ಸತತ ನಾಲ್ಕನೇ ದಿನವೂ ಷೇರುಮಾರುಕಟ್ಟೆ ಅಲುಗಾಡಲು ಏನು ಕಾರಣ?

Stock market downfall reasons: ಭಾರತದ ಷೇರು ಮಾರುಕಟ್ಟೆ ಸತತ ನಾಲ್ಕನೇ ದಿನ ಕುಸಿತ ಕಂಡಿದೆ. ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆದಾರರು ಆತುರಾತುರವಾಗಿ ಮಾರುಕಟ್ಟೆಯಿಂದ ಬಂಡವಾಳ ಹಿಂಪಡೆಯುತ್ತಿದ್ದಾರೆ. ಇದರಿಂದ ಎಸ್​ಎಸ್​ಇ ಮತ್ತು ಬಿಎಸ್​ಇನ ಪ್ರಮುಖ ಸೂಚ್ಯಂಕಗಳು ಹಿನ್ನಡೆ ಕಂಡಿವೆ. ಅಮೆರಿಕದ ಚುನಾವಣೆ, ಭಾರತದ ಕೆಲ ರಾಜ್ಯಗಳ ಚುನಾವಣೆ, ಇಸ್ರೇಲ್ ಯುದ್ಧಭೀತಿ ಇತ್ಯಾದಿ ನಾನಾ ಕಾರಣಗಳು ಒಂದಿಲ್ಲೊಂದು ರೀತಿಯಲ್ಲಿ ಪೇಟೆ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿರುವಂತಿದೆ.

ಸತತ ನಾಲ್ಕನೇ ದಿನವೂ ಷೇರುಮಾರುಕಟ್ಟೆ ಅಲುಗಾಡಲು ಏನು ಕಾರಣ?
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 18, 2024 | 11:09 AM

ನವದೆಹಲಿ, ಅಕ್ಟೋಬರ್ 18: ಷೇರು ಮಾರುಕಟ್ಟೆಯಲ್ಲಿ ನಿರೀಕ್ಷೆ ಮೀರಿದ ಅಲುಗಾಟ ನಡೆಯುವುದು ಮುಂದುವರಿದಿದೆ. ಈ ವಾರ ಬಹುತೇಕ ದಿನಗಳು ಮಾರುಕಟ್ಟೆ ಒಟ್ಟಾರೆ ಕೆಂಪು ಬಣ್ಣ ಪಡೆದಿದೆ. ಮಂಗಳವಾರದಿಂದ ಹಿಡಿದು ಇವತ್ತು ಶುಕ್ರವಾರದವರೆಗೆ ಸತತ ನಾಲ್ಕು ದಿನ ಪ್ರಮುಖ ಸೂಚ್ಯಂಕಗಳು ಹಿನ್ನಡೆ ಕಂಡಿವೆ. ಇಂದು ಸುಕ್ರವಾರ ನಿಫ್ಟಿ 50 ಸೂಚ್ಯಂಕ ಬೆಳಗ್ಗೆನ ವಹಿವಾಟಿನಲ್ಲಿ 24,567 ಅಂಕಗಳ ಮಟ್ಟದವರೆಗೂ ಕುಸಿತ ಕಂಡಿತ್ತು. ಬಳಿಕ ಚೇತರಿಸಿಕೊಂಡರೂ ನಿನ್ನೆಗಿಂತ ಎಂಟತ್ತು ಅಂಕಗಳಷ್ಟು ಕಡಿಮೆ ಮಟ್ಟದಲ್ಲಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್ ಸೇರಿದಂತೆ ಹೆಚ್ಚಿನ ಸೂಚ್ಯಂಕಗಳೂ ಕೂಡ ಹಿನ್ನಡೆ ಕಂಡಿವೆ.

ಷೇರು ಮಾರುಕಟ್ಟೆ ಹಿನ್ನಡೆ ಕಾಣಲು ಏನು ಕಾರಣ?

ಈ ಬಾರಿ ಮಾರ್ಕೆಟ್ ಕರೆಕ್ಷನ್ ಬಹಳ ಆಳವಾಗಿ ನಡೆಯುತ್ತದೆ ಎಂದು ಕೆಲ ತಿಂಗಳ ಹಿಂದೆ ಕೆಲವರು ಭವಿಷ್ಯ ನುಡಿದಿದ್ದರು. ಅದು ನಿಜವೋ ಅಥವಾ ಕಾಕತಾಳೀಯವೋ ಎಂಬಂತೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಆತುರದ ಮಾರಾಟ ಕಾಣಸಿಗುತ್ತಿದೆ. ಅದರಲ್ಲೂ ವಿದೇಶೀ ಸಾಂಸ್ಥಿಕ ಹೂಡಿಕೆದಾರರು (ಎಫ್​ಪಿಐ) ಭಾರತೀಯ ಷೇರುಗಳನ್ನು ಎಗ್ಗಿಲ್ಲದೇ ಮಾರಾಟ ಮಾಡುತ್ತಿದ್ದಾರೆ.

ಜಾಗತಿಕವಾಗಿ ವಿವಿಧ ಮಾರುಕಟ್ಟೆಗಳಲ್ಲಿ ಅನಿಶ್ಚಿತತೆ ಇರುವುದರಿಂದ ಹೂಡಿಕೆದಾರರು ಷೇರುಗಳನ್ನು ಬಂದಷ್ಟು ಲಾಭಕ್ಕೆ ಮಾರಿಕೊಳ್ಳುತ್ತಿರುವಂತೆ ತೋರುತ್ತಿದೆ.

ಇದನ್ನೂ ಓದಿ: ನೇರ ತೆರಿಗೆ ಸಂಗ್ರಹ, 2014ರಲ್ಲಿ 6.96 ಕೋಟಿ ರೂ, 2023ರಲ್ಲಿ 19.60 ಲಕ್ಷ ಕೋಟಿ ರೂ; ಸರ್ಕಾರಕ್ಕೆ ಹತ್ತು ವರ್ಷದಲ್ಲಿ ತೆರಿಗೆ ಸುಗ್ಗಿ

ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ನಿರೀಕ್ಷೆಯಲ್ಲಿ….

ಸಾಮಾನ್ಯವಾಗಿ ಎಫ್​ಪಿಐಗಳ ಹೂಡಿಕೆ ಹೊರಹೋಗಿ ಮಾರುಕಟ್ಟೆ ಕುಸಿದಾಗ, ಅದರ ಕೈ ಹಿಡಿಯುವು ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ). ಈ ಬಾರಿ ನಿರೀಕ್ಷಿತ ರೀತಿಯಲ್ಲಿ ಡಿಐಐಗಳಿಂದ ಹೂಡಿಕೆ ಬಂದಿಲ್ಲ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಏನಾಗಬಹುದು ಎಂಬ ಸಂದಿಗ್ಧತೆಯಲ್ಲಿ ಹೂಡಿಕೆದಾರರು ಕಾದು ನೋಡುತ್ತಿರಬಹುದು.

ವಿವಿಧ ಕಂಪನಿಗಳ ಲಾಭದ ವರದಿ ನಿರೀಕ್ಷಿತ ಮಟ್ಟದಲ್ಲಿಲ್ಲದಿರುವುದು

ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್​ನ ಲಾಭ ನಷ್ಟದ ವರದಿಗಳನ್ನು ವಿವಿಧ ಪ್ರಮುಖ ಕಂಪನಿಗಳು ಬಿಡುಗಡೆ ಮಾಡಿವೆ. ಹೆಚ್ಚಿನವುಗಳ ವರದಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಇದು ಹೂಡಿಕೆದಾರರ ಹುಮ್ಮಸ್ಸನ್ನು ಕುಂದಿಸಿರಬಹುದು ಎನ್ನುವ ಭಾವನೆ ಇದೆ.

ಇದನ್ನೂ ಓದಿ: Aadhaar Card Update: ಆಧಾರ್ ಕಾರ್ಡ್ ಅಪ್​ಡೇಟ್ ಗಡುವು ವಿಸ್ತರಣೆ; ನೀವು ತಿಳಿಯಲೇಬೇಕಾದ ವಿಷಯಗಳಿವು

ರುಪಾಯಿ ಮೌಲ್ಯ ಕುಸಿತ…

ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಿದೆ. ಇದರ ಪರಿಣಾಮ ವಿವಿಧ ಸ್ತರಗಳಲ್ಲಿ ಆಗಬಲ್ಲುದು. ಮುಖ್ಯವಾಗಿ ವಿತ್ತೀಯ ಕೊರತೆ ಹೆಚ್ಚಿಸಲು ಇದು ಎಡೆ ಮಾಡಿಕೊಡಬಹುದು. ದೂರಗಾಮಿ ದೃಷ್ಟಿಯಿಂದ ಇದು ತುಸು ಹಿನ್ನಡೆ ತರುವ ಸಾಧ್ಯತೆ ಇದೆ. ಒಟ್ಟಾರೆ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಅಂಶವೂ ಹೂಡಿಕೆದಾರರನ್ನು ಧೈರ್ಯಗೆಡಿಸಿರಬಹುದು.

ಈ ವೇಳೆ, ಅಮೆರಿಕದ ಚುನಾವಣೆ, ಇಸ್ರೇಲ್ ಇರಾನ್ ಯುದ್ಧಭೀತಿ ಇತ್ಯಾದಿ ಜಾಗತಿಕ ರಾಜಕೀಯ ವಿದ್ಯಮಾನಗಳೂ ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ