ಗಮನಿಸಿ, ಮುಂಗಡ ರೈಲು ಟಿಕೆಟ್ ಬುಕಿಂಗ್ ಅವಧಿ ಈಗ 60 ದಿನ ಮಾತ್ರ; ಮೂರು ತಿಂಗಳ ಮುಂಚೆ ಬುಕಿಂಗ್ ಅಸಾಧ್ಯ

Indian railways advance reservation period reduced to 60 days: ಭಾರತೀಯ ರೈಲ್ವೇಸ್ ಸಂಸ್ಥೆ ಮುಂಗಡ ಟಿಕೆಟ್ ಬುಕಿಂಗ್ ಅವಧಿಯನ್ನು ಅರ್ಧದಷ್ಟು ಇಳಿಸಿದೆ. 120 ದಿನ ಇದ್ದ ಮುಂಗಡ ಬುಕಿಂಗ್ ಅವಕಾಶವನ್ನು ಈಗ 60 ದಿನಕ್ಕೆ ಇಳಿಸಿದೆ. ಇದರಿಂದ ಅನಗತ್ಯ ಮತ್ತು ಆತುರದ ಟಿಕೆಟ್ ಬುಕಿಂಗ್ ಅನ್ನು ತಡೆಯಬಹುದು.

ಗಮನಿಸಿ, ಮುಂಗಡ ರೈಲು ಟಿಕೆಟ್ ಬುಕಿಂಗ್ ಅವಧಿ ಈಗ 60 ದಿನ ಮಾತ್ರ; ಮೂರು ತಿಂಗಳ ಮುಂಚೆ ಬುಕಿಂಗ್ ಅಸಾಧ್ಯ
ಭಾರತೀಯ ರೈಲ್ವೆ
Follow us
|

Updated on: Oct 18, 2024 | 11:55 AM

ನವದೆಹಲಿ, ಅಕ್ಟೋಬರ್ 18: ರೈಲು ಪ್ರಯಾಣಕ್ಕೆ ಭಾರತದಲ್ಲಿ ಸಖತ್ ಬೇಡಿಕೆ ಇದೆ. ಪ್ರಮುಖ ಮಾರ್ಗಗಳಲ್ಲಿ ರೈಲುಗಳಲ್ಲಿ ಹೋಗಬೇಕೆಂದರೆ ಬಹಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕು. ಹದಿನೈದು ದಿನವೋ, ಒಂದು ತಿಂಗಳ ಮುನ್ನವೋ ನೀವು ಟಿಕೆಟ್ ಬುಕ್ ಮಾಡಲು ಹೋದರೆ ವೇಟಿಂಗ್ ಲಿಸ್ಟ್​ನಲ್ಲಿ ಕಾಯುವಂತಹ ಸ್ಥಿತಿ ಇದೆ. 120 ದಿನದ ಮುಂಗಡ ಟಿಕೆಟ್ ಬುಕಿಂಗ್ ಅವಕಾಶ ಇರುವುದರಿಂದ ಬಹಳಷ್ಟು ಜನರು ಮೂರು ತಿಂಗಳ ಮುಂಚೆಯೇ ಟಿಕೆಟ್ ಕಾಯ್ದಿರಿಸುತ್ತಾರೆ. ಹೀಗಾಗಿ, ತುರ್ತಾಗಿ ರೈಲಿನಲ್ಲಿ ಪ್ರಯಾಣಿಸಬೇಕೆನ್ನುವವರಿಗೆ ಟಿಕೆಟ್ ಸಿಗುವ ಸಾಧ್ಯತೆ ಬಹಳ ಕಡಿಮೆ. ಇದನ್ನು ತಪ್ಪಿಸಲೋ ಎಂಬಂತೆ ಭಾರತೀಯ ರೈಲ್ವೆ ಇದೀಗ ಮುಂಗಡ ಟಿಕೆಟ್ ಬುಕಿಂಗ್ ಅವಧಿಯನ್ನು 120 ದಿನದಿಂದ 60 ದಿನಕ್ಕೆ ಇಳಿಸಿದೆ.

ರೈಲ್ವೆಯ ಈ ಹೊಸ ಮುಂಗಡ ಟಿಕೆಟ್ ಬುಕಿಂಗ್ ನೀತಿ ನವೆಂಬರ್ 1ರಿಂದ ಜಾರಿಗೆ ಬರಲಿದೆ. ಹಳೆಯ 120 ದಿನಗಳ ಮುಂಗಡ ಟಿಕೆಟ್ ಬುಕಿಂಗ್ ಸೌಕರ್ಯ ಬಳಸಿ ಅಕ್ಟೋಬರ್ 31ರವರೆಗೂ ಆಗಿರುವ ಬುಕಿಂಗ್ ಮೇಲೆ ಇದು ಪರಿಣಾಮ ಬೀರುವುದಿಲ್ಲ. ನವೆಂಬರ್ 1 ಹಾಗೂ ನಂತರದ ದಿನದ ಬುಕಿಂಗ್​ಗಳು ಅಸಿಂಧುಗೊಳ್ಳಬಹುದು. ನೀವು ಸೆಪ್ಟೆಂಬರ್ 1ರಿಂದ 120 ದಿನಗಳ ಮುಂಗಡ ಬುಕಿಂಗ್ ಫೀಚರ್ ಬಳಸಿ ಟಿಕೆಟ್ ಕಾಯ್ದಿರಿಸಿದ್ದರೆ ಅದನ್ನು ರದ್ದುಗೊಳಿಸಬೇಕಾಗಬಹುದು.

ಇದನ್ನೂ ಓದಿ: ಅಸ್ಸಾಂನಲ್ಲಿ ಹಳಿ ತಪ್ಪಿದ ಎಕ್ಸ್​ಪ್ರೆಸ್​​ ರೈಲಿನ 8 ಬೋಗಿಗಳು

ಗೋಮತಿ ಎಕ್ಸ್​ಪ್ರೆಸ್, ತಾಜ್ ಎಕ್ಸ್​ಪ್ರೆಸ್ ಇತ್ಯಾದಿ ಕೆಲ ರೈಲುಗಳಲ್ಲಿ ಈ ಮೊದಲಿಂದಲೂ 60 ದಿನಗಳ ಮುಂಗಡ ಟಿಕೆಟ್ ಬುಕಿಂಗ್ ಸೌಲಭ್ಯ ಇದೆ. ಭಾರತೀಯ ರೈಲ್ವೆ ಸಂಸ್ಥೆಯ ನೂತನ ನಿರ್ಧಾರವು ಈ ಮೇಲಿನ ಟ್ರೈನುಗಳ ಟಿಕೆಟ್ ಬುಕಿಂಗ್ ಮೇಲೆ ಪರಿಣಾಮ ಬೀರುವುದಿಲ್ಲ.

ಭಾರತೀಯ ರೈಲ್ವೆಯ ಹೊಸ ಟಿಕೆಟ್ ಬುಕಿಂಗ್ ನೀತಿಯಿಂದ ಏನು ಪರಿಣಾಮ?

ಬಹಳಷ್ಟು ಪ್ರಯಾಣಿಕರು ಟಿಕೆಟ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಮೂರು ತಿಂಗಳ ಮುನ್ನವೇ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುತ್ತಾರೆ. ಮೂರು ತಿಂಗಳ ಅವಧಿ ಬಹಳ ದೊಡ್ಡದಾಗಿದ್ದು, ಯಾವುದೇ ಪ್ರಯಾಣವನ್ನು ಅಷ್ಟು ಮುಂಗಡವಾಗಿ ಪ್ಲಾನ್ ಮಾಡುವುದು ಕಷ್ಟವಾಗುತ್ತದೆ. ರಜೆ ಸಿಗದೇ ಹೋಗುವುದೋ, ಮತ್ತೇನೋ ಅಡಚಣೆಗಳಾಗಬಹುದು. ಈ ಅಂಶಕ್ಕೆ ಇಂಬು ಕೊಡುವಂತೆ, 61 ದಿನದಿಂದ 120 ದಿನಗಳಷ್ಟು ಮುಂಗಡವಾಗಿ ಕಾಯ್ದಿರಿಸಲಾದ ಟಿಕೆಟ್​ಗಳಲ್ಲಿ ಶೇ. 21ರಷ್ಟು ಟೆಕೆಟ್​ಗಳು ರದ್ದುಗೊಳ್ಳುತ್ತಿವೆಯಂತೆ. ಹಾಗೆಯೇ, ಶೇ. 5ರಷ್ಟು ಇಂಥ ಟಿಕೆಟ್​ದಾರರು ಟಿಕೆಟ್ ಕೂಡ ರದ್ದು ಮಾಡದೆ, ಪ್ರಯಾಣವನ್ನೂ ಮಾಡದೇ ಉಳಿಯುತ್ತಿರುವುದು ಕಂಡು ಬಂದಿದೆ. ಹೀಗಾಗಿ, ಭಾರತೀಯ ರೈಲ್ವೆ ಇಷ್ಟು ದೀರ್ಘಾವಧಿ ಮುಂಗಡ ಟಿಕೆಟ್ ಬುಕಿಂಗ್ ಅನಗತ್ಯ ಮತ್ತು ಅಸಮರ್ಪಕ ಎಂದು ಭಾವಿಸಿ ಈ ನಿರ್ಧಾರ ತೆಗೆದುಕೊಂಡಿರಬಹುದು.

ಇದನ್ನೂ ಓದಿ: ಸತತ ನಾಲ್ಕನೇ ದಿನವೂ ಷೇರುಮಾರುಕಟ್ಟೆ ಅಲುಗಾಡಲು ಏನು ಕಾರಣ?

ಭಾರತೀಯ ರೈಲ್ವೆ ಈ ಹಿಂದೆಯೂ ಕೂಡ ಮುಂಗಡ ಟಿಕೆಟ್ ಬುಕಿಂಗ್ ಅವಧಿಯಲ್ಲಿ ಬದಲಾವಣೆಗಳನ್ನು ಮಾಡಿದ್ದಿದೆ. ಆಯಾ ಸಂದರ್ಭದ ಅಗತ್ಯಗಳಿಗೆ ತಕ್ಕಂತೆ ರೈಲ್ವೆ ಇಲಾಖೆ ಈ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. 1995ರ ಸೆಪ್ಟೆಂಬರ್ 1ರಿಂದ 1998ರ ಫೆಬ್ರುವರಿ 1ರವರೆಗೂ ಅಡ್ವಾನ್ಸ್ ರಿಸರ್ವೇಶನ್ ಪೀರಿಯಡ್ (ಎಆರ್​ಪಿ) 30 ದಿನಗಳಷ್ಟೇ ಇತ್ತು. ಬೇರೆ ಬೇರೆ ಸಂದರ್ಭಗಳಲ್ಲಿ ಈ ಅವಧಿಯನ್ನು 30, 45, 60, 90 ಮತ್ತು 120 ದಿನಗಳಿಗೆ ಬದಲಾಯಿಸುತ್ತಾ ಬರಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ