AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar BIG News: ಆಧಾರ್ ಕಾರ್ಡ್ ಮಾಡಿಸಿಲ್ಲವಾ? ಬಂದಿದೆ ಪಾಸ್​ಪೋರ್ಟ್ ಮಾದರಿ ವೆರಿಫಿಕೇಶನ್ ಪ್ರಕ್ರಿಯೆ

Passport Like Verification for Aadhaar: ಮೊದಲ ಬಾರಿಗೆ ಆಧಾರ್ ಕಾರ್ಡ್ ಮಾಡಿಸುತ್ತಿರುವ 18 ವರ್ಷ ಮೇಲ್ಪಟ್ಟ ವಯಸ್ಸಿನ ಜನರಿಗೆ ಪಾಸ್​ಪೋರ್ಟ್ ಮಾದರಿಯಲ್ಲಿ ವೆರಿಫಿಕೇಶನ್ ಪ್ರಕ್ರಿಯೆ ಇರುತ್ತದೆ. ಆಧಾರ್ ಕಾರ್ಡ್​ಗೆ ಮನವಿ ಸಲ್ಲಿಸಿದ ಬಳಿಕ ಡಾಟಾ ಕ್ವಾಲಿಟಿ ಪರಿಶೀಲನೆ ಆಗಿ, ನಂತರ ಸರ್ವಿಸ್ ಪೋರ್ಟಲ್​ನಲ್ಲಿ ವೆರಿಫಿಕೇಶನ್ ಆಗುತ್ತದೆ. ಆಧಾರ್​ಗೆ ಅರ್ಜಿ ಸಲ್ಲಿಸಿದ 180 ದಿನದಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದು ಆಧಾರ್ ಕಾರ್ಡ್ ಕೈ ಸೇರುತ್ತದೆ. ಅದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ.

Aadhaar BIG News: ಆಧಾರ್ ಕಾರ್ಡ್ ಮಾಡಿಸಿಲ್ಲವಾ? ಬಂದಿದೆ ಪಾಸ್​ಪೋರ್ಟ್ ಮಾದರಿ ವೆರಿಫಿಕೇಶನ್ ಪ್ರಕ್ರಿಯೆ
ಆಧಾರ್​
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 21, 2023 | 12:37 PM

Share

ನವದೆಹಲಿ, ಡಿಸೆಂಬರ್ 21: ಆಧಾರ್ ಕಾರ್ಡ್ ಮಾಡಿಸುವ ಪ್ರಕ್ರಿಯೆ ಇನ್ಮುಂದೆ ಬದಲಾಗುತ್ತಿದೆ. ಪಾಸ್​ಪೋರ್ಟ್ ಮಾಡಿಸುವಾಗ ಇರುವ ರೀತಿಯಲ್ಲಿ ಆಧಾರ್​ಗೂ ವೆರಿಫಿಕೇಶನ್ ಪ್ರಕ್ರಿಯೆ (passport like verification process) ಇರಲಿದೆ. ಯುಐಡಿಎಐ ಸಂಸ್ಥೆ ಹೊರಡಿಸಿರುವ ಪ್ರಕಟಣೆ ಪ್ರಕಾರ 18 ವರ್ಷ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳು ಮೊದಲ ಬಾರಿಗೆ ಆಧಾರ್ ಕಾರ್ಡ್ ಮಾಡಿಸುವಾಗ ಫಿಸಿಕಲ್ ವೆರಿಫಿಕೇಶನ್​ಗೆ ಒಳಪಡಬೇಕಾಗುತ್ತದೆ ಎಂದು ಹೇಳಲಾಗಿದೆ.

‘18 ವರ್ಷ ಮೇಲ್ಪಟ್ಟ ವಯಸ್ಸಿನವರು ಮೊದಲ ಬಾರಿಗೆ ಆಧಾರ್ ಮಾಡಿಸಬೇಕೆಂದರೆ ಪಾಸ್​ಪೊರ್ಟ್ ರೀತಿ ವೆರಿಫಿಕೇಶನ್ ವ್ಯವಸ್ಥೆ ಜಾರಿಯಲ್ಲಿ ಇರುತ್ತದೆ,’ ಎಂದು ಯುಐಡಿಎಐ ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾಗಿ ಐಎಎನ್​ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ವೆರಿಫಿಕೇಶನ್ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದ ಪಾತ್ರವೂ ಇರುತ್ತದೆ.

ಆಧಾರ್ ವೆರಿಫಿಕೇಶನ್​ಗಾಗಿ ಜಿಲ್ಲಾ ಹಾಗೂ ಉಪ ವಿಭಾಗೀಯ ಮಟ್ಟಗಳಲ್ಲಿ ನೋಡಲ್ ಅಧಿಕಾರಿಗಳು, ಹೆಚ್ಚುವರಿ ಜಿಲ್ಲಾ ಮ್ಯಾಜಸ್ಟ್ರೇಟರ್​ಗಳನ್ನು ರಾಜ್ಯ ಸರ್ಕಾರಗಳೇ ನೇಮಕ ಮಾಡಲಿವೆ.

ಇದನ್ನೂ ಓದಿ: ಭಾರತದ ಆರ್ಥಿಕತೆ ಮತ್ತು ಹಣಕಾಸು ಕ್ಷೇತ್ರಕ್ಕೆ ಈ ವರ್ಷ ಹಣದುಬ್ಬರದಿಂದ ಆದ ಅನಾಹುತಗಳೇನು?

ಆಧಾರ್ ವೆರಿಫಿಕೇಶನ್ ಪ್ರಕ್ರಿಯೆ ಹೇಗೆ ಇರುತ್ತದೆ?

18 ವರ್ಷ ಮೇಲ್ಪಟ್ಟವರು ಮೊದಲ ಬಾರಿಗೆ ಆಧಾರ್ ಮಾಡಿಸುತ್ತಿದ್ದರೆ, ಅವರಿಗೆಂದೇ ನಿರ್ದಿಷ್ಟವಾಗಿರುವ ಕಚೇರಿಗಳಿರುತ್ತವೆ. ಯುಐಡಿಎಐ ನಿರ್ದಿಷ್ಟಪಡಿಸಿದ ಇಂಥ ಕೇಂದ್ರಗಳಲ್ಲಿ ಈ ವರ್ಗದ ಜನರು ಆಧಾರ್ ಮಾಡಿಸಬೇಕಾಗುತ್ತದೆ.

ಆಧಾರ್​ಗೆಂದು ಈ ವರ್ಗದ ಜನರು ಸಲ್ಲಿಸುವ ಅರ್ಜಿಯ ಡಾಟಾ ಕ್ವಾಲಿಟಿ ಪರಿಶೀಲನೆ ಆಗುತ್ತದೆ. ಸರ್ವಿಸ್ ಪೋರ್ಟಲ್​ನಲ್ಲಿ ವೆರಿಫಿಕೇಶನ್ ಪ್ರಕ್ರಿಯೆ ನಡೆಯುತ್ತದೆ. ಈ ಸರ್ವಿಸ್ ಪೋರ್ಟಲ್​ನಲ್ಲಿ ಎಲ್ಲಾ ಆಧಾರ್ ಮನವಿಗಳ ವೆರಿಫಿಕೇಶನ್ ಪ್ರಕ್ರಿಯೆ ನಡೆದು 180 ದಿನದೊಳಗೆ ಕ್ಲಿಯರೆನ್ಸ್ ಜನರೇಟ್ ಆಗುತ್ತದೆ. ಉಪವಿಭಾಗೀಯ ಮ್ಯಾಜಿಸ್ಟ್ರೇಟರ್​ಗಳು ಈ ಪ್ರಕ್ರಿಯೆ ನಿಗದಿತ ದಿನದೊಳಗೆ ಮುಗಿಯುವುದನ್ನು ಖಾತ್ರಿಪಡಿಸಬೇಕು.

ಇದನ್ನೂ ಓದಿ: GST Act: ನ್ಯಾಯಮಂಡಳಿ ನೇಮಕಾತಿ ನಿಯಮದಲ್ಲಿ ತಾಳಮೇಳ ತರಲು ಜಿಎಸ್​ಟಿ ಕಾಯ್ದೆ ತಿದ್ದುಪಡಿ ಮಸೂದೆ ತಂದ ಸರ್ಕಾರ

ಈ ರೀತಿಯ ವೆರಿಫಿಕೇಶನ್ ಪ್ರಕ್ರಿಯೆ ಮೊದಲ ಬಾರಿಗೆ ಆಧಾರ್ ಮಾಡಿಸುತ್ತಿರುವ 18 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಮಾತ್ರ ಅನ್ವಯ ಆಗುತ್ತದೆ. ಒಮ್ಮೆ ಈ ಪ್ರಕ್ರಿಯೆ ಮೂಲಕ ಆಧಾರ್ ಕಾರ್ಡ್ ಮಾಡಿಸಿದ ಬಳಿಕ ಅವರು ಆಧಾರ್ ಅಪ್​ಡೇಟ್ ಇತ್ಯಾದಿ ಕಾರ್ಯಗಳನ್ನು ಮಾಮೂಲಿಯಾಗಿಯೇ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್