Udyogini Scheme: ಉದ್ಯೋಗಿನಿ ಯೋಜನೆ ಅಡಿ ಸಿಗಲಿದೆ ಮಹಿಳೆಯರಿಗೆ ಬಡ್ಡಿ ರಹಿತ ಸಾಲ; ಸಂಪೂರ್ಣ ವಿವರ ಇಲ್ಲಿದೆ
ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೊಳಿಸಿದಂತಹ ಸ್ಕೀಮ್ಸ್‌ಗಳಲ್ಲಿ ʼಉದ್ಯೋಗಿನಿ ಯೋಜನೆʼಯೂ ಒಂದು. ಈ ಯೋಜನೆಯಡಿ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಬಯಸುವಂತಹ ಮಹಿಳೆಯರಿಗೆ ಹಣಕಾಸಿನ ನೆರವನ್ನು ನೀಡಲಾಗುತ್ತದೆ. ಇದೀಗ ಈ ಯೋಜನೆಯಡಿ ಮಹಿಳೆಯರಿಗೆ ಸುಮಾರು 3 ಲಕ್ಷದಷ್ಟು ಬಡ್ಡಿ ರಹಿತ ಸಾಲ ಸೌಲಭ್ಯ ಸಿಗಲಿದ್ದು, ಫಲಾನುಭವಿಗಳು ಈ ಸೌಲಭ್ಯವನ್ನು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ, ವಯೋಮಿತಿ ಹಾಗೂ ಅಗತ್ಯ ದಾಖಲೆಗಳಿಗೆ ಸಂಬಂಧಿಸಿದ ಸಂಪೂರ್ಣ ವಿವರ ಇಲ್ಲಿದೆ.
ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಗಾಗ್ಗೆ ಹಲವಾರು ಸ್ಕೀಮ್ಸ್‌ಗಳನ್ನು ಜಾರಿಗೆ ತರುತ್ತಿರುತ್ತವೆ. ಇಂತಹ ಸ್ಕೀಮ್ಸ್‌ಗಳಲ್ಲಿ ಉದ್ಯೋಗಿನಿ ಯೋಜನೆಯೂ ಒಂದು. ಮಹಿಳೆಯರು ಸ್ವಂತ ಉದ್ಯಮವನ್ನು ಸ್ಥಾಪಿಸಲು ಅವರಿಗೆ ಆರ್ಥಿಕವಾಗಿ ನೆರವಾಗಲು ಬಂದಂತಹ ಯೋಜನೆಯೇ ಉದ್ಯೋಗಿನಿ. ಸ್ವಂತ ಉದ್ಯಮವನ್ನು ಪ್ರಾರಂಭಿಸುವ ಕನಸನ್ನು ಹೊತ್ತಿರುವ ಮಹಿಳೆಯರ ಪಾಲಿಗೆ ಉದ್ಯೋಗಿನಿ ಯೋಜನೆ ಒಂದು ವರದಾನ ಅಂತಾನೇ ಹೇಳಬಹುದು. 1997-98 ರಲ್ಲಿ ಮೊದಲು ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ಈ ಯೋಜನೆಯನ್ನು ನಂತರ ಕೇಂದ್ರ ಸರ್ಕಾರವು ಮಹಿಳಾ ಅಭಿವೃದ್ಧಿ ನಿಗಮದ ಮೇಲ್ವಿಚಾರಣೆಯಲ್ಲಿ ದೇಶಾದ್ಯಂತ ಜಾರಿಗೊಳಿಸಿತು. ಇದೀಗ ಯೋಜನೆಯಡಿ ಮಹಿಳೆಯರಿಗೆ ಸುಮಾರು 3 ಲಕ್ಷದಷ್ಟು ಬಡ್ಡಿ ರಹಿತ ಸಾಲ ಸೌಲಭ್ಯ ಸಿಗಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ, ಅಗತ್ಯ ದಾಖಲೆಗಳ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕ ಸರ್ಕಾರದ ಈ ಯೋಜನೆಯು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಮಹಿಳೆಯರನ್ನು ಮೇಲೆತ್ತುವ ಮತ್ತು ಅವರಿಗೆ ಸ್ವಂತ ಉದ್ಯಮವನ್ನು ಸ್ಥಾಪಿಸಲು ಬೆಂಬಲ ನೀಡುವ ಉದ್ದೇಶವನ್ನು ಹೊಂದಿದೆ. ವಿಶೇಷವಾಗಿ ಈ ಯೋಜನೆಯನ್ನು ಸ್ವಂತ ವ್ಯಾಪಾರ-ಉದ್ಯಮವನ್ನು ನಡೆಸಲು ಬಯಸುವ ಹೆಣ್ಣು ಮಕ್ಕಳಿಗಾಗಿ ರೂಪಿಸಲಾಗಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧು ನಿಗಮದ ಮೂಲಕ ಮಹಿಳೆಯರಿಗೆ ಸುಮಾರು 3 ಲಕ್ಷದಷ್ಟು ಬಡ್ಡಿ ರಹಿತ ಸಾಲವನ್ನು ಸಹ ನೀಡಲಾಗುತ್ತದೆ.
ಉದ್ಯೋಗಿನಿ ಯೋಜನೆಯಡಿ, ಮಹಿಳೆಯರು ಬ್ಯಾಂಕ್‌ಗಳಿಂದ ರೂ.1.00 ಲಕ್ಷದಿಂದ ರೂ.3.00 ಲಕ್ಷ ರೂ. ಗಳವರೆಗೆ ಸಾಲವನ್ನು ಪಡೆಯಬಹುದು ಮತ್ತು ಸಾಮಾನ್ಯ ವರ್ಗದ ಮಹಿಳೆಯರಿಗೆ 30% ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ವರ್ಗದ ಮಹಿಳೆಯರಿಗೆ 50% ಸಹಾಯಧನವನ್ನು ನೀಡಲಾಗುತ್ತದೆ.
ಅರ್ಹತಾ ಮಾನದಂಡಗಳು ಮತ್ತು ಅಗತ್ಯ ದಾಖಲೆಗಳು:-
• ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
• 18 ರಿಂದ 55 ವರ್ಷದೊಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ.
• ಪರಿಶಿಷ್ಟ ಜಾತಿ/ಪಂಗಡದವರಾಗಿದ್ದಲ್ಲಿ ವಾರ್ಷಿಕ ಆದಾಯ 2 ಲಕ್ಷ ರೂ. ಗಳ ಒಳಗಿರಬೇಕು ಮತ್ತು ಸಾಮಾನ್ಯ ವರ್ಗದವರಾಗಿದ್ದಲ್ಲಿ ವಾರ್ಷಿಕ ಆದಾಯ 1.5 ಲಕ್ಷ ರೂ. ಗಳ ಒಳಗಿರಬೇಕು.
• ಆಧಾರ್ ಕಾರ್ಡ್
• ವಸತಿ ಪ್ರಮಾಣಪತ್ರ / ಮತದಾರರ ಗುರುತಿನ ಚೀಟಿ / ಪಡಿತರ ಚೀಟಿ
• ಯೋಜನಾ ವರದಿ
• ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಕಡ್ಡಾಯವಾಗಿದೆ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:59 pm, Thu, 12 December 24