AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಳಿಕೆಯಲ್ಲಿ ಟಿವಿ ಮಾರುಕಟ್ಟೆ, ಭರ್ಜರಿ ಓಟದಲ್ಲಿ ಆನ್​​ಲೈನ್ ವಿಡಿಯೋ; ಹೀಗಿದೆ ನೋಡಿ ಸ್ಕ್ರೀನ್ ಎಂಟರ್​​ಟೈನ್ಮೆಂಟ್ ಮಾರ್ಕೆಟ್​​ನ ಭವಿಷ್ಯ

Screen entertainment market: ಇನ್ನೈದು ವರ್ಷದಲ್ಲಿ ಭಾರತದ ಸ್ಕ್ರೀನ್ ಎಂಟರ್ಟೈನ್ಮೆಂಟ್ ಕ್ಷೇತ್ರವು 17 ಬಿಲಿಯನ್ ಉದ್ಯಮವಾಗಿ ಬೆಳೆಯಲಿದೆ ಎಂದು ಸಿಐಐನ ವರದಿಯೊಂದರಲ್ಲಿ ಹೇಳಲಾಗಿದೆ. ಟಿವಿ, ಸಿನಿಮಾ ಮತ್ತು ಆನ್​​​ಲೈನ್ ವಿಡಿಯೋಗಳಿರುವ ಸ್ಕ್ರೀನ್ ಎಂಟರ್ಟೈನ್ಮೆಂಟ್ ಮಾರುಕಟ್ಟೆಯಲ್ಲಿ ಅರ್ಧಪಾಲು ಆನ್​​ಲೈನ್ ವಿಡಿಯೋದ್ದಾಗಿದೆ. ಟಿವಿ ಮಾರುಕಟ್ಟೆ ತುಸು ಇಳಿಕೆಯಾದರೂ ಎರಡನೇ ಸ್ಥಾನದಲ್ಲಿದೆ ಎಂದು ಹೇಳಲಾಗಿದೆ.

ಇಳಿಕೆಯಲ್ಲಿ ಟಿವಿ ಮಾರುಕಟ್ಟೆ, ಭರ್ಜರಿ ಓಟದಲ್ಲಿ ಆನ್​​ಲೈನ್ ವಿಡಿಯೋ; ಹೀಗಿದೆ ನೋಡಿ ಸ್ಕ್ರೀನ್ ಎಂಟರ್​​ಟೈನ್ಮೆಂಟ್ ಮಾರ್ಕೆಟ್​​ನ ಭವಿಷ್ಯ
ಟಿವಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 04, 2025 | 3:13 PM

Share

ನವದೆಹಲಿ, ಮೇ 4: ಭಾರತೀಯ ಉದ್ಯಮಗಳ ಮಹಾ ಒಕ್ಕೂಟವಾದ ಸಿಐಐ ವರದಿಯೊಂದರ ಪ್ರಕಾರ 2029ರಲ್ಲಿ ಭಾರತದ ಸ್ಕ್ರೀನ್ ಎಂಟರ್ಟೈನ್ಮೆಂಟ್ ಮಾರುಕಟ್ಟೆ (Screen entertainment industry) 17 ಬಿಲಿಯನ್ ಡಾಲರ್ ಮುಟ್ಟುವ ಸಾಧ್ಯತೆ ಇದೆ. ಇದರಲ್ಲಿ ಆನ್​​ಲೈನ್ ವಿಡಿಯೋ ಮಾರುಕಟ್ಟೆಯೇ ಹೆಚ್ಚಿನ ಪಾಲು ಹೊಂದಿರಲಿದೆಯಂತೆ. ಸಿಐಐ ವರದಿಯಂತೆ, ಇನ್ನೈದು ವರ್ಷದಲ್ಲಿ 17 ಬಿಲಿಯನ್ ಡಾಲರ್ ಗಾತ್ರದ್ದಾಗಲಿರುವ ಸ್ಕ್ರೀನ್ ಎಂಟರ್ಟೈನ್ಮೆಂಟ್ ಮಾರುಕಟ್ಟೆಯಲ್ಲಿ ಆನ್​​ಲೈನ್ ವಿಡಿಯೋ ಪಾಲು ಅರ್ಧದಷ್ಟು ಇರುತ್ತದೆ. ಸುಮಾರು 8.6 ಬಿಲಿಯನ್ ಡಾಲರ್ ಗಾತ್ರದ ಉದ್ಯಮವಾಗಲಿದೆ ಆನ್​​ಲೈನ್ ವಡಿಯೋ. ಈ ವಿಡಿಯೋಗಳೇ ಅತಿಹೆಚ್ಚು ಆದಾಯ ಸೃಷ್ಟಿಸಲಿವೆ ಎಂದು ಸಿಐಐ ವರದಿ ಹೇಳುತ್ತಿದೆ.

ಇಲ್ಲಿ ಸ್ಕ್ರೀನ್ ಎಂಟರ್ಟೈನ್ಮೆಂಟ್​​​ನಲ್ಲಿ ಟಿವಿ, ಸಿನಿಮಾ, ಡಿಜಿಟಲ್ ಪ್ಲಾಟ್​​ಫಾರ್ಮ್ ಇತ್ಯಾದಿ ಬರುತ್ತವೆ. ಸೋಷಿಯಲ್ ಮೀಡಿಯಾ ಪ್ರೇರಿತ ಆನ್​​ಲೈನ್ ವಿಡಿಯೋ ಸೆಗ್ಮೆಂಟ್ ಅಪರಿಮಿತ ವೇಗದಲ್ಲಿ ಬೆಳೆಯುತ್ತಿದೆ. ಹೆಚ್ಚೆಚ್ಚು ಜನರ ಕೈಯಲ್ಲಿ ಸ್ಮಾಟ್​​ಫೋನ್​​ಗಳು ಸಿಗುತ್ತಿರುವುದು, ಕಡಿಮೆ ಬೆಲೆಯಲ್ಲಿ ಡಾಟಾ ಲಭ್ಯ ಇರುವುದು, ಮತ್ತು ಸ್ಥಳೀಯ ಭಾಷೆಯ ಡಿಜಿಟಲ್ ಕಂಟೆಂಟ್ ಸೃಷ್ಟಿಯಾಗುತ್ತಿರುವುದು, ಇವೆಲ್ಲವೂ ಆನ್​​ಲೈನ್ ವಿಡಿಯೋ ಸೆಗ್ಮೆಂಟ್​​ಗೆ ಪೂರಕವಾಗಿ ಪರಿಣಮಿಸಿವೆ ಎಂದು ಸಿಐಐನ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಆಮದು, ಬಂದರು, ಅಂಚೆ ನಿರ್ಬಂಧ… ಪಾಕಿಸ್ತಾನ ವಿರುದ್ಧ ಒಂದೇ ದಿನ ಭಾರತದಿಂದ 3 ಕ್ರಮ

ಆನ್​​ಲೈನ್ ವಿಡಿಯೋಗೆ ಹೋಲಿಸಿದರೆ ಟೆಲಿವಿಶನ್ ಭರಾಟೆ ಹೆಚ್ಚು ಇಲ್ಲ. ಇದು ಸ್ಲ್ಪ ಮಟ್ಟಿಗೆ ಇಳಿಮುಖ ಆಗುತ್ತಿದೆ. ಆದರೂ ಕೂಡ ಒಟ್ಟಾರೆ ಸ್ಕ್ರೀನ್ ಎಂಟರ್ಟೈನ್ಮೆಂಟ್ ಮಾರುಕಟ್ಟೆಯಲ್ಲಿ ಇದು ಎರಡನೇ ಸ್ಥಾನದಲ್ಲಿದೆ. 2029ರಲ್ಲಿ ಟಿವಿ ಮಾರುಕಟ್ಟೆ ಗಾತ್ರ 6.8 ಬಿಲಿಯನ್ ಡಾಲರ್​ನಷ್ಟು ಇರಬಹುದು ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.

ಸಿನಿಮಾ ಮಾರುಕಟ್ಟೆಯ ಗಾತ್ರ ಇನ್ನೈದು ವರ್ಷದಲ್ಲಿ 1.9 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಇದೆ. ಮಲ್ಟಿಪ್ಲೆಕ್ಸ್​​ಗಳ ಟ್ರೆಂಡ್ ಮತ್ತೆ ಶುರುವಾಗಿರುವುದು, ಸಿನಿಮಾ ಬಿಡುಗಡೆ ತಂತ್ರಗಳು ಅಪ್​​ಡೇಟ್ ಆಗಿರುವುದು ಸಿನಿಮಾ ಮಾರುಕಟ್ಟೆ ಬೆಳವಣಿಗೆಗೆ ಕಾರಣವಾಗಿದೆ.

ಕಂಟೆಂಟ್ ಹೂಡಿಕೆಗಳ ಪ್ರಮಾಣ ಹೆಚ್ಚಳ ನಿರೀಕ್ಷೆ

ಸಿಐಐ ವರದಿ ಪ್ರಕಾರ, 2029ರಲ್ಲಿ ಭಾರತದಲ್ಲಿ ಒಟ್ಟಾರೆ ಕಂಟೆಂಟ್ ಇನ್ವೆಸ್ಟ್​​ಮೆಂಟ್ 7.5 ಬಿಲಿಯನ್ ಡಾಲರ್ ಮುಟ್ಟಬಹುದು. 2019ರಲ್ಲಿ ಶೇ. 15ರಷ್ಟು ಹೂಡಿಕೆ ಇತ್ತು. ಅದು 2029ಕ್ಕೆ ಶೇ. 43 ಮುಟ್ಟಬಹುದು. ಈ ಅವಧಿಯಲ್ಲಿ ಅದು ಶೇ. 8.5ರ ಸಿಎಜಿಆರ್​​​ನಲ್ಲಿ ಬೆಳೆಯಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಹೂಡಿಕೆ ಮಾಂತ್ರಿಕ ವಾರನ್ ಬಫೆಟ್ ನಿವೃತ್ತಿ ನಿರ್ಧಾರ; ಬರ್ಕ್​​ಶೈರ್ ಹಾಥವೇ ಚುಕ್ಕಾಣಿ ಗ್ರೆಗ್ ಆಬೆಲ್ ಕೈಸೇರುವ ಸಾಧ್ಯತೆ

ಆದರೆ, ಆನ್​ಲೈನ್ ವಿಡಿಯೋ ಸೆಕ್ಟರ್​​ ಇನ್ನೂ ಹೆಚ್ಚಿನ ಬೆಳವಣಿಗೆ ಹೊಂದುವ ಅವಕಾಶ ಇದೆಯಾದರೂ ಡಿಜಿಟಲ್ ಪೈರೆಸಿಯ (ಕಳ್ಳತನ) ತೊಡಕು ಹೆಚ್ಚಿದೆ. 2024ರಲ್ಲಿ 9 ಕೋಟಿ ಜನರು ಪೈರಸಿ ವಿಡಿಯೋ ಕಂಟೆಂಟ್ ಅನ್ನು ನೋಡಿದ್ದಾರೆ. ಇದರಿಂದಾಗಿ 1.2 ಬಿಲಿಯನ್ ಡಾಲರ್​​ನಷ್ಟು ಆದಾಯ ಕೈತಪ್ಪಿತು ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!