ಬೆಂಗಳೂರು: ಕರ್ನಾಟಕ ಸರ್ಕಾರ ಈ ಬಾರಿ ದಾಖಲೆಯ 3.27 ಲಕ್ಷ ಕೋಟಿ ರೂ ಗಾತ್ರದ ಬಜೆಟ್ (Karnataka Budget 2023) ನೀಡಿದೆ. ಹಿಂದಿನ ಸರ್ಕಾರದ 2.65 ಲಕ್ಷ ಕೋಟಿ ರೂ ಬಜೆಟ್ ಗಾತ್ರಕ್ಕಿಂತ ಈ ಬಾರಿ ಶೇ. 20ಕ್ಕಿಂತಲೂ ಹೆಚ್ಚಿದೆ. ಇದರಲ್ಲಿ 5 ಗ್ಯಾರಂಟಿ ಯೋಜನೆಗಳಿಗೆಯೇ 52,000 ಕೋಟಿ ರೂ ಅನುದಾನ ಕೊಡಲಾಗಿದೆ. ಈ ಬಜೆಟ್ ಹಣದಲ್ಲಿ ಸಾಲ ಪಾವತಿಗಳಿಗೆಯೇ 22,441 ಕೋಟಿ ರೂ ವೆಚ್ಚವಾಗುತ್ತದೆ. ಬಂಡವಾಳ ಹೂಡಿಕೆ ವೆಚ್ಚ 54,374 ಕೋಟಿ ರೂ ಇದೆ. ಈಗ ಬಜೆಟ್ಗೆ ಇಷ್ಟೊಂದು ಹಣವನ್ನು ಸರ್ಕಾರ ಹೇಗೆ ಹೊಂದಿಸುತ್ತದೆ ಎಂಬುದು ಕುತೂಹಲ. ಅಬಕಾರಿ ಸುಂಕವನ್ನು ಶೇ. 20ರಷ್ಟು ಹೆಚ್ಚಿಸಲಾಗಿದೆ. ವಾಣಿಜ್ಯ ಇಲಾಖೆಗೆ ಈ ಬಾರಿ ತೆರಿಗೆ ಗುರಿ 1 ಲಕ್ಷ ಕೋಟಿ ರೂಗಿಂತ ಹೆಚ್ಚು ಇಡಲಾಗಿದೆ. ಸರ್ಕಾರದ ಬಹುತೇಕ ಆದಾಯ ಕಮರ್ಷಿಯಲ್ ಟ್ಯಾಕ್ಸ್ಗಳಿಂದ ಬರುತ್ತದೆ. ಕಳೆದ ವರ್ಷಕ್ಕಿಂತ ಈ ಬಾರಿ ವಾಣಿಜ್ಯ ಇಲಾಖೆಗೆ ಶೇ. 20ಕ್ಕಿಂತ ಹೆಚ್ಚು ತೆರಿಗೆ ಗುರಿ ಕೊಡಲಾಗಿದೆ. ಅಬಕಾರಿ ಇಲಾಖೆ, ನೊಂದಣಿ ಮುದ್ರಾಂಕ ಮತ್ತು ಸಾರಿಗೆ ಇಲಾಖೆಗೂ ಹೆಚ್ಚಿನ ತೆರಿಗೆ ಗುರಿ ನೀಡಲಾಗಿದೆ.
ಒಟ್ಟು ರಾಜಸ್ವ ನಿರೀಕ್ಷೆ: 1,62,000 ಕೋಟಿ ರೂ
ಇದನ್ನೂ ಓದಿ: Karnataka Budget 2023 Size: ಕರ್ನಾಟಕ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂ; 5 ಗ್ಯಾರಂಟಿಗಳ ಜಾರಿಗೆ 52,000 ಕೋಟಿ ರೂ
ಈ ಮಧ್ಯೆ ಹೆಚ್ಚು ವಿತ್ತೀಯ ಕೊರತೆ ಎದುರಾಗದ ರೀತಿ ಬಜೆಟ್ ಆಶ್ವಾಸನೆಗಳನ್ನು ಈಡೇರಿಸಬೇಕಾದ ಕಠಿಣ ಹೊಣೆಗಾರಿಗೆ ಸಿದ್ದರಾಮಯ್ಯ ಹೆಗಲಿಗಿದೆ. ನಿರೀಕ್ಷಿಸಿದಷ್ಟು ತೆರಿಗೆ ಸಂಗ್ರಹ ಆಗುತ್ತದಾ ಎಂಬುದು ಕುತೂಹಲ ಮೂಡಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ