Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಷ್ಟದ ಹೊರೆಯಲ್ಲಿದ್ದ ಟ್ವಿಟ್ಟರ್ ಅನ್ನು ಇಲಾನ್ ಮಸ್ಕ್ ಖರೀದಿಸಿದ್ದು ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಕಾರಣ

Why Elon Musk Bought Twitter: ವಿಶ್ವದ ನಂಬರ್ ಒನ್ ಶ್ರೀಮಂತ ಇಲಾನ್ ಮಸ್ಕ್ ಅವರು ಕಳೆದ ವರ್ಷ ಟ್ವಿಟ್ಟರ್ ಖರೀದಿಸಿ ಹಲವರನ್ನು ಅಚ್ಚರಿಗೆ ಕೆಡವಿದ್ದರು. ಲಾಭದ ಬಗ್ಗೆ ಆಲೋಚನೆ ಇಲ್ಲದೇ ಸಾಗುತ್ತಿದ್ದ ಟ್ವಿಟ್ಟರ್ ಅನ್ನು ಮಸ್ಕ್ ಖರೀದಿಸುವ ಆಲೋಚನೆ ಯಾಕೆ ಮಾಡಿದರೆಂಬುದೇ ಹಲವರಿಗೆ ಪ್ರಶ್ನೆಯಾಗಿ ಕಾಡಿತ್ತು. ಶೀಘ್ರದಲ್ಲೇ ಬಿಡುಗಡೆ ಆಗಲಿರುವ ಇಲಾನ್ ಮಸ್ಕ್ ಅವರ ಬಯೋಗ್ರಫಿಯಲ್ಲಿ ಈ ಬಗ್ಗೆ ಪ್ರಸ್ತಾಪ ಇದೆ.

ನಷ್ಟದ ಹೊರೆಯಲ್ಲಿದ್ದ ಟ್ವಿಟ್ಟರ್ ಅನ್ನು ಇಲಾನ್ ಮಸ್ಕ್ ಖರೀದಿಸಿದ್ದು ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಕಾರಣ
ಇಲಾನ್ ಮಸ್ಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 03, 2023 | 11:54 AM

ಕಳೆದ ವರ್ಷ (2022) ಜಾಗತಿಕ ಉದ್ಯಮ ವಲಯದಲ್ಲಿ ಬಹಳ ಕುತೂಹಲ ಮೂಡಿಸಿದ ಬೆಳವಣಿಗೆಗಳಲ್ಲಿ ಟ್ವಿಟ್ಟರ್ ಅನ್ನು ಇಲಾನ್ ಮಸ್ಕ್ ಖರೀದಿಸಿದ್ದು ಪ್ರಮುಖವಾದುದು. ಒಮ್ಮೆಯೂ ಲಾಭ ಮಾಡದ ಟ್ವಿಟ್ಟರ್ ಅನ್ನು ಖರೀದಿಸುವ ಆಲೋಚನೆಯನ್ನಾದರೂ (Why Musk Bought Twitter) ಮಸ್ಕ್ ಹೇಗೆ ಮಾಡಿದರು ಎಂದು ಹಲವರು ಅಚ್ಚರಿಪಟ್ಟಿದ್ದರು. ಅದರಲ್ಲೂ ಟ್ವಿಟ್ಟರ್ ಬಗ್ಗೆ ಸದಾ ನಕಾರಾತ್ಮಕವಾಗಿಯೇ ಮಾತನಾಡುತ್ತಿದ್ದ ಇಲಾನ್ ಮಸ್ಕ್ ದಿಢೀರನೇ ಟ್ವಿಟ್ಟರ್ ಅನ್ನೇ ಮೈಗೆ ಸುತ್ತಿಕೊಳ್ಳುತ್ತಾರೆಂದು ಯಾರೂ ಅಂದಾಜಿಸಿರಲಿಲ್ಲ. ಇಲಾನ್ ಮಸ್ಕ್ ಹಾಗೇ ಸುಮ್ಮನೆ ಆಟಕ್ಕೆ ಟ್ವಿಟ್ಟರ್ ಅಟ್ಟ ಹತ್ತಲು ಹೋಗಿ ಕೊನೆಗೆ ಅವರೇ ಸಿಲುಕಿಕೊಳ್ಳಬೇಕಾಯಿತು ಎಂದು ಹೇಳುವವರಿದ್ದಾರೆ. ಆದರೆ, ಇಲಾನ್ ಮಸ್ಕ್ ಅವರ ಬಯೋಗ್ರಫಿ ಅಥವಾ ಜೀವನಕಥನ ಪುಸ್ತಕದಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಮುಂಬರುವ ದಿನಗಳಲ್ಲಿ ಬಿಡುಗಡೆ ಆಗಲಿರುವ ಪುಸ್ತಕದಲ್ಲಿ ವಿಶ್ವದ ನಂಬರ್ ಒನ್ ಶ್ರೀಮಂತ ಇಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿಸುವುದರ ಹಿಂದೆ ಅವರ ತೃತಿಯ ಲಿಂಗಿ ಮಗಳ ಪ್ರಭಾವ ಇರುವುದನ್ನು ಹೇಳಲಾಗಿದೆ.

ಮಸ್ಕ್ ಮಗಳ ಕಥೆ ಏನು? ಟ್ವಿಟ್ಟರ್​ಗೂ ಆಕೆಗೂ ಏನು ಸಂಬಂಧ?

ಇಲಾನ್ ಮಸ್ಕ್ ಅವರ ಬಯೋಗ್ರಫಿಯನ್ನು ಬರೆದಿರುವವರು ವಾಲ್ಟರ್ ಐಸಾಕ್ಸನ್. ಇಲಾನ್ ಮಸ್ಕ್ ಅವರು ಕಟ್ಟರ್ ಕಮ್ಯೂನಿಸ್ಟ್ ವಿರೋಧಿಯಾಗಲಿ ರೂಪುಗೊಳ್ಳಲು ಅವರ ಮಗ, ಅರ್ಥಾತ್ ಮಗಳು ಕಾರಣ ಎಂದು ವಾಲ್ಟರ್ ಐಸಾಕ್ಸನ್ ಅವರು ಪುಸ್ತಕದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಇಡಿ ಕಸ್ಟಡಿಯಲ್ಲಿರುವ ಜೆಟ್ ಏರ್​ವೇಸ್ ಸಂಸ್ಥಾಪಕ ನರೇಶ್ ಗೋಯಲ್ ವಿರುದ್ಧ ಇರುವ ಅಕ್ರಮ ಆರೋಪಗಳೇನು?

ಇಲಾನ್ ಮಸ್ಕ್ ಅವರಿಗೆ ಝೇವಿಯರ್ ಅಲೆಕ್ಸಾಂಡರ್ ಮಸ್ಕ್ ಎಂಬ ಮಗನಿದ್ದದ್ದು. ಈತನಿಗೆ ಸಮಾಜವಾದ ಅಥವಾ ಸೋಷಿಯಲಿಸಂ ವಿಚಾರ ಕ್ರಮೇಣ ಆವರಿಸಿತ್ತು. ಸೋಷಿಯಲಿಸಂನಿಂದ ಇನ್ನೂ ಮುಂದೆ ಹೋಗಿ ಆತನಿಗೆ ಕಟ್ಟರ್ ಕಮ್ಯೂನಿಸ್ಟ್ ವಿಚಾರಧಾರೆ ಆವರಿಸಿತು. ಶ್ರೀಮಂತರೆಲ್ಲರೂ ಕೆಟ್ಟವರು ಎಂಬ ಭಾವನೆ ಆತನಿಗಿತ್ತು. ಕಳೆದ ವರ್ಷ 19 ವರ್ಷದ ಕ್ಸೇವಿಯರ್ ತನ್ನ ಲಿಂಗ ಪರಿವರ್ತನೆ ಘೋಷಣೆ ಮಾಡಿದ್ದ. ಅವನು ಅವಳಾಗಿ ಬದಲಾಗಿದ್ದಳು. ಅಷ್ಟೇ ಅಲ್ಲ, ತನ್ನ ಹೆಸರನ್ನು ವಿವಿಯನ್ ಜೆನ್ನಾ ವಿಲ್ಸನ್ ಎಂದು ಬದಲಾಯಿಸಿಕೊಂಡಿದ್ದಳು. ಹೆಸರಿನಲ್ಲೂ ಮಸ್ಕ್ ನಂಟನ್ನು ಆಕೆ ಕಡಿದುಕೊಂಡು, ತನ್ನ ತಾಯಿಯ ಅಡ್ಡಹೆಸರು ಇಟ್ಟುಕೊಂಡಿದ್ದಳು.

ಇಲಾನ್ ಮಸ್ಕ್ ಅವರಿಗೆ ತನ್ನ ಮಗಳ ಸಂಗತಿ ಬಹಳವಾಗಿ ಕಾಡುತ್ತಿತ್ತು ಎಂದು ಹೇಳಲಾಗುತ್ತಿದೆ. ಅಮೆರಿಕದ ಅತ್ಯಂತ ದುಬಾರಿ ಶಾಲೆಗಳಲ್ಲಿ ಒಂದೆನಿಸಿರುವ ಕ್ಯಾಲಿಫೋರ್ನಿಯಾದ ಸಂಟ ಮೋನಿಕಾ ನಗರದಲ್ಲಿರುವ ಕ್ರಾಸ್​ರೋಡ್ಸ್ ಸ್ಕೂಲ್ ಫಾರ್ ಆರ್ಟ್ಸ್ ಅಂಡ್ ಸೈನ್ಸಸ್ ಶಾಲೆಯಲ್ಲಿ ಈಕೆ ಓದಿದ್ದು. ತನ್ನ ಮಗಳ ಮನಸ್ಸನ್ನು ಹಾಳು ಮಾಡಿದ್ದು ಇದೇ ಶಾಲೆ ಎಂಬುದು ಮಸ್ಕ್ ಆಕ್ರೋಶ.

ಅಷ್ಟೇ ಅಲ್ಲ, ಶ್ರೀಮಂತಿಕೆಯನ್ನು ತನ್ನ ಮಗಳು ದ್ವೇಷಿಸಲು ಕಮ್ಯೂನಿಸ್ಟ್ ಐಡಿಯಾಲಜಿ ಕಾರಣ ಎಂದು ಭಾವಿಸಿರುವ ಇಲಾನ್ ಮಸ್ಕ್ ಇದೇ ಕಾರಣಕ್ಕೆ ಕಮ್ಯೂನಿಸ್ಟ್ ವಿರೋಧಿಯಾಗಿ ಬದಲಾದರು ಎಂದು ಅವರ ಬಯೋಗ್ರಫಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಗಂಡ ಆದಾಯ ಸರ್ಟಿಫಿಕೇಟ್ ಇಲ್ಲದೇ ಗೃಹಿಣಿಯರಿಗೆ ಇನ್ಷೂರೆನ್ಸ್ ಪಾಲಿಸಿ ಸಿಗುತ್ತಾ? ವಾಸ್ತವ ಸ್ಥಿತಿ ಏನಿದೆ?

‘ವಿಜ್ಞಾನ ವಿರೋಧಿ, ಪ್ರತಿಭಾ ವಿರೋಧಿ ಮತ್ತು ಮನುಷ್ಯ ವಿರೋಧಿಯಾಗಿರುವ ವೋಕ್ ಮೈಂಡ್ ವೈರಸ್ ಅನ್ನು ನಿಲ್ಲಿಸದಿದ್ದರೆ ನಮ್ಮ ನಾಗರಿಕತೆಯು ಬಹುಗ್ರಹಕ್ಕೆ ಯಾವತ್ತೂ ಸೇರಲಾಗುವುದಿಲ್ಲ’ ಎಂದು ಮಸ್ಕ್ ಈ ಬಯೋಗ್ರಫಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆನ್ನಲಾಗಿದೆ.

ಕಳೆದ ವರ್ಷದವರೆಗೂ ಟ್ವಿಟ್ಟರ್ ಎಡಪಂಥ ಪರ ನಿಲುವು ಹೊಂದಿರುವ ಪ್ಲಾಟ್​ಫಾರ್ಮ್ ಎಂದು ಹೆಸರಾಗಿತ್ತು. ಟ್ವಿಟ್ಟರ್​ನಲ್ಲಿ ವೋಕಿಸಂ ಹೆಚ್ಚುತ್ತಿದೆ ಎಂದು ಸ್ವತಃ ಮಸ್ಕ್ ಅವರೇ ಹಲವು ಬಾರಿ ಅದೇ ವೇದಿಕೆಯಲ್ಲಿ ಆರೋಪಿಸಿದ್ದುಂಟು. ಈ ಕಾರಣಕ್ಕೆ ಅವರು ಟ್ವಿಟ್ಟರ್ ಖರೀದಿಸಿ ಅದರ ವೋಕ್ ನಿಲುವನ್ನು ಬದಲಾಯಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲಿ ವೋಕ್ ಎಂಬುದು ಕಮ್ಯೂನಿಸ್ಟ್ ಅಥವಾ ಎಡಪಂಥೀಯರಿಗೆ ವ್ಯಂಗ್ಯವಾಗಿ ಆಡುವ ಮಾತುಗಳು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು