ಇಡಿ ಕಸ್ಟಡಿಯಲ್ಲಿರುವ ಜೆಟ್ ಏರ್​ವೇಸ್ ಸಂಸ್ಥಾಪಕ ನರೇಶ್ ಗೋಯಲ್ ವಿರುದ್ಧ ಇರುವ ಅಕ್ರಮ ಆರೋಪಗಳೇನು?

Jet Airways Founder Naresh Goyal: ಬ್ಯಾಂಕ್​ನಿಂದ ಪಡೆದ ಸಾಲವನ್ನು ನಿಯಮಕ್ಕೆ ವಿರುದ್ಧವಾಗಿ ಖಾಸಗಿ ಕಾರ್ಯಗಳಿಗೆ ಬಳಕೆ ಮಾಡಿದ ಆರೋಪ 70 ವರ್ಷದ ಉದ್ಯಮಿ ನರೇಶ್ ಗೋಯಲ್ ಮೇಲಿದೆ. ಕೆನರಾ ಬ್ಯಾಂಕ್ ನೀಡಿದ ದೂರಿನ ಮೇರೆಗೆ ಜೆಟ್ ಏರ್ವೇಸ್ ಸಂಸ್ಥಾಪಕನ ಮೇಲೆ ಸಿಐಡಿ ಎಫ್​ಐಆರ್ ದಾಖಲಿಸಿತ್ತು. ಅದರ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇದೀಗ ಅವರನ್ನು ಬಂಧಿಸಿ ಸೆಪ್ಟೆಂಬರ್ 11ರವರೆಗೂ ಕಸ್ಟಡಿಗೆ ಪಡೆದಿದೆ.

ಇಡಿ ಕಸ್ಟಡಿಯಲ್ಲಿರುವ ಜೆಟ್ ಏರ್​ವೇಸ್ ಸಂಸ್ಥಾಪಕ ನರೇಶ್ ಗೋಯಲ್ ವಿರುದ್ಧ ಇರುವ ಅಕ್ರಮ ಆರೋಪಗಳೇನು?
ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್
Follow us
|

Updated on: Sep 03, 2023 | 10:53 AM

ನವದೆಹಲಿ, ಸೆಪ್ಟೆಂಬರ್ 3: ಜೆಟ್ ಏರ್ವೇಸ್ ಸಂಸ್ಥಾಪಕ 70 ವರ್ಷದ ನರೇಶ್ ಗೋಯಲ್ (Naresh Goyal) ಅವರನ್ನು ಜಾರಿ ನಿರ್ದೇಶನಾಲಯ ಮೊನ್ನೆ ಶುಕ್ರವಾರ ರಾತ್ರಿ (ಸೆ. 1) ಬಂಧಿಸಿತ್ತು. 538 ಕೋಟಿ ರೂ ಮೊತ್ತದ ಅಕ್ರಮ ಹಣ ವರ್ಗಾವಣೆ (Money Laundering) ಪ್ರಕರಣದಲ್ಲಿ ಅವರು ಸಿಲುಕಿಕೊಂಡಿದ್ದಾರೆ. ಕೆನರಾ ಬ್ಯಾಂಕ್​ನಿಂದ ಜೆಟ್ ಏರ್​ವೇಸ್ ಪಡೆದ ಸಾಲಗಳಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಗೋಯಲ್ ಅವರನ್ನು ಸೆಪ್ಟೆಂಬರ್ 11ರವರೆಗೂ ಇಡಿ ಕಸ್ಟಡಿಗೆ (ED Custody) ಒಪ್ಪಿಸಲಾಗಿದೆ. ಮನಿ ಲಾಂಡರಿಂಗ್ ಆ್ಯಕ್ಟ್ ಅಡಿಯಲ್ಲಿ ಗೋಯಲ್ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕೆನರಾ ಬ್ಯಾಂಕ್ ದೂರಿನ ಮೇರೆಗೆ ಜೆಟ್ ಏರ್ವೇಸ್ ಸಂಸ್ಥೆಯ (Jet Airways) ನರೇಶ್ ಗೋಯಲ್, ಅವರ ಪತ್ನಿ ಅನಿತಾ ಹಾಗು ಸಂಸ್ಥೆಯ ಕೆಲ ಮಾಜಿ ಎಕ್ಸಿಕ್ಯೂಟಿವ್​ಗಳ ವಿರುದ್ಧ ಸಿಬಿಐ 2023ರ ಮೇ 3ರಂದು ಎಫ್​ಐಆರ್ ದಾಖಲಿಸಿತ್ತು. ಇದರ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಒಂದು ಸಮಯದಲ್ಲಿ ಭಾರತದ ಅತಿದೊಡ್ಡ ಖಾಸಗಿ ವೈಮಾನಿಕ ಸಂಸ್ಥೆ ಎನಿಸಿದ್ದ ಜೆಟ್ ಏರ್​ವೇಸ್ ಸಾಕಷ್ಟು ಸಾಲದ ಸಮಸ್ಯೆಗೆ ಸಿಲುಕಿ 2019ರಲ್ಲಿ ಕಾರ್ಯಾಚರಣೆ ನಿಲ್ಲಿಸಿತು. ಅದಾದ ಬಳಿಕ ಸಾಲ ಮರುರಚನೆಯ ಪ್ರಕ್ರಿಯೆ ನಡೆಯಿತು. 2021ರ ಜೂನ್​ನಲ್ಲಿ ಯುಎಐ ಮೂಲದ ಉದ್ಯಮಿ ಮುರಾರಿ ಲಾಲ್ ಜಲನ್ ಮತ್ತು ಲಂಡನ್ ಮೂಲದ ಕಲ್​ರಾಕ್ ಕ್ಯಾಪಿಟಲ್ ಸಂಸ್ಥೆಗಳು ಜಂಟಿಯಾಗಿ ಜೆಟ್ ಏರ್ವೇಸ್ ಅನ್ನು ಖರೀದಿಸಿದವು.

ಇದನ್ನೂ ಓದಿ: ಕೋಟಕ್ ಮಹೀಂದ್ರಾ ಬ್ಯಾಂಕ್ ಎಂಡಿ ಮತ್ತು ಸಿಇಒ ಸ್ಥಾನಕ್ಕೆ ಉದಯ್ ಕೋಟಕ್ ರಾಜೀನಾಮೆ

ನರೇಶ್ ಗೋಯಲ್ ವಿರುದ್ಧ ಇರುವ ಅಕ್ರಮ ಆರೋಪಗಳೇನು?

ಕೆನರಾ ಬ್ಯಾಂಕ್ ಜೆಟ್ ಏರ್​ವೇಸ್ ಲಿ ಸಂಸ್ಥೆಗೆ (ಜೆಐಎಲ್) 848.86 ಕೋಟಿ ರೂ ಮೊತ್ತದಷ್ಟು ಸಾಲ ಮತ್ತು ಕ್ರೆಡಿಟ್ ಲಿಮಿಟ್ ಕೊಟ್ಟಿತ್ತು. ಈ ಪೈಕಿ 538.62 ಕೋಟಿ ರೂ ಹಣವನ್ನು ಮರುಪಾವತಿಸಲಾಗಿಲ್ಲ ಎಂಬುದು ಕೆನರಾ ಬ್ಯಾಂಕ್ ಆರೋಪ.

ಬ್ಯಾಂಕ್​ನಿಂದ ಪಡೆದ ಸಾಲದಲ್ಲಿ ಬಹಳಷ್ಟು ಹಣವನ್ನು ಗೋಯಲ್ ಕುಟುಂಬದ ಖಾಸಗಿ ವೆಚ್ಚಕ್ಕೆ ಬಳಸಿಕೊಳ್ಳಲಾಗಿದೆ. ಅಂದರೆ ಗೋಯಲ್ ಕುಟುಂಬದ ಮನೆ ನಿರ್ವಹಣೆ ವೆಚ್ಚಗಳು, ಒಡವೆ, ಪೀಠೋಕರಣ, ಬಟ್ಟೆಬರೆ ಇತ್ಯಾದಿಗಳಿಗೆ ವ್ಯಯಿಸಲಾಗಿದೆ. 538 ಕೋಟಿ ರೂ ಮೊತ್ತದ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬುದು ಕೆನರಾ ಬ್ಯಾಂಕ್ ನೀಡಿದ ದೂರಿನ ಪ್ರಮುಖ ಅಂಶ.

ಇದನ್ನೂ ಓದಿ: Moonwalk: ಚಂದ್ರಯಾನ 3 ಯಶಸ್ವಿಯಾಗಿದ್ದೇ ತಡ ಈ ಕಂಪನಿಗೆ ಶುಕ್ರದೆಸೆ -ಒಂದೇ ವಾರದಲ್ಲಿ 10000 ಕೋಟಿ ರೂ ಗಳಿಕೆ, ಇನ್ನು ಮುಂದೆಯೂ ಹಬ್ಬವೇ!

ಕೆನರಾ ಬ್ಯಾಂಕ್ ಮಾತ್ರವಲ್ಲ, ಎಸ್​ಬಿಐ ಸೇರಿ ಇನ್ನೂ ಹಲವು ಬ್ಯಾಂಕುಗಳಿಂದ ಜೆಟ್ ಏರ್​ವೇಸ್ ಸಂಸ್ಥೆ 6,000 ಕೋಟಿ ರೂಗಳಷ್ಟು ಸಾಲ ಪಡೆದು ತೀರಿಸಿಲ್ಲ. ಕೆನರಾ ಬ್ಯಾಂಕ್ ಅರ್ನ್ಸ್ಟ್ ಅಂಡ್ ಯಂಗ್ (ಇವೈ) ಎಂಬ ಆಡಿಟಿಂಗ್ ಕಂಪನಿ ವತಿಯಿಂದ ಜೆಟ್ ಏರ್ವೇಸ್ ಸಂಸ್ಥೆಯ ಲೆಕ್ಕಪತ್ರಗಳ ಆಡಿಟ್ ಮಾಡಿಸಿತು. ಆಗ ಅಕ್ರಮ ಹಣ ವರ್ಗಾವಣೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್