ರತನ್ ಟಾಟಾ ವೈಯಕ್ತಿಕ ಆಸ್ತಿ ಯಾರಿಗೆ? ಅವರ ಕೊನೆಯಾಸೆ ಈಡೇರಿಸುವ ಜವಾಬ್ದಾರಿ ನಾಲ್ವರಿಗೆ ವಹಿಸಿದ್ದ ಟಾಟಾ

Ratan Tata's will details: ರತನ್ ಟಾಟಾ ಅವರು ಸಾಯುವ ಮುನ್ನ ಉಯಿಲು ಬರೆದಿಟ್ಟಿದ್ದು, ಅದರನ್ನು ಆಚರಣೆಗೆ ತರುವ ಹೊಣೆ ನಾಲ್ವರಿಗೆ ವಹಿಸಿದ್ದರು. ಉಯಿಲು ಬರೆಯಲು ನೆರವಾದ ವಕೀಲರಿಂದ ಹಿಡಿದು ತಮ್ಮ ಇಬ್ಬರು ಕಿರಿಯ ಸೋದರಿಯರಿಗೆ ಆ ಜವಾಬ್ದಾರಿ ಕೊಟ್ಟಿದ್ದರು ರತನ್ ಟಾಟಾ.

ರತನ್ ಟಾಟಾ ವೈಯಕ್ತಿಕ ಆಸ್ತಿ ಯಾರಿಗೆ? ಅವರ ಕೊನೆಯಾಸೆ ಈಡೇರಿಸುವ ಜವಾಬ್ದಾರಿ ನಾಲ್ವರಿಗೆ ವಹಿಸಿದ್ದ ಟಾಟಾ
ರತನ್ ಟಾಟಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 18, 2024 | 12:55 PM

ಮುಂಬೈ, ಅಕ್ಟೋಬರ್ 18: ರತನ್ ಟಾಟಾ ಹತ್ತು ದಿನಗಳ ಹಿಂದೆ ನಿಧನ ಹೊಂದುವ ಮೂಲಕ ತಮ್ಮ ಹಲವು ಬಂಧು ಬಳಗವನ್ನು ಅಗಲಿರುವು ಜೊತೆಗೆ ಸಾವಿರಾರು ಕೋಟಿ ರೂ ಮೌಲ್ಯದ ವೈಯಕ್ತಿಕ ಸಂಪತ್ತನ್ನೂ ಬಿಟ್ಟುಹೋಗಿದ್ದಾರೆ. ಅವರ ಷೇರುಪಾಲುಗಳೆಲ್ಲವನ್ನೂ ಸೇರಿಸಿದರೆ ವೈಯಕ್ತಿಕ ಸಂಪತ್ತಿನ ಮೌಲ್ಯ ಬರೋಬ್ಬರಿ 7,900 ಕೋಟಿ ರೂ ಆಗುತ್ತದೆ. ಅವರಿಗೆ ಮಕ್ಕಳಿಲ್ಲದಿರುವುದರಿಂದ ಅವರ ಆಸ್ತಿಪಾಸ್ತಿಗೆ ವಾರಸುದಾರರು ಯಾರು ಎಂಬುದು ಕುತೂಹಲ ಇದೆ. ವರದಿಗಳ ಪ್ರಕಾರ ರತನ್ ಟಾಟಾ ಅವರು ಉಯಿಲು ಬರೆದಿಟ್ಟಿರುವುದು ತಿಳಿದುಬಂದಿದೆ.

ರತನ್ ಟಾಟಾ ಬರೆದಿರುವ ವಿಲ್​ನಲ್ಲಿ ಏನಿದೆ ಎನ್ನುವ ವಿವರ ಸಾರ್ವಜನಿಕವಾಗಿ ಲಭ್ಯ ಇಲ್ಲ. ಈ ಉಯಿಲಿನಲ್ಲಿರುವ ಅಂಶಗಳನ್ನು ಜಾರಿಗೆ ತರುವ ಜವಾಬ್ದಾರಿಯನ್ನು ರತನ್ ಟಾಟಾ ಅವರು ನಾಲ್ವರಿಗೆ ವಹಿಸಿದ್ದಾರೆ. ವಕೀಲರಾದ ಡೇರಿಯಸ್ ಖಂಬಟ್ಟ, ತಮ್ಮ ಆಪ್ತ ಸ್ನೇಹಿತರಾದ ಮೆಹ್ಲಿ ಮಿಸ್ತ್ರಿ, ತಂಗಿಯರಾದ ಶಿರೀನ್ ಜೀಜೀಭೋಯ್ ಮತ್ತು ಡಿಯಾನಾ ಜೀಜೀಭೋಯ್, ಈ ನಾಲ್ವರಿಗೆ ಟಾಟಾ ಉಯಿಲನ್ನು ಕಾರ್ಯಗತಗೊಳಿಸು ಹೊಣೆಗಾರಿಕೆ ಇದೆ.

ಇದನ್ನೂ ಓದಿ: ಭಾರತವನ್ನು ಮಟ್ಟಹಾಕಲು ಚೀನಾದ ಜಲಾಸ್ತ್ರ? ವಿಶ್ವದ ಅತಿದೊಡ್ಡ ಹೈಡ್ರೊಪವರ್ ಪ್ರಾಜೆಕ್ಟ್ ಆದ್ರೆ ಏನು ಗತಿ?

ವಕೀಲರಾದ ಡೇರಿಯಸ್ ಖಂಬಟ ಅವರು ಈ ಉಯಿಲು ಬರೆಯಲು ರತನ್ ಟಾಟಾ ಅವರಿಗೆ ನೆರವಾದವರು ಎನ್ನಲಾಗಿದೆ. ಖಂಬಟ ಅವರು ಎರಡು ಪ್ರಮುಖ ಟಾಟಾ ಟ್ರಸ್ಟ್​ಗಳ ಟ್ರಿಸ್ಟಿಗಳಲ್ಲಿ ಒಬ್ಬರಾಗಿದ್ದಾರೆ. ರತನ್ ಟಾಟಾ ಬಹಳ ವಿಶ್ವಾಸ ಇರಿಸಿದ ವ್ಯಕ್ತಿಗಳಲ್ಲಿ ಇವರೂ ಒಬ್ಬರು.

ಇನ್ನು, ಮೆಹ್ಲಿ ಮಿಸ್ತ್ರಿ ಅವರು ರತನ್ ಟಾಟಾ ಅತ್ಯಂತ ನಂಬುವ ಸ್ನೇಹಿತ. ಇವರದ್ದು ದೀರ್ಘಕಾಲದ ಗೆಳೆತನ. 2016ರಲ್ಲಿ ಟಾಟಾ ಸನ್ಸ್ ಛೇರ್ಮನ್ ಸ್ಥಾನದಿಂದ ಉಚ್ಛಾಟಿಸಲಾಗಿದ್ದ ಸೈರಸ್ ಮಿಸ್ತ್ರಿ ಅವರ ಚಿಕ್ಕಪ್ಪನ ಮಗ ಈ ಮೆಹ್ಲಿ ಮಿಸ್ತ್ರಿ. ಸೈರಸ್​ರನ್ನು ಅವಮಾನ ರೀತಿಯಲ್ಲಿ ಉಚ್ಚಾಟಿಸಲಾದರೂ ರತನ್ ಟಾಟಾ ಮತ್ತು ಮೆಹ್ಲಿ ಮಿಸ್ತ್ರಿ ಗೆಳೆತನದ ಶಕ್ತಿ ಕುಂದಿರಲಿಲ್ಲ.

ಕಿರಿಯ ತಂಗಿಯ ಮೇಲೆ ಟಾಟಾಗೆ ಭಾರೀ ಪ್ರೀತಿ…

ರತನ್ ಟಾಟಾ ತಮ್ಮ ಉಯಿಲನ್ನು ಆಚರಣೆಗೆ ತರಲು ಜವಾಬ್ದಾರಿ ಕೊಟ್ಟಿರುವ ನಾಲ್ಕು ವ್ಯಕ್ತಿಗಳಲ್ಲಿ ಶಿರೀನ್ ಮತ್ತು ಡಿಯಾನಾ ಇದ್ದಾರೆ. ಇವರು ರತನ್ ಟಾಟಾ ಅವರಿಗೆ ಸಂಬಂಧದಲ್ಲಿ ಸೋದರಿಯರಾಗಬೇಕು. ರತನ್ ಟಾಟಾ ಅವರಿಗೆ ಜನ್ಮಕೊಟ್ಟಿದ್ದ ಸೋನೂ ಟಾಟಾ ಅವರು ಬೇರೆ ವ್ಯಕ್ತಿಯೊಂದಿಗೆ ಎರಡನೇ ಮದುವೆಯಾಗಿದ್ದರು. ಆ ಎರಡನೇ ಸಂಸಾರದಲ್ಲಿ ಹುಟ್ಟಿದವರೇ ಶಿರೀನ್ ಜೆಜೀಭೋಯ್ ಮತ್ತು ಡಿಯಾನ್ನಾ ಜೆಜೀಭೋಯ್. ಇವರ ಪೈಕಿ ಡಿಯಾನಾ ಜೆಜೀಭೋಯ್ ಅವರನ್ನು ಕಂಡರೆ ರತನ್ ಟಾಟಾಗೆ ವೈಯಕ್ತಿಕವಾಗಿ ಹೆಚ್ಚು ಮಮಕಾರ ಇತ್ತು ಎನ್ನಲಾಗಿದೆ.

ಇದನ್ನೂ ಓದಿ: ಗಮನಿಸಿ, ಮುಂಗಡ ರೈಲು ಟಿಕೆಟ್ ಬುಕಿಂಗ್ ಅವಧಿ ಈಗ 60 ದಿನ ಮಾತ್ರ; ಮೂರು ತಿಂಗಳ ಮುಂಚೆ ಬುಕಿಂಗ್ ಅಸಾಧ್ಯ

ರತನ್ ಟಾಟಾ ಉಯಿಲಿನಲ್ಲಿ ಏನಿದೆ?

ಆಗಲೇ ಹೇಳಿದಂತೆ ರತನ್ ಟಾಟಾ ಅವರ ವಿಲ್ ಅಥವಾ ಉಯಿಲಿನ ವಿವರ ಸಾರ್ವತ್ರಿಕವಾಗಿ ಲಭ್ಯ ಇಲ್ಲ. ಈ ವಿಲ್​ನಲ್ಲಿ ಬರೆದಿರುವ ಪ್ರಕಾರ ಆಸ್ತಿಗಳನ್ನು ಹಂಚಿಕೆ ಮಾಡಬೇಕಾಗುತ್ತದೆ. ಒಂದು ವೇಳೆ ವಿಲ್​ನಲ್ಲಿ ಕೆಲ ಆಸ್ತಿಗಳ ಹಂಚಿಕೆ ಬಗ್ಗೆ ನಿರ್ದಿಷ್ಟಪಡಿಸದೇ ಹೋದ ಸಂದರ್ಭದಲ್ಲಿ, ವೈಯಕ್ತಿಕ ಕಾನೂನು ಪ್ರಕಾರ ಅದನ್ನು ಹಂಚಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ