‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮಡೆನೂರು ಮನು ಮೊದಲ ರಿಯಾಕ್ಷನ್
ಮಡೆನೂರು ಮನು ಅವರು ಜೈಲಿನಿಂದ ಹೊರ ಬಂದಿದ್ದಾರೆ. ಅತ್ಯಾಚಾರ ಕೇಸ್ನಲ್ಲಿ ಜೈಲು ಸೇರಿದ್ದ ಅವರಿಗೆ ಜಾಮೀನು ಸಿಕ್ಕಿದೆ. ಈ ಪ್ರಕರಣದ ಬಗ್ಗೆ ಅವರು ಮೊದಲ ರಿಯಾಕ್ಷನ್ ಕೊಟ್ಟಿದ್ದಾರೆ. ಅವರಿಗೆ ಆತಂಕ ಶುರುವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ. ಅವರು ಏನು ಹೇಳಿದರು ನೋಡಿ.
ಅತ್ಯಾಚಾರ ಕೇಸ್ನಲ್ಲಿ ಮಡೆನೂರು ಮನು (Madenuru Manu) ಅವರು ಜೈಲು ಸೇರಿದ್ದರು. ಈಗ ಅವರು ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಕನ್ನಡದ ಖ್ಯಾತ ನಾಮರಿಗೆ ಅವರು ಅಗೌರವ ತೋರಿ ಮಾತನಾಡಿದ್ದರು ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಮನು ಮಾತನಾಡಿದ್ದಾರೆ. ‘ಆಡಿಯೋ ಮೂಲಕ ನನ್ನ ನಾಶ ಮಾಡಿದರು. ಆದರೆ, ಆ ಆಡಿಯೋ ನನ್ನದಲ್ಲ. ಹಲವು ವರ್ಷಗಳ ಕಾಲ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದೇನೆ. ನನ್ನ ಕನಸು ಈಡೇರುವಾಗ ಈ ರೀತಿ ಆಯ್ತು. ಈ ಪರಿಸ್ಥಿತಿ ಯಾವ ಶತ್ರುವಿಗೂ ಬರಬಾರದು. ಈ ರೀತಿ ಮಾಡಿದ ಎಲ್ಲರಿಗೂ ಒಳ್ಳೆಯದಾಗಲಿ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jun 07, 2025 01:53 PM
Latest Videos

ಚಿಕ್ಕಬಳ್ಳಾಪುರ: 1 ಕೋಟಿ 11 ಲಕ್ಷ ರೂ ಮೌಲ್ಯದ ಕುದುರೆಗೆ ಅದ್ದೂರಿ ಸ್ವಾಗತ

ಸಿಬ್ಬಂದಿಯನ್ನ ಹೆದರಿಸಿ ಮಸಾಜ್ ಮಾಡಿಸಿಕೊಂಡ ಮುಖ್ಯಶಿಕ್ಷಕಿ: ವಿಡಿಯೋ ವೈರಲ್

ಬೀದರ್ನ ಐತಿಹಾಸಿಕ ಗುರುದ್ವಾರಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ

ಬೆಂಗಳೂರಿನ ಹಲವೆಡೆ ಮಳೆ: ಸಿಲಿಕಾನ್ ಸಿಟಿ ಮತ್ತಷ್ಟು ಕೂಲ್ ಕೂಲ್
