AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ಯಾಚಾರ ಪ್ರಕರಣದ ಆರೋಪಿ ನಟ ಮಡೆನೂರು ಮನುಗೆ ಜಾಮೀನು ಮಂಜೂರು

ಸಹ-ನಟಿ ಮೇಲೆ ಅತ್ಯಾಚಾರ ಮಾಡಿದ ಆರೋಪದಲ್ಲಿ ನಟ ಮಡೆನೂರು ಮನು ಅವರನ್ನು ಬಂಧಿಸಲಾಗಿತ್ತು. ನ್ಯಾಯಾಂಗ ಬಂಧನದಲ್ಲಿ ಇದ್ದ ಮನು ಅವರಿಗೆ ಈಗ ಜಾಮೀನು ನೀಡಲಾಗಿದೆ. ಜೂ.7ರಂದು ಬಿಡುಗಡೆ ಆಗಲಿದ್ದಾರೆ. ಮನು ಮೇಲೆ ಸಂತ್ರಸ್ತ ಮಹಿಳೆ ಅನೇಕ ಆರೋಪಗಳನ್ನು ಮಾಡಿದ್ದಾರೆ. ಆಡಿಯೋಗಳು ವೈರಲ್ ಆಗಿವೆ.

ಅತ್ಯಾಚಾರ ಪ್ರಕರಣದ ಆರೋಪಿ ನಟ ಮಡೆನೂರು ಮನುಗೆ ಜಾಮೀನು ಮಂಜೂರು
Madenuru Manu
ಮದನ್​ ಕುಮಾರ್​
|

Updated on: Jun 06, 2025 | 7:16 PM

Share

ಕನ್ನಡದ ನಟ ಮಡೆನೂರು ಮನು (Madenur Manu) ಅವರು ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದರು. ಇಷ್ಟು ದಿನ ನ್ಯಾಯಾಂಗ ಬಂಧನದಲ್ಲಿ ಇದ್ದ ಅವರಿಗೆ ಈಗ ಸಣ್ಣ ರಿಲೀಫ್ ಸಿಕ್ಕಿದೆ. ಮಡೆನೂರು ಮನು ಅವರಿಗೆ ಈ ಕೇಸ್​ನಲ್ಲಿ ಜಾಮೀನು (Bail) ನೋಡಲಾಗಿದೆ. ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಅವರು ಶನಿವಾರ (ಜೂನ್ 7) ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ. ‘ಕುಲದಲ್ಲಿ ಕೀಳಾವುದೋ‌’ (Kuladalli Keelyavudo) ಸಿನಿಮಾದಲ್ಲಿ ಮಡೆನೂರು ಮನು ಹೀರೋ ಆಗಿ ನಟಿಸಿದ್ದಾರೆ. ಆದರೆ ಸಿನಿಮಾ ಬಿಡುಗಡೆಗೆ ಒಂದು ದಿನ ಇರುವಾಗ ಅವರು ಅರೆಸ್ಟ್ ಆಗಿದ್ದರು.

ಕಿರುತೆರೆಯ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಮಡೆನೂರು ಮನು ಅವರು ಗುರುತಿಸಿಕೊಂಡರು. ಬಳಿಕ ಅವರು ಸಿನಿಮಾ ಹೀರೋ ಆಗುವ ಕನಸು ಕಂಡರು. ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಮೂಲಕ ಆ ಕನಸು ನನಸು ಮಾಡಿಕೊಂಡರು. ಆ ಚಿತ್ರಕ್ಕಾಗಿ ಅವರು ಸಾಕಷ್ಟು ಸಮಯ ಮೀಸಲಿಟ್ಟಿದ್ದರು. ಆದರೆ ಚಿತ್ರದ ಬಿಡುಗಡೆ ಹೊಸ್ತಿನಲ್ಲೇ ವಿವಾದ ಮಾಡಿಕೊಂಡರು.

ಸಹ-ನಟಿ ಹಾಗೂ ಸ್ನೇಹಿತೆ ಆಗಿದ್ದ ಮಹಿಳೆಯ ಜೊತೆ ಮಡೆನೂರು ಮನು ಆಪ್ತವಾಗಿದ್ದರು. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಹಾಗೂ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಎದುರಾಯಿತು. ಮಹಿಳೆ ನೀಡಿದ ದೂರಿನ ಮೇರೆಗೆ ಮಡೆನೂರು ಮನು ಅವರನ್ನು ಪೊಲೀಸರು ಅರೆಸ್ಟ್ ಮಾಡಿದರು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಇದನ್ನೂ ಓದಿ
Image
ಎರಡು ಬಾರಿ ಪ್ರೆಗ್ನೆಂಟ್ ಆಗಿದ್ದೆ; ‘ಕಾಮಿಡಿ ಕಿಲಾಡಿ’ ಕಲಾವಿದರ ಜಗಳ ಬೀದಿಗೆ
Image
ಕನ್ನಡ ಕಿರುತೆರೆ ನಟಿಯ ಮೇಲೆ ಅತ್ಯಾಚಾರ; ನಟ ಮಡೆನೂರು ಮನು ವಿರುದ್ಧ FIR
Image
ಮೇ 23ಕ್ಕೆ ಕುಲದಲ್ಲಿ ಕೀಳ್ಯಾವುದೋ ರಿಲೀಸ್; ಕಾಮಿಡಿ ಕಿಲಾಡಿ ನಟನ ಹೊಸ ಜರ್ನಿ
Image
‘ಕುಲದಲ್ಲಿ ಕೀಳ್ಯಾವುದೋ’ ಟೈಟಲ್ ಸಿಕ್ಕಿದ್ದು ಅಣ್ಣಾವ್ರ ಆಶೀರ್ವಾದ: ಮಡೆನೂರು

ಮಡೆನೂರು ಮನು ಅರೆಸ್ಟ್ ಆಗುತ್ತಿದ್ದಂತೆಯೇ ಕೆಲವು ಆಡಿಯೋ ತಣುಕುಗಳು ವೈರಲ್ ಆದವು. ಸಂತ್ರಸ್ತ ಮಹಿಳೆಗೆ ತಾವು ತಾಳಿ ಕಟ್ಟಿರುವುದಾಗಿ ಮನು ಹೇಳಿಕೊಂಡಿದ್ದು ಆ ಆಡಿಯೋದಲ್ಲಿ ಬಹಿರಂಗ ಆಯಿತು. ಅಲ್ಲದೇ ಆಕೆಯನ್ನು ತನ್ನ 2ನೇ ಪತ್ನಿ ಎಂದು ಒಪ್ಪಿಕೊಳ್ಳುತ್ತೇನೆ ಎಂದು ಕೂಡ ಮನು ಹೇಳಿರುವುದು ಆಡಿಯೋದಲ್ಲಿದೆ. ಇದರಿಂದ ಮನುಗೆ ಸಂಕಷ್ಟ ಹೆಚ್ಚಿತು.

ಇದನ್ನೂ ಓದಿ: ಶಿವಣ್ಣ ಬಗ್ಗೆ ಅವಹೇಳನಕಾರಿ ಮಾತು: ಮಡೆನೂರು ಮನು ವಿರುದ್ಧ ಚೇಂಬರ್ ಖಡಕ್ ನಿರ್ಧಾರ

ಚಿತ್ರರಂಗದ ಕೆಲವು ಖ್ಯಾತ ನಟರ ಬಗ್ಗೆ ಮಡೆನೂರು ಮನು ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕೂಡ ವೈರಲ್ ಆಗಿದೆ. ಇದರಿಂದಾಗಿ ಕನ್ನಡ ಚಿತ್ರರಂಗ ಗರಂ ಆಗಿದೆ. ಮನು ಜೊತೆ ಯಾವುದೇ ಸಿನಿಮಾ ಮಾಡಬಾರದು, ಅವರಿಗೆ ಸಹಕಾರ ನೀಡಬಾರದು ಎಂದು ಕರ್ನಾಟಕ ಚಲನಚಿತ್ರ ಮಂಡಳಿ ತೀರ್ಮಾನ ತೆಗೆದುಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ