AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹೀಂದ್ರ ಕಂಪನಿ ವಾಹನಗಳ ಮಾರಾಟ ಅತಿಹೆಚ್ಚಳ; ಆಗಸ್ಟ್​ನಲ್ಲಿ ಭಾರತದಲ್ಲಿ ವಾಹನ ಮಾರಾಟ ಪ್ರಮಾಣ ಎಷ್ಟು? ಇಲ್ಲಿದೆ ವಿವರ

Automobile Sales In August 2023: ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿಯ ನಂಬರ್ ಒನ್ ಸ್ಥಾನ ಮುಂದುವರಿದಿದೆ. ಪ್ಯಾಸೆಂಜರ್ ವಾಹನಗಳ ವಿಭಾಗದಲ್ಲಿ ಮಹೀಂದ್ರ ಅಂಡ್ ಮಹೀಂದ್ರದ ಮಾರಾಟ ಪ್ರಮಾಣ ಶೇ. 26ರಷ್ಟು ಹೆಚ್ಚಾಗಿದೆ. ಟಾಟಾ ಮೋಟಾರ್ಸ್​ನ ಪ್ಯಾಸೆಂಜರ್ ವಾಹನಗಳ ಮಾರಾಟದಲ್ಲಿ ತುಸು ಇಳಿಕೆಯಾಗಿದೆ. ಇನ್ನು, ಬಜಾಜ್ ಆಟೊ ಸಂಸ್ಥೆಯ ವಾಹನ ಮಾರಾಟದಲ್ಲಿ ಶೇ. 31ರಷ್ಟು ಇಳಿಮುಖವಾಗಿದೆ.

ಮಹೀಂದ್ರ ಕಂಪನಿ ವಾಹನಗಳ ಮಾರಾಟ ಅತಿಹೆಚ್ಚಳ; ಆಗಸ್ಟ್​ನಲ್ಲಿ ಭಾರತದಲ್ಲಿ ವಾಹನ ಮಾರಾಟ ಪ್ರಮಾಣ ಎಷ್ಟು? ಇಲ್ಲಿದೆ ವಿವರ
ವಾಹನ ಮಾರಾಟ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 03, 2023 | 3:51 PM

Share

ನವದೆಹಲಿ, ಸೆಪ್ಟೆಂಬರ್ 3: ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ ವಾಹನಗಳ ಮಾರಾಟದಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ವಿವಿಧ ಆಟೊಮೊಬೈಲ್ ಕಂಪನಿಗಳು (Auto Companies) ಬಿಡುಗಡೆ ಮಾಡಿದ ಆಗಸ್ಟ್ ತಿಂಗಳ ಸೇಲ್ಸ್ ಅಂಕಿ ಅಂಶಗಳ ಪ್ರಕಾರ ಪ್ಯಾಸೆಂಜರ್ ವಾಹನ ಮತ್ತು ಕಮರ್ಷಿಯಲ್ ವಾಹನ ಎರಡರಲ್ಲೂ ಮಾರಾಟ ಹೆಚ್ಚಳವಾಗಿರುವುದು ತಿಳಿದುಬಂದಿದೆ. ಪ್ರಯಾಣಿಕ ವಾಹನ ಅಥವಾ ಪ್ಯಾಸೆಂಜರ್ ವೆಹಿಕಲ್ ವಿಭಾಗದಲ್ಲಿ ಮಹೀಂದ್ರ ಅಂಡ್ ಮಹೀಂದ್ರ ಕಂಪನಿ ಶೇ. 26ರಷ್ಟು ಸೇಲ್ಸ್ ವೃದ್ಧಿ ಕಂಡಿದೆ. ಭಾರತದ ನಂಬರ್ ಒನ್ ಆಟೊಮೊಬೈಲ್ ಸಂಸ್ಥೆ ಮಾರುತಿ ಸುಜುಕಿಯ ಪ್ಯಾಸೆಂಜರ್ ವಾಹನಗಳ ಮಾರಾಟ ಆಗಸ್ಟ್ ತಿಂಗಳಲ್ಲಿ ಶೇ. 16.4ರಷ್ಟು ಹೆಚ್ಚಾಗಿದೆ.

ಮಾರುತಿ ಸುಜುಕಿ ದಾಖಲೆ ವಾಹನ ಮಾರಾಟ

ಮಾರುತಿ ಸುಜುಕಿ ಇಂಡಿಯಾ 2023ರ ಆಗಸ್ಟ್ ತಿಂಗಳಲ್ಲಿ 1,89,082 ವಾಹನಗಳನ್ನು ಮಾರಾಟ ಮಾಡಿದೆ. ಯಾವುದೇ ತಿಂಗಳಲ್ಲಿ ಇದು ಮಾರುತಿ ಸುಜುಕಿ ಕಂಡ ಅತಿಹೆಚ್ಚು ಮಾರಾಟ ಎನಿಸಿದೆ. ಕಳೆದ ವರ್ಷದಕ್ಕಿಂತ ಶೇ. 13ರಷ್ಟು ಹೆಚ್ಚು ವಾಹನಗಳು ಈ ಆಗಸ್ಟ್​ನಲ್ಲಿ ಸೇಲ್ ಆಗಿವೆ.

ಇದನ್ನೂ ಓದಿ: ಆವತ್ತಿನ 10,000 ರೂ ಹೂಡಿಕೆ ಇವತ್ತು 300 ಕೋಟಿ ರೂ; ಕೋಟಕ್ ಮಹೀಂದ್ರ ಬ್ಯಾಂಕ್​ನ ಅಸಾಮಾನ್ಯ ಬೆಳವಣಿಗೆ ಬಣ್ಣಿಸಿದ ಉದಯ್ ಕೋಟಕ್

ಭಾರತದೊಳಗೆ ಮಾರುತಿ ಸುಜುಕಿಯ ಕಾರುಗಳು ಮಾರಾಟವಾಗಿರುವುದು 1,58,678. ಇನ್ನು, ವಿದೇಶಗಳಿಗೆ ಅದರ 24,614 ಕಾರುಗಳು ರಫ್ತಾಗಿವೆ. ಪ್ಯಾಸೆಂಜರ್ ವಾಹನಗಳ ಮಾರಾಟದಲ್ಲೂ ಗಣನೀಯ ಹೆಚ್ಚಳವಾಗಿದೆ. ಮಾರುತಿ ಸುಜುಕಿಯ ಪ್ರಯಾಣಿಕ ವಾಹನಗಳು 1,65,402 ಸಂಖ್ಯೆಯಲ್ಲಿ ಮಾರಾಟವಾಗಿವೆ.

ಮಹೀಂದ್ರ ವಾಹನಗಳು ಎಷ್ಟು ಮಾರಾಟವಾಗಿವೆ?

ಮಹೀಂದ್ರ ಅಂಡ್ ಮಹೀಂದ್ರ ಸಂಸ್ಥೆಯು ಆಗಸ್ಟ್ ತಿಂಗಳಲ್ಲಿ 70,350 ವಾಹನಗಳನ್ನು ಮಾರಿರುವುದಾಗಿ ಘೋಷಿಸಿದೆ. ಕಳೆದ ವರ್ಷದಕ್ಕಿಂತ ಶೇ. 19ರಷ್ಟು ಹೆಚ್ಚು ಮಾರಾಟವಾಗಿದೆ. ಅದರ ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳು (ಎಸ್​ಯುವಿ) ಶೇ. 26ರಷ್ಟು ಹೆಚ್ಚಾಗಿವೆ. ವರದಿ ಪ್ರಕಾರ ಮಹೀಂದ್ರದ 37,270 ಎಸ್​ಯುವಿಗಳು ಸೇಲ್ ಆಗಿವೆ.

ಇದನ್ನೂ ಓದಿ: ನಷ್ಟದ ಹೊರೆಯಲ್ಲಿದ್ದ ಟ್ವಿಟ್ಟರ್ ಅನ್ನು ಇಲಾನ್ ಮಸ್ಕ್ ಖರೀದಿಸಿದ್ದು ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಕಾರಣ

ಟಾಟಾ ಮೋಟಾರ್ಸ್ ವಾಹನಗಳ ಮಾರಾಟ 78 ಸಾವಿರಕ್ಕೂ ಹೆಚ್ಚು

ಟಾಟಾ ಮೋಟಾರ್ಸ್​ನ ಒಟ್ಟಾರೆ ವಾಹನಗಳ ಮಾರಾಟ 78,010 ಸಂಖ್ಯೆ ಮುಟ್ಟಿದೆ. ಇದರ ಪ್ಯಾಸೆಂಜರ್ ವಾಹನಗಳ ಮಾರಾಟದಲ್ಲಿ ಶೇ. 3.5ರಷ್ಟು ಕಡಿಮೆ ಆಗಿದೆ. ಬಜಾಜ್ ಆಟೊ ಸಂಸ್ಥೆಯ ವಾಹನ ಮಾರಾಟ ಪ್ರಮಾಣ ಶೇ. 31ರಷ್ಟು ಉಳಿಮುಖವಾಗಿದೆ.

ಇನ್ನು ಟಿವಿಎಸ್ ಮೋಟಾರ್ ಕಂಪನಿಯ ವಾಹನ ಮಾರಾಟ ಶೇ. 4ರಷ್ಟು ಹೆಚ್ಚಾಗಿ 3,45,848 ವಾಹನಗಳ ಮಾರಾಟವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?