ನೆಲಮಂಗಲ: ಯುವತಿಯೊಬ್ಬಳ ಮಾಜಿ ಲವರ್ ತೋಟದ ಮನೆಯೊಂದರಲ್ಲಿ ಹಾಲಿ ಲವರ್ನನ್ನು ಇರಿದು ಕೊಂದ
ಹಂತಕನನ್ನು ಪೊಲೀಸ್ ಅಧಿಕಾರಿ ಹತಾಷ ಪ್ರೇಮಿ ಎಂದು ಹೇಳುತ್ತಾರೆ. ಕೊಲೆ ಮಾಡಿದನ ಬಗ್ಗೆ ಎಲ್ಲ ಮಾಹಿತಿಯನ್ನು ಕಲೆ ಹಾಕಲಾಗಿದೆ, ಅವನು ಯಾವುದೋ ಆಸ್ಪತ್ರೆಯಲ್ಲಿ ಕೆಲಸ ಮಾಡೋದಂತೆ. ಊರಲ್ಲಿ ಅವನಿಗೆ ಬಹಳಷ್ಟು ಸ್ನೇಹಿರು ಕೂಡ ಇದ್ದಾರೆ. ಅವನನ್ನು ಸೆರೆಹಿಡಿಯಲು ತಂಡಗಳನ್ನು ರಚಿಸಲಾಗಿದೆ, ಇನ್ನೂ ಸ್ವಲ್ಪ ಹೊತ್ತಿನಲ್ಲಿ ಅವನ ಬಂಧನವಾಗುತ್ತದೆ ಎಂದು ಬಾಬಾ ಹೇಳುತ್ತಾರೆ.
ನೆಲಮಂಗಲ, ಜೂನ್ 7: ಜಗಳ, ತಂಟೆ-ತಗಾದೆ, ಹಲ್ಲೆ ಮತ್ತು ಕೊಲೆ ನಡೆಯೋದು ಹೆಣ್ಣು, ಹೊನ್ನು ಮತ್ತು ಮಣ್ಣಗಾಗಿ ಅಂತ ನಮ್ಮ ದೊಡ್ಡವರು ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಸಿಕೆ ಬಾಬಾ ಹೇಳುವಂತೆ, ದೊಡ್ಡಬಳ್ಳಾಪುರದ ರೇಲ್ವೇಗೊಲ್ಲಹಳ್ಳಿಯಲ್ಲಿ 26-ವರ್ಷ-ವಯಸ್ಸಿನ ದರ್ಶನ್ ಎಂಬ ಯುವಕನ ಕೊಲೆ ಒಂದು ಹೆಣ್ಣಿಗಾಗಿ ನಡೆದಿದೆ. ದರ್ಶನ್ ಒಬ್ಬ ಯುವತಿಯನ್ನು ಪ್ರೀತಿಸುತ್ತಿದ್ದ, ಆ ಯುವತಿಯ ಮಾಜಿ ಪ್ರಿಯಕರನಿಗೆ ಇದು ಸರಿಕಂಡಿಲ್ಲ. ನಿನ್ನೆ ರಾತ್ರಿ ಸುಮಾರು 9.30ಕ್ಕೆ ಅವನು ದರ್ಶನ್ನನ್ನು ತನ್ನ ಫಾರ್ಮ್ ಹೌಸ್ಗೆ ಮಾತಾಡುವ ನೆಪದಲ್ಲಿ ಕರೆಸಿದ್ದಾನೆ. ನಂತರ ಇಬ್ಬರ ನಡುವೆ ವಾಗ್ವಾದ ನಡೆದಿದೆ ಮತ್ತು ಮಾತು ವಿಕೋಪಕ್ಕೆ ಹೋಗಿ ಮಾಜಿ ಪ್ರಿಯಕರ ದರ್ಶನ್ನನ್ನು ಚಾಕುವೊಂದರಿಂದ ಇರಿದು ಕೊಂದಿದ್ದಾನೆ.
ಇದನ್ನೂ ಓದಿ: ಬಿಜ್ನೋರ್ ವ್ಯಸನ ಮುಕ್ತಿ ಕೇಂದ್ರದಲ್ಲಿ ಇಬ್ಬರಿಂದ ಯುವಕನ ಕತ್ತು ಹಿಸುಕಿ ಕೊಲೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ