ಬೆಂಗಳೂರು, ಡಿಸೆಂಬರ್ 21: ಬೆಂಗಳೂರಿನಿಂದ ಕೊಯಮತ್ತೂರಿಗೆ ಹೋಗಿ ಬರುವ ಪ್ರಯಾಣಿಕರಿಗೆ ಈಗ ಎರಡನೇ ರೈಲು ಸಿಗುತ್ತಿದೆ. ಉದಯ್ ಎಕ್ಸ್ಪ್ರೆಸ್ ರೈಲಿನ ಜೊತೆಗೆ ಈಗ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (Vande Bharat Express Train) ಈ ಮಾರ್ಗದಲ್ಲಿ ಸಂಚರಿಸಲಿದೆ. ಈ ತಿಂಗಳ ಅಂತ್ಯದ ಒಳಗೆ (ಡಿಸೆಂಬರ್ನೊಳಗೆ) ವಂದೇ ಭಾರತ್ ಎಕ್ಸ್ಪ್ರೆಸ್ ರೈಲೊಂದು ಇಲ್ಲಿ ಸೇವೆ ಆರಂಭಿಸಲಿದೆ. ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದ ಪಿ.ಸಿ. ಮೋಹನ್ ಈ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಕರ್ನಾಟಕಕ್ಕೆ ನಾಲ್ಕನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಿಕ್ಕಂತಾಗುತ್ತದೆ.
ಕೊಯಮತ್ತೂರಿನಿಂದ ಬಹಳಷ್ಟು ಜನರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬಹಳ ಅನುಕೂಲವಾಗಲಿದೆ. ಸದ್ಯ ಬೆಂಗಳೂರು ಮತ್ತು ಕೊಯಮತ್ತೂರು ನಡುವೆ ಸಂಚರಿಸುತ್ತಿರುವ ಉದಯ್ ಎಕ್ಸ್ಪ್ರೆಸ್ ರೈಲು 7 ಗಂಟೆ ತೆಗೆದುಕೊಳ್ಳುತ್ತದೆ. ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಒಂದೆರಡು ಗಂಟೆ ಬೇಗ ತಲುಪಲಿದೆ.
ಇದನ್ನೂ ಓದಿ: GST Act: ನ್ಯಾಯಮಂಡಳಿ ನೇಮಕಾತಿ ನಿಯಮದಲ್ಲಿ ತಾಳಮೇಳ ತರಲು ಜಿಎಸ್ಟಿ ಕಾಯ್ದೆ ತಿದ್ದುಪಡಿ ಮಸೂದೆ ತಂದ ಸರ್ಕಾರ
ಕರ್ನಾಟಕದಲ್ಲಿ ಸದ್ಯ ಮೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಸೇವೆ ಇದೆ. ಮೈಸೂರಿನಿಂದ ಚೆನ್ನೈ ನಡುವೆ ಒಂದು ರೈಲು ಸಾಗುತ್ತದೆ. ಇದು ಬೆಂಗಳೂರು ಮೂಲಕ ಹೋಗುತ್ತದೆ. ಇನ್ನೊಂದು ರೈಲು ಬೆಂಗಳೂರಿನಿಂದ ಹೈದರಾಬಾದ್ಗೆ ಹೋಗುತ್ತದೆ. ಮೂರನೇ ರೈಲು ಬೆಂಗಳೂರಿನಿಂದ ಹುಬ್ಬಳ್ಳಿ, ಧಾರವಾಡ ಮುಖಾಂತರ ಬೆಳಗಾವಿವರೆಗೂ ಹೋಗುತ್ತದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಸಾಮಾನ್ಯ ರೈಲಿಗಿಂತ ಹೆಚ್ಚು ವೇಗದಲ್ಲಿ ಸಂಚರಿಸುವಂತೆ ರೂಪಿಸಲಾಗಿದೆ. ಇದರ ವಿನ್ಯಾಸ ಉತ್ತಮವಾಗಿದೆ. ಟಿಕೆಟ್ ಬೆಲೆಯೂ ಹೆಚ್ಚು. ಭಾರತದಲ್ಲಿ ಒಟ್ಟು 400ರಿಂದ 450 ವಂದೇ ಭಾರತ್ ರೈಲುಗಳಿವೆ. ಪ್ರತೀ ವರ್ಷವೂ 200ರಿಂದ 250 ಹೊಸ ರೈಲುಗಳನ್ನು ತಯಾರಿಸುವ ಸಾಮರ್ಥ್ಯ ಭಾರತೀಯ ರೈಲ್ವೆಗೆ ಇದೆ.
ಇದನ್ನೂ ಓದಿ: Inspiring: ಕಾಲೇಜು ಅರ್ಧಕ್ಕೆ ಬಿಟ್ಟು ಸ್ವಂತ ಕಂಪನಿ ಕಟ್ಟಿದ ಬೆಂಗಳೂರು ಹುಡುಗ; ಬಾಲಿವುಡ್ ಸಿನಿಮಾ ಆಗಿದೆ ಇವರ ಸಾಹಸ
ಮುಂದಿನ ನಾಲ್ಕು ವರ್ಷದಲ್ಲಿ ಭಾರತೀಯ ರೈಲ್ವೆ ಒಟ್ಟು 3,000 ಹೊಸ ರೈಲುಗಳನ್ನು (ಎಲ್ಲಾ ರೈಲು) ಬಿಡುಗಡೆ ಮಾಡಲು ಯೋಜಿಸಿದೆ. ಸದ್ಯ ಇರುವ ರೈಲುಗಳಲ್ಲಿ 800 ಕೋಟಿ ಪ್ರಯಾಣಿಕರು ಸಂಚರಿಸಬಹುದಾಗಿದೆ. 3,000 ಹೊಸ ರೈಲುಗಳು ಬಂದರೆ ಇದು 1,000 ಕೋಟಿ ಪ್ರಯಾಣಿಕ ಸಂಖ್ಯೆಗೆ ಏರಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ