ಡೀಲರ್ಗಳಿಗೆ ಪ್ರೋತ್ಸಾಹಕವಾಗಿ ನೀಡುವ ಚಿನ್ನ ಮತ್ತಿತರ ಸರಕುಗಳ ಮೇಲೆ ಐಟಿಸಿ ಕ್ಲೈಮ್ ಸಾಧ್ಯ: ಎಎಆರ್ ಕರ್ನಾಟಕ ಪೀಠದ ತೀರ್ಪು
Input Tax Credit: ಮಾರಾಟದ ಗುರಿ ಈಡೇರಿಸಿದ್ದಕ್ಕೆ ಪ್ರೋತ್ಸಾಹಕವಾಗಿ ಚಿನ್ನ ಮತ್ತಿತರ ವಸ್ತುಗಳನ್ನು ನೀಡುವುದು ಉಡುಗೊರೆಯಲ್ಲ. ಅದನ್ನು ಸರಬರಾಜಾಗಿ ಪರಿಗಣಿಸಬಹುದು. ಇಂಥ ಉದ್ದೇಶಗಳಿಗೆ ಖರೀದಿಸುವ ವಸ್ತುಗಳಿಗೆ ತೆರಿಗೆ ಪಾವತಿಸಿದರೆ ಅದರ ಮೇಲೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೈಮ್ ಮಾಡಬಹುದು ಎಂದು ಕರ್ನಾಟಕ ಪೀಠದ ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ ತೀರ್ಪು ನೀಡಿದೆ.
ಬೆಂಗಳೂರು, ಸೆಪ್ಟೆಂಬರ್ 3: ಮಾರಾಟ ಗುರಿ ಈಡೇರಿಸಿರುವುದು ಸೇರಿದಂತೆ ಷರುತ್ತುಬದ್ಧ ಸಾಧನೆಗೆ ಉತ್ತೇಜನವಾಗಿ ಡೀಲರ್ಗಳಿಗೆ ನೀಡಲಾಗುವ ಚಿನ್ನದ ನಾಣ್ಯಗಳು ಮತ್ತಿತರ ಬಿಳಿ ಸರಕುಗಳ ಮೇಲೆ ಕಂಪನಿಗಳು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಪಡೆಯಬಹುದು ಎಂದು ಅಡ್ವಾನ್ಸ್ ರೂಲಿಂಗ್ ಅಥಾರಿಟಿ ಎಎಆರ್ನ (Authority for Advance Ruling) ಕರ್ನಾಟಕ ಪೀಠ ತೀರ್ಪು ನೀಡಿದೆ. ಈ ರೀತಿ ಉತ್ತೇಜನಕ್ಕೆ (Incentive) ಕೊಡುವುದನ್ನು ಸರಬರಾಜು ಎಂದು ಪರಿಗಣಿಸಬಹುದು. ಇಂಥ ಉದ್ದೇಶದಿಂದ ಖರೀದಿಸಲಾಗುವ ಚಿನ್ನ ಹಾಗೂ ಬಿಳಿ ಸರಕುಗಳಿಗೆ ತೆರಿಗೆ ಪಾವತಿಸಿದ್ದರೆ ಅದಕ್ಕೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೈಮ್ ಮಾಡಬಹುದು ಎಂದು ಈ ಪ್ರಾಧಿಕಾರವು ಅಭಿಪ್ರಾಯಪಟ್ಟಿದೆ. ಇಲ್ಲಿ ಬಿಳಿ ಸರಕುಗಳೆಂದರೆ, ಗೃಹಬಳಕೆಯ ದೊಡ್ಡ ಯಂತ್ರೋಪಕರಣಗಳಾದ ವಾಷಿಂಗ್ ಮೆಷೀನ್, ರೆಫ್ರಿಜರೇಟರ್ ಇತ್ಯಾದಿಯವು.
ಓರಿಯಂಟ್ ಸಿಮೆಂಟ್ ಲಿ ಎಂಬ ಸಂಸ್ಥೆ ಈ ವಿಚಾರದ ಬಗ್ಗೆ ಸ್ಪಷ್ಟನೆ ಕೋರಿ ಜಿಎಸ್ಟಿಯ ಎಎಆರ್ ಪ್ರಾಧಿಕಾರದ ಬಳಿ ಅರ್ಜಿ ಸಲ್ಲಿಸಿತ್ತು. ತನ್ನ ಡೀಲರ್ಗಳಿಗೆ ಗುರಿ ಮುಟ್ಟಲು ಪ್ರೋತ್ಸಾಹಕವಾಗಿ ವಿವಿಧ ಅವಧಿಯ ಡಿಸ್ಕೌಂಟ್ ಸ್ಕೀಮ್ಗಳನ್ನು ಹಮ್ಮಿಕೊಂಡಿದೆ. ಈ ಸ್ಕೀಮ್ ಪ್ರಕಾರ ನಿಗದಿತ ಗುರಿಯನ್ನು ಮುಟ್ಟುವ ಡೀಲರ್ಗಳಿಗೆ ಗೋಲ್ಡ್ ಕಾಯಿನ್ ಹಾಗೂ ಬಿಳಿ ಸರಕುಗಳನ್ನು ಒದಗಿಸುತ್ತದೆ. ಡೀಲರ್ಗಳಿಗೆಂದು ಖರೀದಿಸಲಾಗುವ ಇಂಥ ವಸ್ತುಗಳಿಗೆ ಪಾವತಿಸಲಾಗುವ ತೆರಿಗೆಗಳಿಗೆ ಐಟಿಸಿ ಕ್ಲೈಮ್ ಮಾಡಿಕೊಳ್ಳಲು ಸಾಧ್ಯವಾ ಎಂಬುದು ಓರಿಯಂಟ್ ಸಿಮೆಂಟ್ ಕಂಪನಿ ಸಲ್ಲಿಸಿದ ಅರ್ಜಿಯಲ್ಲಿ ಎತ್ತಿದ ಪ್ರಮುಖ ಪ್ರಶ್ನೆಯಾಗಿತ್ತು.
ಇದನ್ನೂ ಓದಿ: ಆವತ್ತಿನ 10,000 ರೂ ಹೂಡಿಕೆ ಇವತ್ತು 300 ಕೋಟಿ ರೂ; ಕೋಟಕ್ ಮಹೀಂದ್ರ ಬ್ಯಾಂಕ್ನ ಅಸಾಮಾನ್ಯ ಬೆಳವಣಿಗೆ ಬಣ್ಣಿಸಿದ ಉದಯ್ ಕೋಟಕ್
ಮಾರಾಟದ ಟಾರ್ಗೆಟ್ ಮುಟ್ಟಿದರೆ ಮಾತ್ರವೇ ಗೋಲ್ಡ್ ಕಾಯಿನ್ಗಳನ್ನು ಒದಗಿಸಲಾಗುತ್ತದೆ. ಇದು ಸರಬರಾಜಾಗುತ್ತದೆಯೇ ಹೊರತು ಗಿಫ್ಟ್ ಎನಿಸಿಕೊಳ್ಳುವುದಿಲ್ಲ. ಇಂಥ ಸರಕುಗಳಿಗೆ ಪಾವತಿಸುವ ತೆರಿಗೆಯನ್ನು ಐಟಿಸಿ ಮೂಲಕ ಕ್ಲೈಮ್ ಮಾಡಿಕೊಳ್ಳಬಹುದು ಎಂಬುದು ಎಎಆರ್ನ ಅಭಿಪ್ರಾಯವಾಗಿದೆ.
ಹಿಂದಿನ ಪ್ರಕರಣಗಳಲ್ಲಿ ವಿಭಿನ್ನ ತೀರ್ಪು
ಸೇಲ್ಸ್ ಟಾರ್ಗೆಟ್ ಮುಟ್ಟಿದರೆ ಪ್ರೋತ್ಸಾಹಕವಾಗಿ ಉಡುಗೊರೆಗಳನ್ನು ನೀಡುವುದು ಯಾವುದೇ ಬ್ಯುಸಿನೆಸ್ಗೆ ಹೊಸತಲ್ಲ. ಇಂಥ ಪ್ರೋತ್ಸಾಹಕ ವಸ್ತುಗಳಿಗೆ ಪಾವತಿಸಿದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೈಮ್ ಮಾಡಲು ಹಿಂದೆಯೂ ಪ್ರಯತ್ನಗಳಾಗಿವೆ. ಆದರೆ, ಇವು ಗಿಫ್ಟ್ ಆಗಿದ್ದು ಐಟಿಸಿ ಕ್ಲೈಮ್ ಮಾಡಲು ಆಗುವುದಿಲ್ಲ ಎಂದು ಇದೇ ಎಎಆರ್ ಹಿಂದೆ ತೀರ್ಪು ನೀಡಿದ್ದಿದೆ. ಈಗ ಕರ್ನಾಟಕ ಬೆಂಚ್ನ ಎಎಆರ್ ವಿಭಿನ್ನವಾಗಿ ತೀರ್ಪು ನೀಡಿರುವುದು ಇನ್ನಷ್ಟು ಗೊಂದಲ ನಿರ್ಮಿಸಿದೆ.
ಇದನ್ನೂ ಓದಿ: Byju’s: ಎಇಎಸ್ಎಲ್ಗೆ ಸಿಇಒ, ಸಿಎಫ್ಒ ನೇಮಿಸಲು ಬೈಜು ರವೀಂದ್ರನ್ ಸೇರಿ ನಾಲ್ವರು ಸದಸ್ಯರ ಸಮಿತಿ ರಚನೆ
ಇಂತಹ ಸಂದರ್ಭದಲ್ಲಿ ಸರ್ಕಾರ ಈ ಬಗ್ಗೆ ಒಂದು ಸ್ಪಷ್ಟ ನೀತಿ ರೂಪಿಸುವುದು ಉತ್ತಮ ಎನ್ನುವ ಅಭಿಪ್ರಾಯವನ್ನು ಉದ್ಯಮವಲಯ ವ್ಯಕ್ತಪಡಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ