Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಧಾರ್​ಗೆ ಪ್ಯಾನ್ ಕಾರ್ಡ್ ಲಿಂಕ್ ಆಗದಿದ್ದರೆ ಬ್ಯಾಂಕ್ ಖಾತೆಗೆ ಸಂಬಳದ ಹಣ ಕ್ರೆಡಿಟ್ ಆಗುತ್ತಾ?

Aadhaar PAN Linking: ಆಧಾರ್ ಜೊತೆ ಪ್ಯಾನ್ ನಂಬರ್ ಜೋಡಿಸಬೇಕೆಂದು ಆದಾಯ ತೆರಿಗೆ ಇಲಾಖೆ ಕಡ್ಡಾಯಗೊಳಿಸಿದೆ. ಜೂನ್ 30ರೊಳಗೆ ಲಿಂಕ್ ಆಗದ ಪ್ಯಾನ್ ಕಾರ್ಡ್​ಗಳು ನಿಷ್ಕ್ರಿಯಗೊಂಡಿವೆ. ದಂಡ ಕಟ್ಟಿ ಅದನ್ನು ಸಕ್ರಿಯಗೊಳಿಸುವವರೆಗೂ ಪ್ಯಾನ್ ಇನಾಪರೇಟಿವ್ ಆಗಿರುತ್ತದೆ. ಈ ವೇಳೆ ಬ್ಯಾಂಕಿಂಗ್ ಚಟುವಟಿಕೆಗಳಿಗೆ ಏನೇನು ನಿರ್ಬಂಧಗಳಿರುತ್ತವೆ ಎಂಬ ವಿವರ ಇಲ್ಲಿದೆ.

ಆಧಾರ್​ಗೆ ಪ್ಯಾನ್ ಕಾರ್ಡ್ ಲಿಂಕ್ ಆಗದಿದ್ದರೆ ಬ್ಯಾಂಕ್ ಖಾತೆಗೆ ಸಂಬಳದ ಹಣ ಕ್ರೆಡಿಟ್ ಆಗುತ್ತಾ?
ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 23, 2023 | 5:07 PM

ನವದೆಹಲಿ, ಆಗಸ್ಟ್ 23: ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯ. 2023ರ ಜೂನ್ 30ರವರೆಗೂ ಪ್ಯಾನ್ ಆಧಾರ್ ಲಿಂಕಿಂಗ್​ಗೆ (Aadhaar and PAN Linking) ಕಾಲಾವಕಾಶ ಇತ್ತು. ಆ ಗಡುವಿನೊಳಗೆ ಲಿಂಕ್ ಆಗದೇ ಇರುವ ಪ್ಯಾನ್ ಕಾರ್ಡ್ ಇನಾಪರೇಟಿವ್ ಆಗುತ್ತದೆ. ನೀವು ದಂಡ ಕಟ್ಟಿ ಪ್ಯಾನ್ ಅನ್ನು ಮತ್ತೆ ಚಾಲನೆಗೊಳಿಸುವವರೆಗೂ ಪ್ಯಾನ್ ಬಳಕೆ ಸಾಧ್ಯವಾಗುವುದಿಲ್ಲ. ಪ್ಯಾನ್ ನಿಷ್ಕ್ರಿಯಗೊಂಡಿರುತ್ತದೆ.

ಈಗ ಬಹಳಷ್ಟು ಹಣಕಾಸು ಚಟುವಟಿಕೆಗಳಿಗೆ ಪ್ಯಾನ್ ಬೇಕೇ ಬೇಕು. ಬ್ಯಾಂಕ್ ಖಾತೆ ತೆರೆಯಲು, ಷೇರು ಇತ್ಯಾದಿ ಖರೀದಿಸಲು, ಹೆಚ್ಚಿನ ಮೊತ್ತದ ಹಣ ವರ್ಗಾಯಿಸಲು ಪ್ಯಾನ್ ಕೇಳಲಾಗುತ್ತದೆ. ಈಗ ನಿಷ್ಕ್ರಿಯ ಪ್ಯಾನ್ ಇರುವ ಬ್ಯಾಂಕ್ ಖಾತೆಗೆ ಸಂಬಳದ ಹಣ ಕ್ರೆಡಿಟ್ ಆಗುತ್ತಾ ಎಂಬ ಪ್ರಶ್ನೆ ಬರಬಹುದು.

ಪ್ಯಾನ್ ನಿಷ್ಕ್ರಿಯಗೊಂಡಿದ್ದರೂ ಬ್ಯಾಂಕ್ ಖಾತೆಗೆ ಸಂಬಳ ಕ್ರೆಡಿಟ್ ಆಗಲು ಅಡ್ಡಿ ಇಲ್ಲ. ಆದರೆ, ಸಂಬಳಕ್ಕೆ ಟಿಡಿಎಸ್ ಶುಲ್ಕ ಕಡಿತ ಮಾಡಲಾಗುತ್ತದೆ. ಅಷ್ಟೇ ಅಲ್ಲ, ಪ್ಯಾನ್ ನಿಷ್ಕ್ರಿಯ ಇರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಕಾರ್ಯ ತುಸು ವಿಳಂಬವಾಗಬಹುದು.

ಇದನ್ನೂ ಓದಿ: ಮೊದಲ ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ ಆರ್​ಬಿಐ ಅಂದಾಜಿಗಿಂತಲೂ ಹೆಚ್ಚು ಬೆಳೆಯುವ ಸಾಧ್ಯತೆ

ಅಂತಾರಾಷ್ಟ್ರೀಯ ಎಟಿಎಂಗಳಿಂದ ಹಣ ವಿತ್​ಡ್ರಾ ಸಾಧ್ಯವಿಲ್ಲ

ಪ್ಯಾನ್ ಇನಾಪರೇಟಿವ್ ಆಗಿದ್ದಾಗ ಹಲವು ಚಟುವಟಿಕೆಗಳಿಗೆ ನಿರ್ಬಂಧ ಇರುತ್ತದೆ. ವಿದೇಶಗಳಿಗೆ ಹಣ ಕಳುಹಿಸಲು ಅಗುವುದಿಲ್ಲ. ಅಂತರರಾಷ್ಟ್ರೀಯ ಎಟಿಎಂಗಳಿಂದ ನಗದು ಹಣ ವಿತ್​ಡ್ರಾ ಮಾಡಲು ಆಗುವುದಿಲ್ಲ. ಪಿಒಎಸ್ ವಹಿವಾಟು ಸಾಧ್ಯವಾಗುವುದಿಲ್ಲ. ವಿದೇಶಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆಗೂ ಅನುಮತಿ ಇರುವುದಿಲ್ಲ.

ಇದನ್ನೂ ಓದಿ: ಚೀನಾದ ಆರ್ಥಿಕ ಪತನ ಶುರುವಾಗಿದ್ದ ಕೋವಿಡ್​ನಿಂದಲ್ಲ; 15 ವರ್ಷದ ಹಿಂದೆಯೇ ಆರಂಭವಾಗಿದ್ದವಾ ಚೀನೀ ದುರ್ದಿನಗಳು?

ನೀವು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಪಡೆಯಬೇಕಾದರೆ ಸಕ್ರಿಯ ಪ್ಯಾನ್ ಕಾರ್ಡ್ ಅಗತ್ಯ ಇರುತ್ತದೆ. ಬ್ಯಾಂಕುಗಳು ಕೆಲವೊಮ್ಮೆ ನಿಮಗೆ ಆಧಾರ್ ಇತ್ಯಾದಿ ಬೇರೆ ದಾಖಲೆಗಳನ್ನು ಇಟ್ಟುಕೊಂಡು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡನ್ನು ಕೊಡಬಹುದಾದರೂ ಹೆಚ್ಚಿನ ಸಂದರ್ಭದಲ್ಲಿ ಕಾರ್ಡ್ ವಿತರಣೆ ಆಗುವುದಿಲ್ಲ.

ಒಂದು ವೇಳೆ ನಿಮ್ಮ ಪ್ಯಾನ್ ನಿಷ್ಕ್ರಿಯಗೊಂಡಿದ್ದರೆ ಅದನ್ನು ಮತ್ತೆ ಸಕ್ರಿಯಗೊಳಿಸಬಹುದು. ಒಂದು ಸಾವಿರ ರೂನಷ್ಟು ದಂಡ ಕಟ್ಟಿ ಆಧಾರ್​ಗೆ ಪ್ಯಾನ್ ಅನ್ನು ಲಿಂಕ್ ಮಾಡಬಹುದು. ನೀವು ಲಿಂಕಿಂಗ್​ಗೆ ಅರ್ಜಿ ಹಾಕಿ 30 ದಿನಗಳವರೆಗಾದರೂ ಪ್ಯಾನ್ ನಿಷ್ಕ್ರಿಯವಾಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:00 pm, Wed, 23 August 23