ಬೆಂಗಳೂರು, ಡಿಸೆಂಬರ್ 11: ಖಾಸಗಿ ವಲಯದ ಪ್ರಮುಖ ಬ್ಯಾಂಕ್ಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕ್ನ ರೀಟೇಲ್ ಅಸೆಟ್ಸ್ ಸೆಂಟರ್ (ಆರ್ಎಸಿ) ಉದ್ಘಾಟನೆಗೊಂಡಿದೆ. ಬೆಂಗಳೂರಿನ ಜೆಪಿ ನಗರದಲ್ಲಿ ಬ್ಯಾಂಕ್ನ ಆರ್ಎಸಿಗೆ ಚಾಲನೆ ದೊರೆತಿದೆ. ಇದು ಕರ್ಣಾಟಕದ ಮೊತ್ತಮೊದಲ ರೀಟೇಲ್ ಅಸೆಟ್ಸ್ ಸೆಂಟರ್ ಆಗಿದೆ. ತನ್ನ ರಿಟೇಲ್ ಬ್ಯಾಂಕಿಂಗ್ ಸೇವೆಗಳನ್ನು ಉತ್ತಮಗೊಳಿಸಲು ಮತ್ತು ಹೆಚ್ಚು ಸುವ್ಯವಸ್ಥಿತ, ಗ್ರಾಹಕ ಕೇಂದ್ರಿತ ವಿಧಾನದ ಮೂಲಕ ಸಾಲ ಇತ್ಯಾದಿ ಹಣಕಾಸು ಸೇವೆಗಳನ್ನು ಒದಗಿಸಲು ರೀಟೇಲ್ ಅಸೆಟ್ಸ್ ಸೆಂಟರ್ ನೆರವಾಗಲಿದೆ.
ಆರ್ಎಸಿ ಉದ್ಘಾಟನೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕರ್ಣಾಟಕ ಬ್ಯಾಂಕ್ನ ಎಂಡಿ ಮತ್ತು ಸಿಇಒ ಶ್ರೀಕೃಷ್ಣನ್ ಅವರು, “ಕರ್ಣಾಟಕ ಬ್ಯಾಂಕ್ನಲ್ಲಿ ನಾವು ನಮ್ಮ ಗ್ರಾಹಕರಿಗೆ ಹೊಸ ರೀತಿಯ ಮತ್ತು ಪರಿಣಾಮಕಾರಿ ಆರ್ಥಿಕ ಉತ್ಪನ್ನಗಳನ್ನು ಒದಗಿಸಲು ಬದ್ಧರಾಗಿದ್ದೇವೆ. ಮೊತ್ತಮೊದಲ ರಿಟೇಲ್ ಅಸೆಟ್ಸ್ ಸೆಂಟರ್ ಉದ್ಘಾಟನೆಯು ಇದರ ಒಂದು ಭಾಗವಾಗಿದೆ. ವಿವಿಧ ಹಣಕಾಸು ಉತ್ಪನ್ನಗಳನ್ನು ಸುಲಭವಾಗಿ ದೊರಕುವಂತೆ ಮಾಡುವ ಕಡೆಗೆ ಮತ್ತು ಸಮಯೋಚಿತ ಸೇವೆ ಒದಗಿಸುವುದರ ಕಡೆಗೆ ಗಮನ ಕೇಂದ್ರೀಕರಿಸುವ ಈ ಬ್ಯಾಂಕ್ನ ದೂರದೃಷ್ಟಿಗೆ ಆರ್ಎಸಿ ಸಾಕ್ಷಿಯಾಗಿದೆ. ದೇಶದಾದ್ಯಂತ ಇರುವ ನಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸಲು ಶೀಘ್ರದಲ್ಲೇ ಇನ್ನಿತರ ಪ್ರದೇಶಗಳಲ್ಲೂ ರಿಟೇಲ್ ಅಸೆಟ್ಸ್ ಬಿಸಿನೆಸ್ ಸ್ಥಾಪನೆ ಮಾಡಲಾಗುವುದು” ಎಂದು ಹೇಳಿದರು.
ಇದನ್ನೂ ಓದಿ: ನೀತಿ ಮುಂದುವರಿಕೆಯ ಹಠ ಇರಲ್ಲ: ಹೊಸ ಹಾದಿ ಸವೆಸುವ ಮುನ್ಸೂಚನೆ ನೀಡಿದ ಹೊಸ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ
“ಸಾಲ ಅರ್ಜಿ ಪ್ರಕ್ರಿಯೆಗಳಿಂದ ಹಿಡಿದು ಸಾಲದ ಅನುಮೋದನೆ ಮತ್ತು ಸಾಲ ವಿತರಣೆಗಳವರೆಗೆ ಎಲ್ಲಾ ಕೆಲಸವೂ ಸುಗಮವಾಗಿ ನಡೆಯಲು, ತೊಂದರೆ ಮುಕ್ತ ವಹಿವಾಟು ಸಾಧ್ಯವಾಗಲು ರಿಟೇಲ್ ಅಸೆಟ್ಸ್ ಸೆಂಟರ್ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ವೇದಿಕೆಗಳನ್ನು ಬಳಸಿಕೊಳ್ಳಲಾಗುತ್ತದೆ. ಗ್ರಾಹಕರು ಮತ್ತು ಚಾನಲ್ ಪಾಲುದಾರರಿಗೆ ಸಮಗ್ರ ಸೇವಾ ಅನುಭವವನ್ನು ಪಡೆಯಲು ಭೌತಿಕ ಮತ್ತು ಡಿಜಿಟಲ್ ಟಚ್ ಪಾಯಿಂಟ್ಗಳ ವ್ಯವಸ್ಥೆ ಮಾಡಲಾಗುತ್ತದೆ” ಎಂದು ಕರ್ಣಾಟಕ ಬ್ಯಾಂಕ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ ತಿಳಿಸಿದರು.
ರೀಟೇಲ್ ಅಸೆಟ್ಸ್ ಸೆಂಟರ್ಗಳ ಮೂಲಕ ಎಂಎಸ್ಎಂಇಗಳಿಗೆ ಸಾಲ ಒದಗಿಸುವ ಯೋಜನೆಯನ್ನು ಕರ್ಣಾಟಕ ಬ್ಯಾಂಕ್ ಹಮ್ಮಿಕೊಂಡಿರುವ ವಿಚಾರವನ್ನು ಈ ವೇಳೆ ಬಹಿರಂಗಪಡಿಸಲಾಯಿತು. ಕರ್ಣಾಟಕ ಬ್ಯಾಂಕ್ನ ರೀಟೇಲ್ ಅಸೆಟ್ಸ್ ಸೆಂಟರ್ನಲ್ಲಿ ಗ್ರಾಹಕರು ಸಾಲಗಳನ್ನು ಪಡೆಯಲು ಉತ್ತಮ ವ್ಯವಸ್ಥೆ ಇದೆ. ಇಲ್ಲಿ ಲೋನ್ ನೀಡುವ ಪ್ರಕ್ರಿಯೆ ಬಹಳ ಬೇಗ ಆಗುತ್ತದೆ. ತಂತ್ರಜ್ಞಾನ ಅಳವಡಿಕೆಯಿಂದ ಅರ್ಜಿಗಳ ವಿಲೇವಾರಿ ಬಹಳ ಬೇಗ ನಡೆಯುತ್ತದೆ. ಗ್ರಾಹಕರ ವಿವಿಧ ಪ್ರಶ್ನೆ ಮತ್ತು ಅನುಮಾನಗಳಿಗೆ ಉತ್ತರಿಸಲು ಈ ಸೆಂಟರ್ನಲ್ಲಿ ಸೇವಾ ಟಚ್ ಪಾಯಿಂಟ್ ಕೂಡ ಸಿದ್ಧ ಇದೆ.
ಇದನ್ನೂ ಓದಿ: ಹೊಸ ಪ್ಯಾನ್ ಕಾರ್ಡ್ನಲ್ಲಿ ಕ್ಯುಆರ್ ಕೋಡ್ ಮಹತ್ವವೇನು? ಆನ್ಲೈನಲ್ಲಿ 50 ರೂ ಶುಲ್ಕದೊಂದಿಗೆ ಕಾರ್ಡ್ ಪಡೆಯುವ ಕ್ರಮ
ಎಕ್ಸಿಸ್, ಎಸ್ಬಿಐ, ಐಡಿಬಿಐ ಮೊದಲಾದ ಕೆಲ ಬ್ಯಾಂಕುಗಳೂ ಕೂಡ ರೀಟೇಲ್ ಅಸೆಟ್ ಸೆಂಟರ್ಗಳನ್ನು ಹೊಂದಿವೆ. ಇವುಗಳ ಸಾಲಿಗೆ ಈಗ ಅಪ್ಪಟ ಕರ್ನಾಟಕ ರತ್ನವಾದ ಕರ್ಣಾಟಕ ಬ್ಯಾಂಕ್ ಸೇರ್ಪಡೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:32 pm, Wed, 11 December 24