ಲೈಂಗಿಕ ಅಲ್ಪಸಂಖ್ಯಾತರು ಮತ್ತು ಎಪ್ಪತ್ತು ವರ್ಷ ವಯಸ್ಸು ದಾಟಿದ ಪ್ರತಿಯೊಬ್ಬ ವ್ಯಕ್ತಿಯನ್ನೂ ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಗೆ ತರುವುದಾಗಿ ಭಾರತೀಯ ಜನತಾ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ (BJP election manifesto) ಭರವಸೆ ನೀಡಿದೆ. ಆಯುಷ್ಮಾನ್ ಭಾರತ್ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಕೀಮ್ಗಳಲ್ಲಿ ಒಂದಾಗಿದೆ. ಸದ್ಯಕ್ಕೆ ಇದು ಬಡವರು ಮತ್ತು ಎಸ್ಸಿ ಎಸ್ಟಿ ಜನರಿಗೆ ಲಭ್ಯ ಇರುವ ಸ್ಕೀಮ್ ಆಗಿದೆ. ಈಗ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ 70 ವರ್ಷ ವಯಸ್ಸಿನ ಎಲ್ಲಾ ಜನರಿಗೂ ಯೋಜನೆಯ (Ayushman Bharat scheme) ಲಾಭ ನೀಡಲಾಗುತ್ತದೆ ಎಂದು ಭರವಸೆ ನೀಡಿದೆ.
2018ರ ಸೆಪ್ಟಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರ ಅರಂಭಿಸಿದ ಯೋಜನೆ ಇದು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ವರ್ಷಕ್ಕೆ ಐದು ಲಕ್ಷ ರೂವರಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. ಇದರ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಭರಿಸಲಿವೆ. ಅಂದರೆ, ಕೇಂದ್ರ ಸರ್ಕಾರ ಶೇ. 60ರಷ್ಟು ವೆಚ್ಚ ಭರಿಸಿದರೆ, ರಾಜ್ಯ ಸರ್ಕಾರಗಳು ಶೇ. 40ರಷ್ಟು ಚಿಕಿತ್ಸಾ ವೆಚ್ಚ ನೋಡಿಕೊಳ್ಳುತ್ತವೆ.
ಇದನ್ನೂ ಓದಿ: ವೃದ್ಧರಿಗೆ ಉಚಿತ ಚಿಕಿತ್ಸೆ, ಬಡವರಿಗೆ ಉಚಿತ ಪಡಿತರ, ಬಿಜೆಪಿ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳಿವು
ಒಂದು ಕುಟುಂಬದಲ್ಲಿ ಫಲಾನುಭವಿಗಳಿಗೆ ಮಿರಿ ಇರುವುದಿಲ್ಲ. ಎಷ್ಟು ಜನರಿದ್ದರೂ, ಯಾವುದೇ ವಯಸ್ಸಿನವರಿದ್ದರೂ ಅವರೆಲ್ಲರಿಗೂ ಕವರೇಜ್ ಇರುತ್ತದೆ. ಆದರೆ ಕುಟುಂಬ ಸದಸ್ಯರು ಇಬ್ಬರಿರಲಿ ಅಥವಾ ಹತ್ತು ಇರಲಿ, ಕವರೇಜ್ ಮಿತಿ ವರ್ಷಕ್ಕೆ 5 ಲಕ್ಷ ರೂ ಮಾತ್ರವೇ ಇರುತ್ತದೆ.
ಬಹಳಷ್ಟು ಹೆಲ್ತ್ ಇನ್ಷೂರೆನ್ಸ್ ಕಂಪನಿಗಳು ಮೊದಲೇ ರೋಗಗಳಿದ್ದಲ್ಲಿ ಅಂಥವರಿಗೆ ಇನ್ಷೂರೆನ್ಸ್ ಕೊಡುವುದಿಲ್ಲ. ಆಯುಷ್ಮಾನ್ ಭಾರತ್ನಲ್ಲಿ ಇವರಿಗೆ ಕವರೇಜ್ ಇರುತ್ತದೆ.
ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲ, ಖಾಸಗಿ ಆಸ್ಪತ್ರೆಗಳಲ್ಲೂ ದಾಖಲಾಗಿ ಚಿಕಿತ್ಸೆ ಪಡೆಯಬಹುದು. ಕ್ಯಾಷ್ಲೆಸ್ ಟ್ರೀಟ್ಮೆಂಟ್ ಪಡೆಯಬಹುದು. ಕ್ಯಾನ್ಸರ್ ರೋಗ, ಕಿಡ್ನಿ, ಹೃದಯ ರೋಗ, ಸುಟ್ಟಗಾಯ ಇತ್ಯಾದಿ ರೋಗಗಳಿಗೆ ಚಿಕಿತ್ಸಾ ಕವರೇಜ್ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ