ಚಂದ್ರಯಾನ ಯೋಜನೆಗೆ ಕೈಜೋಡಿಸಿದ ದಕ್ಷಿಣ ಭಾರತೀಯ ಸಂಸ್ಥೆಗಳು; ಇವುಗಳ ಕೊಡುಗೆ ಏನು, ಇಲ್ಲಿದೆ ವಿವರ

South Indian Companies Role In Chandrayaan-3 Success ಎಚ್​ಎಎಲ್, ಮಿಧಾನಿ ಸೇರಿದಂತೆ ದಕ್ಷಿಣ ಭಾರತದ ಕೆಲ ಸಂಸ್ಥೆಗಳು ಚಂದ್ರಯಾನ ಯೋಜನೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ಹೊಂದಿವೆ. ರಾಕೆಟ್ ನಿರ್ಮಾಣದಿಂದ ಹಿಡಿದು ಪ್ರಮುಖ ಬಿಡಿಭಾಗಗಳನ್ನು ಈ ಸಂಸ್ಥೆಗಳು ಇಸ್ರೋಗೆ ಪೂರೈಕೆ ಮಾಡಿವೆ.

ಚಂದ್ರಯಾನ ಯೋಜನೆಗೆ ಕೈಜೋಡಿಸಿದ ದಕ್ಷಿಣ ಭಾರತೀಯ ಸಂಸ್ಥೆಗಳು; ಇವುಗಳ ಕೊಡುಗೆ ಏನು, ಇಲ್ಲಿದೆ ವಿವರ
ಚಂದ್ರಯಾನ-3 ಯೋಜನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 23, 2023 | 7:19 PM

ಬೆಂಗಳೂರು, ಆಗಸ್ಟ್ 23: ಇಸ್ರೋ ನಿರ್ಮಿಸಿ ಕಳುಹಿಸಿದ ಚಂದ್ರಯಾನ-3 (Chandrayaan) ನೌಕೆ ಚಂದ್ರನ ದಕ್ಷಿಣ ಧ್ರುವದ ನೆಲದ ಮೇಲೆ ಯಶಸ್ವಿಯಾಗಿ ಇಳಿದಿದೆ. ಭಾರತದಿಂದ ಅನ್ಯಗ್ರಹದ ಮೇಲೆ ನೌಕೆ ಇಳಿಸಲಾಗಿದ್ದು ಇದೇ ಮೊದಲು. ಚಂದ್ರನ ದಕ್ಷಿಣ ಧ್ರುವದಲ್ಲಿ (Lunar South Pole) ನೌಕೆ ಇಳಿಸಿದ ಮೊದಲ ದೇಶ ಭಾರತ. ಬಹಳ ಕಡಿಮೆ ಬಜೆಟ್​ನಲ್ಲಿ ನಿರ್ಮಾಣಗೊಂಡು ಸುದೀರ್ಘ 41 ದಿನಗಳ ಕಾಲ ಆಗಸದಲ್ಲಿ ಪ್ರಯಾಣಿಸಿ ಚಂದ್ರನನ್ನು ಸ್ಪರ್ಧಿಸಿದೆ ಭಾರತದ ನೌಕೆ. ಈ ಮಹತ್ವದ ಸಾಧನೆಗೆ ಇಸ್ರೋ ಜೊತೆ ಹಲವು ಸಂಸ್ಥೆಗಳ ಸಹಕಾರ ಮತ್ತು ಕೊಡುಗೆ ಇದೆ. ಅದರಲ್ಲೂ ದಕ್ಷಿಣ ಭಾರತದ ಕೆಲ ಸಂಸ್ಥೆಗಳು ಚಂದ್ರಯಾನ ಯೋಜನೆಗೆ ಮಹತ್ವದ ಕೊಡುಗೆ ನೀಡಿವೆ.

ಎಚ್​ಎಎಲ್​ನಿಂದ ಪಿಎಸ್​ಎಲ್​ವಿ ರಾಕೆಟ್ ನಿರ್ಮಾಣ

1940ರಲ್ಲಿ ಶುರುವಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ (ಎಚ್​ಎಎಲ್) ಸಂಸ್ಥೆ ಚಂದ್ರಯಾನ-3 ಯೋಜನೆಯಲ್ಲಿ ಮಹತ್ವದ ಪಾತ್ರ ಹೊಂದಿದೆ. ಯುದ್ಧವಿಮಾನಗಳನ್ನು ತಯಾರಿಸುವಲ್ಲಿ ಕೌಶಲ್ಯ ಹೊಂದಿರುವ ಎಚ್​ಎಎಲ್ ಸಂಸ್ಥೆ ಚಂದ್ರಯಾನ ನೌಕೆಯನ್ನು ಹೊತ್ತುಹೋದ ಪಿಎಸ್​ಎಲ್​ವಿ ರಾಕೆಟ್ ನಿರ್ಮಾಣದ ಪಾತ್ರ ಹೊಂದಿದೆ. ಎಂಜಿನಿಯರಿಂಗ್ ಸಂಸ್ಥೆ ಎಲ್ ಅಂಡ್ ಟಿ ಜೊತೆ ಸೇರಿ ಎಚ್​ಎಎಲ್ ಸಂಸ್ಥೆ ಪಿಎಸ್​ಎಲ್​ವಿ ರಾಕೆಟ್​ಗಳನ್ನು ತಯಾರಿಸುತ್ತದೆ.

ಇದನ್ನೂ ಓದಿ: ಭಾರತದ ಚಂದ್ರಯಾನ ಯೋಜನೆ ಬಗ್ಗೆ ವಿಶ್ವಶ್ರೀಮಂತ ಇಲಾನ್ ಮಸ್ಕ್ ಪ್ರತಿಕ್ರಿಯೆ ವಿಶೇಷವಾದುದು

ಸೆಂಟಮ್ ಎಲೆಕ್ಟ್ರಾನಿಕ್ಸ್​ನಿಂದ 300ಕ್ಕೂ ಹೆಚ್ಚು ಬಿಡಿಭಾಗಗಳ ಸರಬರಾಜು

ಬೆಂಗಳೂರಿನ ಸೆಂಟಮ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಚಂದ್ರಯಾನ-3 ಯೋಜನೆಗೆ 300ಕ್ಕೂ ಹೆಚ್ಚು ಪ್ರಮುಖ ಬಿಡಿಭಾಗಗಳನ್ನು ಸರಬರಾಜು ಮಾಡಿದೆ. 1994ರಲ್ಲಿ ಸ್ಥಾಪನೆಯಾದ ಸೆಂಟಮ್ ಎಲೆಕ್ಟ್ರಾನಿಕ್ಸ್ ಮೈಕ್ರೋ ಎಲೆಕ್ಟ್ರಾನಿಕ್ಸ್ ಮತ್ತು ಸಬ್​ಸಿಸ್ಟಂನಗಳ ಡಿಸೈನ್ ಮತ್ತು ತಯಾರಿಕಾ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದೆ.

ಮಿಧಾನಿಯಿಂದ ಟೈಟೇನಿಯಮ್ ಅಲಾಯ್

ಮಿಧಾನಿ (Midhani) ಎಂದೇ ಪರಿಚಿತವಾಗಿರುವ ಹೈದರಾಬಾದ್​ನ ಮಿಶ್ರಾ ಧಾತು ನಿಗಮ್ ಲಿ ಸಂಸ್ಥೆ ಚಂದ್ರಯಾನದ ಲ್ಯಾಂಡರ್ ಮತ್ತು ರೋವರ್ ತಯಾರಿಕೆಗೆ ಟೈಟೇನಿಯಮ್ ಅಲಾಯ್​ಗಳನ್ನು ಪೂರೈಸಿದೆ. ಚಂದ್ರಯಾನದ ವೇಳೆ ಎದುರಾಗುವ ಹವಾಮಾನ ವೈಪರೀತ್ಯಗಳನ್ನು ತಾಳಿಕೊಳ್ಳಲು ಈ ಟೈಟೇನಿಯಮ್ ಲೋಹಗಳು ಬಹಳ ಮುಖ್ಯ.

ಇದನ್ನೂ ಓದಿ: Chandrayaan-3: ಯೂಟ್ಯೂಬ್​ನಲ್ಲಿ ದಾಖಲೆ ಧೂಳೀಪಟ; ಇಲ್ಲಿದೆ ಅತಿಹೆಚ್ಚು ನೇರ ವೀಕ್ಷಣೆ ಕಂಡ ಘಟನೆಗಳ ಪಟ್ಟಿ; ಚಂದ್ರಯಾನ ಯಶಸ್ಸು ಕಂಡು ರೋಮಾಂಚಿತಗೊಂಡ ವೀಕ್ಷಕರು

ಎಂಟಿಎಆರ್ ಟೆಕ್ನಾಲಜೀಸ್

ಹೈದರಾಬಾದ್​ನ ಎಂಟಿಎಆರ್ ಟೆಕ್ನಾಲಜೀಸ್ ಸಂಸ್ಥೆ ಪ್ರಿಸಿಶನ್ ಎಂಜಿನಿಯರಿಂಗ್​ನಲ್ಲಿ ನಿಷ್ಣಾತಿ ಹೊಂದಿದೆ. ಚಂದ್ರಯಾನ ಯೋಜನೆಗೆ ಬೇಕಾದ ಕೆಲ ಪ್ರಮುಖ ಭಾಗಗಳನ್ನು ಎಂಟಿಎಆರ್ ತಯಾರಿಸಿ ಕೊಟ್ಟಿದೆ.

ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಹಲವು ಕಂಪನಿಗಳು ಇಸ್ರೋದ ಚಂದ್ರಯಾನಕ್ಕೆ ಕೊಡುಗೆ ನೀಡಿವೆ. ಇದರೊಂದಿಗೆ ಭಾರತದಲ್ಲಿ ಆರೋಗ್ಯಯುತವಾದ ಬಾಹ್ಯಾಕಾಶ ಯೋಜನೆಗಳ ಪರಿಸರ ನಿರ್ಮಾಣವಾದಂತಾಗಿದೆ. ಈಗಾಗಲೇ ಬಹಳಷ್ಟು ಖಾಸಗಿ ಕಂಪನಿಗಳು ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್