ಅಶ್ನೀರ್ ಗ್ರೋವರ್​ರಿಂದ ಹೊಸ ಸ್ಟಾರ್ಟಪ್; ಆಸ್ಪತ್ರೆ ಚಿಕಿತ್ಸೆಗೆ ಸಾಲ ಕೊಡುವ ಝೀರೋ ಪೇ; ಹೇಗೆ ಪಡೆಯುವುದು ಈ ಪ್ರೀ ಅಪ್ರೂವ್ಡ್ ಲೋನ್?

BhartPe, CrickPe Founder Ashneer Grover Starts ZeroPe: ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ಭರಿಸಲು ಇನ್ಷೂರೆನ್ಸ್ ಮಾಡಿಸಿಲ್ಲದೇ ಇರಬಹುದು. ವಿಮೆ ಇದ್ದರೂ ಕೆಲವೊಮ್ಮೆ ಆಸ್ಪತ್ರೆಯ ವೆಚ್ಚ ವಿಮಾ ಕವರೇಜ್ ಮಿತಿಗಿಂತ ಹೆಚ್ಚಾಗಬಹುದು. ಈ ಸಂದರ್ಭದಲ್ಲಿ ತುರ್ತು ಹಣಕ್ಕೆ ವ್ಯವಸ್ಥೆ ಮಾಡುವುದು ಕಷ್ಟವಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ಮೆಡಿಕಲ್ ಲೋನ್​ಗಳು ಸಹಾಯವಾಗುತ್ತವೆ. ಖ್ಯಾತ ಉದ್ಯಮಿ ಆಶ್ನೀರ್ ಗ್ರೋವರ್ ಅವರು ಝೀರೋಪೆ ಮುಖಾಂತರ ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

ಅಶ್ನೀರ್ ಗ್ರೋವರ್​ರಿಂದ ಹೊಸ ಸ್ಟಾರ್ಟಪ್; ಆಸ್ಪತ್ರೆ ಚಿಕಿತ್ಸೆಗೆ ಸಾಲ ಕೊಡುವ ಝೀರೋ ಪೇ; ಹೇಗೆ ಪಡೆಯುವುದು ಈ ಪ್ರೀ ಅಪ್ರೂವ್ಡ್ ಲೋನ್?
ಆಶ್ನೀರ್ ಗ್ರೋವರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 12, 2024 | 4:13 PM

ನವದೆಹಲಿ, ಏಪ್ರಿಲ್ 12: ಮೆಡಿಕಲ್ ಲೋನ್​ಗಳನ್ನು ನೀಡಲು ಈಗ ಬಹಳಷ್ಟು ಫಿನ್​ಟೆಕ್ ಕಂಪನಿಗಳು (Fintech company) ಹುಟ್ಟಿಕೊಂಡಿವೆ. ಸಾವೆಲನ್, ಕ್ಯೂಬ್ ಹೆಲ್ತ್, ಆರೋಗ್ಯ ಫೈನಾನ್ಸ್, ನಿಯೋಡಾಕ್ಸ್, ಫೈಬ್, ಕೆಂಕೋ, ಮೈಕೇರ್ ಹೆಲ್ತ್ ಮೊದಲಾದ ಬಿಸಿನೆಸ್​ಗಳು ಔಷಧೀಯ ವೆಚ್ಚ ಭರಿಸಲು ಜನರಿಗೆ ಸಾಲ (medical loan) ಕೊಡುತ್ತವೆ. ಈ ಪಟ್ಟಿಗೆ ಈಗ ಝೀರೋ ಪೇ ಎಂಬ ಹೊಸ ಸ್ಟಾರ್ಟಪ್ ಸೇರ್ಪಡೆಯಾಗಿದೆ. ವಿವಾದದ ಸುಳಿಗೆ ಸಿಲುಕಿರುವ ಭಾರತ್ ಪೇ ಸಹಸಂಸ್ಥಾಪಕ ಹಾಗೂ ಮಾಜಿ ಎಂಡಿ ಆಶ್ನೀರ್ ಗ್ರೋವರ್ (Ashneer Grover) ಅವರು ಝೀರೋ ಪೇ ಅನ್ನು ಸ್ಥಾಪಿಸಿದ್ದಾರೆ. ಶಾರ್ಕ್ ಟ್ಯಾಂಕ್ ಜಡ್ಜ್ ಆಗಿ ಖ್ಯಾತರಾಗಿರುವ ಆಶ್ನೀರ್ ಗ್ರೋವರ್, ಭಾರತ್ ಪೇಯಿಂದ ನಿರ್ಗಮಿಸಿದ ಬಳಿಕ ಥರ್ಡ್ ಯೂನಿಕಾರ್ನ್ (Third Unicorn) ಎಂಬ ಕಂಪನಿ ಸ್ಥಾಪಿಸಿದ್ದರು. 2023ರಲ್ಲಿ ಕ್ರಿಕ್​​ಪೇ ಎಂಬ ಫ್ಯಾಂಟಸಿ ಗೇಮಿಂಗ್ ಪ್ಲಾಟ್​ಫಾರ್ಮ್ ಸ್ಥಾಪಿಸಿದ್ದ ಥರ್ಡ್ ಯೂನಿಕಾರ್ನ್ ಇದೀಗ ಝೀರೋ ಪೇ ಅನ್ನು ಆರಂಭಿಸುತ್ತಿದೆ. ಅಶ್ನೀರ್ ಗ್ರೋವರ್ ಮತ್ತು ಅಸೀಮ್ ಗ್ರೋವರ್ ಅವರು ಇದರ ಸಹ-ಸಂಸ್ಥಾಪಕರು.

ಐದು ಲಕ್ಷ ರೂವರೆಗೆ ಪ್ರೀ ಅಪ್ರೂವ್ಡ್ ಲೋನ್

ಮುಕುಟ್ ಫಿನ್ವೆಸ್ಟ್ ಎಂಬ ಎನ್​ಬಿಎಫ್​ಸಿ ಸಂಸ್ಥೆಯು ಝೀರೋಪೆಗೆ ಫೈನಾನ್ಷಿಯಲ್ ಪಾರ್ಟ್ನರ್ ಆಗಿದೆ. ಗ್ರಾಹಕರಿಗೆ ಐದು ಲಕ್ಷ ರೂವರೆಗೆ ಮೆಡಿಕಲ್ ಲೋನ್ ನೀಡಲಾಗುತ್ತದೆ. ಝೀರೋ ಪೆ ಆ್ಯಪ್​ನಿಂದ ಪಟ್ಟಿ ಮಾಡಿದ ಪಾರ್ಟ್ನರ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದಿದ್ದರೆ ಮಾತ್ರ ಈ ಸಾಲ ಭಾಗ್ಯ ಸಿಗುತ್ತದೆ.

ಇದನ್ನೂ ಓದಿ: ಸ್ವಿಗ್ಗಿ, ಜೊಮಾಟೊಗೆ ಟಾಟಾ ಪೈಪೋಟಿ; ಬೆಂಗಳೂರು, ದಿಲ್ಲಿಯಲ್ಲಿ ಒಎನ್​ಡಿಸಿಯಲ್ಲಿ ಫೂಡ್ ಡೆಲಿವರಿ ಸೇವೆಗೆ ಅಡಿ ಇಟ್ಟ Tata Neu

ಭಾರತದ ಡಿಜಿಟಲ್ ಹೆಲ್ತ್ ಕೇರ್ ಮಾರುಕಟ್ಟೆ ಉತ್ತಮ ಭವಿಷ್ಯ ಹೊಂದಿದೆ ಎಂದು ಅಂದಾಜಿಸಲಾಗಿದೆ. 2030ರೊಳಗೆ ಈ ಮಾರುಕಟ್ಟೆ 37 ಬಿಲಿಯನ್ ಡಾಲರ್​ನಷ್ಟು ಆದಾಯ ತರಬಲ್ಲಷ್ಟು ಬೆಳೆಯುವ ಸಾಧ್ಯತೆ ಇದೆ ಎಂದು ಕೆಲ ಜಾಗತಿಕ ಕನ್ಸಲ್ಟಿಂಗ್ ಕಂಪನಿಗಳು ಅಭಿಪ್ರಾಯಪಟ್ಟಿವೆ. ಈ ಪೈಕಿ ಹೆಲ್ತ್​ಕೇರ್ ಫೈನಾನ್ಸಿಂಗ್ ಕ್ಷೇತ್ರದಲ್ಲಿ 5 ಬಿಲಿಯನ್ ಡಾಲರ್ ಆದಾಯದ ನಿರೀಕ್ಷೆ ಇದೆ.

ಝೀರೋ ಪೇನಲ್ಲಿ ಮೆಡಿಕಲ್ ಲೋನ್ ಪಡೆಯುವುದು ಹೇಗೆ?

ಝೀರೋಪೆ ಆ್ಯಪ್ ಡೌನ್​ಲೋಡ್ ಮಾಡಿ ತೆರೆದು, ಕೆವೈಸಿ ವಿವರಗಳನ್ನು ನೀಡಿ ನೊಂದಾಯಿಸಿಕೊಳ್ಳಬೇಕು. ಬಳಿಕ ಅದರಲ್ಲಿ ಪಟ್ಟಿ ಮಾಡಿರುವ ಪಾರ್ಟ್ನರ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಒಂದು ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಐದು ಲಕ್ಷ ರೂ ಒಳಗೆ ಎಷ್ಟು ಮೊತ್ತದ ಸಾಲ ಬೇಕು ಎಂಬುದನ್ನು ನಮೂದಿಸಬೇಕು. ಹಾಗೆಯೇ ಈ ಸಾಲದ ಮರುಪಾವತಿ ಹೇಗೆ ಮಾಡುತ್ತೀರಿ ಎಂಬ ವಿವರವನ್ನೂ ನಮೂದಿಸಬೇಕು.

ಇದನ್ನೂ ಓದಿ: ಇವರ ಉತ್ಪನ್ನ ತಿರಸ್ಕರಿಸಿದ ಅದೇ ಬಿಸಿನೆಸ್ ರಿಯಾಲಿಟಿ ಶೋಗೆ ಜಡ್ಜ್ ಆಗಿ ಹೋದ ಬಿಸಿನೆಸ್​ಮ್ಯಾನ್

ಸಾಮಾನ್ಯವಾಗಿ ಇವತ್ತಿನ ದಿನಗಳಲ್ಲಿ ಮೆಡಿಕಲ್ ಲೋನ್ ನೀಡುವ ಫಿನ್​ಟೆಕ್ ಕಂಪನಿಗಳು ಸಾಲಕ್ಕೆ ವಾರ್ಷಿಕ ಶೇ. 10.50ರಿಂದ ಶೇ 30ರವರೆಗೂ ಬಡ್ಡಿ ವಿಧಿಸುತ್ತವೆ. ಝೀರೋಪೆ ಎಷ್ಟು ಬಡ್ಡಿ ವಿಧಿಸುತ್ತದೆ ಎಂಬ ವಿವರ ಸದ್ಯಕ್ಕೆ ಗೊತ್ತಾಗಿಲ್ಲ. ಸದ್ಯ ಇದು ಇನ್ನೂ ಬೀಟಾ ಹಂತದಲ್ಲಿ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ