Chandrayaan-3: ಯೂಟ್ಯೂಬ್​ನಲ್ಲಿ ದಾಖಲೆ ಧೂಳೀಪಟ; ಇಲ್ಲಿದೆ ಅತಿಹೆಚ್ಚು ನೇರ ವೀಕ್ಷಣೆ ಕಂಡ ಘಟನೆಗಳ ಪಟ್ಟಿ; ಚಂದ್ರಯಾನ ಯಶಸ್ಸು ಕಂಡು ರೋಮಾಂಚಿತಗೊಂಡ ವೀಕ್ಷಕರು

Youtube Live Viewership Record: ಇಸ್ರೋದಿಂದ ಕಳುಹಿಸಲಾದ ಮೂರನೇ ಚಂದ್ರಯಾನ ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಇಳಿದಿದೆ. ಇದೇ ವೇಳೆ ಯೂಟ್ಯೂಬ್​ನಲ್ಲಿ ಇದರ ನೇರ ಪ್ರಸಾರ ಇದ್ದು, ಲ್ಯಾಂಡಿಂಗ್ ವೇಳೆ 82 ಲಕ್ಷಕ್ಕೂ ಹೆಚ್ಚು ಮಂದಿ ಆ ಕ್ಷಣಗಳನ್ನು ಕಂಡು ಕೃತಾರ್ಥರಾಗಿದ್ದಾರೆ.

Chandrayaan-3: ಯೂಟ್ಯೂಬ್​ನಲ್ಲಿ ದಾಖಲೆ ಧೂಳೀಪಟ; ಇಲ್ಲಿದೆ ಅತಿಹೆಚ್ಚು ನೇರ ವೀಕ್ಷಣೆ ಕಂಡ ಘಟನೆಗಳ ಪಟ್ಟಿ; ಚಂದ್ರಯಾನ ಯಶಸ್ಸು ಕಂಡು ರೋಮಾಂಚಿತಗೊಂಡ ವೀಕ್ಷಕರು
ಚಂದ್ರಯಾನ-3
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 23, 2023 | 6:42 PM

ಬೆಂಗಳೂರು, ಆಗಸ್ಟ್ 23: ಚಂದ್ರಯಾನ-3 ಯಶಸ್ವಿಯಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ (Moon South Pole) ನೌಕೆ ಇಳಿಸಿದ ಮೊದಲ ದೇಶ ಭಾರತವಾಗಿದೆ. ಅತ್ಯಂತ ಕಡಿಮೆ ಬಜೆಟ್​ನಲ್ಲಿ ತಯಾರಾದ ಮೂರನೇ ಚಂದ್ರಯಾನ (Chandrayaan-3) ಯೋಜನೆಯಲ್ಲಿ ಲ್ಯಾಂಡರ್ ಚಂದ್ರನ ನೆಲದವನ್ನು ಮೃದುವಾಗಿ ಸ್ಪರ್ಶಿಸಿದೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್​ಬರ್ಗ್​ನಲ್ಲಿ ಬ್ರಿಕ್ಸ್ ಸಭೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದಲೇ ಆನ್​ಲೈನ್​ನಲ್ಲಿ ಈ ಅಪೂರ್ವ ಕ್ಷಣಗಳನ್ನು ವೀಕ್ಷಿಸಿದರು. ಸಾಫ್ಟ್ ಲ್ಯಾಂಡಿಂಗ್ ಆದ ಬಳಿಕ ಪ್ರಧಾನಿ ಮಾತನಾಡಿ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು. ಚಂದ್ರಯಾನ-3 ನೆಲ ಸ್ಪರ್ಶಿಸುವ ಕ್ಷಣದಲ್ಲಿ ಯೂಟ್ಯೂಬ್​ನಲ್ಲಿ ಹೊಸ ದಾಖಲೆಯೇ ನಿರ್ಮಾಣವಾಗಿ ಹೋಗಿತ್ತು. 82 ಲಕ್ಷಕ್ಕೂ ಹೆಚ್ಚು ಮಂದಿ ಯೂಟ್ಯೂಬ್​ನಲ್ಲಿ ಆ ಕ್ಷಣಗಳನ್ನು ನೇರವಾಗಿ ವೀಕ್ಷಿಸಿದ್ದು ವಿಶೇಷವಾಗಿತ್ತು. ಇದು ಯೂಟ್ಯೂಬ್ ಮಟ್ಟಿಗೆ ಹೊಸ ದಾಖಲೆಯೇ ಆಗಿದೆ.

ಫುಟ್ಬಾಲ್ ವಿಶ್ವಕಪ್​ನ ಲೈವ್ ವೀಕ್ಷಣೆ ಮೀರಿಸಿದ ಚಂದ್ರಯಾನ

2022ರ ಫೀಫಾ ವರ್ಲ್ಡ್ ಕಪ್ ಕ್ವಾರ್ಟರ್​ಫೈನಲ್ ಪಂದ್ಯ ಯೂಟ್ಯೂಬ್​ನಲ್ಲಿ 61 ಲಕ್ಷ ನೇರ ವೀಕ್ಷಕರನ್ನು ಕಂಡಿತ್ತು. ಇದು ಯೂಟ್ಯೂಬ್​ನಲ್ಲಿ ಅತಿಹೆಚ್ಚು ನೇರ ವೀಕ್ಷಣೆ ಪಡೆದ ಕಾರ್ಯಕ್ರಮ ಎಂಬ ದಾಖಲೆ ಬರೆದಿತ್ತು. ಪ್ರೀಕ್ವಾರ್ಟರ್​ಫೈನಲ್ ಪಂದ್ಯವೊಂದು 52 ಲಕ್ಷ ನೇರ ವೀಕ್ಷಣೆ ಹೊಂದಿತ್ತು.

ಇದನ್ನೂ ಓದಿ: ಭಾರತದ ಚಂದ್ರಯಾನ ಯೋಜನೆ ಬಗ್ಗೆ ವಿಶ್ವಶ್ರೀಮಂತ ಇಲಾನ್ ಮಸ್ಕ್ ಪ್ರತಿಕ್ರಿಯೆ ವಿಶೇಷವಾದುದು

ಈಗ ಯೂಟ್ಯೂಬ್​ನಲ್ಲಿ ಇಸ್ರೋದ ಚಾನಲ್​ನಲ್ಲಿ ಚಂದ್ರಯಾನ ಕಾರ್ಯಕ್ರಮದ ನೇರ ಪ್ರಸಾರ ಇತ್ತು. ಲ್ಯಾಂಡಿಂಗ್ ಕ್ಷಣ ಸಮೀಪಿಸುವಾಗ ಲೈವ್ ವೀಕ್ಷಕರ ಸಂಖ್ಯೆ 82 ಲಕ್ಷ ದಾಟಿ ಹೋಗಿತ್ತು. ಇದರೊಂದಿಗೆ ಯೂಟ್ಯೂಬ್ ಲೈವ್ ವೀಕ್ಷಣೆಯಲ್ಲಿ ಚಂದ್ರಯಾನ ಪ್ರಸಾರ ಹೊಸ ದಾಖಲೆ ಸ್ಥಾಪಿಸಿದೆ.

ಯೂಟ್ಯೂಬ್​ನಲ್ಲಿ ಅತಿಹೆಚ್ಚು ಲೈವ್ ವೀಕ್ಷಕರನ್ನು ಪಡೆದವರ ಪಟ್ಟಿ

  1. ಕೇಜ್​ಟಿವಿ (2022ರ ಫೀಫಾ ವಿಶ್ವಕಪ್ ಕ್ವಾರ್ಟರ್​ಫೈನಲ್ ಪಂದ್ಯ): 61 ಲಕ್ಷ ವೀಕ್ಷಕರು
  2. ಕೇಜ್ ಟಿವಿ (ಫೀಫಾ ವಿಶ್ವಕಪ್ ಪ್ರೀಕ್ವಾರ್ಟರ್ಸ್): 52 ಲಕ್ಷ
  3. ಸ್ಪೇಸ್​ಎಕ್ಸ್: 40 ಲಕ್ಷ
  4. ಆ್ಯಪಲ್: 36 ಲಕ್ಷ
  5. ಲಾ ಅಂಡ್ ಕ್ರೈಮ್ ನೆಟ್ವರ್ಕ್: 35 ಲಕ್ಷ
  6. ಫ್ಲೂಮಿನೀಸ್ ಫುಟ್ಬಾಲ್ ಕ್ಲಬ್: 35 ಲಕ್ಷ
  7. ನೆಕ್ಸ್ಟ್ ಸ್ಪೋರ್ಟ್ಸ್: 27 ಲಕ್ಷ
  8. ಬಿಟಿಎಸ್: 26 ಲಕ್ಷ
  9. ಸೈಡ್​ಮೆನ್: 25 ಲಕ್ಷ
  10. ವಿಟಿವಿ ದಿ ಥಾವೋ: 25 ಲಕ್ಷ ಲೈವ್ ವೀಕ್ಷಣೆ

ಇದನ್ನೂ ಓದಿ: Chandrayaan 3 Success: ಚಂದ್ರಯಾನ-3 ರ ಯಶಸ್ವಿ ಲ್ಯಾಂಡಿಂಗ್: ಭಾರತದ ಬಾಹ್ಯಾಕಾಶ ಉದ್ಯಮದ ಪ್ರಗತಿಯ ಸಂಕೇತ

ಜಿಯೋ ಪ್ಲಾಟ್​ಫಾರ್ಮ್ ದಾಖಲೆ ಮುರಿಯಲು ಅಸಾಧ್ಯ

ಕಳೆದ ಬಾರಿಯ ಐಪಿಎಲ್ ಟೂರ್ನಿಯ ಪಂದ್ಯಗಳು ಜಿಯೋಸಿನಿಮಾ ಆ್ಯಪ್​ನಲ್ಲಿ ನೇರ ಪ್ರಸಾರವಾಗಿದ್ದವು. ಒಂದು ಪಂದ್ಯದಲ್ಲಿ 3.4 ಕೋಟಿ ಜನರು ಲೈವ್ ವೀಕ್ಷಿಸಿದ್ದರು. ಅದು ಸಾರ್ವಕಾಲಿಕ ದಾಖಲೆಯಾಗಿದೆ. ಅಂದರೆ ಡಿಜಿಟಲ್ ಪ್ಲಾಟ್​ಫಾರ್ಮ್​ನಲ್ಲಿ ಅತಿಹೆಚ್ಚು ಲೈವ್ ವೀಕ್ಷಣೆ ಪಡೆದ ದಾಖಲೆ ಜಿಯೋಸಿನಿಮಾದ್ದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್