Sign In

By signing in or creating an account, you agree with Associated Broadcasting Company's Terms & Conditions and Privacy Policy.

Byju’s: ಎಇಎಸ್​ಎಲ್​ಗೆ ಸಿಇಒ, ಸಿಎಫ್​ಒ ನೇಮಿಸಲು ಬೈಜು ರವೀಂದ್ರನ್ ಸೇರಿ ನಾಲ್ವರು ಸದಸ್ಯರ ಸಮಿತಿ ರಚನೆ

Panel To Appoint CEO, CFO For AESL ಬೈಜುಸ್​ನ ಆಕಾಶ್ ಎಜುಕೇಶನ್ ಸರ್ವಿಸಸ್ ಸಂಸ್ಥೆಗೆ ಸಿಇಒ ಮತ್ತು ಸಿಎಫ್​ಒ ನೇಮಕಾತಿ ಮಾಡಲೆಂದು ಹೊಸ ಎಕ್ಸಿಕ್ಯೂಟಿವ್ ಪ್ಯಾನಲ್ ಅನ್ನು ರಚಿಸಲಾಗಿದೆ. ಬೈಜು ರವೀಂದ್ರನ್ ಸೇರಿದಂತೆ ನಾಲ್ವರು ಈ ಸಮಿತಿಯ ಸದಸ್ಯರಾಗಿದ್ದಾರೆ. ಅಭಿಷೇಕ್ ಮಹೇಶ್ವರಿ ಮತ್ತು ವಿಪನ್ ಜೋಷಿ ರಾಜೀನಾಮೆ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ ಎಂದು ಎಕನಾಮಿಕ್ ಟೈಮ್ಸ್​ನಲ್ಲಿ ವರದಿಯಾಗಿದೆ.

Byju's: ಎಇಎಸ್​ಎಲ್​ಗೆ ಸಿಇಒ, ಸಿಎಫ್​ಒ ನೇಮಿಸಲು ಬೈಜು ರವೀಂದ್ರನ್ ಸೇರಿ ನಾಲ್ವರು ಸದಸ್ಯರ ಸಮಿತಿ ರಚನೆ
ಬೈಜೂಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 03, 2023 | 12:43 PM

ಬೆಂಗಳೂರು, ಸೆಪ್ಟೆಂಬರ್ 3: ವಿವಾದಗಳಿಗೆ ಸಿಲುಕಿರುವ ಬೈಜೂಸ್ ತನ್ನ ಅಂಗಸಂಸ್ಥೆಯಾದ ಆಕಾಶ್ ಎಜುಕೇಶನ್ ಸರ್ವಿಸಸ್​ಗೆ (AESL) ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗೆ ಸಮಿತಿ ರಚಿಸಿದೆ. ಅಭಿಷೇಕ್ ಮಹೇಶ್ವರಿ ಮತ್ತು ವಿಪನ್ ಜೋಶಿ ಅವರು ಸಿಇಒ ಮತ್ತು ಸಿಎಫ್​ಒ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಹಿನ್ನೆಲೆಯಲ್ಲಿ ಆ ಹುದ್ದೆಗಳಿಗೆ ನೇಮಕಾತಿ ಮಾಡಲು ಬೈಜುಸ್ ಈ ಕ್ರಮ ಕೈಗೊಂಡಿರುವುದು ಎಕನಾಮಿಕ್ಸ್ ಟೈಮ್ಸ್ ಪತ್ರಿಕೆಯೊಂದರಲ್ಲಿ ವರದಿಯಾಗಿದೆ. ಈ ಸಮಿತಿಯಲ್ಲಿ ನಾಲ್ವರು ಸದಸ್ಯರಿದ್ದಾರೆ. ಬೈಜುಸ್​ನ ಸಿಇಒ ಬೈಜು ರವೀಂದ್ರನ್, ಗ್ರೂಪ್ ಸಿಎಫ್​ಒ ಅಜಯ್ ಗೋಯಲ್, ಆಕಾಶ್ ಎಜುಕೇಶನ್​ನ ಚೀಫ್ ಬಿಸಿನೆಸ್ ಆಫೀಸರ್ ಅನುಪ್ ಕುಮಾರ್ ಅಗರ್ವಾಲ್ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸಕ್ಸೇನಾ ಅವರು ಈ ಸಮಿತಿಯಲ್ಲಿರುವ ಸದಸ್ಯರಾಗಿದ್ದಾರೆ ಎಂದು ಎಕನಾಮಿಕ್ ಟೈಮ್ಸ್​ನಲ್ಲಿ ತಿಳಿಸಲಾಗಿದೆ.

ಅಭಿಷೇಕ್ ಮಹೇಶ್ವರಿ ಅವರು 2020ರ ನವೆಂಬರ್​ನಲ್ಲಿ ಆಕಾಶ್ ಎಜುಕೇಶನ್ ಸರ್ವಿಸಸ್ ಸಂಸ್ಥೆಗೆ ಸಿಇಒ ಆಗಿ ನೇಮಕವಾಗಿದ್ದರು. ಅವರು ರಾಜೀನಾಮೆ ನೀಡುತ್ತಿರುವುದಾಗಿ ಸಂಸ್ಥೆ ನಿನ್ನೆ (2023ರ ಸೆಪ್ಟೆಂಬರ್ 2) ಪ್ರಕಟಿಸಿತ್ತು. ಹಾಗೆಯೇ, ಸಿಎಫ್​ಒ ಆಗಿರುವ ವಿಪನ್ ಜೋಷಿ ಇನ್ನೆರಡು ವಾರದಲ್ಲಿ ರಾಜೀನಾಮೆ ಕೊಡುವ ಸಾಧ್ಯತೆ ಇದೆ.

ಇದನ್ನೂ ಓದಿ: ನಷ್ಟದ ಹೊರೆಯಲ್ಲಿದ್ದ ಟ್ವಿಟ್ಟರ್ ಅನ್ನು ಇಲಾನ್ ಮಸ್ಕ್ ಖರೀದಿಸಿದ್ದು ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಕಾರಣ

‘ಈ ಸ್ಥಿತ್ಯಂತರದ ಅವಧಿಯಲ್ಲಿ ಸಂಸ್ಥೆಗೆ ಮಾರ್ಗದರ್ಶನ, ಬೆಂಬಲ ಮತ್ತು ನಾಯಕತ್ವ ಒದಗಿಸಲು ಕಾರ್ಯಕಾರಿ ಸಮಿತಿ ರಚಿಸಾಗಿದೆ. ಆಕಾಶ್ ಎಜುಕೇಶನ್ ಸರ್ವಿಸಸ್ ಸಾಧಿಸುತ್ತಾ ಬಂದಿರುವ ಬೆಳವಣಿಗೆ ಮತ್ತು ಶ್ರೇಷ್ಠತೆಯನ್ನು ಉಳಿಸಿಕೊಂಡು ಹೋಗಲು ನಾವು ಬದ್ಧರಾಗಿದ್ದೇವೆ,’ ಎಂದು ಬೈಜು ರವೀಂದ್ರನ್ ಹೇಳಿದ್ದಾರೆನ್ನಲಾಗಿದೆ.

ಆಕಾಶ್ ಎಜುಕೇಶನ್ ಕಂಪನಿಯ ಪ್ರೊಮೋಟರ್ಸ್ ಜೊತೆ ಬೈಜುಸ್ ಜಟಾಪಟಿ

ಬೈಜುಸ್​ನ ಮಾತೃ ಸಂಸ್ಥೆ ಥಿಂಕ್ ಅಂಡ್ ಲರ್ನ್ ಪ್ರೈ ಲಿ (ಟಿಎಲ್​ಪಿಎಲ್) 2021ರಲ್ಲಿ ಆಕಾಶ್ ಎಜುಕೇಶನ್ ಸರ್ವಿಸಸ್ ಲಿ ಅನ್ನು ಖರೀದಿಸಿದ್ದರು. ಚೌಧರಿ ಕುಟುಂಬ ಎಇಎಸ್​ಎಲ್​ನ ಸಂಸ್ಥಾಪಕರಾಗಿದ್ದರು. 1 ಬಿಲಿಯನ್ ಡಾಲರ್ (ಸುಮಾರು 8,000 ಕೋಟಿ ರೂ) ಮೊತ್ತಕ್ಕೆ ಡೀಲ್ ಆಗಿದೆ. ಈ ಒಪ್ಪಂದ ಪ್ರಕಾರ ಎಇಎಸ್​ಎಲ್​ನ ಸಂಸ್ಥಾಪರಾದ ಚೌಧರಿ ಕುಟುಂಬ ಮತ್ತು ಹೂಡಿದಾರ ಸಂಸ್ಥೆ ಬ್ಲ್ಯಾಕ್​ಸ್ಟೋನ್ ತಮ್ಮ ನಿರ್ದಿಷ್ಟ ಪ್ರಮಾಣ ಷೇರುಗಳನ್ನು ಟಿಲ್​ಪಿಎಲ್​ಗೆ ವರ್ಗಾಯಿಸಬೇಕಿತ್ತು.

ಇದನ್ನೂ ಓದಿ: ಇಡಿ ಕಸ್ಟಡಿಯಲ್ಲಿರುವ ಜೆಟ್ ಏರ್​ವೇಸ್ ಸಂಸ್ಥಾಪಕ ನರೇಶ್ ಗೋಯಲ್ ವಿರುದ್ಧ ಇರುವ ಅಕ್ರಮ ಆರೋಪಗಳೇನು?

ಈ ಷೇರು ವರ್ಗಾವಣೆ ಇನ್ನೂ ಆಗಿಲ್ಲ. ಸದ್ಯ ಎಇಎಸ್​ಎಲ್​ನಲ್ಲಿ ಬೈಜು ರವೀಂದ್ರನ್ 70ರಷ್ಟು ಷೇರುಗಳನ್ನು ಹೊಂದಿದ್ದಾರೆ. ಚೌಧರಿ ಕುಟುಂಬದ ಬಳಿ ಶೇ. 18ರಷ್ಟು ಷೇರಿದೆ. ಉಳಿದ ಪಾಲು ಬ್ಲ್ಯಾಕ್​ಸ್ಟೋನ್ ಬಳಿ ಇದೆ. ಈಗ ಒಪ್ಪಂದದ ಪ್ರಕಾರ ಷೇರು ವರ್ಗಾವಣೆ ಆದರೆ, ಚೌಧರಿ ಕುಟುಂಬದ ಬಳಿ ಉಳಿಯುವ ಷೇರು ಶೇ. 1ಕ್ಕಿಂತ ತುಸು ಕಡಿಮೆ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ