ಅಮೃತ್ ಭಾರತ್ ಸ್ಟೇಷನ್ ಯೋಜನೆ; ಗದಗ್ ಜಂಕ್ಷನ್ ಕಾಮಗಾರಿ ಫೋಟೋ ಹಾಕಿದ ರೈಲ್ವೆ ಇಲಾಖೆ
Amrit Bharat Station scheme, Gadag junction railway station development: ಅಮೃತ್ ಭಾರತ್ ನಿಲ್ದಾಣ ಯೋಜನೆ ಅಡಿ ದೇಶಾದ್ಯಂತ ಸಾವಿರಕ್ಕೂ ಹೆಚ್ಚು ರೈಲ್ವೆ ಸ್ಟೇಷನ್ಗಳನ್ನು ಮರು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ನಿಲ್ದಾಣಗಳ ಸ್ವರೂಪ ಬದಲಿಸಲಾಗುತ್ತಿದೆ. ರೈಲ್ವೆ ಸಚಿವಾಲಯವು ಕರ್ನಾಟಕದ ಗದಗ್ ಜಂಕ್ಷನ್ನಲ್ಲಿ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿ ಎಲ್ಲಿಯವರೆಗೆ ಬಂದಿದೆ ಎನ್ನುವ ಅಪ್ಡೇಟ್ಸ್ ನೀಡಿದೆ.
ನವದೆಹಲಿ, ಅಕ್ಟೋಬರ್ 18: ವರ್ಷದ ಹಿಂದೆ ಆರಂಭವಾದ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿಯಲ್ಲಿ ದೇಶದ ವಿವಿಧೆಡೆ ಸಾವಿರಕ್ಕೂ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಇದರಲ್ಲಿ ಕರ್ನಾಟಕದ 55 ನಿಲ್ದಾಣಗಳೂ ಒಳಗೊಂಡಿವೆ. ಕರ್ನಾಟಕದ ಗದಗ್ ಜಂಕ್ಷನ್ನ ರೈಲು ನಿಲ್ದಾಣದಲ್ಲಿನ ಮರು ಅಭಿವೃದ್ಧಿ ಕಾಮಗಾರಿ ಬಗ್ಗೆ ರೈಲ್ವೆ ಸಚಿವಾಲಯ ಇಂದು ಶುಕ್ರವಾರ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಗದಗ್ ಜಂಕ್ಷನ್ನಲ್ಲಿ ಹೊಸ ಸ್ಟೇಷನ್ ಬಿಲ್ಡಿಂಗ್ ನಿರ್ಮಿಸಲಾಗುತ್ತಿದ್ದು, ಮೊದಲ ಮಹಡಿಯ ನಿರ್ಮಾಣ ಮುಕ್ತಾಯವಾಗಿದೆ. ಕಾಲ್ಸೇತುವೆಗೆ ಸರಳುಗಳ ಚೌಕಟ್ಟು ಸ್ಥಾಪಿಸಲಾಗಿದೆ. ಲಿಫ್ಟ್, ಎಸ್ಕಲೇಟರ್ನ ಫೌಂಡೇಶನ್ ಹಾಕಲಾಗಿದೆ. ಇವಿಷ್ಟೂ ಮುಕ್ತಾಯಗೊಂಡಿರುವ ಕಾಮಗಾರಿಗಳು.
ಇದನ್ನೂ ಓದಿ: ಗಮನಿಸಿ, ಮುಂಗಡ ರೈಲು ಟಿಕೆಟ್ ಬುಕಿಂಗ್ ಅವಧಿ ಈಗ 60 ದಿನ ಮಾತ್ರ; ಮೂರು ತಿಂಗಳ ಮುಂಚೆ ಬುಕಿಂಗ್ ಅಸಾಧ್ಯ
ನಿಲ್ದಾಣ ಕಟ್ಟಡ ಇನ್ನೂ ಪೂರ್ಣವಾಗಬೇಕಿದೆ. ಫ್ಲೋರಿಂಗ್ ಮತ್ತು ಸ್ಟೇರ್ಕೇಸ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎನ್ನುವ ಮಾಹಿತಿಯನ್ನು ರೈಲ್ವೆ ಸಚಿವಾಲಯ ತಿಳಿಸಿದೆ.
Gadag Junction, Karnataka redevelopment progress update:
Work complete: ✅G+1 floors of new station building ✅FOB girder erection ✅Lift & escalator foundation
Work-in-progress: 📈Station building finishing 📈Flooring & staircase construction#AmritStations pic.twitter.com/Qr8dwZGwqn
— Ministry of Railways (@RailMinIndia) October 18, 2024
ಏನಿದು ಅಮೃತ್ ಭಾರತ್ ನಿಲ್ದಾಣ ಯೋಜನೆ?
ಭಾರತೀಯ ರೈಲ್ವೆಯನ್ನು ಒಟ್ಟಾರೆಯಾಗಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ದೊಡ್ಡ ಯೋಜನೆಯ ಭಾಗವಾಗಿ ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ಅನ್ನು ಸರ್ಕಾರ 2023ರಲ್ಲಿ ಆರಂಭಿಸಿದೆ. ದೇಶಾದ್ಯಂತ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವುದು ಈ ಯೋಜನೆಯ ಉದ್ದೇಶ. ರೈಲ್ವೆ ನಿಲ್ದಾಣಗಳು ಆಧುನಿಕ ಸೌಲಭ್ಯ ಒಳಗೊಂಡಿರಬೇಕು, ಪ್ರಯಾಣಿಕ ಸ್ನೇಹಿಯಾಗಿರಬೇಕು ಎಂಬ ಗುರಿಯೊಂದಿಗೆ ನಿಲ್ದಾಣಗಳ ಮರು ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ: ಕಲಬುರಗಿ ಬೆಂಗಳೂರು ನಡುವೆ 2 ವಿಶೇಷ ರೈಲು: ಹೊರಡುವ ಸಮಯ, ನಿಲುಗಡೆ ಇತ್ಯಾದಿ ಮಾಹಿತಿ ಇಲ್ಲಿದೆ
ವಂದೇ ಭಾರತ್ ಟ್ರೈನ್ ಮೂಲಕ ರೈಲು ಪ್ರಯಾಣದ ಗುಣಮಟ್ಟ ಹೆಚ್ಚುತ್ತಿದೆ. ರೈಲು ನೆಟ್ವರ್ಕ್ ಅನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ಮೂಲಕ ರೈಲು ನಿಲ್ದಾಣಗಳ ಮರು ಅಭಿವೃದ್ಧಿಯನ್ನೂ ಕೈಗೊಳ್ಳಲಾಗುತ್ತಿದೆ.
ಕರ್ನಾಟಕದಲ್ಲಿ ಬೆಂಗಳೂರು ರೈಲು ನಿಲ್ದಾಣದಿಂದ ಹಿಡಿದು ಯಾದಗಿರಿಯವರೆಗೆ 55 ರೈಲು ನಿಲ್ದಾಣಗಳನ್ನು ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿ ಅಭಿವೃದ್ಧಿಪಡಿಸಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ