ಓಲಾ, ಸ್ವಿಗ್ಗಿ ಇತ್ಯಾದಿಯಲ್ಲಿ ಪ್ರತಿ ವಹಿವಾಟಿಗೆ ಶುಲ್ಕ ವಸೂಲಿ ಮಾಡಲು ಕರ್ನಾಟಕ ಸರ್ಕಾರ ಯೋಜನೆ

Aggregator platforms including Ola, Uber, Swiggy, Zomato: ಡೆಲಿವರಿ ಸೇವೆ ನಡೆಸುವ ಗಿಗ್ ವರ್ಕರ್​ಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ನಾಟಕದ ಸರ್ಕಾರವು ಆನ್​ಲೈನ್ ಅಗ್ರಿಗೇಟರ್ ಆ್ಯಪ್​ಗಳಿಂದ ಶುಲ್ಕ ವಸೂಲಿ ಮಾಡಲು ಯೋಜಿಸಿದೆ. ಓಲಾ, ಸ್ವಿಗ್ಗಿ, ಜೊಮಾಟೊ ಇತ್ಯಾದಿ ಪ್ಲಾಟ್​ಫಾರ್ಮ್​ಗಳಲ್ಲಿ ಗ್ರಾಹಕರ ಪ್ರತೀ ವಹಿವಾಟಿನ ಮೇಲೆ ಶೇ. 1ರಿಂದ 2ರಷ್ಟು ಶುಲ್ಕ ಪಡೆಯಲಿದೆ. ಈ ಸಂಬಂಧ ರಾಜ್ಯ ಸರ್ಕಾರ ಮಸೂದೆ ರೂಪಿಸಿದೆ.

ಓಲಾ, ಸ್ವಿಗ್ಗಿ ಇತ್ಯಾದಿಯಲ್ಲಿ ಪ್ರತಿ ವಹಿವಾಟಿಗೆ ಶುಲ್ಕ ವಸೂಲಿ ಮಾಡಲು ಕರ್ನಾಟಕ ಸರ್ಕಾರ ಯೋಜನೆ
ಸ್ವಿಗ್ಗಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 18, 2024 | 6:37 PM

ಬೆಂಗಳೂರು, ಅಕ್ಟೋಬರ್ 18: ಫೂಡ್ ಡೆಲಿವರಿ ಪ್ಲಾಟ್​ಫಾರ್ಮ್​ಗಳು, ಇಕಾಮರ್ಸ್ ಪ್ಲಾಟ್​​ಫಾರ್ಮ್​ಗಳು ಇತ್ಯಾದಿ ಅಗ್ರಿಗೇಟಿಂಗ್ ಆ್ಯಪ್​ಗಳಲ್ಲಿ ಗ್ರಾಹಕರು ನಡೆಸುವ ಪ್ರತೀ ವಹಿವಾಟಿಗೆ ಶೇ. 1ರಿಂದ 2ರಷ್ಟು ಶುಲ್ಕ ವಿಧಿಸಲು ಕರ್ನಾಟಕ ಸರ್ಕಾರ ಯೋಜಿಸಿದೆ. ಪ್ಲಾಟ್​ಫಾರ್ಮ್ ಶುಲ್ಕ ಇತ್ಯಾದಿ ಈಗಾಗಲೇ ಇರುವ ಹಲವು ಶುಲ್ಕಗಳಿಗೆ ಹೆಚ್ಚುವರಿಯಾಗಿ ಇದು ಇರಲಿದೆ. ರಾಜ್ಯ ಸರ್ಕಾರ ಈಗಾಗಲೇ ಮಸೂದೆ ರೂಪಿಸಿದ್ದು, ವಿಧಾನಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆದ ಬಳಿಕ ಜಾರಿಗೆ ತರುವ ಸಾಧ್ಯತೆ ಇದೆ ಎನ್ನುವ ವರದಿಯಾಗಿದೆ. ಡೆಲಿವರಿ ಬಾಯ್​ಗಳ ಸಾಮಾಜಿಕ ಭದ್ರತೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಹೆಜ್ಜೆ ಇಡುತ್ತಿದೆ.

ಜೊಮಾಟೊ, ಸ್ವಿಗ್ಗಿ, ಫ್ಲಿಪ್​ಕಾರ್ಟ್, ಅಮೇಜಾನ್, ಓಲಾ, ಊಬರ್, ಅರ್ಬನ್ ಕಂಪನಿ, ರಾಪಿಡೋ, ನಮ್ಮ ಯಾತ್ರಿ, ಡುಂಜೋ, ಜೆಪ್ಟೋ, ಪೋರ್ಟರ್ ಇತ್ಯಾದಿ ಅಗ್ರಿಗೇಟರ್ ಪ್ಲಾಟ್​ಫಾರ್ಮ್​ಗಳಲ್ಲಿ ಗ್ರಾಹಕರಿಗೆ ಡೆಲಿವರಿ ಸರ್ವಿಸ್ ನೀಡುವ ಕಾರ್ಮಿಕರಿಗೆ ಸರ್ಕಾರ ನೆರವಾಗಲಿದೆ. ಅದಕ್ಕಾಗಿ ವೆಲ್​ಫೇರ್ ಬೋರ್ಡ್ ಸ್ಥಾಪಿಸಲಾಗುತ್ತಿದೆ. ಈ ಪ್ಲಾಟ್​ಫಾರ್ಮ್​ಗಳಲ್ಲಿ ಸಂಗ್ರಹಿಸಲಾಗುವ ಶುಲ್ಕದ ಹಣವನ್ನು ಈ ಮಂಡಳಿಗೆ ವರ್ಗಾಯಿಸಲಾಗುತ್ತದೆ.

ಡೆಲಿವರಿ ಹುಡುಗರ ಸಾಮಾಜಿಕ ಭದ್ರತೆಗೆ ಯೋಜನೆ ಕೈಗೊಳ್ಳಲಾಗುವುದನ್ನು ಕರ್ನಾಟಕ ಸರ್ಕಾರ ಈ ಹಿಂದೆಯೇ ತಿಳಿಸಿತ್ತು. ಅಗ್ರಿಗೇಟರ್ ಕಂಪನಿಯು ಕರ್ನಾಟಕದಿಂದ ಪಡೆಯುವ ಒಟ್ಟಾರೆ ವಾರ್ಷಿಕ ಆದಾಯದಲ್ಲಿ ಒಂದು ನಿರ್ದಿಷ್ಟ ಮೊತ್ತವನ್ನು ಶುಲ್ಕವಾಗಿ ಪಡೆಯುವುದೋ, ಅಥವಾ ಪ್ರತೀ ವಹಿವಾಟಿನ ಮೇಲೆ ಶುಲ್ಕ ಪಡೆಯುವುದೋ ಎನ್ನುವ ಗೊಂದಲ ಇತ್ತು. ಈಗ ಅಂತಿಮವಾಗಿ ವಹಿವಾಟು ಆಧಾರಿತ ಶುಲ್ಕದ ನಿರ್ಧಾರಕ್ಕೆ ಬರಲಾಗಿದೆ.

ಇದನ್ನೂ ಓದಿ: ಅಮೃತ್ ಭಾರತ್ ಸ್ಟೇಷನ್ ಯೋಜನೆ; ಗದಗ್ ಜಂಕ್ಷನ್ ಕಾಮಗಾರಿ ಫೋಟೋ ಹಾಕಿದ ರೈಲ್ವೆ ಇಲಾಖೆ

ಕರ್ನಾಟಕದ ಕಾರ್ಮಿಕ ಇಲಾಖೆ ಅಧಿಕಾರಿಗಳು ಈ ಮಸೂದೆ ರಚಿಸುವ ಮುನ್ನ 26 ಅಗ್ರಿಗೇಟರ್​ಗಳು, ಕಾರ್ಮಿಕರ ಒಕ್ಕೂಟಗಳು, ವಕೀಲರು ಹೀಗೆ ವಿವಿಧ ಭಾಗಿದಾರರ ಜೊತೆ 32 ಸುತ್ತುಗಳ ಸಭೆ ನಡೆಸಿದ್ದರು. ಉದ್ಯಮ ಸಂಘಟನೆಗಳು ಜೊತೆಗೂ ಸಭೆ ನಡೆಸಲಾಗಿದೆ. ಯಾರಿಗಾದರೂ ಆಕ್ಷೇಪಗಳಿದ್ದರೆ ಅದನ್ನು ಸಲ್ಲಿಸಲು ಜುಲೈ 10ರವರೆಗೆ ಕಾಲಾವಕಾಶ ಕೊಡಲಾಗಿತ್ತು. ಈ ಮಸೂದೆಯನ್ನು ಮುಂಬರುವ ಮುಂಗಾರು ಅಧಿವೇಶನದಲ್ಲಿ ಪ್ರಸ್ತುತಪಡಿಸುವ ನಿರೀಕ್ಷೆ ಇದೆ.

ಉದ್ಯಮ ವಲಯ ಅಸಮಾಧಾನ

ವಹಿವಾಟಿನ ಮೇಲೆ ಹೆಚ್ಚುವರಿ ಶುಲ್ಕ ಪಡೆಯುವುದರಿಂದ ಅಗ್ರಿಗೇಟರ್​ಗಳ ವ್ಯವಹಾರಕ್ಕೆ ಧಕ್ಕೆಯಾಗಬಹುದು ಎಂದು ನಾಸ್​ಕಾಮ್ ಇತ್ಯಾದಿ ಉದ್ಯಮ ಸಂಘಟನೆಗಳು ಹೇಳುತ್ತಿವೆ.

ಕೇಂದ್ರ ಸರ್ಕಾರವು ಕಾರ್ಮಿಕರಿಗಾಗಿ ಸೋಷಿಯಲ್ ಸೆಕ್ಯೂರಿಟಿ ಕೋಡ್ ರಚಿಸಿದೆ. ವಾರ್ಷಿಕ ಟರ್ನೋವರ್​ ಮೇಲೆ ಶೇ. 1ರಿಂದ 2ರಷ್ಟು ಶುಲ್ಕ ಪಡೆಯುತ್ತಿದೆ. ಕರ್ನಾಟಕವೂ ಇದೇ ಕಾರ್ಯಕ್ಕೆ ಶುಲ್ಕ ಪಡೆಯುವುದು ಡೂಪ್ಲಿಕೇಶನ್ ಆಗಬಹುದು ಎಂಬುದು ಅಗ್ರಿಗೇಟರ್ ಆ್ಯಪ್ ಸಂಸ್ಥೆಗಳ ತಗಾದೆ.

ಇದನ್ನೂ ಓದಿ: ಬೈಜುಸ್ 1,80,000 ಕೋಟಿ ರೂನಿಂದ ಸೊನ್ನೆಗೆ: ಆದರೆ ಮೋಸ ಮಾಡೋನಲ್ಲ: ಬೈಜು ರವೀಂದ್ರನ್

ಆದರೆ, ತಮ್ಮ ಮಸೂದೆ ಜಾರಿಗೆ ಬಂದ ಬಳಿಕ ಕೇಂದ್ರದ ಸಂಹಿತೆಯು ಕರ್ನಾಟಕದಲ್ಲಿ ಅನ್ವಯ ಆಗುವುದಿಲ್ಲ. ಕರ್ನಾಟಕದ ಹೊಸ ನೀತಿಯೇ ಅಳವಡಿಕೆ ಆಗಲಿದೆ ಎಂದು ರಾಜ್ಯ ಸರ್ಕಾರದ ಸ್ಪಷ್ಟನೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ