲ್ಲಿ ಭಾರತ ಗೆದ್ದ ಸವಿನೆನಪಿಗೂ ಸ್ಪಿರಿಟ್ ಅನ್ನು ಬಿಡುಗಡೆ ಮಾಡಲಾಗಿತ್ತು. 2021ರ ಡಿಸೆಂಬರ್​ನಲ್ಲಿ ರಾಡಿಕೋ ಖೇತಾನ್ 1965 ಮತ್ತು 1971ರ ಯುದ್ಧದ ಬಗ್ಗೆ ಅನಿಮೇಟ್ ವಿಡಿಯೋಗಳ ಸರಣಿಯನ್ನೂ ಬಿಡುಗಡೆ ಮಾಡಿತ್ತು.

ಇದನ್ನೂ ಓದಿ: ‘ನಾವೇನು ಮಾಡಲು ಸಾಧ್ಯವಿಲ್ಲ’- ಪೇಟಿಎಂ ಸಿಇಒಗೆ ಖಚಿತ ಉತ್ತರ ಕೊಟ್ಟ ಆರ್​ಬಿಐ ಮತ್ತು ಸರ್ಕಾರ

ಒಂದು ಬಾಟಲ್ ಬೆಲೆ 5,000 ರೂ

ಇದೀಗ ಬಿಡುಗಡೆ ಆಗಿರುವ ಸ್ಪಿರಿಟ್ ಆಫ್ ವಿಕ್ಟರಿ 1999 ಪ್ಯೂರ್ ಮಾಲ್ಟ್ ವಿಸ್ಕಿಯ ಒಂದು ಬಾಟಲ್ ಬೆಲೆ 5,000 ರೂ ಇದೆ. ಮೊದಲಿಗೆ ಉತ್ತರಪ್ರದೇಶ ಮತ್ತು ಹರ್ಯಾಣದಲ್ಲಿ ಇದನ್ನು ಬಿಡುಗಡೆ ಮಾಡಿ, ಆ ಬಳಿಕ ಬೇರೆ ಮಾರುಕಟ್ಟೆಗಳಿಗೆ ವಿಸ್ತರಿಸುವುದು ಕಂಪನಿಯ ಆಲೋಚನೆ.

ಸಖತ್ ಜನಪ್ರಿಯ ಬ್ರ್ಯಾಂಡ್​ಗಳನ್ನು ಹೊಂದಿರುವ ರಾಡಿಕೋ

ರಾಡಿಕೋ ಖೇತಾನ್ ಸ್ಪಿರಿಟ್ ತಯಾರಿಕೆಯಲ್ಲಿ ಬಹಳ ಹಳೆಯ ಕಂಪನಿ. ಇದು ಮೂಲತಃ ರಾಮ್​ಪುರ್ ಡಿಸ್ಟಿಲರಿ ಆಗಿತ್ತು. 1943ರಲ್ಲಿ ಇದರ ಸ್ಥಾಪನೆಯಾದುದು. ಇತ್ತೀಚೆಗಷ್ಟೇ ರಾಡಿಕೋ ಖೇತಾನ್ ಆಗಿ ಬದಲಾಗಿದೆ.

ಇದನ್ನೂ ಓದಿ: ದುಬಾರಿ ಬೆಂಗಳೂರು; ಸರಾಸರಿ ಬೆಲೆ ಚದರಡಿಗೆ 5,900 ರೂ; ಏಷ್ಯಾ ಪೆಸಿಫಿಕ್ ನಗರಗಳಲ್ಲಿ ಬೆಂಗಳೂರಿಗೆ 8ನೇ ಸ್ಥಾನ

8ಪಿಎಂ ವಿಸ್ಕಿ, ಮ್ಯಾಜಿಕ್ ಮೊಮೆಂಟ್ಸ್ ಸರಣಿ, ರಾಂಪುರ್ ಮಾಲ್ಟ್ ವಿಸ್ಕಿ, ರಾಯಲ್ ರಣಥಾಂಬೋರ್ ವಿಸ್ಕಿ, ಆಫ್ಟರ್ ಡಾರ್ಕ್ ವಿಸ್ಕಿ, ಕಾಂಟೆಸಾ ರಮ್, ಜೈಸಲ್ಮರ್ ಜಿನ್ ಇತ್ಯಾದಿ ಜನಪ್ರಿಯ ಬ್ರ್ಯಾಂಡ್​ಗಳ ಅಡಿಯಲ್ಲಿ ವಿಸ್ಕಿ, ರಮ್, ವೋಡ್ಕಾ, ಜಿನ್​ಗಳನ್ನು ಕಂಪನಿ ತಯಾರಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ